For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮೊದಲ ನೋಟಕ್ಕೆ 'ಒರಟ'ನಂತೆ ಕಂಡಿದ್ದ ರಕ್ಷಿತ್ ಶೆಟ್ಟಿ.!

  By Harshitha
  |

  'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ 'ಕೊಡಗಿನ ಕುವರಿ' ರಶ್ಮಿಕಾ ಮಂದಣ್ಣ ನಿಜಜೀವನದಲ್ಲಿಯೂ ಒಟ್ಟಾಗಿದ್ದಾರೆ.

  ಭಾವಿ ಪತಿ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.?

  ಪ್ರೀತಿಸಿ, ಮದುವೆ ಆಗಲು ನಿರ್ಧರಿಸಿರುವ ಈ ಜೋಡಿಯದ್ದು ಲವ್ @ ಫಸ್ಟ್ ಸೈಟ್ ಇರಬಹುದು ಎಂದು ನೀವು ಊಹಿಸಿದ್ದರೆ, ನಿಮ್ಮ ಊಹೆ ತಪ್ಪು. ಯಾಕಂದ್ರೆ, ಮೊಟ್ಟ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ರವರನ್ನು ನೋಡಿದಾಗ 'ತುಂಬಾ ರೂಡ್' (ಒರಟು ಸ್ವಭಾವ) ಅನಿಸಿತ್ತಂತೆ. ಹಾಗಂತ ಸ್ವತಃ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಮುಂದೆ ಓದಿರಿ...

  'ಸೂಪರ್ ಟಾಕ್ ಟೈಮ್'ನಲ್ಲಿ ರಕ್ಷಿತ್-ರಶ್ಮಿಕಾ

  'ಸೂಪರ್ ಟಾಕ್ ಟೈಮ್'ನಲ್ಲಿ ರಕ್ಷಿತ್-ರಶ್ಮಿಕಾ

  ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಟಾಕ್ ಶೋ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅತಿಥಿಗಳಾಗಿ ಭಾಗವಹಿಸಿದ್ದಾರೆ.

  ಅಕುಲ್ ಕೇಳಿದ ಪ್ರಶ್ನೆ ಇದು...

  ಅಕುಲ್ ಕೇಳಿದ ಪ್ರಶ್ನೆ ಇದು...

  ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಭಾಗವಹಿಸಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಸಂಚಿಕೆ ಇಂದು (ಗುರುವಾರ) ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ಸದ್ಯ, ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಅದರಲ್ಲಿ ರಶ್ಮಿಕಾ ಮಂದಣ್ಣಗೆ ಅಕುಲ್ ಕೇಳಿದ ಪ್ರಶ್ನೆ ಹೀಗಿತ್ತು - ''ಫಸ್ಟ್ ಟೈಮ್ ರಕ್ಷಿತ್ ಶೆಟ್ಟಿ ರವರನ್ನ ನೋಡಿದಾಗ ನಿಮ್ಮ ಮನಸ್ಸಿಗೆ ಅನಿಸಿದ್ದು ಏನು.?''

  'ಒರಟ' ರಕ್ಷಿತ್

  'ಒರಟ' ರಕ್ಷಿತ್

  ''ರೂಡ್ (ಒರಟ) ಅನಿಸಿತ್ತು ನನಗೆ'' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ನೀಡಿದ್ದಾರೆ. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

  ಪ್ರೀತಿಯಿಂದ ಏನಂತ ಕರೆಯುತ್ತಾರೆ.?

  ಪ್ರೀತಿಯಿಂದ ಏನಂತ ಕರೆಯುತ್ತಾರೆ.?

  ನಿಶ್ಚಿತಾರ್ಥ ಆದ ಮೇಲೆಯೂ ಭಾವಿ ಪತಿ ರಕ್ಷಿತ್ ಶೆಟ್ಟಿಗೆ ರಶ್ಮಿಕಾ 'ಸರ್' ಅಂತ ಕರೆದಿದ್ದಾರಂತೆ. ಮತ್ತೊಂದು ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

  English summary
  Kannada Actor Rakshit Shetty and Actress Rashmika Mandanna takes part in Colors Super Channel's popular show Super Talk Time. Watch Promo...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X