'ಬಿಗ್ ಬಾಸ್ ಕನ್ನಡ-4' ಸುದೀಪ್ ಪ್ರೋಮೋ ನೋಡಿದ್ರಾ?
'ಬಿಗ್ ಬಾಸ್' ಈಸ್ ಬ್ಯಾಕ್....ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ಮತ್ತೆ ಬಿಗ್ ಸೆನ್ಸೇಷನ್ ಆಗಲು ಕೆಲವೇ ದಿನಗಳು ಬಾಕಿ.
ಈಗಾಗಲೇ ವರದಿ ಆಗಿರುವ ಪ್ರಕಾರ, ಅಕ್ಟೋಬರ್ ನಲ್ಲಿ 'ಬಿಗ್ ಬಾಸ್ ಕನ್ನಡ-4' ಪ್ರಸಾರವಾಗಲಿದೆ. ಕಲರ್ಸ್ ವಾಹಿನಿಯಲ್ಲೇ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಈಗಾಗಲೇ ತೆರೆಹಿಂದಿನ ಕೆಲಸಗಳು ಪೂರ್ಣಗೊಂಡಿದೆ. ['ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಲಿಸ್ಟ್ ನಲ್ಲಿ 'ಇವರ' ಹೆಸರಿದ್ಯಂತೆ.!]

ಕಳೆದ ಎರಡು ಸೀಸನ್ ಗಳಿಗೆ ಹೋಸ್ಟ್ ಆಗಿ ಕಾರ್ಯಕ್ರಮ ಯಶಸ್ವಿ ಆಗಲು ಪ್ರಮುಖ ಪಾತ್ರ ವಹಿಸಿದ್ದ ಕಿಚ್ಚ ಸುದೀಪ್ 'ಬಿಗ್ ಬಾಸ್-4'ನಲ್ಲೂ ಅದೇ ಕೆಲಸ ನಿರ್ವಹಿಸಲಿದ್ದಾರೆ. [ತೆರೆ ಮರೆಯಲ್ಲಿ 'ಬಿಗ್ ಬಾಸ್' ಕನ್ನಡ ಸೀಸನ್ 4 ಕೆಲಸ ಶುರು!]
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
'ಬಿಗ್ ಬಾಸ್ ಕನ್ನಡ-4' ಪ್ರೋಮೋ ಶೂಟ್ ಕೂಡ ಕಂಪ್ಲೀಟ್ ಆಗಿದ್ದು, ಅದರ ಝಲಕ್ ಹೇಗಿದೆ ಅಂತ ಒಮ್ಮೆ ನೀವೇ ನೋಡಿ....
KSFA EXCLUSIVE: #BiggBoss4 Promo @KicchaSudeep @ColorsKannadaTV @ColorsSuper #BBK4 #BiggBossKannada4 pic.twitter.com/hIZf1BDaiN
— KICCHASUDEEPFANS(A)® (@KSFA_Official) September 8, 2016
'ಬಿಗ್ ಬಾಸ್ ಕನ್ನಡ-4'ನಲ್ಲಿ ಯಾರೆಲ್ಲಾ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ನಿಮ್ಮ ತಲೆಯಲ್ಲೂ ಆ ಲೆಕ್ಕಾಚಾರ ನಡೆಯುತ್ತಿದ್ದರೆ, ನಮಗೆ ತಿಳಿಸಿ...ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.....


Click it and Unblock the Notifications











