»   » ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?

ಅನುಶ್ರೀ ಮೇಲೆ ಅರ್ಜುನ್ ಜನ್ಯಾ ಪತ್ನಿಗೆ ಕೋಪ ಇದ್ಯಾ?

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಸೀಸನ್ ಮೂರರ ಮೂರನೇ ಅತಿಥಿಯಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಆಗಮಿಸಿದ್ದು, ಕಾರ್ಯಕ್ರಮದ ಹೋಸ್ಟ್ ರಮೇಶ್ ಅರವಿಂದ್ ಇಂದು ಅವರ ಸಾಧನೆಯ ಬದುಕಿನ ಹಿಂದಿರುವ ಸೀಕ್ರೇಟ್ ಗಳನ್ನು ಅನಾವರಣಗೊಳಿಸಲಿದ್ದಾರೆ.

ಆದ್ರೆ ಅದಕ್ಕೂ ಮುನ್ನ ಈಗ ಅರ್ಜುನ್ ಜನ್ಯಾ ಅವರನ್ನು 'ಸರಿಗಮಪ' ಕಾರ್ಯಕ್ರಮದ ನಿರೂಪಕಿ ಅನುಶ್ರೀ ಯಾವಾಗಲು ಡಾರ್ಲಿಂಗ್ ಎಂದು ಕರೆಯುವುದಕ್ಕೆ, ಅರ್ಜುನ್ ಜನ್ಯಾ ಪತ್ನಿಯವರಿಗೆ ನಿಜವಾಗಲು ಕೋಪ ಇದ್ಯಾ? ಇಲ್ವಾ? ಎಂಬುದರ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಮುಂದೆ ಓದಿ....

ನಿಮಗೂ ಕುತೂಹಲ ಇದೇ ಅಲ್ವಾ...

ಬೇರೆಯವರ ಪತಿಯನ್ನು, ಅವರ ಪತ್ನಿಗೆ ತಿಳಿಯುವ ಹಾಗೆ ಸಾರ್ವಜನಿಕವಾಗಿ ಬೇರೊಬ್ಬ ಹುಡುಗಿ ಡಾರ್ಲಿಂಗ್ ಅಂದ್ರೆ ಯಾವ ಪತ್ನಿಗೂ ಇಷ್ಟವಾಗುವುದಿಲ್ಲ. ಆದ್ರೆ ಅರ್ಜುನ್ ಜನ್ಯಾ ಅವರನ್ನು ಅನುಶ್ರೀ ಡಾರ್ಲಿಂಗ್ ಎನ್ನುವುದಕ್ಕೆ ಅವರ ಪತ್ನಿಗೆ ಕೋಪ ಇದ್ಯಾ? ಇಲ್ವಾ? ಅವರ ಪ್ರತಿಕ್ರಿಯೆ ಏನು? ಎಂದು ತಿಳಿಯುವ ಕುತೂಹಲ ನಿಮಗೂ ಇದೆ ಅಲ್ವಾ...

ಅನುಶ್ರೀ ಡಾರ್ಲಿಂಗ್ ಅನ್ನುವುದಕ್ಕೆ ನಿಮಗೆ ಏನ್ ಅನಿಸುತ್ತೇ?

ಈ ಪ್ರಶ್ನೆಯನ್ನು ರಮೇಶ್ ಅರವಿಂದ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯಾ ಅವರ ಪತ್ನಿಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅರ್ಜುನ್ ಜನ್ಯಾ ಪತ್ನಿ 'ಈ ಬಗ್ಗೆ ಮೊದಲು ಕೇಳಿದಾಗ ನನಗೆ ಶಾಕ್ ಆಯ್ತು' ಎಂದು ಹೇಳಿದ್ದಾರೆ.

ನಮ್ ಯಜಮಾನ್ರು ಇದೇನಪ್ಪಾ ಈ ತರ!

"ನಾನು ಮೊದಲು ಕೇಳಿದಾಗ ಶಾಕ್ ಆಗಿ, ನಮ್ ಯಜಮಾನ್ರು ಇದೇನಪ್ಪಾ ಈ ತರ ಎಂದು ಚಪಾತಿ ತಿರುವು ಹಾಕುವುದನ್ನು ಎತ್ತಿಕೊಂಡು ಮನೆಯಲ್ಲೆಲ್ಲಾ ಅಟ್ಟಾಡಿಸಿದ್ದೆ" -ಅರ್ಜುನ್ ಜನ್ಯಾ ಪತ್ನಿ

ಆದ್ರೆ ಅನುಶ್ರೀ ಮೇಲೆ ನಿಜವಾಗಲು ಕೋಪ ಇದ್ಯಾ?

ಅರ್ಜುನ್ ಜನ್ಯಾ ಪತ್ನಿಗೆ ಅನುಶ್ರೀ ಮೇಲೆ ನಿಜವಾಗಲು ಕೋಪ ಇದ್ಯಾ? ಅನುಶ್ರೀ ಬಗ್ಗೆ ಅವರು ಹೇಳಿದ್ದೇನು? ಎಂದು ತಿಳಿಯಲು ಇಂದು ರಾತ್ರಿ ಜೀ ಕನ್ನಡ ವಾಹಿನಿಯಲ್ಲಿ 9 ಗಂಟೆಗೆ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್ 3' ಕಾರ್ಯಕ್ರಮವನ್ನು ನೋಡಿ..

English summary
Arjun Janya Wife reaction about Anushree in 'Weekend with Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada