For Quick Alerts
  ALLOW NOTIFICATIONS  
  For Daily Alerts

  ಈ ವಾರಾಂತ್ಯದ 'ಕಾಮಿಡಿ ಕಿಲಾಡಿಗಳು' ನಿಮಗೆ ಖುಷಿ ಕೊಡಬಹುದು.!

  By Harshitha
  |

  ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ ರಿಯಾಲಿಟಿ ಶೋಗಳ ಪೈಕಿ 'ಕಾಮಿಡಿ ಕಿಲಾಡಿಗಳು' ಕೂಡ ಒಂದು. ಅದರಲ್ಲೂ 'ಕಾಮಿಡಿ ಕಿಲಾಡಿಗಳು' ಮೊದಲನೇ ಆವೃತ್ತಿ ವೀಕ್ಷಕರ ಮನಗೆದ್ದಿತ್ತು.

  ಸದ್ಯ ಪ್ರಸಾರ ಆಗುತ್ತಿರುವ 'ಕಾಮಿಡಿ ಕಿಲಾಡಿಗಳು-2' ಬಗ್ಗೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಮೊದಲ ಆವೃತ್ತಿಯಂತೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಎರಡನೇ ಆವೃತ್ತಿ ವೀಕ್ಷಕರಿಗೆ ಖುಷಿ ಕೊಟ್ಟಿಲ್ಲ.

  ಇದನ್ನ ಮನಗಂಡಿರುವ ಜೀ ಕನ್ನಡ ವಾಹಿನಿ ಈ ವಾರಾಂತ್ಯದಲ್ಲಿ ವೀಕ್ಷಕರಿಗೆ ಒಂದು ಸರ್ಪ್ರೈಸ್ ನೀಡಲು ಮುಂದಾಗಿದೆ. ಅದೇನಪ್ಪಾ ಅಂದ್ರೆ, ಈ ವಾರಾಂತ್ಯ... ಅಂದ್ರೆ ಶನಿವಾರ ಹಾಗೂ ಭಾನುವಾರ ಪ್ರಸಾರ ಆಗುವ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಮೊದಲ ಸೀಸನ್ ಸ್ಪರ್ಧಿಗಳು ಕೂಡ ನಿಮ್ಮನ್ನು ನಗಿಸಲಿದ್ದಾರೆ.

  'ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!'ಕಾಮಿಡಿ ಕಿಲಾಡಿಗಳು' ಫಿನಾಲೆ ನೋಡಿ ನಿಮ್ಮ ಹೊಟ್ಟೆ ಹುಣ್ಣಾದರೆ, ನಾವು ಜವಾಬ್ದಾರರಲ್ಲ.!

  ಹೌದು, ಈ ವಾರದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಮೊದಲ ಹಾಗೂ ಎರಡನೇ ಸೀಸನ್ ಸ್ಪರ್ಧಿಗಳು ಜಂಟಿಯಾಗಿ ನಿಮ್ಮನ್ನ ನಗಿಸಲು ಬರ್ತಿದ್ದಾರೆ. ಹಾಗಾದ್ರೆ, ಈ ವಾರಾಂತ್ಯ ಎಲ್ಲೂ ಹೋಗದೆ, ಮಿಸ್ ಮಾಡದೆ 9 ಗಂಟೆಗೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡಿ..

  English summary
  Watch Zee Kannada Channel's popular show Comedy Khiladigalu this weekend for the big surprise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X