ಸಂಪೂರ್ಣ ವಿಭಿನ್ನವಾಗಿರುತ್ತೆ 'ವೀಕೆಂಡ್ ವಿತ್ ರಮೇಶ್ 4' ಗ್ರಾಂಡ್ ಫಿನಾಲೆ
'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಕೊನೆಗೆ ಹಂತಕ್ಕೆ ಬಂದಿದೆ. ಗ್ರಾಂಡ್ ಫಿನಾಲೆ ಸಂಚಿಕೆಯನ್ನು ವಿಭಿನ್ನವಾಗಿ ಮಾಡಲು ಜೀ ಕನ್ನಡ ವಾಹಿನಿ ನಿರ್ಧಾರ ಮಾಡಿದೆ.
ಕಾರ್ಯಕ್ರಮದ ಕೊನೆಯ ಸಂಚಿಕೆಯ ಚಿತ್ರೀಕರಣ ಇಂದು (ಗುರುವಾರ) ನಡೆಯುತ್ತಿದೆ. ಚಿತ್ರೀಕರಣ ಆಗುವ ಸೆಟ್ ನಿಂದ ನಟ ರಮೇಶ್ ಅರವಿಂದ್ ಫೇಸ್ ಬುಕ್ ಲೈವ್ ಬಂದು ಗ್ರಾಂಡ್ ಫಿನಾಲೆಯ ವಿವರ ನೀಡಿದ್ದಾರೆ.
ಗ್ರಾಂಡ್ ಫಿನಾಲೆಗಾಗಿ 'ವೀಕೆಂಡ್ ವಿತ್ ರಮೇಶ್' ಸೆಟ್ ಕೊಂಚ ಬದಲಾಗಿದೆ. ಪ್ರತಿ ಸೀಸನ್ ನಲ್ಲಿ ಇದ್ದ ಹಾಗೆ ಇಲ್ಲಿ ಒಬ್ಬ ಸಾಧಕರು ಇರುವುದಿಲ್ಲ. ಬದಲಿಗೆ ಸಾಧನೆ ಮಾಡಿದ ಅನೇಕರು ಬಂದು ತಮ್ಮ ಕಥೆ ಹಂಚಿಕೊಳ್ಳಲಿದ್ದಾರೆ.

ಗ್ರಾಂಡ್ ಫಿನಾಲೆ ಸಂಚಿಕೆ ಪ್ರಶ್ನೋತ್ತರಗಳಿಂದ ಕೂಡಿರುತ್ತದೆ. ಕಾರ್ಯಕ್ರಮದಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಯುವಕರು, ಸಾಧನೆಯ ಸೂಚನೆ ನೀಡಿದವರು ಭಾಗಿಯಾಗಲಿದ್ದಾರೆ. ಅವರ ಪ್ರಶ್ನೆಗೆ ಅತಿಥಿಗಳು ಉತ್ತರಿಸಲಿದ್ದಾರೆ.
ಈಗಾಗಲೇ, ಕಾರ್ಯಕ್ರಮಕ್ಕೆ ಬಂದಿದ್ದ ಸಾಧಕರು, ಸಿನಿಮಾ ತಾರೆಯರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಇದೇ ಶನಿವಾರ ಹಾಗೂ ಭಾನುವಾರ ಕಾರ್ಯಕ್ರಮ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಕೊನೆಯ ಸಂಚಿಕೆಗೆ ಈ ರೀತಿ ವಿಭಿನ್ನವಾಗಿ ಅಂತ್ಯ ಹೇಳುತ್ತಿದೆ.


Click it and Unblock the Notifications











