»   » ವಿಡಿಯೋ ನೋಡಿ; ನಟ ದರ್ಶನ್ ಕೋಪದ ಬಗ್ಗೆ ಸುದೀಪ್ ಕಾಮೆಂಟ್.!

ವಿಡಿಯೋ ನೋಡಿ; ನಟ ದರ್ಶನ್ ಕೋಪದ ಬಗ್ಗೆ ಸುದೀಪ್ ಕಾಮೆಂಟ್.!

Posted By:
Subscribe to Filmibeat Kannada

'ನಟ ದರ್ಶನ್ ಗೆ ಮೂಗಿನ ತುದಿಯಲ್ಲೇ ಕೋಪ' - ಹೀಗಂತ ಹೇಳಿದವರು ಮತ್ಯಾರೂ ಅಲ್ಲ, ಸ್ವತಃ ಕಿಚ್ಚ ಸುದೀಪ್.!

'ಕಿಚ್ಚ ಸುದೀಪ್ ಹಾಗೂ ನಟ ದರ್ಶನ್ ನಡುವಿನ ದೋಸ್ತಿ ಈಗ ಮೊದಲಿನ ಹಾಗಿಲ್ಲ.' ಈ ಮಾತಿಗೆ ಪುಷ್ಟಿ ಎನ್ನುವಂತೆ ಕಿಚ್ಚ ಸುದೀಪ್, ''I'm still your friend'' ಅಂತ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸಂದೇಶ ನೀಡಿದ್ದಾರೆ. [ಆಪ್ತಮಿತ್ರ ದರ್ಶನ್ ಬಗ್ಗೆ 'ವೀಕೆಂಡ್' ನಲ್ಲಿ ಸುದೀಪ್ ಆಡಿದ ಮಾತೇನು?]

ಕುಚ್ಚಿಕ್ಕು ಗೆಳೆಯರ ಮಧ್ಯೆ ಮನಸ್ತಾಪ ಬಂದಿದ್ದಾದ್ರೂ ಯಾಕೆ ಅನ್ನೋದು ಅಸ್ಪಷ್ಟ. ಆದ್ರೆ, ಸುದೀಪ್ ಮನಸ್ಸಿನಲ್ಲಿ ದರ್ಶನ್ ಸ್ನೇಹಕ್ಕೆ ಇನ್ನೂ ಜಾಗ ಇದೆ ಎನ್ನುವುದಕ್ಕೆ ದರ್ಶನ್ ಬಗ್ಗೆ ಸುದೀಪ್ ಆಡಿರುವ ಮಾತುಗಳೇ ಸಾಕ್ಷಿ. ಮುಂದೆ ಓದಿ.....

ದರ್ಶನ್ ಬಗ್ಗೆ ಸುದೀಪ್ ಕಾಮೆಂಟ್!

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟ ದರ್ಶನ್ ಬಗ್ಗೆ ಸುದೀಪ್ ಆಡಿರುವ ಮುತ್ತಿನಂಥ ಮಾತಿನ ವಿಡಿಯೋ, ನಾವು ನಿಮಗೆ ತೋರಿಸ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ದರ್ಶನ್ ಬಗ್ಗೆ ಸುದೀಪ್ ಮಾತು!

''ಒಬ್ಬ ಸ್ನೇಹಿತ ಅಂತ ಆದವನು ನನಗೆ ದರ್ಶನ್'' - ಸುದೀಪ್

[ಪತ್ನಿ ಪ್ರಿಯಾ ಬಗ್ಗೆ 'ವೀಕೆಂಡ್' ನಲ್ಲಿ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?]

ದರ್ಶನ್ ಮಿಸ್ ಮಾಡಿಕೊಂಡ ಸುದೀಪ್!

''ಹಂಡ್ರೆಡ್ ಪರ್ಸೆಂಟ್ ನಾನು ದರ್ಶನ್ ನ ಮಿಸ್ ಮಾಡಿಕೊಂಡೆ. ಯಾಕಂದ್ರೆ, ಈ ವೇದಿಕೆಯಲ್ಲಿ ನಾನು ದರ್ಶನ್ ರನ್ನ ತಬ್ಬಿಕೊಂಡು 'ಹಾಯ್' ಹೇಳ್ಬೇಕಿತ್ತು'' - ಸುದೀಪ್

[ಕಿಚ್ಚ ಸುದೀಪ್ ವಿಶೇಷ 'ವೀಕೆಂಡ್'ಗೆ ಆಗಮಿಸಿದ ಸ್ಪೆಷಲ್ ಗೆಸ್ಟ್ ಯಾರು?]

ದರ್ಶನ್ ಗೆ ಮೂಗಿನ ತುದಿಯಲ್ಲೇ ಕೋಪ!

''ಅವನಿಗೆ ಮೂಗಿನ ತುದಿಯಲ್ಲೇ ಕೋಪ. ಅದನ್ನ ಹಿಡಿಯಬೇಕು'' - ಸುದೀಪ್

['ವೀಕೆಂಡ್ ವಿತ್ ರಮೇಶ್-2'ಗೆ ಶುಭಂ ಹಾಡಲಿದ್ದಾರೆ ಕಿಚ್ಚ ಸುದೀಪ್!]

ದರ್ಶನ್ ಮಗು ತರಹ

''ಅವನು ಮಗು ತರಹ. ಹಿಡಿದು ತಳ್ಳಬೇಕು, ಸುಮ್ಮನಿರು ಅಂತ'' - ಸುದೀಪ್

[ಫೋಟೋ ಗ್ಯಾಲರಿ; ಸಾಧಕರ ಸೀಟ್ ನಲ್ಲಿ ಮಿಂಚಿದ ಕಿಚ್ಚ ಸುದೀಪ್]

'ನಾನಿನ್ನೂ ನಿನ್ನ ಗೆಳೆಯ'

''ದರ್ಶನ್, I'm still your friend. And I will always be your friend'' - ಸುದೀಪ್

ವಿಡಿಯೋ ನೋಡಿ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ...

ಹಾಗಾದ್ರೆ, ಕಾರ್ಯಕ್ರಮಕ್ಕೆ ದರ್ಶನ್ ಬರ್ಲಿಲ್ವಾ?

ಈ ಪ್ರಶ್ನೆಗೆ ಉತ್ತರ ಸಿಗ್ಬೇಕು ಅಂದ್ರೆ, ಈ ವಾರಾಂತ್ಯದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನ ನೀವು ನೋಡ್ಬೇಕು.

ಸುದೀಪ್ ಬಗ್ಗೆ ರವಿಚಂದ್ರನ್ ಮಾತು

'ಸುದೀಪ್ ನನ್ನ ದೊಡ್ಡ ಮಗ ಇದ್ದ ಹಾಗೆ' ಅಂತ ರವಿಚಂದ್ರನ್ ಹೇಳಿದ್ದಾರೆ.

ವಿಡಿಯೋ ನೋಡಿ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸುದೀಪ್ ಬಗ್ಗೆ ರವಿಚಂದ್ರನ್ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ....

ಇದೆಲ್ಲಾ ಪ್ರೋಮೋ ಅಷ್ಟೆ!

ಸುದೀಪ್ ಬಗ್ಗೆ ರವಿಚಂದ್ರನ್, ದರ್ಶನ್ ಬಗ್ಗೆ ಸುದೀಪ್ ಮಾತನಾಡಿರುವ ಸಣ್ಣ ತುಣುಕು ಮಾತ್ರ ನೋಡಿದ್ರಿ. ಇಂತಹ ಇನ್ನೂ ಸ್ವಾರಸ್ಯಕರ ಮಾಹಿತಿ ಸಂಚಿಕೆಯಲ್ಲಿದೆ.

ಕಾರ್ಯಕ್ರಮ ಪ್ರಸಾರ ಯಾವಾಗ?

ಈ ವಾರಾಂತ್ಯ ಅಂದ್ರೆ, ಏಪ್ರಿಲ್ 23 ಹಾಗೂ 24 ರಂದು ಸುದೀಪ್ ರವರ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Kannada Actor, Director Kiccha Sudeep spoke about Challenging Star Darshan in Weekend With Ramesh season2. Watch the promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada