»   » ಭಾವಿ ಪತಿ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.?

ಭಾವಿ ಪತಿ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.?

Posted By:
Subscribe to Filmibeat Kannada

ಹೇಳಿ ಕೇಳಿ 'ಸಿಂಪಲ್ ಹುಡುಗ' ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಲವ್ ಮಾಡಿ ಮದುವೆ ಆಗಲು ನಿರ್ಧಾರ ಮಾಡಿರುವವರು. ಪ್ರೇಮ ಪಕ್ಷಿಗಳು ಅಂದ್ಮೇಲೆ ಒಬ್ಬರಿಗೊಬ್ಬರು ಸಮಯ ಬಿಡುವು ಮಾಡಿಕೊಳ್ಳವುದು, ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುವುದು, ದಿನಪೂರ್ತಿ ಚಾಟಿಂಗ್ ಮಾಡುವುದು... ಎಲ್ಲವೂ ಕಾಮನ್.

ಆದ್ರೆ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ತಮ್ಮ-ತಮ್ಮ ಸಿನಿಮಾಗಳಲ್ಲಿ ಬಿಜಿಯಿದ್ದಾರೆ. ತಮ್ಮ ಬಿಜಿ ಶೆಡ್ಯೂಲ್ ಮಧ್ಯೆ ಪ್ರೀತಿಸಿದವರಿಗಾಗಿ ಇಬ್ಬರೂ ಕೊಂಚ ಬಿಡುವು ಮಾಡಿಕೊಳ್ಳುತ್ತಿದ್ದಾರಾ.? ನಟ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.?

ಈ ಪ್ರಶ್ನೆಗಳಿಗೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಉತ್ತರ ಸಿಕ್ಕಿದೆ. ಮುಂದೆ ಓದಿರಿ....

'ಸೂಪರ್ ಟಾಕ್ ಟೈಮ್'ನಲ್ಲಿ ರಕ್ಷಿತ್-ರಶ್ಮಿಕಾ

ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಟಾಕ್ ಶೋ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅತಿಥಿಗಳಾಗಿ ಭಾಗವಹಿಸಿದ್ದಾರೆ.

ಅಕುಲ್ ಕೇಳಿದ ಪ್ರಶ್ನೆ ಇದು...

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಸಂಚಿಕೆ ನಾಳೆ (ಗುರುವಾರ) ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಸದ್ಯ, ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣಗೆ ಅಕುಲ್ ಕೇಳಿದ ಪ್ರಶ್ನೆ ಹೀಗಿತ್ತು - ''ಭಾವಿ ಪತಿಯಾಗಿ ಎರಡು ಬದಲಾಗಬೇಕು ಅಂದ್ರೆ ರಕ್ಷಿತ್ ಶೆಟ್ಟಿಯಲ್ಲಿ ಏನು ಬದಲಾಗಬೇಕು.?''

ರಶ್ಮಿಕಾ ಬಾಯಿ ತೆರೆಯುವ ಮುನ್ನವೇ...

ಅಕುಲ್ ಬಾಲಾಜಿ ಪ್ರಶ್ನೆ ಕೇಳಿದ ಕೂಡಲೆ, ರಶ್ಮಿಕಾ ಬಾಯಿ ತೆರೆಯುವ ಮುನ್ನವೇ, ''ಒಂದು ಸ್ವಲ್ಪ ಟೈಮ್ ಕೊಡಬೇಕು... ದಿವಸಕ್ಕೆ ಒಂದು ಗಂಟೆ ಫೋನ್ ನಲ್ಲಿ ಮಾತನಾಡಬೇಕು. ಕಳೆದ ತಿಂಗಳವರೆಗೂ, ''ಏನು ಫೋನೇ ಮಾಡಿಲ್ಲ. ಮೆಸೇಜ್ ಮಾಡಿಲ್ಲ'' ಅಂತ ಕೇಳ್ತಿದ್ಲು. ಕಳೆದ ಎರಡು ವಾರಗಳಿಂದ ಏನೂ ಕಂಪ್ಲೇಂಟ್ಸ್ ಇಲ್ಲ. ''ಪರ್ವಾಗಿಲ್ಲ... ಅಷ್ಟೇನು ಟೆನ್ಷನ್ ತಗೋಬೇಡ. ಕೆಲಸದ ಮೇಲೆ ಗಮನಕೊಡು'' ಅಂತಾಳೆ. ಯಾಕೆ ಅಂದ್ರೆ ಅವಳು ಈಗ ಬಿಜಿ ಇದ್ದಾಳೆ'' ಎಂದುಬಿಟ್ಟರು ರಕ್ಷಿತ್ ಶೆಟ್ಟಿ.

ಪ್ರೇಮಿಗಳ ಮಾತು....

ಪ್ರೇಮಿಗಳಾಗಿರುವ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ರವರ ಮಜವಾದ ಮಾತುಗಳನ್ನು ಕೇಳಲು, ನೋಡಲು ನಾಳೆ ರಾತ್ರಿವರೆಗೂ ನೀವು ಕಾಯಲೇಬೇಕು. ಅಲ್ಲಿಯವರೆಗೂ ಈ ಪ್ರೋಮೋ ನೋಡ್ತಿರಿ...

English summary
Rakshit Shetty and Rashmika Mandanna takes part in Colors Super Channel's popular show Super Talk Time. Watch Promo...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada