ವಿಡಿಯೋ:'ಬಿಗ್ ಬಾಸ್' ಮನೆಯಿಂದ ಹೊರಬಂದ ಶೀತಲ್ ಶೆಟ್ಟಿ ಹೇಳಿದ್ದೇನು?

By Bharath Kumar

ಖ್ಯಾತ ಸುದ್ದಿ ನಿರೂಪಕಿ ಹಾಗೂ ಚಲನಚಿತ್ರ ನಟಿ ಶೀತಲ್ ಶೆಟ್ಟಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಿಂದ ಹೊರಬಂದಿದ್ದಾರೆ. ಗ್ರ್ಯಾಂಡ್ ಫಿನಾಲೆಗೆ ಕೊನೆಯ ಎರಡು ವಾರಗಳು ಮಾತ್ರ ಬಾಕಿಯಿದ್ದು, ವಿನ್ನರ್ ಯಾರು ಎಂಬುದು ವೀಕ್ಷಕರನ್ನ ಕಾಡುತ್ತಿದೆ.

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 'ವಿನ್ನರ್' ಯಾರು ಎಂಬ ಕುತೂಹಲಕ್ಕೆ ಶೀತಲ್ ಶೆಟ್ಟಿ ಬ್ರೇಕ್ ಹಾಕಿದ್ದು, ಈ ಸೀಸನ್ ನ ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದನ್ನ ಗೆಸ್ ಮಾಡಿದ್ದಾರೆ.['ಬಿಗ್ ಬಾಸ್ ಕನ್ನಡ-4': ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಔಟ್.! ]

'ಬಿಗ್ ಬಾಸ್ ಸೀಸನ್-4'ರ ಸ್ವರ್ಧಿಗಳಲ್ಲಿ ಒಬ್ಬರಾಗಿದ್ದ ಶೀತಲ್ ಶೆಟ್ಟಿ, ಮೊದಲ ದಿನದಿಂದ ಎಲಿಮಿನೇಟ್ ಆಗುವ ಕೊನೆಯ ದಿನದವರೆಗೂ ಒಂದಲ್ಲ ಒಂದು ರೀತಿಯಲ್ಲಿ ವೀಕ್ಷಕರನ್ನ ರಂಜಿಸಿದ್ದಾರೆ.

ತಮ್ಮ 85 ದಿನಗಳ ಜರ್ನಿಯಲ್ಲಿ 'ಬಿಗ್ ಬಾಸ್' ಮನೆಯ ಎಲ್ಲ ಸೌಲಭ್ಯಗಳನ್ನ ಅನುಭವಿಸಿರುವ ಅದೃಷ್ಟಶಾಲಿ ಅಂದ್ರೆ ಶೀತಲ್. ಅಚ್ಚರಿ ಎಂಬಂತೆ ಮೊದಲ ನಾಲ್ಕು ವಾರದ ನಂತರ 'ಬಿಗ್ ಬಾಸ್' ಮನೆಯಿಂದ ಹೊರಬಂದ ಶೀತಲ್, ಎರಡನೇ ಅವಕಾಶ ಪಡೆದು ಸೀಕ್ರೇಟ್ ರೂಂಗೆ ಎಂಟ್ರಿ ಪಡೆದಿದ್ದರು. 12 ವಾರಗಳ ಅದ್ಭುತ ಆಟದ ನಂತರ 'ಬಿಗ್' ಮನೆಯಿಂದ ಹೊರಬಂದರು.[ಡಬಲ್ ಶಾಕ್: 'ಬಿಗ್ ಬಾಸ್' ಮನೆಯಿಂದ ಶಾಲಿನಿ, ಶೀತಲ್ ಔಟ್.! ]

ಈ ವೇಳೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತಿಗೆ ಸಿಕ್ಕ ಶೀತಲ್, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹೇಗಿತ್ತು ಎಂಬುದರ ಜೊತೆ ಕೆಲವು ಇಂಟ್ರಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.[ಸೀಕ್ರೆಟ್ ರೂಮ್ ಗೆ ಶೀತಲ್ ಶೆಟ್ಟಿ, ಶಾಲಿನಿ: ಮುಂದಿದೆ 'ಮಾರಿ ಹಬ್ಬ' ]

''ಬಿಗ್ ಬಾಸ್' ಒಂದು ಅದ್ಭುತ ಅನುಭವ, ಎಲ್ಲರೂ ಗೆಲ್ಲುವುದಕ್ಕೆ ಹೋಗಿರೋದು. ಆದ್ರೆ, ಕೆಲವರು ಗೆಲುವಿಗಾಗಿ ಕೆಟ್ಟ ಆಟವಾಡುತ್ತಿದ್ದಾರೆ. ವಾಣಿಶ್ರೀ ಅವರು ಮೊದಲ ವಾರ ಹೊರಹೋಗುವ ಸ್ವರ್ಧಿಯಾಗಿರಲಿಲ್ಲ. 'ಸಂಜನಾ-ಭುವನ್' ಬಗ್ಗೆ ನಾನು ಮಾತನಾಡಲ್ಲ, 'ಗ್ರೂಪ್ ಡೀಲ್'ಗೂ ನನಗೂ ಸಂಬಂಧವಿಲ್ಲ. ಪ್ರಥಮ್ ಒಬ್ಬ ಒಳ್ಳೆ ವ್ಯಕ್ತಿ, ಮಾಳವಿಕಾ ಹಾಗೂ ಮೋಹನ್ ಅವರಿಗೆ ಗೆಲ್ಲುವ ಅರ್ಹತೆಯಿಲ್ಲ......ಹೀಗೆ ಅನೇಕ ವಿಷ್ಯಗಳನ್ನ ಶೀತಲ್ ಶೆಟ್ಟಿ ಹಂಚಿಕೊಂಡಿದ್ದಾರೆ. ಜೊತೆಗೆ 'ಬಿಗ್ ಬಾಸ್ ಕನ್ನಡ-4' ವಿನ್ನರ್ ಯಾರು ಎಂಬ ಪ್ರಶ್ನೆಗೆ ಶೀತಲ್ ಶೆಟ್ಟಿ 'ಇವರು' ಆಗಬೇಕು ಎಂಬ ಆಶಯವನ್ನ ವ್ಯಕ್ತಪಡಿಸಿದ್ದಾರೆ. ಶೀತಲ್ ಶೆಟ್ಟಿ ಅವರೊಂದಿಗೆ ನಿಮ್ಮ ಫಿಲ್ಮಿಬೀಟ್ ನಡೆಸಿರುವ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ

More from Filmibeat

English summary
Here is the interview of News Anchor and Kannada Actress Sheethal Shetty after elimination from Bigg Boss Kannada 4 reality show. Watch the video..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X