For Quick Alerts
ALLOW NOTIFICATIONS  
For Daily Alerts

ವೀಕೆಂಡ್ ವಿತ್ ರಮೇಶ್ ಫಿನಾಲೆಯಲ್ಲಿ ಅಣ್ಣಾಮಲೈ ಮತ್ತು ವಿಲಾಸ್ ನಾಯಕ್.!

|

ವೀರೇಂದ್ರ ಹೆಗ್ಗಡೆ, ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ, ಶಂಕರ್ ಬಿದರಿ, ಟೈಗರ್ ಅಶೋಕ್ ಕುಮಾರ್, ಚಂದ್ರಶೇಖರ್ ಕಂಬಾರ ಅಂತಹ ಸಾಧಕರನ್ನ ಈ ಸೀಸನ್ ನಲ್ಲಿ ಕರೆತಂದು ಪ್ರೇಕ್ಷಕರ ಮನ ಗೆದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಫೈನಲ್ ನಲ್ಲಿ ಅಪರೂಪದ ಅತಿಥಿಗಳನ್ನ ಆಹ್ವಾನಿಸಿ ಅಚ್ಚರಿ ಮೂಡಿಸಿದೆ.

ಸಂಪೂರ್ಣ ವಿಭಿನ್ನವಾಗಿರುತ್ತೆ 'ವೀಕೆಂಡ್ ವಿತ್ ರಮೇಶ್ 4' ಗ್ರಾಂಡ್ ಫಿನಾಲೆ

ಪ್ರತಿ ಸೀಸನ್ ನಲ್ಲಿ ಇದ್ದ ಹಾಗೆ ಫಿನಾಲೆಯಲ್ಲಿ ಒಬ್ಬ ಸಾಧಕರು ಇರುವುದಿಲ್ಲ. ಬದಲಿಗೆ ಸಾಧನೆ ಮಾಡಿದ ಅನೇಕರು ಬಂದು ತಮ್ಮ ಕಥೆ ಹಂಚಿಕೊಳ್ಳಲಿದ್ದಾರೆ. ಫಿನಾಲೆ ಸಂಚಿಕೆ ಪ್ರಶ್ನೋತ್ತರಗಳಿಂದ ಕೂಡಿದ್ದು, ಕಾಲೇಜ್ ವಿದ್ಯಾರ್ಥಿಗಳು, ಯುವಕರು, ಸಾಧನೆಯ ಸೂಚನೆ ನೀಡಿದವರು ಭಾಗಿಯಾಗಲಿದ್ದಾರೆ. ಅವರ ಪ್ರಶ್ನೆಗೆ ಅತಿಥಿಗಳು ಉತ್ತರಿಸಲಿದ್ದಾರೆ.

ಅಂದ್ಹಾಗೆ, ನಾಲ್ಕನೇ ಆವೃತ್ತಿಯ ಕೊನೆಯ ಸಂಚಿಕೆಯಲ್ಲಿ ಯಾರು ಸಾಧಕರ ಸೀಟಿನಲ್ಲಿ ಕೂರಬಹುದು ಎಂಬ ಕಾತರಕ್ಕೆ ಈಗ ಉತ್ತರ ಸಿಕ್ಕಿದೆ. ಸದ್ಯಕ್ಕೆ ವಿಶ್ವಮಟ್ಟದ ಚಿತ್ರಕಲಾವಿದ ವಿಲಾಸ್ ನಾಯಕ್ ಮತ್ತು ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಂದಿರುವುದು ಸ್ಪಷ್ಟವಾಗಿದೆ. ಹಾಗಿದ್ರೆ, ವೀಕೆಂಡ್ ಶೋ ಗೆ ಅತಿಥಿಯಾಗಿ ಬಂದ ವಿಲಾಸ್ ನಾಯಕ್ ಮತ್ತು ಅಣ್ಣಾಮಲೈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಮುಂದೆ ಓದಿ....

ಚಿಕ್ಕವಯಸ್ಸಿನಲ್ಲೇ ಬ್ರಶ್ ಹಿಡಿದಿದ್ದ ಕಲಾ ನಾಯಕ

ಚಿಕ್ಕವಯಸ್ಸಿನಲ್ಲೇ ಬ್ರಶ್ ಹಿಡಿದಿದ್ದ ಕಲಾ ನಾಯಕ

ವಿಲಾಸ್ ನಾಯಕ್ ತನ್ನ ಮೂರನೇ ವರ್ಷದಲ್ಲೇ ಕೈಯಲ್ಲಿ ಬ್ರಶ್ ಹಿಡಿದು ಪೇಪರ್ ಮಲೆ ಬಣ್ಣ ಹಚ್ಚುವ ಕಲೆ ಹೊಂದಿದ್ದವರು. ಯಾವುದೇ ಫೈನ್ ಆರ್ಟ್ ತರಗತಿಗೆ ಹೋಗದೇ ಸ್ವತಃ ಚಿತ್ರಕಲೆ ಕಲಿತವರು. ಇಂದು ದೇಶ ಮತ್ತು ವಿದೇಶದ ವೇದಿಕೆಗಳಲ್ಲಿ ಅತಿ ವೇಗವಾಗಿ ಸೆಲೆಬ್ರಿಟಿಗಳ ಚಿತ್ರ ಬಿಡಿಸಿ ಶಬ್ಬಾಶ್ ಎನಿಸಿಕೊಳ್ಳುತ್ತಿರುವ ಚಿತ್ರಕಲಾ ನಾಯಕ ಈ ವಿಲಾಸ್.

ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ

ವಿಲಾಸ್ ಹಿನ್ನೆಲೆ ಏನು?

ವಿಲಾಸ್ ಹಿನ್ನೆಲೆ ಏನು?

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಮೂಲದ ವಿಲಾಸ್ ನಾಯಕ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿಯಲ್ಲಿ 7ನೇ Rank ಪಡೆದಿದ್ದಾರೆ. ಮೈಸೂರು ವಿವಿಯಲ್ಲಿ ಎಂ.ಎಸ್.ಡಬ್ಲ್ಯೂ ಮಾಡಿ ಎರಡನೇ Rank ಪಡೆದಿದ್ದರು. ನಂತರ ಐಬಿಎಂನಲ್ಲಿ ನಾಲ್ಕೈದು ವರ್ಷ ಎಚ್.ಆರ್ ವಿಭಾಗದಲ್ಲಿ ಕೆಲಸ ಮಾಡಿದ ಇವರು, ತನ್ನ ಕೆಲಸ ಬಿಟ್ಟು ಸಂಪೂರ್ಣವಾಗಿ ಕಲಾವಿದನಾಗಿ ಗುರುತಿಸಿಕೊಂಡರು. ಅಲ್ಲಿಂದ ನಾನಾ ದೇಶಗಳಲ್ಲಿ, ನಾನಾ ಕಾರ್ಯಕ್ರಮಗಳಲ್ಲಿ, ಹಲವು ಟಿವಿ ಶೋಗಳಲ್ಲಿ ತನ್ನ ಕಲೆ ಪ್ರದರ್ಶಿಸಿದ್ದಾರೆ.

ಎರಡ್ಮೂರು ನಿಮಿಷದಲ್ಲಿ ಚಿತ್ರ ಬಿಡಿಸುವುದು

ಎರಡ್ಮೂರು ನಿಮಿಷದಲ್ಲಿ ಚಿತ್ರ ಬಿಡಿಸುವುದು

ಸಾಮಾನ್ಯವಾಗಿ ಯಾರದ್ದೇ ಚಿತ್ರ ಬರೆಯಲು ಹೋದರು ದಿನವಿಡಿ ಕೂತು ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ವಿಲಾಸ್ ನಾಯಕ್ ಕೇವಲ ಎರಡ್ಮೂರು ನಿಮಿಷದಲ್ಲಿ ದಿಗ್ಗಜರ ಚಿತ್ರ ಬಿಡುಸುತ್ತಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಬೆಂಗಾಳಿ, ಗುಜರಾತಿ ಹಾಗೂ ಇಂಗ್ಲಿಷ್ ನ ಎಎಕ್ಸ ಎನ್ ಚಾನಲ್ ನಲ್ಲೂ ನಡೆದಿರುವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. 'ವಿಶ್ವದ ಅತಿವೇಗದ ವರ್ಣಚಿತ್ರಕಾರ' ಎಂಬ ಹೆಗ್ಗಳಿಕೆಯೂ ಇದೆ.

ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!

ದಿಗ್ಗಜರ ಸಮ್ಮುಖದಲ್ಲಿ ಚಿತ್ರ ಬಿಡಿಸಿದ್ದಾರೆ

ದಿಗ್ಗಜರ ಸಮ್ಮುಖದಲ್ಲಿ ಚಿತ್ರ ಬಿಡಿಸಿದ್ದಾರೆ

ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಪುಟ್ಬಾಲ್ ದಂತಕಥೆ ಪೀಲೆ, ಶಾರೂಕ್ ಖಾನ್ ಸೇರಿದಂತೆ ಅನೇಕ ಸೆಲೆಬ್ರಿಟಿ ದಿಗ್ಗಜರ ಸಮ್ಮುಖದಲ್ಲಿ ಚಿತ್ರ ಬಿಡಿಸಿ, ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೇ ವಿದೇಶದಲ್ಲೂ ತಮ್ಮ ಕಲೆಯ ಮೂಲಕ ಜಾದೂ ಮಾಡಿದ್ದಾರೆ. ಅನೇಕ ಪ್ರಶಸ್ತಿಯೂ ಪಡೆದುಕೊಂಡಿದ್ದಾರೆ.

'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ

ಐಪಿಎಸ್ ಅಧಿಕಾರಿ ಅಣ್ಣಾಮಲೈ

ಐಪಿಎಸ್ ಅಧಿಕಾರಿ ಅಣ್ಣಾಮಲೈ

ತಮಿಳುನಾಡಿನ ಕರೂರು ಜಿಲ್ಲೆಯವರಾದ ಅಣ್ಣಾಮಲೈ ಅವರು ಮೆಕಾನಿಕಲ್​ ಇಂಜಿನಿಯರಿಂಗ್​ ಪದವಿ, ಐಐಎಂ ಲಕ್ನೋದಿಂದ ಎಂಬಿಎ ಪಡೆದಿದ್ದಾರೆ. ಸಮಾಜದ ಅಸಮಾನತೆಗಳ ವಿರುದ್ಧ ಪ್ರತಿಭಟನೆ ರೂಪವಾಗಿ ಐಪಿಎಸ್​ ಮಾಡಲು ಹೊರಟರು. 2011ರ ಐಪಿಎಸ್​​ ಬ್ಯಾಚ್​ನವರಾದ ಅಣ್ಣಾಮಲೈ 2013ರಲ್ಲಿ ಕಾರ್ಕಳದ ಎಎಸ್​​ಪಿ ಆಗಿ ನೇಮಕಗೊಂಡರು. ನಂತರ ಚಿಕ್ಕಮಗಳೂರು ಎಸ್​ಪಿ, ಬೆಂಗಳೂರು ದಕ್ಷಿಣ ಡಿಸಿಪಿಯಾದರು. ಭ್ರಷ್ಟಾಚಾರ ಮುಕ್ತ ಅಧಿಕಾರಿ ಎನಿಸಿಕೊಂಡಿದ್ದಾರೆ.

English summary
World renowned Indian artist Vilas Nayak and IPS officer Annamali is the guest in Weekend with ramesh season 4 finale episode.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more