ಊದಿಕೊಂಡ ಕಣ್ಣು, ನಿಲ್ಲಲಾಗದಷ್ಟು ನಿಶಕ್ತಿ ; ಕಂಠಪೂರ್ತಿ ಎಣ್ಣೆ ಕುಡಿದು ಬಿಗ್ ಬಾಸ್ ಮನೆಗೆ ಬಂದ ಸಲ್ಮಾನ್ ಖಾನ್?

ಸಲ್ಮಾನ್ ಖಾನ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು. ಬಾಲಿವುಡ್‌ನ ಬಾಕ್ಸಾಫೀಸ್‌ನ ಸುಲ್ತಾನ. ಆದರೆ.. ಇತ್ತೀಚೆನ ದಿನಗಳಲ್ಲಿ ಸಲ್ಮಾನ್ ಖಾನ್ ಸ್ಟಾರ್ ಪವರ್ ಕಡಿಮೆಯಾಗಿದೆ. ಹಾಗಂಥ ಬೇಡಿಕೆ ಕಡಿಮೆಯಾಗಿಲ್ಲ. ಇವತ್ತು ಕೂಡ ಸಲ್ಮಾನ್ ಹಲವರ ಕಣ್ಣಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆಯೇ ಕಾಣಿಸುತ್ತಾರೆ. ಇಂಥಾ ಸಲ್ಮಾನ್ ಖಾನ್ ಪಾಲಿಗೆ ''ಬಿಗ್ ಬಾಸ್'' ಸೈಡ್ ಪ್ರಾಜೆಕ್ಟ್ ಅಲ್ಲ.

ಅದೊಂದು ಬದುಕಿನ ಬಹುಮುಖ್ಯವಾದ ಭಾಗ. ಎರಡನೇ ಮನೆಯಂತೆ. ಕಳೆದ 15 ವರ್ಷಗಳಿಂದ ಸಲ್ಮಾನ್ ಖಾನ್ ಈ ಸಂಬಂಧ ಉಳಿಸಿಕೊಂಡು ಬಂದಿದ್ದಾರೆ. ಆರಂಭದ ನಾಲ್ಕು ಸೀಸನ್ ಹೊರತು ಪಡಿಸಿದರೆ ಕಳೆದ 15 ವರ್ಷಗಳಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ.

Was Salman Khan Drunk on Bigg Boss 19 The Real Truth Behind Swollen Eyes Revealed Fact Check

ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ''ಬಿಗ್ ಬಾಸ್'' ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ''ಬಿಗ್ ಬಾಸ್‌'' ಗೋಸ್ಕರ ಬೆವರು ಸುರಿಸಿದ್ಧಾರೆ. ಜ್ವರ ಇದ್ದರೂ.. ಆಯಾಸವಾದರೂ.. ನಿಲ್ಲಲು ಸಾಧ್ಯವಾದೇ ಇದ್ದರೂ ಕೂಡ ಎಲ್ಲಿಯೇ ಇದ್ದರೂ ಓಡಿ ಬಂದು ಕಾರ್ಯಕ್ರಮ ನಡೆಸಿ ಕೊಟ್ಟಿದ್ದಾರೆ.

ಆದರೆ, ನೋಡುಗರಿಗೆ ತೆರೆಯ ಹಿಂದೆ ಸಲ್ಮಾನ್ ಖಾನ್ ಪಡುವ ಕಷ್ಟ ಕಾಣಿಸುವುದಿಲ್ಲ. ಹೀಗಾಗಿಯೇ ಕಾಲೆಳೆಯಲು ಅಂತಾನೇ ಕಾಯುವ ಕೆಲವರು ಸಮಯ- ಸಂದರ್ಭ ಸಿಕ್ಕಾಗ ಟ್ರೋಲ್ ಮಾಡಲು ಶುರು ಮಾಡುತ್ತಾರೆ. ಇದಕ್ಕೆ ಸಲ್ಮಾನ್ ಖಾನ್ ಅವರ ಇತ್ತೀಚಿನ ''ವೀಕೆಂಡ್ ಕಾ ವಾರ್'' ಸಂಚಿಕೆ ಸದ್ಯದ ಉದಾಹರಣೆ.

ಹೌದು, ಎಂದಿನಂತೆ ಕಳೆದ ವಾರ ಕೂಡ ಸಲ್ಮಾನ್ ಖಾನ್ ''ವೀಕೆಂಡ್ ಕಾ ವಾರ್'' ಕಾರ್ಯಕ್ರಮ ನಡೆಸಿಕೊಡಲು ಬಂದಿದ್ದರು. ಕಿರಿಕ್ ಮಾಡಿದ ಸ್ಫರ್ಧಿಗಳಿಗೆ ಬೆಂಡೆತ್ತಿದರು. ಆದರೆ, ಇದೇ ಸಮಯದಲ್ಲಿ ಅವರ ಹಾವ ಭಾವದಲ್ಲಿ ಬದಲಾವಣೆ ಕಂಡು ಬಂದಿತ್ತು. ಮುಖ ಊದಿಕೊಂಡಿತ್ತು. ಕಣ್ಣುಗಳಲ್ಲಿ ಆಯಾಸ ಕಂಡು ಬಂದಿತ್ತು. ಸಲ್ಮಾನ್ ಖಾನ್ ಅವರಿಗೆ ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಸಲ್ಮಾನ್ ಖಾನ್ ಅವರ ಈ ಬಾಡಿ ಲ್ಯಾಂಗ್ವೇಜ್‌ ನೋಡಿದ ಹಲವರು ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿ ಬಂದು ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ ಎಂದು ಸದ್ಯ ಹುಯಿಲೆಬ್ಬಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾರ್ಯಕ್ರಮ ನಡೆಸಿಕೊಡಲು ಸಲ್ಮಾನ್ ಖಾನ್ ತಡಕಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

Was Salman Khan Drunk on Bigg Boss 19 The Real Truth Behind Swollen Eyes Revealed Fact Check

ಆದರೆ ವಾಸ್ತವದಲ್ಲಿ ಈ ಮಾತು ಸತ್ಯಕ್ಕೆ ದೂರವಾದದ್ದು. ಯಾಕೆಂದರೆ ಸಲ್ಮಾನ್ ಖಾನ್ ಎಣ್ಣೆ ಹೊಡೆದು ಬಂದಿರಲಿಲ್ಲ. ಬದಲಿಗೆ ನಿರಂತರ ಪ್ರವಾಸ ಬಿಡುವಿರದ ಕೆಲಸದಿಂದ ದಣಿದಿದ್ದರು ಸಲ್ಮಾನ್ ಖಾನ್. ಹೀಗಾಗಿ ಈ ವಿಚಾರದಲ್ಲಿ ಸಲ್ಮಾನ್ ಖಾನ್ ಅವರ ಪರ ಅಖಾಡಕ್ಕಿಳಿದಿರುವ ಇವರ ಅಭಿಮಾನಿಗಳು ಒಬ್ಬರ ತೇಜೊವಧೆ ಮಾಡುವ ಮುನ್ನ ಆಲೋಚನೆ ಮಾಡಿ ಎಂದು ಕಿವಿ ಮಾತನ್ನು ಹೇಳುತ್ತಿದ್ದಾರೆ.

ಮಹಾಭಾರತದ ಕರ್ಣ ಪಂಕಜ್ ಧೀರ್ ಅಗಲಿದಾಗ ಅಂತ್ಯಕ್ರಿಯೆಗೆ ಓಡೋಡಿ ಹೋಗಿದ್ದ ಸಲ್ಮಾನ್ ಖಾನ್‌ ಆ ನಂತರ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಭಾಗವಹಿಸಿದ್ದರು. ತಮ್ಮ ಸಮಕಾಲೀನರಾದ ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಮುಕ್ತವಾಗಿ ಮನಬಿಚ್ಚಿ ಮಾತನಾಡಿದ್ದರು. ಆ ನಂತರ ಭಾರತಕ್ಕೆ ಮರಳಿದ ಸಲ್ಮಾನ್ ತಮ್ಮ ಮುಂಬರುವ ಚಿತ್ರ ''ಬ್ಯಾಟಲ್ ಆಫ್ ಗಲ್ವಾನ್‌'' ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದರು. ಅಲ್ಲಿಂದ ನೇರವಾಗಿ ಸಲ್ಮಾನ್ ಖಾನ್ ಬಂದಿದ್ದು ಬಿಗ್ ಬಾಸ್ ಮನೆಗೆ.

ಈ ಎಲ್ಲಾ ಕಾರಣಗಳಿಂದ ಸಲ್ಮಾನ್ ಖಾನ್‌ಗೆ ಸರಿಯಾಗಿ ನಿದ್ದೆ ಆಗಿಲ್ಲ ಎನ್ನುತ್ತಿರುವ ಅವರ ಅಭಿಮಾನಿಗಳು ಕಣ್ಣು ಊದಿಕೊಳ್ಳಲು ಇದೇ ಪ್ರಮುಖ ಕಾರಣ. ಅವರ ಮುಖ ನೋಡಿದರೆ ಅವರಿಗೆ ಆಯಾಸವಾಗಿದೆ ಎನ್ನುವ ವಿಚಾರ ಸ್ಪಷ್ಟವಾಗಿ ಗೊತ್ತಾಗುತ್ತೆ ಎಂಬ ವಾದವನ್ನು ಮಾಡುತ್ತಿದ್ದಾರೆ. ಕಂಠಪೂರ್ತಿ ಕುಡಿದು ''ಬಿಗ್ ಬಾಸ್‌'' ಅಂತಹ ವೇದಿಕೆ ಹತ್ತುವ ಮುಠ್ಠಾಳತನದ ಕೆಲಸವನ್ನು ಸಲ್ಮಾನ್ ಯಾವತ್ತು ಮಾಡಲಾರರು ಎಂದು ಹೇಳುತ್ತಿದ್ದಾರೆ.

ಇನ್ನೂ ಸಲ್ಮಾನ್ ಖಾನ್‌ ಈಗ ಹದಿಹರೆಯದ ಯುವಕ ಅಲ್ಲ. ಅವರಿಗೆ ಈಗ 59 ವರ್ಷ. ಈ ವಯಸ್ಸಿನಲ್ಲಿ ಕೆಲಸದ ಒತ್ತಡದಿಂದ ದಣಿವು ಆಗುವುದು ಸಹಜ ಎಂದು ಕೂಡ ಇವರ ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧದ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

More from Filmibeat

English summary
Did Salman Khan host Bigg Boss while drunk? Get the definitive fact-check as fans step up to explain the real, often overlooked, reason behind the host's noticeably swollen eyes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X