Don't Miss!
- Automobiles Hyundai: ಹ್ಯುಂಡೈ ಎಕ್ಸ್ಟರ್ ಮೊದಲ ಅಪಘಾತ: ಮುಗಿಬಿದ್ದು ಖರೀದಿಸಿದವರು ಇದನ್ನೊಮ್ಮೆ ನೋಡಿ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- News ಡಾ.ಮಂಜುನಾಥ್ ಅವರಿಗೆ ಕೇಂದ್ರ ಸಚಿವ ಸ್ಥಾನ: ಸುಳಿವು ಕೊಟ್ಟ ಹೆಚ್ ಡಿ ದೇವೇಗೌಡ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದ ನಂತರ ಸ್ಪರ್ಧಿಗಳೆಲ್ಲಾ ಏನ್ ಮಾಡ್ತಿದ್ದಾರೆ ಅಂತ ಹುಡುಕುತ್ತಾ ಹೋದರೆ, ನಿರಂಜನ್ ದೇಶಪಾಂಡೆ ಮತ್ತು ಶೀತಲ್ ಶೆಟ್ಟಿ 'ಮಜಾ ಭಾರತ'ದಲ್ಲಿ ನೆಲೆಯೂರಿದ್ದಾರೆ.
ಹಾಗಾದ್ರೆ, ಬಾಕಿ ಸ್ಪರ್ಧಿಗಳ ಕಥೆ ಏನು ಅಂತ ಯೋಚಿಸುತ್ತಿರುವ ನಿಮಗೆ ಈ ವೀಕೆಂಡ್ ನಲ್ಲಿ ಭರಪೂರ ಮನರಂಜನೆ ಖಂಡಿತ. ಯಾಕಂದ್ರೆ, ಈ ವಾರದ 'ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳೇ ವಿಶೇಷ ಅತಿಥಿಗಳು.!
'ಮಜಾ ಟಾಕೀಸ್' ಮನೆಯಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳು
ನಟಿ ಕಾರುಣ್ಯ ರಾಮ್, ಗಾಯಕಿ ಚೈತ್ರ, ನಟ-ನಿರ್ದೇಶಕ ಮೋಹನ್, ಕಾವ್ಯ ಸೇರಿದಂತೆ 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳು ನಿಮ್ಮನ್ನೆಲ್ಲಾ ನಕ್ಕು ನಲಿಸಲು 'ಮಜಾ ಟಾಕೀಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ.['ಬಿಗ್ ಬಾಸ್'ನಲ್ಲಿ ಪ್ರೇಮ, 'ಮಜಾ ಟಾಕೀಸ್'ನಲ್ಲಿ ಮದುವೆ!]
ಸೃಜನ್ ಜೊತೆ ಪ್ರಥಮ್, ರೇಖಾ, ಕೀರ್ತಿ ಮಜಾ
'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿನ್ನರ್ ಪ್ರಥಮ್, ರನ್ನರ್ ಅಪ್ ಕೀರ್ತಿ ಮತ್ತು ಮೂರನೇ ಸ್ಥಾನ ಪಡೆದ ರೇಖಾ ಈ ವಾರದ 'ಮಜಾ ಟಾಕೀಸ್'ನ ವಿಶೇಷ ಅತಿಥಿಗಳು.['ಮಜಾ ಟಾಕೀಸ್'ನಲ್ಲಿ 'ಭುವನ್-ಸಂಜನಾ ಮದುವೆ': ಫಸ್ಟ್ ಲುಕ್ ರಿಲೀಸ್!]
ಭುವನ್-ಸಂಜನಾ ಮದುವೆ ನಡೆದಿದೆ.!
ಇನ್ನೂ ಇದೇ 'ಮಜಾ ಟಾಕೀಸ್' ಸಂಚಿಕೆಯಲ್ಲಿ ಭುವನ್-ಸಂಜನಾ ಮದುವೆ ಕೂಡ ನಡೆದಿದೆ.
ಪ್ರೋಮೋ ನೋಡಿದ್ರಾ.?
ಈ ವಾರ 'ಮಜಾ ಟಾಕೀಸ್' ಪ್ರೋಮೋನ ನೀವಿನ್ನೂ ನೋಡಿಲ್ಲ ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಿ....
ಈ ಶನಿವಾರ-ಭಾನುವಾರ ಮಿಸ್ ಮಾಡ್ಬೇಡಿ...
'ಬಿಗ್ ಬಾಸ್' ಸ್ಪರ್ಧಿಗಳು ಭಾಗವಹಿಸಿರುವ 'ಮಜಾ ಟಾಕೀಸ್' ಮೆಗಾ ಸಂಚಿಕೆ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಮಿಸ್ ಮಾಡದೆ, ನೋಡಿ....