'ಭುವನ್-ಸಂಜನಾ ಮದುವೆ' ಖಂಡಿಸಿದ ಲವ್ವರ್ ಬಾಯ್ ಪ್ರಥಮ್.!
'ಸೂಪರ್ ಹುಡುಗ' ಲಾರ್ಡ್ ಪ್ರಥಮ್ ಗೆ 'ಸುಮಾರಾಗಿರೋ ಹುಡುಗಿ' ಸಂಜನಾ ಇಷ್ಟ ಅಂತ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ನೋಡಿದ ಎಲ್ಲರಿಗೂ ಗೊತ್ತು. 'ಐ ಲವ್ ಯು... ಯು ಮಸ್ಟ್ ಲವ್ ಮಿ' ಅಂತ ಸಂಜನಾ ಹಿಂದೆ ಬಿದ್ದು 'ದೊಡ್ಮನೆ'ಯಲ್ಲಿ 'ಲವ್ವರ್ ಬಾಯ್' ಪ್ರಥಮ್ ಸೃಷ್ಟಿಮಾಡಿದ ರಾದ್ಧಾಂತ ಮರೆಯೋಕೆ ಸಾಧ್ಯವೇ ಇಲ್ಲ ಬಿಡಿ...
ಇನ್ನೂ ನಟಿ ಸಂಜನಾ ಮತ್ತು ಭುವನ್ ಪೊನ್ನಣ್ಣ ನಡುವೆ ಇರುವ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್ ಅನ್ನೋದು ಕೂಡ 'ಬಿಗ್ ಬಾಸ್' ಸ್ಪರ್ಧಿಗಳಿಗೂ ಗೊತ್ತಿರುವ ಸಂಗತಿ. ತಮ್ಮ ಲವ್ ಟ್ರ್ಯಾಕ್ ನಲ್ಲಿ ಭುವನ್ ಅಡ್ಡ ಬರಬಾರದು ಎಂಬ ಕಾರಣಕ್ಕೆ ಭುವನ್ ಗೆ ಸಂಜನಾ ಅಣ್ಣನ ಪಟ್ಟ ಕೊಟ್ಟರು ಪ್ರಥಮ್.['ಬಿಗ್ ಬಾಸ್'ನಲ್ಲಿ ಪ್ರೇಮ, 'ಮಜಾ ಟಾಕೀಸ್'ನಲ್ಲಿ ಮದುವೆ!]
ಆದ್ರೇನು ಉಪಯೋಗ, 'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಕೂಡಲೆ ಸಂಜನಾ-ಭುವನ್ ಮೀಟ್ ಮಾಡಿ ಐಸ್ ಕ್ರೀಮ್ ಸವಿದಿದ್ದಾರೆ. ಮುಂದೆ ಓದಿರಿ....

ಭುವನ್-ಸಂಜನಾ ಮದುವೆ
ಸಂಜನಾ ಮತ್ತು ಭುವನ್ ನಡುವೆ ಇರುವ 'ಫ್ರೆಂಡ್ ಶಿಪ್' ನೋಡಿ 'ಮಜಾ ಸ್ಟಾರ್' ಸೃಜನ್ 'ಮಜಾ ಟಾಕೀಸ್' ನಲ್ಲಿ ಮದುವೆ ಮಾಡಿಸಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ಭುವನ್-ಸಂಜನಾ ಮದುವೆ': ಫಸ್ಟ್ ಲುಕ್ ರಿಲೀಸ್!]

ತಾಳಿ ಕಟ್ಟಿದ ಭುವನ್
'ಮಜಾ ಟಾಕೀಸ್'ಗಾಗಿ ನಟಿ ಸಂಜನಾಗೆ ಭುವನ್ ತಾಳಿ ಕಟ್ಟಿದ್ದಾರೆ.

ಖಂಡಿಸಿದ ಪ್ರಥಮ್
ಸಂಜನಾ ಕೊರಳಿಗೆ ಭುವನ್ ತಾಳಿ ಕಟ್ಟಿದ್ದಕ್ಕೆ 'ಲವ್ವರ್ ಬಾಯ್' ಪ್ರಥಮ್ ಖಂಡಿಸಿದ್ದಾರೆ.['ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!]

ಸಂಜನಾ ಅಣ್ಣ ಭುವನ್
''ಯಾವತ್ತಿದ್ದರೂ, ಸಂಜನಾಗೆ ಭುವನ್ ಅಣ್ಣ'' ಅಂತ ಪ್ರಥಮ್ ಕೂಗಿ ಹೇಳಿದ್ದಾರೆ.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ]

ಪ್ರೋಮೋ ನೋಡಿದ್ರಾ.?
'ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳು ಭಾಗವಹಿಸಿರುವ ಮೆಗಾ ಸಂಚಿಕೆಯ ಪ್ರೋಮೋ ನೀವಿನ್ನೂ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡ್ಬೇಡಿ... ಈ ಲಿಂಕ್ ಕ್ಲಿಕ್ ಮಾಡಿ....


Click it and Unblock the Notifications











