»   » ವೀಕೆಂಡ್ ವಿಥ್ ರಮೇಶ್ ಹೊಚ್ಚ ಹೊಸ ಟೀಸರ್ ನೋಡಿ

ವೀಕೆಂಡ್ ವಿಥ್ ರಮೇಶ್ ಹೊಚ್ಚ ಹೊಸ ಟೀಸರ್ ನೋಡಿ

Posted By:
Subscribe to Filmibeat Kannada

ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನಡೆಸಿಕೊಡುವ ಟಾಕ್ ಶೋ 'ವೀಕೆಂಡ್ ವಿಥ್ ರಮೇಶ್' ಈಗ ಮತ್ತೊಮ್ಮೆ ನಿಮ್ಮ ಮನತುಂಬಲು ಬರುತ್ತಿದೆ. ಮನೆಮಂದಿಗೆಲ್ಲ ಮೆಚ್ಚುಗೆಯಾಗಿದ್ದ ಈ ಶೋನ ಹೊಚ್ಚ ಹೊಸ ಟೀಸರ್ ಬಿಡುಗಡೆ ಮಾಡಲಾಗಿದೆ.

ಸಿನಿಮಾ ಮಂದಿ ಅಲ್ಲದೆ ಹೆಸರಾಂತ ಕಲಾವಿದರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಎಂದಿನಂತೆ ಪಾಲ್ಗೊಳ್ಳಲಿದ್ದಾರೆ. [ವೀಕೆಂಡ್ ವಿಥ್ ರಮೇಶ್ ಶೋನಲ್ಲಿ ಪಬ್ಲಿಕ್ ಟಿವಿ ರಂಗನಾಥ್]

Weekend with Ramesh Season 2

ಕಸ್ತೂರಿ ವಾಹಿನಿಯಲ್ಲಿ 'ಪ್ರೀತಿಯಿಂದ ರಮೇಶ್', ಈಟಿವಿ ಕನ್ನಡದಲ್ಲಿ ರಾಜ ರಾಣಿ ರಮೇಶ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದ ರಮೇಶ್ ಅವರು. ಇದೀಗ ಈ ವಿಭಿನ್ನ ಟಾಕ್ ಶೋ ಮೂಲಕ ಮತ್ತೊಮ್ಮೆ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದಾರೆ. ಇದರ ಜೊತೆಗೆ ಜನಶ್ರೀಯಲ್ಲಿ ಸದ್ಯಕ್ಕೆ ಒಂದು ಟಾಕ್ ಶೋ ನಡೆಸುತ್ತಿದ್ದಾರೆ.

ರಮೇಶ್ ಅವರ ನಿರೂಪಣೆ, ಅತಿಥಿಗಳ ಬದುಕಿನ ಕಥೆ ಎಲ್ಲವೂ ಪ್ರೇಕ್ಷಕರಿಗೆ ಸಕತ್ ಇಷ್ಟವಾಗಿತ್ತು. ಮೊದಲ ಕಂತಿನಲ್ಲಿ ಉಪೇಂದ್ರ, ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯೋಗರಾಜ್ ಭರ್, ಅರ್ಜುನ್ ಸರ್ಜಾ, ರವಿಚಂದ್ರನ್, ಎಚ್ ಆರ್ ರಂಗನಾಥ್ ಸೇರಿದಂತೆ ಹಲವಾರು ಗಣ್ಯರ ಬದುಕಿನ ಚಿತ್ರಣವನ್ನು ರಮೇಶ್ ಅವರು ನಮ್ಮ ಮುಂದಿಟ್ಟಿದ್ದರು.

Watch : Weekend with Ramesh Season 2 teaser Coming Soon

ಎಲ್ಲಾ ನೆನಪುಗಳು ಜೀವ ತಳೆಯುವ ವೇಳೆ ಇನ್ನೇನು ಬರುತ್ತಾ ಇದೆ ಎನ್ನುವ ಈ ಟೀಸರ್ ನ ಆರಂಭದಲ್ಲೇ ಈಸಿ ಚೇರ್ ಮೇಲೆ ಕುಳಿತು ಸ್ಫೋರ್ಟ್ ಮ್ಯಾಗಜೀನ್ ಓದುತ್ತಾ ಕುಳಿತ 'ಅಭಿನಯ ಚತುರ' ರಮೇಶ್ ಅವರಿಗೆ ಬಿಕ್ಕಳಿಕೆ ಬರುತ್ತದೆ. ಪಕ್ಕದ ಟೇಬಲ್ ದಲ್ಲಿದ್ದ ನೀರು ಕುಡಿಯುತ್ತಾರೆ. ನಂತರ ಕೂಡಾ ಬಿಕ್ಕಳಿಕೆ ಬರುತ್ತದೆ .

ಓಹ್ ! ನೀವು ನೆನಸಿಕೊಳ್ಳುತ್ತಿದ್ದೀರಾ ಎಂದು ನಮ್ಮ ಕಡೆ ತಿರುಗಿ ಹೇಳುವ ರಮೇಶ್ ಅವರು ಮತ್ತೊಮ್ಮೆ ಬರ್ತೀನ್ರಪ್ಪ ಎನ್ನುತ್ತಾರೆ. ಅದರೆ, ಅಭಿಮಾನಿಗಳ ಪ್ರೀತಿ ಅವರನ್ನು ಮತ್ತೆ ಮತ್ತೆ ಬಿಕ್ಕಳಿಸುವಂತೆ ಮಾಡುತ್ತದೆ. ರಮೇಶ್ ಜೊತೆ ವೀಕೆಂಡ್ ಕಳೆಯಲು ಕಾತುರ ಎಷ್ಟರಮಟ್ಟಿಗಿದೆ ಎಂಬುದನ್ನು ತೋರಿಸಲಾಗಿದೆ. ವೀಕೆಂಡ್ ವಿಥ್ ರಮೇಶ್ ಸೀಸನ್ 2 ಮೊದಲ ಟೀಸರ್ ನೋಡಿ.

English summary
Ramesh Aravind is all set to host Weekend with Ramesh for the second season. The show, which was aired on Zee Kannada during weekends, became popular among Kannada audiences. Here goes the teaser

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada