For Quick Alerts
  ALLOW NOTIFICATIONS  
  For Daily Alerts

  ಮನೆ ಒಳಗಡೆ ಕಿಚ್ಚು, ಹೊರಗಡೆ ನಿಮ್ಮ ಕಿಚ್ಚ

  By Suneetha
  |

  ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ 3' ಕಾರ್ಯಕ್ರಮಕ್ಕೆ ವೀಕ್ಷಕರು ದಿನಗಣನೆ ಶುರು ಹಚ್ಚಿಕೊಂಡಿದ್ದಾರೆ.

  ಅಕ್ಟೋಬರ್ 25 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರಿಯ ರಿಯಾಲಿಟಿ ಶೋ ಕನ್ನಡದ 'ಬಿಗ್ ಬಾಸ್ 3' ಗ್ರ್ಯಾಂಡ್ ಓಪನ್ನಿಂಗ್ ಪಡೆದುಕೊಳ್ಳಲಿದೆ. ನಂತರ ಪ್ರತಿದಿನ ರಾತ್ರಿ 9 ಘಂಟೆಗೆ ನಿಮ್ಮ ನೆಚ್ಚಿನ ವಾಹಿನಿಯಲ್ಲಿ ಮೂಡಿಬರಲಿದೆ.[ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]

  ಈಗಾಗಲೇ 15 ಖಿಲಾಡಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲಿ 'ಲಕ್ಷ್ಮಿ ಬಾರಮ್ಮ' ಖ್ಯಾತಿಯ ಚಂದನ್. 'ರಾಧ ಕಲ್ಯಾಣ' ಖ್ಯಾತಿಯ ಕೃತಿಕಾ, ಹುಚ್ಚ ವೆಂಕಟ್, ಮೈತ್ರಿಯಾ ಗೌಡ, ನಟಿ ಮಾಧುರಿ, ಸುನಾಮಿ ಕಿಟ್ಟಿ, ಮುಂತಾದವರ ಹೆಸರು ಪಕ್ಕಾ ಆಗಿದ್ದು, ಇನ್ನುಳಿದವರು ಯಾರು ಎಂಬುದು ಅಕ್ಟೋಬರ್ 25, ರಂದು ತಿಳಿಯಲಿದೆ.[ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ]

  ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಬೇಕಾದಷ್ಟು ಜಾಗ ಇದೆ ಆದ್ರೆ ಮನೆಗೆ ಎಂಟ್ರಿ ಪಡೆದುಕೊಂಡ ಖಿಲಾಡಿಗಳಿಗೆ ನಾಟ್ಕ ಆಡೋದಕ್ಕೆ ಮಾತ್ರ ಜಾಗ ಇಲ್ಲ.

  "ಬಣ್ಣ ಹಚ್ಚಿ ನಟನೆ ಮಾಡೋನು ಆಕ್ಟರ್‌, ಬಣ್ಣ ಹಚ್ಚದೇನೇ ನಾಟ್ಕ ಮಾಡೋನು ಖಿಲಾಡಿ. ಇಂತಹ 15 ಖಿಲಾಡಿಗಳು 100 ದಿನ ಒಂದೇ ಮನೆ, ಯಾವ ಬಣ್ಣ ಉಳಿಯುತ್ತೆ, ಯಾರ ಬಣ್ಣ ಬದಲಾಗುತ್ತೆ, ನೋಡ್ತಾ ಇರಿ ಒಳಗಡೆ ಕಿಚ್ಚು ಹೊರಗಡೆ ಕಿಚ್ಚ"

  ಇದೀಗ ಈ ಬಾರಿಯ 'ಬಿಗ್ ಬಾಸ್ 3' ರಿಯಾಲಿಟಿ ಶೋ ಕಾರ್ಯಕ್ರಮದ ಇನ್ನೊಂದು ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರೀತಿಯ 'ನಲ್ಲ' ಕಿಚ್ಚ ಸುದೀಪ್ ಅವರು ಸಖತ್ ಶೈನ್ ಆಗಿದ್ದಾರೆ.[ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

  ಬಿಡುಗಡೆಯಾಗಿರುವ ಬಿಗ್ ಬಾಸ್ 3 ಕಾರ್ಯಕ್ರಮದ ಪ್ರೊಮೋ ಇಲ್ಲಿದೆ ನೋಡಿ..

  ಇನ್ನು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುವ ಸ್ಪರ್ಧಾರ್ಥಿಗಳ ಬಗ್ಗೆ ವೀಕ್ಷಕರಿಗೆ ಭಾರಿ ನಿರೀಕ್ಷೆ ಹಾಗೂ ಕುತೂಹಲ ಇರುವುದರಿಂದ ಎಲ್ಲರು ಕಾರ್ಯಕ್ರಮ ಆರಂಭವಾಗುವುದನ್ನೇ ಕಾತರದಿಂದ ಕಾಯುತ್ತಿದ್ದು, ಎಲ್ಲರ ನಿರೀಕ್ಷೆಗಳಿಗೆ ಅಕ್ಟೋಬರ್ 25 ರಂದು ತೆರೆ ಬೀಳಲಿದೆ.

  English summary
  'Bigg Boss' is back in Kannada. 'Bigg Boss-3' will be aired in 'Colours Kannada Channel' and Watch Promo of the hugely popular reality show 'Big Boss'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X