»   » ಮತ್ತೆ ಬಂದ್ರು 'ಕಾಮಿಡಿ ಕಿಲಾಡಿಗಳು': ಅತಿ ಶೀಘ್ರದಲ್ಲಿ 'ಕಿಲಾಡಿ ಕುಟುಂಬ' ಶುರು.!

ಮತ್ತೆ ಬಂದ್ರು 'ಕಾಮಿಡಿ ಕಿಲಾಡಿಗಳು': ಅತಿ ಶೀಘ್ರದಲ್ಲಿ 'ಕಿಲಾಡಿ ಕುಟುಂಬ' ಶುರು.!

Posted By:
Subscribe to Filmibeat Kannada

ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆ ಆಯ್ತು ಅಂದ್ರೆ ಸಾಕು... ಕರುನಾಡ ಜನತೆ ಎಲ್ಲೇ ಇದ್ದರೂ... ತಪ್ಪದೇ ಟಿವಿ ಮುಂದೆ ಹಾಜರ್ ಆಗಿ... ಜೀ ಕನ್ನಡ ವಾಹಿನಿ ಟ್ಯೂನ್ ಮಾಡ್ತಿದ್ರು. ಅಷ್ಟರಮಟ್ಟಿಗೆ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಕರ್ನಾಟಕದ ಮೂಲೆ ಮೂಲೆಯಲ್ಲೂ ಕ್ರೇಜ್ ಹುಟ್ಟುಹಾಕಿತ್ತು.!

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ಮುಗಿದ ಬಳಿಕ 'ಕಿಲ ಕಿಲ' ಅಂತ ನಗಿಸುತ್ತಿದ್ದ ಕಿಲಾಡಿಗಳನ್ನ ನೀವು ಮಿಸ್ ಮಾಡಿಕೊಂಡ್ರಾ.? ನಿಮ್ಮ ಕನವರಿಕೆ ಜೀ ಕನ್ನಡ ವಾಹಿನಿಯವರಿಗೆ ಕೇಳಿಸಿದೆ. ಹೀಗಾಗಿ ಹೊಚ್ಚ ಹೊಸ ಕಾರ್ಯಕ್ರಮ ಸದ್ಯದಲ್ಲಿಯೇ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿದೆ. ಮುಂದೆ ಓದಿ....

ಜೀ ಕನ್ನಡ ವಾಹಿನಿಯಲ್ಲಿ ಹೊಸ ಕಾರ್ಯಕ್ರಮ

ಜೀ ಕನ್ನಡ ವಾಹಿನಿಯಲ್ಲಿ ಹೊಸ ಶೋ ಶುರು ಆಗುತ್ತದೆ. ಅದೇ 'ಕಿಲಾಡಿ ಕುಟುಂಬ'.!['ಕಾಮಿಡಿ ಕಿಲಾಡಿಗಳು' ಗೆದ್ದ ಪ್ರತಿಭಾವಂತರಿಗೆ ಸಿಕ್ಕ ಬಹುಮಾನ ಹಣ ಎಷ್ಟು ಗೊತ್ತೇ.?]

'ಕಾಮಿಡಿ ಕಿಲಾಡಿಗಳು' ಕುಟುಂಬದ ದರ್ಬಾರ್

'ಕಿಲಾಡಿ ಕುಟುಂಬ' ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿಗಳೆಲ್ಲಾ ಭಾಗವಹಿಸಿ ನಿಮಗೆ ನಾನ್ ಸ್ಟಾಪ್ ಮನರಂಜನೆ ನೀಡಲಿದ್ದಾರೆ.[ಛೇ..'ಕಾಮಿಡಿ ಕಿಲಾಡಿಗಳು' ಮುಗ್ದೋಯ್ತಲ್ಲ ಅಂತ ಬೇಸರ ಪಡ್ತಿದ್ದೋರಿಗೆ ಹ್ಯಾಪಿ ನ್ಯೂಸ್.!]

ಜಗ್ಗೇಶ್ ಸಾರಥ್ಯ.?

'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ 'ಕಿಲಾಡಿ ಕುಟುಂಬ' ಕಾರ್ಯಕ್ರಮವನ್ನ ಅನೌನ್ಸ್ ಮಾಡಿ, ಅದಕ್ಕೆ ಜಗ್ಗೇಶ್ ರವರ ಸಾರಥ್ಯ ಇರಲಿದೆ ಎಂದು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಹೇಳಿದ್ದರು. ಅವರ ಮಾತಿನಂತೆ 'ಕಿಲಾಡಿ ಕುಟುಂಬ'ದಲ್ಲಿ ಜಗ್ಗೇಶ್ ಭಾಗಿಯಾಗಿದ್ದಾರಾ ಎಂಬುದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ.

ಪ್ರೋಮೋ ನೋಡಿದ್ರಾ.?

ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ 'ಕಿಲಾಡಿ ಕುಟುಂಬ' ಕಾರ್ಯಕ್ರಮದ ಪ್ರೋಮೋ ಪ್ರಸಾರ ಆಗುತ್ತಿದೆ. ಅದನ್ನ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ....

English summary
After the success of 'Comedy Khiladigalu' Zee Kannada Channel has come up the new show called 'Khiladi Kutumba'. Watch promo here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada