ವಿಡಿಯೋ: ಈ ವರ್ಷದ 'ಬಿಗ್ ಬಾಸ್' ಮನೆ ಹೇಗಿದೆ ಗೊತ್ತಾ.?

ಭಾರತದ ಅತಿ ದೊಡ್ಡ ಹಾಗೂ ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' ಮತ್ತೆ ನಿಮ್ಮೆಲ್ಲರ ಮುಂದೆ ಬಂದಿದೆ. 'ಬಿಗ್ ಬಾಸ್-12' ಶುರುವಾಗುವುದಕ್ಕೆ ಕ್ಷಣಗಣನೆ ಆರಂಭ ಆಗಿದೆ.

ನಾಳೆ (ಸೆಪ್ಟೆಂಬರ್ 16) ರಾತ್ರಿ 9 ಗಂಟೆಗೆ 'ಬಿಗ್ ಬಾಸ್-12' ಪ್ರೀಮಿಯರ್ ಆಗಲಿದೆ. ಪ್ರತಿ ದಿನ ರಾತ್ರಿ 9ಕ್ಕೆ ಕಲರ್ಸ್ ವಾಹಿನಿಯಲ್ಲಿ 'ಬಿಗ್ ಬಾಸ್' ಪ್ರಸಾರ ಆಗಲಿದೆ. ಅಂದ್ಹಾಗೆ, ಲೋನಾವಾಲದಲ್ಲಿ ಇರುವ 'ಬಿಗ್ ಬಾಸ್' ಮನೆ ಈ ಬಾರಿ ಇನ್ನಷ್ಟು ಕಲರ್ ಫುಲ್ ಆಗಿದೆ.

Watch video: Glimpse of Bigg Boss 12 house

ಹಳೇ ಮನೆಯ ಸೆಟ್ ಗೆ ಸುಣ್ಣ-ಬಣ್ಣ ಹೊಡೆದು ಮತ್ತಷ್ಟು ರಂಗು ರಂಗಾಗಿ ಮಾಡಲಾಗಿದೆ. ಹೊಸ ಹಾಗೂ ಆಧುನಿಕ ಪೀಠೋಪಕರಣಗಳನ್ನ ಇರಿಸಲಾಗಿದೆ.

ಈ ಬಾರಿ 'ವಿಚಿತ್ರ ಜೋಡಿ' ಕಾನ್ಸೆಪ್ಟ್ ಇರುವ ಕಾರಣ, ಬೆಡ್ ರೂಮ್ ಏರಿಯಾದಲ್ಲಿ ಡಬಲ್ ಕಾಟ್ ಬೆಡ್ ಗಳಿವೆ. ಬಾತ್ ರೂಮ್ ಏರಿಯಾ ಅಂತೂ ಬೀಚ್ ಗೆ ಹೋಗಿ ಬಂದಂತಹ ಅನುಭವ ನೀಡುತ್ತದೆ.

ಇನ್ನೂ ಲಿವಿಂಗ್ ಏರಿಯಾ ಕಣ್ಣಿಗೆ ಮುದ ನೀಡಲಿದ್ದು, ವಿಶಾಲವಾದ ಸೋಫ ಇರಿಸಲಾಗಿದೆ. ಒಟ್ನಲ್ಲಿ ಈ ಆವೃತ್ತಿಯ 'ಬಿಗ್ ಬಾಸ್' ಮನೆ 'ಬೀಚ್ ಥೀಮ್'ನಲ್ಲಿ ಅಲಂಕೃತಗೊಂಡಿದೆ.

ಈಗಾಗಲೇ 'ಬಿಗ್ ಬಾಸ್-12' ಪ್ರೀಮಿಯರ್ ಚಿತ್ರೀಕರಣ ಮುಗಿದಿದ್ದು, ಪ್ರಸಾರ ಆಗುವುದು ಮಾತ್ರ ಬಾಕಿ ಇದೆ. ಹಾಗೇ, 'ಬಿಗ್ ಬಾಸ್' ಮನೆಯ ಔಟ್ ಹೌಸ್ ನಲ್ಲಿ ಎರಡು ವಿಚಿತ್ರ ಜೋಡಿಗಳು ಜನರ ವೋಟ್ ಗಾಗಿ ಕಾಯುತ್ತಿದ್ದಾರೆ. ನಾಲ್ಕು ಜನರ ಪೈಕಿ ಯಾವ ಇಬ್ಬರಿಗೆ 'ಬಿಗ್ ಬಾಸ್' ಮೇನ್ ಡೋರ್ ತೆಗೆಯುತ್ತೋ, ನೋಡಬೇಕು.

More from Filmibeat

English summary
Here is a Glimpse of Bigg Boss 12 house. Have a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X