BBK12: ಬಿಗ್‌ಬಾಸ್ ನೋಡ್ತಾ ಬಸ್ ಚಲಾಯಿಸುತ್ತಿದ್ದ VRL ಬಸ್ ಡ್ರೈವರ್; ಕೂಡಲೇ ಕ್ರಮ
ಯಾವುದೇ ವಾಹನ ಚಲಾಯಿಸುವಾಗ ಚಾಲಕರ ಮೈಯೆಲ್ಲಾ ಕಣ್ಣಾಗಿರಬೇಕು. ಅದರಲ್ಲೂ ಕಾರ್, ಬಸ್ ರೀತಿಯ ಹೆಚ್ಚು ಪ್ರಯಾಣಿಕರು ಇರುವ ವಾಹನಗಳನ್ನು ಚಲಾಯಿಸುವಾಗ ತುಸು ಹೆಚ್ಚೇ ಗಮನ ಹರಿಸಬೇಕು. ಯಾಕಂದ್ರೆ ಸಾಕಷ್ಟು ಅಮಾಯಕರ ಜೀವ ಚಾಲಕನ ಕೈಯಲ್ಲಿರುತ್ತದೆ. ಆದರೆ ವಿಆರ್‌ಎಲ್ ಬಸ್ ಚಾಲಕ ಮೊಬೈಲ್‌ನಲ್ಲಿ ಬಿಗ್‌ಬಾಸ್ ಶೋ ನೋಡ್ತಾ ಬಸ್ ಚಲಾಯಿಸಿರುವುದು ಗಮನಕ್ಕೆ ಬಂದಿದೆ.
ರಾತ್ರಿ ವೇಳೆ 80KM ವೇಗದಲ್ಲಿ ಬಸ್ ಚಲಾಯಿಸುತ್ತಾ ಪಕ್ಕದಲ್ಲಿ ಮೊಬೈಲ್ ಫೋನ್‌ನಲ್ಲಿ ಚಾಲಕ ಬಿಗ್‌ಬಾಸ್ ಶೋ ನೋಡುತ್ತಿರುವುದು ಗೊತ್ತಾಗಿದೆ. ಯಾರೋ ಪ್ರಯಾಣಿಕರೊಬ್ಬರು ಇದನ್ನು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ವಿಆರ್‌ಎಲ್ ಸಂಸ್ಥೆ ಕ್ರಮ ಕೈಗೊಂಡಿದೆ. ಚಾಲಕನನ್ನು ಕೂಡಲೇ ಕೆಲಸದಿಂದ ತೆಗೆದಿರುವುದಾಗಿ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ದೂರ ಬಂದ ಕೂಡಲೇ ಆಂತರಿಕ ವಿಚಾರಣೆ ನಡೆಸಿ, ಸಂಬಂಧಪಟ್ಟ ಚಾಲಕನನ್ನು ಆತನ ನಿರ್ಲಕ್ಷ್ಯದ ವರ್ತನೆ ಕಾರಣಕ್ಕೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಧನ್ಯವಾದ ಹೇಳುವ ಯಾವುದೇ ಕ್ರಮಕ್ಕೆ ವಿಜಯಾನಂದ ಟ್ರಾವೆಲ್ಸ್ ಶೂನ್ಯ ಸಹಿಷ್ಣುತೆಯನ್ನು ಕಾಯ್ದುಕೊಳ್ಳುತ್ತದೆ" ಎಂದು ಮಾಹಿತಿ ನೀಡಿದೆ.
ಒಟ್ಟಾರೆ ವಿಆರ್‌ಎಲ್ ಸಂಸ್ಥೆಯಲ್ಲಿ 1,300 ಕ್ಕೂ ಹೆಚ್ಚು ಚಾಲಕರು ಮತ್ತು ಲಾಜಿಸ್ಟಿಕ್ಸ್‌ನಲ್ಲಿ 10,000ಕ್ಕೂ ಹೆಚ್ಚು ಚಾಲಕರೊಂದಿಗೆ, ನಾವು ನಿರಂತರವಾಗಿ ನಿಯಮಿತ ಸುರಕ್ಷತಾ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. "ಈ ರೀತಿಯ ಘಟನೆಗಳು ಅತ್ಯಂತ ಅಪರೂಪ, ಮತ್ತು ಅದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಾವು ನಿಮಗೆ ಪ್ರಾಮಾಣಿಕವಾಗಿ ಧನ್ಯವಾದಗಳು. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸದಂತೆ ಎಲ್ಲಾ ಚಾಲಕರಿಗೆ ನಾವು ಕಟ್ಟುನಿಟ್ಟಿನ ಸೂಚನೆಗಳನ್ನು ಬಲಪಡಿಸಿದ್ದೇವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅಹಿತಕರ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ" ಎಂದು ವಿಜಯಾನಂದ ಟ್ರಾವೆಲ್ಸ್ ಸಂಸ್ಥೆ ತಿಳಿಸಿದೆ.
ದಿನದಿಂದ ದಿನಕ್ಕೆ ಬಸ್ ಅಪಘಾತಗಳು ಹೆಚ್ಚಾಗುತ್ತಿದೆ. ಯಾರದ್ದೋ ತಪ್ಪಿಗೆ ಅಮಾಯಕ ಪ್ರಯಾಣಿಕರು ಜೀವ ಕಳೆದುಕೊಳ್ಳುವಂತಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್‌ನ ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಸುಟ್ಟು ಭಸ್ಮವಾಗಿತ್ತು. ನಸುಕಿನ ವೇಳೆ ನಡೆದ ಈ ದುರಂತದಲ್ಲಿ 12 ಮಂದಿ ಸಜೀವ ದಹನವಾಗಿದ್ದರು. ಕೆಲವರು ಮಾತ್ರ ಬಸ್ ಗಾಜು ಹೊಡೆದು ಪ್ರಾಣಾಪಾಯದಿಂದ ಪಾರಾಗಿದ್ದರು. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.
ಬಿಗ್‌ಬಾಸ್ ಕನ್ನಡ ಸೀಸನ್ 12 ಶೋಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಗಿಲ್ಲಿ ನಟ ಮೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಒಳ್ಳೆ ಟಿಆರ್‌ಪಿ ಕೂಡ ಸಿಗುತ್ತಿದೆ. ಜಿರೋ ಹಾಟ್‌ಸ್ಟರ್‌ನಲ್ಲಿ 24 ಗಂಟೆ ಲೈವ್ ನೋಡುವ ಅವಕಾಶವೂ ಇದೆ. ಈಗಾಗಲೇ ಶೋ 40 ದಿನ ಪೂರೈಸಿದೆ. ನಡುವೆ ಮಿನಿ ಫಿನಾಲೆ ಕೂಡ ಬಂದು ಹೋಗಿದೆ. ಕಳೆದ ವಾರ ಮಲ್ಲಮ್ಮ ಎಲಿಮಿನೇಟ್ ಆಗಿ ಮನೆಯಿಂದ ಹೊರಬಿದ್ದಿದ್ದರು. ಈ ವಾರ ಯಾರಿಗೆ ಗೇಟ್‌ಪಾಸ್ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಜನರಿಗೆ ಮನರಂಜನೆ ಮುಖ್ಯ. ಬಿಗ್‌ಬಾಸ್ ಶೋ ನೋಡಲು ಬೇರೆ ಸಮಯ ಇದೆ. ಹಾಗಂತ ವಾಹನ ಚಲಾಯಿಸುವ ವೇಳೆ ಚಾಲಕರು, ಅಥವಾ ಬೇರೆ ಯಾವುದೇ ಕೆಲಸಗಳಲ್ಲಿ ನಿರತರಾಗಿರುವವರು ನೀಡುವ ಅವಶ್ಯಕತೆ ಇಲ್ಲ. ಸುರಕ್ಷತೆ ಮೊದಲ ಆದ್ಯತೆ ಆಗಿರಲಿ. ಆ ಬಳಿಕ ಉಳಿದ ಸಂಗತಿ. ಬಿಗ್‌ಬಾಸ್ ನೋಡಲು ಬೇರೆ ಸಮಯ ಇದೆ. ಎಲ್ಲಾ ವಾಹನ ಚಾಲಕರಿಗೂ ಇದು ಗಮನದಲ್ಲಿ ಇರಲಿ.


Click it and Unblock the Notifications











