ಕಿರುತೆರೆಯಲ್ಲಿ ನಾ ನಿನ್ನ ಬಿಡಲಾರೆ ಅಬ್ಬರ, ಅಣ್ಣಯ್ಯ, ಅಮೃತಧಾರೆ, ಲಕ್ಷ್ಮೀ ನಿವಾಸ ಕಥೆ ಏನು ?

ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ, ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ.

ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ. ಮೊದಲನೇ ಸ್ಥಾನವನ್ನು ಕೂಡ ಅಲಂಕರಿಸುತ್ತೆ. ಹಾಗಿದ್ದರೆ ಈ ವಾರ ಯಾವ ಧಾರಾವಾಹಿ ಯಾವ ಸ್ಥಾನ ಪಡೆದಿದೆ ಎಂಬ ಪ್ರಶ್ನೆಗೆ ಉತ್ತರವನ್ನು ತಿಳಿಯಲು ಮುಂದೆ ಓದಿ.

week-17-serial-trp-na-ninna-bidalare-leads-kannada-serials-in-tv-ratings

ಕನ್ನಡದ ಟಾಪ್ ಧಾರಾವಾಹಿಗಳು

ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಕೂಡ ಒಂದು. ಆರಂಭದಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಈ ಟಿಆರ್‌ಪಿ ಆಟದಲ್ಲಿ ಹಿಂದೊಮ್ಮೆ ನಂಬರ್ ಓನ್ ಸ್ಥಾನವನ್ನು ಕೂಡ ಅಲಂಕರಿಸಿತ್ತು.

8.8 ಟಿವಿಆರ್ ಪಡೆದುಕೊಂಡು ಕರ್ನಾಟಕದ ನಂಬರ್ 1 ಧಾರಾವಾಹಿಯಾಗಿ ಹೊರ ಹೊಮ್ಮಿತ್ತು. ಆದರೆ ಈ ಬಾರಿ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಟಿಆರ್‌ಪಿಯಲ್ಲಿ ಒಂದೇ ಒಂದು ಪಾಯಿಂಟ್ ಕುಸಿತ ಕಂಡಿದೆ. ಮೊದಲನೇ ಸ್ಥಾನದಲ್ಲಿದ್ದ ಶ್ರಾವಣಿ ಸುಬ್ರಹ್ಮಣ್ಯ ಎರಡನೇ ಸ್ಥಾನಕ್ಕೆ ಜಾರಿದೆ.

ಮೊದಲ ಸ್ಥಾನಕ್ಕೆ ತೀವೃ ಪೈಪೋಟಿ

ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯನ್ನು ಕೇವಲ ಒಂದು ಪಾಯಿಂಟ್‌ಗಳ ಅಂತರದಲ್ಲಿ ನಾ ನಿನ್ನ ಬಿಡಲಾರೆ ಮತ್ತು ಅಣ್ಣಯ್ಯ ಧಾರಾವಾಹಿಗಳು ಹಿಂದಿಕ್ಕಿವೆ. 17ನೇ ವಾರದಲ್ಲಿ ಶ್ರಾವಣಿ ಸುಬ್ರಹ್ಮಣ್ಯದ ಟಿವಿಆರ್ 7.1 ಇದ್ದರೆ ಅಣ್ಣಯ್ಯ ಮತ್ತು ನಾ ನಿನ್ನ ಬಿಡಲಾರೆ 7.2 ಟಿವಿಆರ್ ಗಳಿಸುವ ಮೂಲಕ ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗಳನ್ನು ಈ ಮೂಲಕ ಹಿಂದಿಕ್ಕಿವೆ.

ಲಕ್ಷ್ಮಿ ನಿವಾಸದ ಕಥೆ ಏನು ?

ಒಂದು ಕಾಲದಲ್ಲಿ ಟಿಆರ್‌ಪಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ 'ಲಕ್ಷ್ಮಿ ನಿವಾಸ್' ಈ ವಾರ ಮೂರನೇ ಸ್ಥಾನದಲ್ಲಿದೆ. ಹೊಸ ಧಾರಾವಾಹಿಗಳ ಅಬ್ಬರ ಈ ಧಾರಾವಾಹಿಯ ಮೇಲೆ ಪರಿಣಾಮ ಬೀರಿದೆ, ಆದರೂ ಕೂಡ ಇದು ಅನೇಕ ಅಭಿಮಾನಿಗಳಲ್ಲಿ ನೆಚ್ಚಿನ ಧಾರಾವಾಹಿಯಾಗಿ ಉಳಿದಿಕೊಂಡಿರುವುದು ವಿಶೇಷ. ಮತ್ತೊಂದೆಡೆ 'ಅಮೃತಧಾರೆ' ಈ ವಾರ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

ಐದನೇ ಸ್ಥಾನದಲ್ಲಿ ಬ್ರಹ್ಮಗಂಟು..!

ದೀಪಾ ಮತ್ತು ಚಿರಾಗ್ ಕಥೆಯನ್ನೊಂದಿರುವ ಬ್ರಹ್ಮಗಂಟು ಧಾರಾವಾಹಿ ಈ ವಾರ ಐದನೇ ಸ್ಥಾನದಲ್ಲಿದೆ. ಅಮೃತಧಾರೆ ಧಾರಾವಾಹಿಯ ಜೊತೆ ತೀವೃ ಸ್ಫರ್ಧೆಯನ್ನೊಡಿರುವ ಬ್ರಹ್ಮಗಂಟು ಕೆಲವೇ ಕೆಲ ಪಾಯಿಂಟ್‌ಗಳ ಅಂತರದಿಂದ ಟಿಆರ್‌ಪಿ ರೇಸ್‌ನಲ್ಲಿ ಹಿಂದೆ ಬಿದ್ದಿದೆ.

ಸೀತಾ ರಾಮದಿಂದ ಬೇಸತ್ತರಾ ಪ್ರೇಕ್ಷಕರು ?

ಕಿರುತೆರೆಯ ಪ್ರೇಕ್ಷಕರ ಮೇಲೆ ಮೋಡಿ ಮಾಡುತ್ತಾನೇ ಬಂದ ಸೀತಾ ರಾಮ ಧಾರಾವಾಹಿ ವಾರದಿಂದ ವಾರಕ್ಕೆ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುವಂತೆ ಕಂಡು ಬರುತ್ತಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೊದಲೆಲ್ಲ ಟಾಪ್ 5ರಲ್ಲಿ ಕಾಣಿಸುತ್ತಿದ್ದ ಸೀತಾರಾಮ ಈ ಬಾರಿ 8ನೇ ಸ್ಥಾನಕ್ಕೆ ಕುಸಿದಿದೆ. ಪುಟ್ಟಕ್ಕನ ಮಕ್ಕಳು ಕ್ರಮವಾಗಿ ಆರು ಮತ್ತು ಶ್ರೀರಸ್ತು ಶುಭಮಸ್ತು ಧಾರಾವಾಹಿ ಏಳನೇ ಸ್ಥಾನದಲ್ಲಿವೆ.

More from Filmibeat

English summary
Na Ninna Bidalare shines bright again! In Week 17's TV ratings, the beloved Kannada serial takes the top spot, thanks to its loyal viewers and compelling storytelling. Want to see how the rest of the competition stacked up? Dive into the full ratings breakdown!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X