ಫಾರಿನ್ ಹುಡುಗಿ ಜೊತೆ 'ಕಾಮಿಡಿ ಕಿಂಗ್' ಚಿಕ್ಕಣ್ಣ ಮದುವೆ.!

By Harshitha

ಕನ್ನಡದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಹಾಗೂ ನಿರೂಪಕಿ ಅನುಶ್ರೀ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅಂತ ಕೆಲವೇ ದಿನಗಳ ಹಿಂದೆಯಷ್ಟೇ ಗಾಂಧಿನಗರದಲ್ಲಿ ಗುಸು ಗುಸು ಹಬ್ಬಿತ್ತು. ಆದ್ರೆ, ಅದೆಲ್ಲವೂ ಶುದ್ಧ ಸುಳ್ಳು ಅಂತ ಅನುಶ್ರೀ ಬಾಯ್ಬಿಟ್ಟು ಹೇಳಿದ್ಮೇಲೆ ಗಾಸಿಪ್ ಗೆ ಫುಲ್ ಸ್ಟಾಪ್ ಬಿತ್ತು.[ಅನುಶ್ರೀ-ಚಿಕ್ಕಣ್ಣ ಬಗ್ಗೆ ಹಬ್ಬಿರುವ 'ಮದುವೆ' ಗಾಸಿಪ್ ನಿಜವೇ.?]

ಈಗ ಹಾಸ್ಯ ನಟ ಚಿಕ್ಕಣ್ಣ ರವರ ಮದುವೆ ದಿಢೀರ್ ಅಂತ ನಡೆದಿದೆ. ಅದು ಫಾರಿನ್ ಹುಡುಗಿ ಜೊತೆ.! ಹೌದಾ... ಅಂತ ಬಾಯಿ ಮೇಲೆ ಬೆರಳಿಡುವ ಮುನ್ನ ಪೂರ್ತಿ ಮ್ಯಾಟರ್ ಓದಿ...

'ಮಜಾ ಭಾರತ'ದಲ್ಲಿ ಚಿಕ್ಕಣ್ಣ ಮದುವೆ

'ಮಜಾ ಭಾರತ'ದಲ್ಲಿ ಚಿಕ್ಕಣ್ಣ ಮದುವೆ

ಅಂದ್ಹಾಗೆ, ಹಾಸ್ಯ ನಟ ಚಿಕ್ಕಣ್ಣ ರವರ ಮದುವೆ ಎಲ್ಲಿ ನಡೆದಿದ್ದು ಅಂತ ಯೋಚನೆ ಮಾಡ್ತಿದ್ರಾ.? ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ 'ಮಜಾ ಭಾರತ'ದಲ್ಲಿ ಚಿಕ್ಕಣ್ಣ ಮದುವೆ ನಡೆದಿದೆ.['ಮಜಾ ಭಾರತ'ಕ್ಕೆ ಬಂದು 'ಜಿಲೇಬಿ' ತಿನ್ನಿಸಿದ ಪೂಜಾ ಗಾಂಧಿ]

ಫಾರಿನ್ ಹುಡುಗಿ ಜೊತೆ.!

ಫಾರಿನ್ ಹುಡುಗಿ ಜೊತೆ.!

'ಮಜಾ ಭಾರತ' ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಮದುವೆ ಮಾಡಿಕೊಂಡಿದ್ದು ಫಾರಿನ್ ಹುಡುಗಿಯನ್ನ ಎಂಬುದನ್ನ ನೀವು ಗಮನಿಸಬೇಕು.!

ತಾಳಿ ಕಟ್ಟಿಸಿಕೊಂಡ ಚಿಕ್ಕಣ್ಣ

ತಾಳಿ ಕಟ್ಟಿಸಿಕೊಂಡ ಚಿಕ್ಕಣ್ಣ

'ಮಜಾಭಾರತ'ದಲ್ಲಿ ಮಜವಾಗಿ ನಡೆದ ಮದುವೆಯಲ್ಲಿ ಚಿಕ್ಕಣ್ಣ ರವರಿಗೆ ಫಾರಿನ್ ಹುಡುಗಿ ತಾಳಿ ಕಟ್ಟಿದ್ದಾಳೆ. ಕತ್ತು ಬಗ್ಗಿಸಿ ಚಿಕ್ಕಣ್ಣ ತಾಳಿ ಕಟ್ಟಿಸಿಕೊಳ್ಳುತ್ತಿದ್ದರೆ, ಎಸ್.ನಾರಾಯಣ್ ಹಾಗೂ ಶ್ರುತಿಗೆ ಬಾಯ್ತುಂಬ ನಗು.

ಫಾರಿನ್ ಹುಡುಗಿಯನ್ನ ಪಟಾಯಿಸಿದ್ದು ಹೇಗೆ.?

ಫಾರಿನ್ ಹುಡುಗಿಯನ್ನ ಪಟಾಯಿಸಿದ್ದು ಹೇಗೆ.?

''ಐ ಲೈಕ್ ಯುವರ್ ಹೇರ್ ಕಲರ್. ವೆರಿ ಸಿಲ್ಕಿ'' ಅಂತ ಆಂಗ್ಲ ಭಾಷೆಯಲ್ಲಿ ಚಿಕ್ಕಣ್ಣ ಹೇಳಿದಕ್ಕೆ ಆ ಫಾರಿನ್ ಹುಡುಗಿ, ''ಐ ಲವ್ ಯು'' ಅಂತ ಹೇಳಿದರು. ಅದಕ್ಕೆ ಚಿಕ್ಕಣ್ಣ, ''ಥ್ಯಾಂಕ್ಯು.. ಸೇಮ್ ಟು ಯು'' ಎಂದುಬಿಟ್ಟರು.

ವಿಶೇಷ ಅತಿಥಿ ಆಗಿ ಬಂದಿದ್ದ ಚಿಕ್ಕಣ್ಣ

ವಿಶೇಷ ಅತಿಥಿ ಆಗಿ ಬಂದಿದ್ದ ಚಿಕ್ಕಣ್ಣ

ಅಷ್ಟಕ್ಕೂ, 'ಮಜಾ ಭಾರತ' ವೇದಿಕೆಗೆ ವಿಶೇಷ ಅತಿಥಿಯಾಗಿ ಚಿಕ್ಕಣ್ಣ ಪಾಲ್ಗೊಂಡಿದ್ದರು. ಇದೇ ವೇಳೆ ಕಾರ್ಯಕ್ರಮಕ್ಕಾಗಿ ಮದುವೆ ಸನ್ನಿವೇಶ ಚಿತ್ರೀಕರಿಸಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ಕಾರ್ಯಕ್ರಮದ ಪ್ರೋಮೋ ನೋಡಿ..

ನಿರಂಜನ್ ದೇಶಪಾಂಡೆ, ಶೀತಲ್ ಸಾಥ್

ನಿರಂಜನ್ ದೇಶಪಾಂಡೆ, ಶೀತಲ್ ಸಾಥ್

ಚಿಕ್ಕಣ್ಣ-ಫಾರಿನ್ ಹುಡುಗಿಯ ಮದುವೆ ಸನ್ನಿವೇಶ ಇರುವ ಇಂದಿನ 'ಮಜಾ ಭಾರತ' ಸಂಚಿಕೆಯಲ್ಲಿ ನಿರೂಪಕರಾದ ನಿರಂಜನ್ ದೇಶಪಾಂಡೆ ಹಾಗೂ ಶೀತಲ್ ಶೆಟ್ಟಿ ಹಾಸ್ಯದ ಹೊನಲನ್ನು ಹರಿಸಿದ್ದಾರೆ.

ತೀರ್ಪುಗಾರರು ಯಾರು.?

ತೀರ್ಪುಗಾರರು ಯಾರು.?

ನಟಿ ಶ್ರುತಿ ಹಾಗೂ ಕಲಾಸಾಮ್ರಾಟ್ ಎಸ್.ನಾರಾಯಣ್ 'ಮಜಾ ಭಾರತ'ದ ತೀರ್ಪುಗಾರರು.

ಕಾರ್ಯಕ್ರಮ ಪ್ರಸಾರ ಯಾವಾಗ.?

ಕಾರ್ಯಕ್ರಮ ಪ್ರಸಾರ ಯಾವಾಗ.?

ಚಿಕ್ಕಣ್ಣ-ಫಾರಿನ್ ಹುಡುಗಿ ಮದುವೆಯ ಸನ್ನಿವೇಶ ಇರುವ 'ಮಜಾ ಭಾರತ' ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಮಿಸ್ ಮಾಡದೆ ನೋಡಿ...

More from Filmibeat

English summary
Kannada Actor Chikkanna visited the sets of 'Majaabharatha' as special guest. Watch 'Majaabharatha' today at 9PM in Colors Super Channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X