ಅತ್ತ ರಮೇಶ್, ಇತ್ತ ಪುನೀತ್ : ಪೈಪೋಟಿ ಜೊತೆ ಮನರಂಜನೆ
ಕಿರುತೆರೆಯಲ್ಲಿ ಈಗ ಎರಡು ದೊಡ್ಡ ಕಾರ್ಯಕ್ರಮಗಳು ಶುರು ಆಗುತ್ತಿವೆ. ಒಂದು ಕಡೆ 'ವೀಕೆಂಡ್ ವಿತ್ ರಮೇಶ್' ಪ್ರಾರಂಭ ಆಗುತ್ತಿದ್ದರೆ, ಮತ್ತೊಂದು ಕಡೆ 'ಕನ್ನಡದ ಕೋಟ್ಯಾಧಿಪತಿ' ಕೂಡ ಬರುತ್ತಿದೆ.
ಸ್ಟಾರ್ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡಕ್ಕೆ ಈ ಬಾರಿ 'ಕನ್ನಡದ ಕೋಟ್ಯಾಧಿಪತಿ' ವರ್ಗಾವಣೆಯಾಗಿದೆ. ಮೂರು ಸೀಸನ್ ಗಳ ಬಳಿಕ ನಾಲ್ಕನೇ ಸೀಸನ್ ಗೆ ಈ ಕಾರ್ಯಕ್ರಮ ಸಜ್ಜಾಗಿದೆ.
ಜೀ ವಾಹಿನಿ ಕೂಡ ತನ್ನ ಸೂಪರ್ ಹಿಟ್ ಕಾರ್ಯಕ್ರಮದ ಮೂಲಕ ಬರುತ್ತಿದೆ. ತನ್ನ ಅದ್ಬುತ ಕಾರ್ಯಕ್ರಮಗಳ ಪೈಕಿ ಒಂದಾದ 'ವೀಕೆಂಡ್ ವಿತ್ ರಮೇಶ್' ಮೂಲಕ ಟಿ ಆರ್ ಪಿ ಸಮರಕ್ಕೆ ಸಿದ್ಧವಾಗಿದೆ.
ಅಂದಹಾಗೆ, ಈ ಬಾರಿಯ 'ವೀಕೆಂಡ್ ವಿತ್ ರಮೇಶ್' ಹಾಗೂ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಕೆಲ ವಿಶೇಷತೆಗಳು ಮುಂದಿದೆ ಓದಿ....

ನಾಲ್ಕನೇ ಸೀಸನ್ ಗಳು
ವಿಶೇಷ ಅಂದರೆ, ವೀಕೆಂಡ್ ವಿತ್ ರಮೇಶ್' ಹಾಗೂ 'ಕನ್ನಡದ ಕೋಟ್ಯಾಧಿಪತಿ' ಎರಡೂ ಕಾರ್ಯಕ್ರಮದ ನಾಲ್ಕನೇ ಸೀಸನ್ ಒಂದೇ ಸಮಯಕ್ಕೆ ಶುರು ಆಗುತ್ತಿದೆ. ಎರಡೂ ಕಾರ್ಯಕ್ರಮಗಳು ಬೇರೆ ಬೇರೆ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದು, ಬೇರೆ ಬೇರೆ ವೀಕ್ಷಕ ಬಳಗ ಹೊಂದಿದೆ. ಹಾಗಾಗಿ ಪೈಪೋಟಿ ಇದ್ದೇ ಇದೆ.

ಪವರ್ ಸ್ಟಾರ್ ಕಮ್ ಬ್ಯಾಕ್
'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಮೊದಲು ನಿರೂಪಕನಾಗಿದ್ದು ಪುನೀತ್ ರಾಜ್ ಕುಮಾರ್. ಎರಡು ಸೀಸನ್ ಗಳನ್ನು ಮುಗಿಸಿದ್ದ ಪುನೀತ್ ಮೂರನೇ ಸೀಸನ್ ಗೆ ಆಂಕರ್ ಆಗಲಿಲ್ಲ. ಪವರ್ ಸ್ಟಾರ್ ಬದಲು ರಮೇಶ್ ಅರವಿಂದ್ ಕಾರ್ಯಕ್ರಮದ ಸಾರಥ್ಯ ವಹಿಸಿಕೊಂಡರು. ಆದರೆ, ಈಗ ಮತ್ತೆ ಪುನೀತ್ ಈ ಶೋಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಇಡೀ ವಾರ ಪ್ರಸಾರ
'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ ಆಗಲಿದೆ. 'ವೀಕೆಂಡ್ ವಿತ್ ರಮೇಶ್' ಶನಿವಾರ ಹಾಗೂ ಭಾನುವಾರ ಪ್ರಸಾರ ಆಗಲಿದೆ. ಕಿರುತೆರೆ ವೀಕ್ಷಕರು ವಾರ ಪೂರ್ತಿ ತಮ್ಮ ಮೆಚ್ಚಿನ ನಟರ ಕಾರ್ಯಕ್ರಮವನ್ನು ನೋಡಬಹುದಾಗಿದೆ.
ಯಾವಾಗ ಪ್ರಸಾರ?
'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ. ಆದರೆ, ಕಾರ್ಯಕ್ರಮದ ಪ್ರಸಾರದ ದಿನಾಂಕ ಇನ್ನು ಬಹಿರಂಗ ಆಗಿಲ್ಲ. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ತಯಾರಿಗಳು ಕೂಡ ಈಗಾಗಲೇ ನಡೆಯುತ್ತಿದೆ. ಇದೇ ತಿಂಗಳಿನಲ್ಲಿ ಕಾರ್ಯಕ್ರಮದ ಪ್ರಸಾರದ ದಿನಾಂಕ ನಿಗದಿ ಆಗಲಿದೆ.


Click it and Unblock the Notifications











