»   » ಇದೇ ಭಾನುವಾರ ನಿಮ್ಮ ಉದಯ ಟಿವಿಯಲ್ಲಿ 'ಮುಕುಂದ ಮುರಾರಿ' ಪ್ರಸಾರ

ಇದೇ ಭಾನುವಾರ ನಿಮ್ಮ ಉದಯ ಟಿವಿಯಲ್ಲಿ 'ಮುಕುಂದ ಮುರಾರಿ' ಪ್ರಸಾರ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಸ್ಕ್ರೀನ್ ಶೇರ್ ಮಾಡಿರುವ 'ಮುಕುಂದ ಮುರಾರಿ' ಸಿನಿಮಾ ಇದೇ ಭಾನುವಾರ (ಜುಲೈ 2) ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.

ನಂದ ಕಿಶೋರ್ ನಿರ್ದೇಶನದ 'ಮುಕುಂದ ಮುರಾರಿ' ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್. ಆಸ್ತಿಕ-ನಾಸ್ತಿಕ ನಡುವಿನ ಕಥಾಹಂದರ ಹೊಂದಿರುವ 'ಮುಕುಂದ ಮುರಾರಿ' ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು.

Watch Kannada Movie 'Mukunda Murari' in Udaya TV on Sunday at 6 pm

ವಿಮರ್ಶೆ: 'ಮುಕುಂದ'ನ ಸವಾಲಿಗೆ ಪರಮಾತ್ಮ 'ಮುರಾರಿ' ಪರಾರಿ....

ಥಿಯೇಟರ್ ನಲ್ಲಿ 'ಮುಕುಂದ ಮುರಾರಿ' ಮ್ಯಾಜಿಕ್ ನೋಡಲು ಮಿಸ್ ಮಾಡಿಕೊಂಡವರು, ಇದೇ ಭಾನುವಾರ ಇಡೀ ಫ್ಯಾಮಿಲಿ ಜೊತೆ ಟಿವಿ ಮುಂದೆ ಹಾಜರ್ ಆಗಬಹುದು.

''ರಿಯಲ್ ಸ್ಟಾರ್' ಉಪೇಂದ್ರ ಜೊತೆ ತೆರೆಹಂಚಿಕೊಂಡ ಅನುಭವ ತುಂಬಾ ಗ್ರೇಟ್'' ಎಂದು ಕಿಚ್ಚ ಸುದೀಪ್ ಕೂಡ ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.

ಒಟ್ನಲ್ಲಿ, ಈ ಭಾನುವಾರ ಸುದೀಪ್ ಹಾಗೂ ಉಪೇಂದ್ರ ಅಭಿಮಾನಿಗಳಿಗೆ ಕಿರುತೆರೆಯಲ್ಲಿ ರಸದೌತಣ ಕಾದಿದೆ.

English summary
Watch Kannada Movie 'Mukunda Murari' in Udaya TV on Sunday at 6 pm

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada