ಗಣೇಶ ಹಬ್ಬದ ವಿಶೇಷ: ಗುರುವಾರ ಸಂಜೆ 7 ಗಂಟೆಗೆ ಉದಯ ಟಿವಿಯಲ್ಲಿ 'ಟಗರು'
Recommended Video

ಇದೇ ಗಣೇಶ ಹಬ್ಬದ ದಿನದಂದು (ಗುರುವಾರ - ಸೆಪ್ಟೆಂಬರ್ 13) ನಿಮ್ಮ ಉದಯ ಟಿವಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಲನಚಿತ್ರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.
'ಟಗರು' ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಿದ್ದು, ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ. 'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್, ದೇವರಾಜ್, ಧನಂಜಯ್, ವಸಿಷ್ಠ.ಎನ್.ಸಿಂಹ, ಮಾನ್ವಿತಾ, ಭಾವನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಭರ್ಜರಿ ಪ್ರದರ್ಶನಗೊಂಡ ಚಿತ್ರ 'ಟಗರು'. ಈ ಸಿನಿಮಾ 15 ಸೆಂಟರ್ ಗಳಲ್ಲಿ ಯಶಸ್ವಿಯಾಗಿ ಶತದಿನೋತ್ಸವ ಆಚರಿಸಿತು.

ಪೊಲೀಸ್ ಅಧಿಕಾರಿಯಾಗಿದ್ದ ಶಿವಣ್ಣ ಗೋವಾದಿಂದ ಒಂದು ಹುಡುಗಿಯನ್ನ (ಮಾನ್ವಿತಾ) ಕರೆದುಕೊಂಡು ಬರುತ್ತಾನೆ. ಬರುವ ದಾರಿಯಲ್ಲಿ ಇಬ್ಬರೂ ಅವರವರ ಹಿಂದಿನ ಸಿಹಿ-ಕಹಿ ಘಟನೆಗಳನ್ನು ನೆನೆಸಿಕೊಳ್ಳುತ್ತಾರೆ. ಹೀರೋಯಿನ್ ಮಾನ್ವಿತಾ ಶಿವಣ್ಣನನ್ನು ಪ್ರೀತಿಸುತ್ತಾಳೆ. ಅಕ್ಕ (ಭಾವನ) ವಿಲನ್ ಗಳಿಂದ ಹತ್ಯೆಗೊಂಡಿರುವ ವಿಷಯ ಮಾನ್ವಿತಾಗೆ ತಿಳಿದಿರುವುದಿಲ್ಲಾ. ವಿಲನ್ ಪಾತ್ರದಲ್ಲಿ ಮಿಂಚಿರುವ ಡಾಲಿ ಧನಂಜಯ 'ಟಗರು' ಶಿವನ ವಿರುದ್ಧ ಏಕೆ ಸಮರ ಸಾರುತ್ತಾನೆ? ಶಿವ ಎಂಬ ಖಡಕ್ ಅಧಿಕಾರಿ ಸಮಾಜದಲ್ಲಿರುವ ದುಷ್ಟರನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಈ ಚಿತ್ರದ ಕಥೆ.
ಸೂಪರ್ ಹಿಟ್ 'ಟಗರು' ಇದೇ ಗುರುವಾರ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











