ಮತ್ತೆ ಮಜಾ ಟಾಕೀಸ್‌ನಲ್ಲಿ ದೀಪಾ ಭಾಸ್ಕರ್; ಈ ಬಾರಿ ಸಿಕ್ಕ ರೋಲ್ ಯಾವುದು ಗೊತ್ತೇ?

By ಅನಿತಾ ಬನಾರಿ

ಕಿರುತೆರೆ ವಾಹಿನಿಯಲ್ಲಿ ಬೇರೆ ಬೇರೆ ರಿಯಾಲಿಟಿ ಶೋಗಳು ಬಂದರೂ ಕೂಡ ಮಜಾ ಟಾಕೀಸ್ ಜನಮಾನಸದಲ್ಲಿ ಉಳಿದಿರುವ ದಿ ಬೆಸ್ಟ್ ರಿಯಾಲಿಟಿ ಶೋ. ವಾರಾಂತ್ಯ ಬಂದರೆ ಸಾಕು, ಟಿವಿ ಮುಂದೆ ಹಾಜರಾಗುತ್ತಿದ್ದ ಮಂದಿಗೆ ಮಜಾ ಟಾಕೀಸ್ ನಿಂತು ಹೋದ ಮೇಲೆ ಏನನ್ನೋ ಕಳಕೊಂಡ ಫೀಲ್ ಆಗಿತ್ತು.

ಆದರೆ ಇದೀಗ ಮತ್ತದೇ ಮನೋರಂಜನೆಯೊಂದಿಗೆ ಜನರನ್ನು ನಗೆಗಡಲಿನಲ್ಲಿ ತೇಲಿಸಲು ವೇದಿಕೆ ಸಜ್ಜಾಗಿದೆ. ಅಲ್ಲದೆ ಈ ಬಾರಿ ಮಜಾ ಟಾಕೀಸ್‌ನಲ್ಲಿ ಬಹುದೊಡ್ಡ ತಾರಾಗಣವೇ ಇರಲಿದೆ. ಹಲವು ಕಲಾವಿದರ ಕೂಡುವಿಕೆಯೊಂದಿಗೆ ಜನ ಇನ್ನೂ ಹೆಚ್ಚಿನ ಮನೋರಂಜನೆಯನ್ನು ಪಡೆಯಬಹುದು.

Voice Over artist and actress Deepa Bhaskar returned to tv with Maja Talkies

ಈಗ ವಿಷಯ ಏನಪ್ಪಾ ಅಂದ್ರೆ ಈ ದೊಡ್ಡ ಕಲಾವಿದರ ಗ್ರೂಪ್‌ನಲ್ಲಿ ಸಕಲಕಲಾವಲ್ಲಭೆ ದೀಪಾ ಭಾಸ್ಕರ್ ಕೂಡ ಇದ್ದಾರೆ. ಹೌದು, ಈ ಬಾರಿಯ ಮಜಾ ಟಾಕೀಸ್‌ನಲ್ಲಿ ದೀಪಾ ಭಾಸ್ಕರ್ ಕಾಣಿಸಿಕೊಳ್ಳಲಿದ್ದಾರೆ. ಸಲ್ಪ ಸಮಯ ನಟನೆಯಿಂದ ಬ್ರೇಕ್ ತೆಗೆದುಕೊಂಡು ಮನೆಯಲ್ಲಿದ್ದ ದೀಪಾ ಈಗ ಮತ್ತೆ ನಗುವಿನ ವೇದಿಕೆಯ ಮುಖಾಂತರ ಬಣ್ಣ ಹಚ್ಚಲಿದ್ದಾರೆ.

ದೀಪಾ ಭಾಸ್ಕರ್ ಒಬ್ಬ ಪ್ರತಿಭಾವಂತ ರಂಗಭೂಮಿ ನಟಿ, ಧ್ವನಿ ಕಲಾವಿದೆ ಮಾತ್ರವಲ್ಲದೆ ಕಥಕ್ ನರ್ತಕಿಯೂ ಹೌದು. ಮಜಾ ಟಾಕೀಸ್ ಮತ್ತೆ ಆರಂಭವಾಗಿರುವುದಕ್ಕೆ ಖುಷಿಯನ್ನು ವ್ಯಕ್ತಪಡಿಸಿದ ನಟಿ ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಶೋ. ಇಡೀ ಮನೆಯನ್ನು ನಕ್ಕು ನಗಿಸುವ ತಾಕತ್ತಿರುವ ಕಾರ್ಯಕ್ರಮ. ಅಲ್ಲದೆ ಇದು ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವೂ ಹೌದು. ಮಜಾ ಟಾಕೀಸ್ ನನ್ನ ಹೃದಯಕ್ಕೆ ಹತ್ತಿರವಾದ ಫೇವರೆಟ್ ಶೋ ಎಂದು ಹೇಳಿದ್ದಾರೆ

ಬೆಂಗಳೂರಿನ ದಿವಂಗತ ಶ್ರೀ. ಎಸ್.ಆರ್. ಭಾಸ್ಕರ್ ಮತ್ತು ಶ್ರೀಮತಿ ಉಮಾ ಎಂ.ಎಸ್ ದಂಪತಿಗೆ ಜನಿಸಿದ ದೀಪಾ ಶ್ರೀ. ಭರತ್ ನಾಗೇಂದ್ರ ಅವರ ಪತ್ನಿ. ಇವರು ಟೈಗರ್ ಪ್ರಭಾಕರ್ ಅವರ ಮಹೇಂದ್ರವರ್ಮಾ ಚಿತ್ರದ ಮೂಲಕ ಬಾಲ ನಟಿಯಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ತಮ್ಮ ಆರನೇ ವಯಸ್ಸಿನಲ್ಲಿ ನಾಟಕ ತರಬೇತಿಯನ್ನು ಆರಂಭಿಸಿದರು.

Voice Over artist and actress Deepa Bhaskar returned to tv with Maja Talkies

ನಂತರ ಹಲವಾರು ಅವಕಾಶಗಳನ್ನು ಪಡೆದ ನಟಿ 'ಮೈ ಆಟೋಗ್ರಾಫ್' , 'ನಂ 73 ಶಾಂತಿ ನಿವಾಸ', 'ಶ್ರೀರಸ್ತು ಶುಭಮಸ್ತು', 'ಜ್ಯಾಕ್ಸನ್' ಮುಂತಾದ ಚಲನಚಿತ್ರಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಮಲಯಾಳಂನ 'ವರಣೆ ಆವಷ್ಯಮುಂಡು' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ದೀಪಾ ತಮ್ಮ ಅದ್ಭುತ ನಟನಾ ಸಾಮರ್ಥ್ಯದ ಮೂಲಕ ಕಿರುತೆರೆಗೂ ಲಗ್ಗೆ ಇಟ್ಟರು. 'ದಿಬ್ಬಣ', 'ಪ್ರೀತಿ ಇಲ್ಲದ ಮೇಲೆ', 'ಪಾಪ ಪಾಂಡು', 'ಮಳೆ ಬಿಲ್ಲು', 'ಅನಾವರಣ', 'ಮದರಂಗಿ', 'ನಿನ್ನೊಲುಮೆಯಿಂದಲೇ', 'ಯುಗಾಂತರ' ಸೇರಿದಂತೆ ಹಲವಾರು ಧಾರಾವಾಹಿಗಳ ಮುಖಾಂತರ ಮನೆಮಾತಾದರು.

ಆದರೆ ಜೀ ಕನ್ನಡದಲ್ಲಿ ನಟಿಸಿದ ಒಂದು ಧಾರಾವಾಹಿ ಇವರಿಗೆ ಸಾಕಷ್ಟು ಜನಮನ್ನಣೆಯನ್ನು ತಂದು ಕೊಟ್ಟಿತು. ಅದುವೇ 'ಸುಬ್ಬುಲಕ್ಷ್ಮಿ ಸಂಸಾರ'. ತಮ್ಮ ಅಪೂರ್ವ ನಟನೆಯ ಮೂಲಕ ಮತ್ತಷ್ಟು ಅವಕಾಶಗಳಿಗೆ ತೆರೆದುಕೊಂಡ ನಟಿ ಈ ಹಿಂದೆ ಮಜಾ ಟಾಕೀಸ್‌ನಲ್ಲಿ ಊರ್ಮಿಳಾ ಆಗಿ ಎಲ್ಲರನ್ನು ನಗಿಸಿದ್ದರು.

ನಟನೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಧ್ವನಿ ಕಲಾವಿದೆ/ ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ದೀಪಾ ಭಾಸ್ಕರ್ ಫೇಮಸ್. ಸುಮಾರು 500 ಕ್ಕೂ ಹೆಚ್ಚು ಸಿನಿಮಾಗಳಿಗೆ ನಾಯಕಿಯರ ಪ್ರಮುಖ ಪಾತ್ರಗಳಿಗೆ ಧ್ವನಿಯಾಗಿದ್ದಾರೆ ಈ ನಟಿ. ಪುನೀತ್ ರಾಜ್‌ಕುಮಾರ್ ಮತ್ತು ನಟಿ ರಮ್ಯಾ ಅವರ ಮೊದಲ ಸಿನಿಮಾ 'ಅಭಿ'ಗೆ ಧ್ವನಿ ನೀಡುವ ಮೂಲಕ ಡಬ್ಬಿಂಗ್ ಆರ್ಟಿಸ್ಟ್ ಆಗಿ ಪಾದಾರ್ಪಣೆ ಮಾಡಿದರು. ಆನಂತರ 'ಎಕ್ಸ್‌ಕ್ಯೂಸ್ ಮಿ', 'ಮುಂಗಾರು ಮಳೆ', 'ಜೋಗಿ', 'ದುನಿಯಾ', 'ಭಜರಂಗಿ', 'ಗೂಗ್ಲಿ' ಹೀಗೆ ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳಿಗೆ ದೀಪಾ ಧ್ವನಿಯಾಗಿದ್ದಾರೆ.

ಅಲ್ಲದೆ ಕಾಲಿವುಡ್ ಮತ್ತು ಟಾಲಿವುಡ್‌ನ ನಾಯಕಿಯರಾದ ತ್ರಿಶಾ, ಸ್ನೇಹಾ, ಅಮಲಾ ಪೌಲ್, ಭಾವನಾ, ಶ್ರಿಯಾ ಸರನ್ ಮತ್ತಿತರರು ಕನ್ನಡದಲ್ಲಿ ನಟಿಸಿದಾಗಲೂ ದೀಪಾ ಅವರೇ ಧ್ವನಿ ನೀಡಿದ್ದರು. 'ಅರಸು', 'ರಂಗ ಎಸ್‌ಎಸ್‌ಎಲ್‌ಸಿ' ಮತ್ತು 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಗಳಲ್ಲಿನ ಡಬ್ಬಿಂಗ್ ಕೆಲಸಕ್ಕಾಗಿ ದೀಪಾ 3 ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅಲ್ಲದೆ ದೀಪಾ ಭಾಸ್ಕರ್ ಉತ್ತಮ ಕಥಕ್ ನೃತ್ಯಗಾರ್ತಿಯೂ ಹೌದು. ಶ್ರೀಮತಿ ನಿರುಪಮಾ ರಾಜೇಂದ್ರ ಮತ್ತು ಶ್ರೀ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಅವರು ಕಥಕ್ ನೃತ್ಯಗಾರ್ತಿಯಾಗಿ ಅವರು ಭಾರತ ಮಾತ್ರವಲ್ಲದೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಇದರೊಂದಿಗೆ ದೀಪಾ ತಮ್ಮ ಪತಿ ಭರತ್ ನಾಗೇಂದ್ರ ಅವರ ಸಹಯೋಗದೊಂದಿಗೆ ಸಂಗೀತ ವೀಡಿಯೊಗಳ ನಿರ್ದೇಶನ ಮತ್ತು ನಿರ್ಮಾಣ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರಿಗೆ 2001ರಲ್ಲಿ ಅತ್ಯುತ್ತಮ ಬಾಲನಟಿ ಪ್ರಶಸ್ತಿ, ನಂತರ ಹಲವು ಸಿನಿಮಾಗಳಿಗೆ ಅತ್ಯುತ್ತಮ ಡಬ್ಬಿಂಗ್ ಕಲಾವಿದೆ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

More from Filmibeat

Read more about: deepa actress filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X