»   » ಉದಯ ಟಿವಿಯಲ್ಲಿ ಪ್ರೀಮಿಯರ್ ಚಲನಚಿತ್ರ 'ಸಂತು ಸ್ಟ್ರೈಟ್ ಫಾರ್ವರ್ಡ್'

ಉದಯ ಟಿವಿಯಲ್ಲಿ ಪ್ರೀಮಿಯರ್ ಚಲನಚಿತ್ರ 'ಸಂತು ಸ್ಟ್ರೈಟ್ ಫಾರ್ವರ್ಡ್'

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಚೆಲುವೆ ರಾಧಿಕಾ ಪಂಡಿತ್ ಅಭಿನಯದ ಯಶಸ್ವಿ ಚಲನಚಿತ್ರ 'ಸಂತು ಸ್ಟ್ರೈಟ್ ಫಾರ್ವರ್ಡ್' ಇದೇ ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಕೆ.ಮಂಜು ನಿರ್ಮಾಣದಲ್ಲಿ 2016 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ಈ 'ಸಂತು ಸ್ಟ್ರೈಟ್ ಫಾರ್ವರ್ಡ್'. ಪ್ರೀತಿ ಪ್ರೇಮದ ಸುತ್ತ ಹೆಣೆಯಲಾದ ಈ ಕಥೆಯನ್ನು ವಿಭಿನ್ನವಾಗಿ ನಿರೂಪಿಸಿದವರು ನಿರ್ದೇಶಕ ಮಹೇಶ್ ರಾವ್.

Watch Kannada Movie 'Santhu Straight Forward' in Udaya TV on Sunday at 6 pm

ರಾಕಿಂಗ್ ಸ್ಟಾರ್ ಯಶ್ ತನ್ನ ಎಲ್ಲಾ ಚಿತ್ರಗಳಂತೆ ಈ ಚಿತ್ರದಲ್ಲೂ ತಮ್ಮ ಖದರ್ ತೋರಿಸಿದರೆ, ತನ್ನ ಸ್ನಿಗ್ಧ ಸೌಂದರ್ಯ ಹಾಗೂ ನಟನೆಯ ಮೂಲಕ ನಾಯಕಿ ರಾಧಿಕಾ ಪಂಡಿತ್ ಗಮನ ಸೆಳೆಯುತ್ತಾರೆ.

'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರವನ್ನ ನೀವು ತೆರೆಮೇಲೆ ನೋಡಿಲ್ಲ ಅಂದ್ರೆ, ಇದೇ ಭಾನುವಾರ ತಪ್ಪದೇ 6 ಗಂಟೆಗೆ ಉದಯ ಟಿವಿ ಟ್ಯೂನ್ ಮಾಡಿ....

English summary
Watch Kannada Movie 'Santhu Straight Forward' in Udaya TV on Sunday at 6 pm

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada