For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಬಗ್ಗೆ ಬಾಯಿಗೆ ಬಂದಂತೆ ಬೈಯುತ್ತಿರುವವರು ಸ್ವಲ್ಪ ಇಲ್ಲಿ ನೋಡಿ...

  By Harshitha
  |

  ರಾಕಿಂಗ್ ಸ್ಟಾರ್ ಯಶ್ ಗೆ 'ಮಿಸ್ಟರ್ ಶೋ ಆಫ್' ಎಂದು ಬಿರುದು ಕೊಟ್ಟು 'ಕಿರಿಕ್' ಹುಡುಗಿ ರಶ್ಮಿಕಾ ಮಂದಣ್ಣ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟ್ರೋಲ್ ಪೇಜ್ ಗಳಂತೂ ರಶ್ಮಿಕಾ ಮಂದಣ್ಣ ರವರ ಕಾಲು ಎಳೆಯುವುದರಲ್ಲಿಯೇ ಬಿಜಿ ಆಗಿದೆ.

  ರಶ್ಮಿಕಾ ಆಡಿರುವ ಒಂದೇ ಒಂದು ಮಾತಿನಿಂದ, ಅವರ ಫೇಸ್ ಬುಕ್ ರೇಟಿಂಗ್ ಕೂಡ ಕುಸಿದಿದೆ. ರಶ್ಮಿಕಾ ರವರ ಬಗ್ಗೆ ಎಲ್ಲೆಲ್ಲೂ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾಗಿದೆ. ರಶ್ಮಿಕಾ ಬಗ್ಗೆ ಬಾಯಿಗೆ ಬಂದಂತೆ ಬೈಯುತ್ತಿರುವವರು ಒಮ್ಮೆ 'ಮಾತು ಕಥೆ ವಿನಯ್ ಜೊತೆ' ಕಾರ್ಯಕ್ರಮವನ್ನು ನೋಡಿ..

  'ಡವ್ ರಾಣಿ' ರಶ್ಮಿಕಾ ವಿರುದ್ಧ ಸಿಟ್ಟಿಗೆದ್ದ ಟ್ರೋಲ್ ಹುಡುಗರು

  ಕಾರ್ಯಕ್ರಮದಲ್ಲಿ ನಡೆದದ್ದು ಏನು.?

  ಕಾರ್ಯಕ್ರಮದಲ್ಲಿ ನಡೆದದ್ದು ಏನು.?

  'ಮಾತು ಕಥೆ ವಿನಯ್ ಜೊತೆ' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಭಾಗವಹಿಸಿದ್ದರು. ಚಿತ್ರರಂಗಕ್ಕೆ ಇಬ್ಬರೂ ಎಂಟ್ರಿಕೊಟ್ಟ ಬಗೆ ಬಗ್ಗೆ ಮಾತನಾಡಿದ ನಂತರ 'ಫಟಾ ಫಟ್' ರೌಂಡ್ ಶುರು ಆಯ್ತು.

  ಏನಿದು 'ಫಟಾ ಫಟ್' ರೌಂಡ್.?

  ಏನಿದು 'ಫಟಾ ಫಟ್' ರೌಂಡ್.?

  'ಫಟಾ ಫಟ್' ರೌಂಡ್ ನಲ್ಲಿ ನಿರೂಪಕ ವಿನಯ್ ಫಟಾ ಫಟ್ ಅಂತ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ರಕ್ಷಿತ್ ಹಾಗೂ ರಶ್ಮಿಕಾ ಫಟಾ ಫಟ್ ಅಂತ ಉತ್ತರಗಳನ್ನು ನೀಡಬೇಕಿತ್ತು.

  ಒಂದೇ ಒಂದು ಮಾತಿಗೆ ರಶ್ಮಿಕಾ ಮಂದಣ್ಣಗೆ ಇಂತಹ ಶಿಕ್ಷೆನಾ!?

  ವಿಶೇಷ ಬಹುಮಾನ ಇತ್ತು

  ವಿಶೇಷ ಬಹುಮಾನ ಇತ್ತು

  ಎಲ್ಲ ಪ್ರಶ್ನೆಗಳನ್ನು ಮಿಸ್ ಮಾಡದೆ, ನೇರವಾಗಿ ಉತ್ತರ ನೀಡಿದವರಿಗೆ ವಿಶೇಷ ಬಹುಮಾನ ಕಾದಿತ್ತು.

  ರಕ್ಷಿತ್ ಹಾಗೂ ರಶ್ಮಿಕಾಗೆ ಬಹುಮಾನದ ಮೇಲೆ ಕಣ್ಣು

  ರಕ್ಷಿತ್ ಹಾಗೂ ರಶ್ಮಿಕಾಗೆ ಬಹುಮಾನದ ಮೇಲೆ ಕಣ್ಣು

  'ಬಹುಮಾನ'ದ ಮೇಲೆ ಕಣ್ಣು ಬೀಳುತ್ತಿದ್ದಂತೆಯೇ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ''ಬಹುಮಾನ''ಕ್ಕಾಗಿ ಉತ್ತರಗಳನ್ನು ನೀಡಲು ರೆಡಿ ಆದರು. ಮೊದಲು ರಕ್ಷಿತ್ ಶೆಟ್ಟಿ ಉತ್ತರಗಳನ್ನು ನೀಡಿದ ಬಳಿಕ, ರಶ್ಮಿಕಾ ಸರದಿ ಬಂತು.

  ರಾಧಿಕಾ ಪಂಡಿತ್ ಬಗ್ಗೆ ರಶ್ಮಿಕಾ ಹೇಳಿದ್ದೇನು.?

  ರಾಧಿಕಾ ಪಂಡಿತ್ ಬಗ್ಗೆ ರಶ್ಮಿಕಾ ಹೇಳಿದ್ದೇನು.?

  ''ಇತ್ತೀಚೆಗೆ ನೀವು ನೋಡಿರುವ ಕನ್ನಡ ಚಿತ್ರದಲ್ಲಿ, ''ನಾನು ಈ ಚಿತ್ರದಲ್ಲಿ ಆಕ್ಟ್ ಮಾಡಬೇಕಿತ್ತು'' ಅಂತ ಅನಿಸಿದ್ದು ಯಾವುದು.?'' ಅಂತ ನಿರೂಪಕ ಕೇಳಿದ ಪ್ರಶ್ನೆಗೆ, ''ನನಗೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದಲ್ಲಿ ರಾಧಿಕಾ ಮೇಡಂ ಅವರ ಪಾತ್ರ ತುಂಬಾ ಇಷ್ಟ ಆಗಿತ್ತು'' ಎಂದು ರಶ್ಮಿಕಾ ಹೇಳಿದರು.

  ರಶ್ಮಿಕಾ ಮಂದಣ್ಣಗೆ ಚಾಟಿ ಏಟು ಕೊಟ್ಟಿರುವ ಯಶ್ ಅಪ್ಪಟ ಅಭಿಮಾನಿ

  ಯಶ್ ಆಕ್ಟಿಂಗ್ ಸೂಪರ್.!

  ಯಶ್ ಆಕ್ಟಿಂಗ್ ಸೂಪರ್.!

  ''ಇತ್ತೀಚೆಗೆ ನೀವು ನೋಡಿರುವ ಕನ್ನಡ ಚಿತ್ರದಲ್ಲಿ, ''ಈ ನಟ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ'' ಅಂತ ಅನಿಸಿದ್ದು ಯಾರ ಆಕ್ಟಿಂಗ್ ನೋಡಿದ ಮೇಲೆ.?'' ಎಂದು ನಿರೂಪಕ ಕೇಳಿದ ಪ್ರಶ್ನೆಗೆ, ''ಯಶ್ ಸರ್. 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದಲ್ಲಿ..'' ಎಂದು ರಶ್ಮಿಕಾ ಉತ್ತರ ಕೊಟ್ಟರು.

  ಈ ಟೈಟಲ್ ಯಾರಿಗೆ ಕೊಡುತ್ತೀರಾ.?

  ಈ ಟೈಟಲ್ ಯಾರಿಗೆ ಕೊಡುತ್ತೀರಾ.?

  ''ಮಿಸ್ಟರ್ ಶೋ ಆಫ್' ಟೈಟಲ್ ಯಾರಿಗೆ ಕೊಡುತ್ತೀರಾ.?'' ಎಂದು ನಿರೂಪಕ ಕೇಳುತ್ತಿದ್ದಂತೆಯೇ, ರಶ್ಮಿಕಾ ತಬ್ಬಿಬ್ಬಾದರು. ''ಇದು ಸರಿಯಲ್ಲ'' ಅಂತ ಉತ್ತರ ಕೊಡಲು ಹಿಂದು ಮುಂದು ನೋಡಿದರು.

  ಯಶ್ 'ಶೋ ಆಫ್' ಎಂದವರ ಬಾಯಿಗೆ ಬೀಗ ಹಾಕಿದ ನಿರ್ದೇಶಕ ಸಂತೋಷ್

  ರಕ್ಷಿತ್ ಮೇಲೆ ಹಾಕ್ಲಾ.?

  ರಕ್ಷಿತ್ ಮೇಲೆ ಹಾಕ್ಲಾ.?

  ''ಮಿಸ್ಟರ್ ಶೋ ಆಫ್'' ಟೈಟಲ್ ನ ನಿಮ್ಮ ಮೇಲೆ ಹಾಕ್ಲಾ.?'' ಅಂತ ರಕ್ಷಿತ್ ಶೆಟ್ಟಿ ಕಡೆ ತಿರುಗಿ ನೋಡಿದ ರಶ್ಮಿಕಾ ಕಡೆಗೆ ''ನೋ.. ನಿಮ್ಮ ಮೇಲೆ ಹಾಕಲು ಸಾಧ್ಯವಿಲ್ಲ'' ಎಂದರು.

  ರಕ್ಷಿತ್ ಏನಂದರು.?

  ರಕ್ಷಿತ್ ಏನಂದರು.?

  ''ರಶ್ಮಿಕಾಗೆ ಯಾರೂ ಗೊತ್ತಿಲ್ಲ. ಯಾರನ್ನೂ ಮೀಟ್ ಮಾಡಿಲ್ಲ'' ಎಂದು ರಕ್ಷಿತ್ ಶೆಟ್ಟಿ ಕೂಡ ಆ ಸಮಯದಲ್ಲಿ ಹೇಳಿದರು.

  ಉತ್ತರ ಕೊಡಲ್ಲ.!

  ಉತ್ತರ ಕೊಡಲ್ಲ.!

  ''ನಾನು ಈ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. ಉತ್ತರ ನೀಡಿ ಸಮಸ್ಯೆಗೆ ಸಿಲುಕುವುದಿಲ್ಲ'' ಎಂದು ರಶ್ಮಿಕಾ ಹೇಳಿದರು. ಅದೇ ಗ್ಯಾಪ್ ನಲ್ಲಿ 'ಬಹುಮಾನ ಕಳೆದುಕೊಂಡೆ' ಅಂತ ರಕ್ಷಿತ್ ಶೆಟ್ಟಿ, ರಶ್ಮಿಕಾ ರವರ ಕಾಲೆಳೆದರು. ಆಗ, ''ಇಲ್ಲ. ಈ ತರಹದ ಪ್ರಶ್ನೆ ಕೇಳಬಾರದು. ನಾನು ಬಹುಮಾನ ಕಳೆದುಕೊಂಡಿಲ್ಲ'' ಅಂತ ರಶ್ಮಿಕಾ ಹೇಳಿದರು.

  ಕಡೆಗೂ 'ಯಶ್' ಹೆಸರು ಹೇಳಿದರು

  ಕಡೆಗೂ 'ಯಶ್' ಹೆಸರು ಹೇಳಿದರು

  ''ನಾನು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ'' ಅಂತ ರಕ್ಷಿತ್ ಹೇಳಿದ್ಮೇಲೆ, ''ಸರಿ, ನಾನು ಉತ್ತರ ನೀಡುತ್ತೇನೆ. ನಾನು ಸಮಸ್ಯೆಯಲ್ಲಿ ಸಿಲುಕಿದರೆ, ರಕ್ಷಿತ್ ಕಾರಣ'' ಎನ್ನುತ್ತಾ, ''ಯಶ್ ಸರ್'' ಎಂದು ಮೆಲುದನಿಯಲ್ಲಿ ಹೇಳಿದರು. ಕಡೆಗೆ ಇಬ್ಬರಿಗೂ ಬಹುಮಾನ ಸಿಕ್ಕಿತು.

  ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ

  ಇದೇ ಈಗ ರಾದ್ಧಾಂತಕ್ಕೆ ಕಾರಣ

  ಇದೇ ಈಗ ರಾದ್ಧಾಂತಕ್ಕೆ ಕಾರಣ

  ಏಳು ತಿಂಗಳ ಹಿಂದೆ ರೆಕಾರ್ಡಿಂಗ್ ಆಗಿ, 'ಕಿರಿಕ್ ಪಾರ್ಟಿ' ಬಿಡುಗಡೆ ಆದ ಸಮಯದಲ್ಲಿ ಪ್ರಸಾರ ಆಗಿದ್ದ 'ಮಾತು ಕಥೆ ವಿನಯ್ ಜೊತೆ' ಕಾರ್ಯಕ್ರಮದಲ್ಲಿ ರಶ್ಮಿಕಾ ಆಡಿದ್ದ ಈ ಮಾತು ಇಂದು ಕೋಲಾಹಲ ಎಬ್ಬಿಸಿದೆ. ಕಾರ್ಯಕ್ರಮವನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

  English summary
  ''Kannada Actor Yash is 'Mr Show Off'' says Kannada Actress Rashmika Mandanna in a program called 'Mathu Kathe Vinay Jothe' show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X