For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ವೀಕ್ಷಕರಿಗೆ ಕಾದಿದೆ ಸಿಹಿ ಸುದ್ದಿ.! ಅದು 'ಡ್ರಾಮಾ' ಪುಟಾಣಿಗಳಿಂದ.!

  By Harshitha
  |

  ಒಂದು ಶೋ ಕ್ಲಿಕ್ ಆಗ್ಬೇಕು ಅಂದ್ರೆ 'ಸೂಪರ್ ಸ್ಟಾರ್'ಗಳೇ ಬೇಕಾಗಿಲ್ಲ, ಅದ್ಭುತ ಪ್ರತಿಭೆಗಳಿದ್ದರೆ ಸಾಕು ಎಂಬುದನ್ನ ಕರ್ನಾಟಕದಲ್ಲಿ ಪ್ರೂವ್ ಮಾಡಿದ ಶೋ 'ಡ್ರಾಮಾ ಜ್ಯೂನಿಯರ್ಸ್'. [ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?]

  ಪುಟಾಣಿ ಮಕ್ಕಳನ್ನ ಕರ್ನಾಟಕದಲ್ಲಿ 'ಸೂಪರ್ ಸ್ಟಾರ್ಸ್' ಮಾಡಿದ ಶೋ ಈ 'ಡ್ರಾಮಾ ಜ್ಯೂನಿಯರ್ಸ್'. ಮಕ್ಕಳ ಕೈಲಿ ಡ್ರಾಮಾ ಮಾಡಿಸಿ, ಅದೇ ಡ್ರಾಮಾ ಮೂಲಕ ಮನರಂಜನೆ ಜೊತೆಗೆ ಸಾಮಾಜಿಕ ಸಂದೇಶ ಸಾರುತ್ತಿದ್ದ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮವನ್ನ ಕರ್ನಾಟಕದಲ್ಲಿ ನೋಡದವರೇ ಇಲ್ಲ. ಅಷ್ಟರಮಟ್ಟಿಗೆ ಜನಪ್ರಿಯವಾಗಿದ್ದ ಈ ಶೋ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಶುರುವಾಗಲಿದೆ.!

  ಕರುನಾಡ ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ

  ಕರುನಾಡ ಕಿರುತೆರೆ ವೀಕ್ಷಕರಿಗೆ ಸಿಹಿ ಸುದ್ದಿ

  'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಮತ್ತೊಮ್ಮೆ ಶುರು ಆಗಲಿದೆ. ಸದ್ಯದಲ್ಲಿಯೇ 'ಡ್ರಾಮಾ ಜ್ಯೂನಿಯರ್ಸ್-2' ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿರುತೆರೆ ವೀಕ್ಷಕರಿಗೆ ಇದಕ್ಕಿಂತ ಸಿಹಿ ಸುದ್ದಿ ಬೇಕಾ.?

  ಅತಿ ಶೀಘ್ರದಲ್ಲಿ ನಡೆಯಲಿದೆ ಆಡಿಷನ್ಸ್

  ಅತಿ ಶೀಘ್ರದಲ್ಲಿ ನಡೆಯಲಿದೆ ಆಡಿಷನ್ಸ್

  ಅತಿ ಶೀಘ್ರದಲ್ಲಿ 'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮಕ್ಕಾಗಿ ಮಕ್ಕಳ ಆಡಿಷನ್ಸ್ ನಡೆಯಲಿದೆ. ನಿಮ್ಮ ಮಕ್ಕಳು ಹುಟ್ಟಿರುವುದೇ ಡ್ರಾಮಾ ಮಾಡೋಕೆ ಎಂದಾದರೆ, ಆಡಿಷನ್ಸ್ ನಲ್ಲಿ ತಪ್ಪದೇ ಭಾಗವಹಿಸಿ...

  ಪ್ರೋಮೋ ನೋಡಿದ್ರಾ.?

  ಪ್ರೋಮೋ ನೋಡಿದ್ರಾ.?

  'ಡ್ರಾಮಾ ಜ್ಯೂನಿಯರ್ಸ್-2' ಕಾರ್ಯಕ್ರಮದ ಕುರಿತು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋನ ನೀವಿನ್ನೂ ನೋಡಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ ನೋಡಿ....

  ಹೆಚ್ಚಿನ ಮಾಹಿತಿ ನಿರೀಕ್ಷಿಸಿ...

  ಹೆಚ್ಚಿನ ಮಾಹಿತಿ ನಿರೀಕ್ಷಿಸಿ...

  ಅತಿ ಶೀಘ್ರದಲ್ಲಿ 'ಡ್ರಾಮಾ ಜ್ಯೂನಿಯರ್ಸ್-2' ಆಡಿಷನ್ಸ್ ನಡೆಯಲಿದೆ ಅಂತ ಜೀ ಕನ್ನಡ ಹೇಳಿಕೊಂಡಿದೆ ಹೊರತು ಎಲ್ಲೆಲ್ಲಿ ನಡೆಯಲಿದೆ ಅಂತ ಬಹಿರಂಗ ಪಡಿಸಿಲ್ಲ. 'ಡ್ರಾಮಾ ಜ್ಯೂನಿಯರ್ಸ್-2' ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಲಿರುತ್ತೇವೆ. 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

  English summary
  Zee Kannada Channel's Popular show 'Drama Juniors-2' Auditions to be held shortly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X