ಪ್ರೋಮೋ ನೋಡಿ: 'ವೀಕೆಂಡ್' ಸಾಧನೆಯ ಸೀಟ್ ಮೇಲೆ ಐಪಿಎಸ್ ಅಧಿಕಾರಿ.!
ಅಂತೂ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೇಲಿದ್ದ ದೊಡ್ಡ ಅಪವಾದಕ್ಕೆ ಮುಕ್ತಿ ಸಿಕ್ಕಂತಾಗಿದೆ. ಬರೀ ಚಿತ್ರರಂಗದ ತಾರೆಯರಿಗೆ ಮಾತ್ರ ಸಾಧನೆಯ ಕುರ್ಚಿ ಮೀಸಲು ಎಂದೇ ಬಿಂಬಿತವಾಗಿದ್ದ ಈ ಕಾರ್ಯಕ್ರಮದಲ್ಲಿ ಈಗ ಉಳಿದ ಕ್ಷೇತ್ರಗಳ ದಿಗ್ಗಜರ ಜೀವನ ಚರಿತ್ರೆ ಅನಾವರಣ ಆಗುತ್ತಿದೆ.
ಈಗಾಗಲೇ 'ಮಾತಿನ ಮಲ್ಲ' ಪ್ರಾಣೇಶ್ ರವರ ಲೈಫ್ ಹಿಸ್ಟರಿಯನ್ನ ಕರ್ನಾಟಕ ಜನತೆ ಕಣ್ತುಂಬಿಕೊಂಡಿದ್ದಾಗಿದೆ. ಈ ವಾರಾಂತ್ಯ 'ಕರ್ನಾಟಕದ ಸಿಂಗಂ' ಎಂದೇ ಖ್ಯಾತಿ ಗಳಿಸಿರುವ ರವಿ.ಡಿ.ಚನ್ನಣ್ಣನವರ್ ರವರ ಬದುಕಿನ ಪುಟಗಳನ್ನು ತೆರೆದಿಡುವ ಜವಾಬ್ದಾರಿ ಜೀ ಕನ್ನಡ ವಾಹಿನಿಯವರದ್ದು.!

ಸಾಧಕರ ಸೀಟ್ ಮೇಲೆ 'ಕರ್ನಾಟಕದ ಹುಲಿ'
ಖಡಕ್ ಪೊಲೀಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ರವರ ಜೀವನಗಾಥೆಯನ್ನ ಕಳೆದ ಸೀಸನ್ ನಲ್ಲಿಯೇ ಕಣ್ತುಂಬಿಕೊಳ್ಳಬೇಕು ಎಂದು ಬಯಸಿದವರು ಅದೆಷ್ಟೋ ಮಂದಿ. ಆದ್ರೆ, ಕಳೆದ ಬಾರಿ ಇದು ಸಾಧ್ಯವಾಗಿರಲಿಲ್ಲ. ಈಗ ರವಿ.ಡಿ.ಚನ್ನಣ್ಣನವರ್ ರವರನ್ನ ಸಾಧನೆ ಸೀಟ್ ಮೇಲೆ ಕೂರಿಸುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ.[ನಿಮ್ಮ ಆಸೆಯಂತೆ ಈ 'ವೀಕೆಂಡ್'ನ ಅತಿಥಿಯಾಗಲಿದ್ದಾರೆ 'ಕರ್ನಾಟಕದ ಸಿಂಗಂ']

ಕಷ್ಟದ ಬದುಕು ಅನಾವರಣ
ಇಂದು ಐ.ಪಿ.ಎಸ್ ಅಧಿಕಾರಿ ಆಗಿ, ರೌಡಿಗಳಿಗೆ ದುಃಸ್ವಪ್ನವಾಗಿರುವ ರವಿ.ಡಿ.ಚನ್ನಣ್ಣನವರ್ ರವರ ಕಷ್ಟದ ಬದುಕು ಈ ವಾರಾಂತ್ಯದಲ್ಲಿ ಅನಾವರಣವಾಗಲಿದೆ.

ಪ್ರೋಮೋ ನೋಡಿದ್ರಾ.?
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರವಿ ಡಿ ಚನ್ನಣ್ಣನವರ್ ಭಾಗವಹಿಸಿರುವ ಪ್ರೋಮೋ ಜೀ ಕನ್ನಡ ವಾಹಿನಿ ಕಡೆಯಿಂದ ಔಟ್ ಆಗಿದೆ. ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ಶನಿವಾರ ಮಿಸ್ ಮಾಡಬೇಡಿ
ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್ ರವರ ಸಂಚಿಕೆ ಪ್ರಸಾರ ಆಗಲು ಇನ್ನೊಂದೇ ದಿನ ಬಾಕಿ. ಶನಿವಾರದ 'ವೀಕೆಂಡ್ ವಿತ್ ರಮೇಶ್' ಮಿಸ್ ಮಾಡ್ಬೇಡಿ.


Click it and Unblock the Notifications











