For Quick Alerts
  ALLOW NOTIFICATIONS  
  For Daily Alerts

  ಅನ್ನ, ನೀರು ಕೊಡದೆ 4 ದಿನ ನಾರಾಯಣಮೂರ್ತಿಗೆ ಹಿಂಸೆ ನೀಡಿದ್ದ ಪ್ಯಾರೀಸ್ ಸಿಬ್ಬಂದಿ

  |
  Weekend With Ramesh Season 4: ನಾರಾಯಣ ಮೂರ್ತಿ ಸುಖವಾಗಿ ಬಿಸಿನೆಸ್ ಮಾಡಿದ ಯಶಸ್ಸು ಕಂಡವರಲ್ಲ

  ಇನ್ಫೋಸಿಸ್ ನಾರಾಯಣ ಮೂರ್ತಿ ಸುಖವಾಗಿ ಬಿಸಿನೆಸ್ ಮಾಡಿದ ಯಶಸ್ಸು ಕಂಡವರಲ್ಲ. ಅವರ ಆ ಪರಿಶ್ರಮದ ಹಿಂದೆ ಬಹಳ ಕಷ್ಟಕರ ದಿನಗಳಿವೆ. ಮನೆ, ಮಠ ಬಿಟ್ಟು ದೇಶ-ವಿದೇಶಗಳಲ್ಲಿ ಸುತ್ತಿದ ದಿನ ಇದೆ. ಸಣ್ಣ ಮುಟ್ಟ ಉದ್ಯಮಕ್ಕೆ ಕೈಹಾಕಿ ಕೈ ಸುಟ್ಟುಕೊಂಡಿದ್ದು ಇದೆ.

  ಕೈಯಲ್ಲಿ ಕೆಲಸವಿಲ್ಲದೇ ಇದ್ದಾಗಲೇ ಮದುವೆ ಆಗಿ ಸವಾಲು ಎದುರಿಸಿದ ದಿನಗಳಿವೆ. ಜಗತ್ತಿನಲ್ಲಿ ಇಂದು ಅತಿ ಶ್ರೀಮಂತ ವ್ಯಕ್ತಿಯಾಗಿದ್ದರೂ, ಒಂದು ಸಮಯದಲ್ಲಿ ಅನ್ನ, ನೀರು ಇಲ್ಲದ ಖೈದಿಯಂತೆ ಕೋಣೆಯೊಂದರಲ್ಲಿ ಮೂರ್ನಾಲ್ಕು ದಿನ ಕಳೆದಿದ್ದರು ಎಂಬುದು ಗಮನಾರ್ಹ.

  ನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರು ವಿಪ್ರೋ ಸಂಸ್ಥಾಪಕ ಪ್ರೇಮ್ ಜಿ ನಾರಾಯಣ ಮೂರ್ತಿ ಅವರನ್ನ ರಿಜೆಕ್ಟ್ ಮಾಡಿದ್ದರು ವಿಪ್ರೋ ಸಂಸ್ಥಾಪಕ ಪ್ರೇಮ್ ಜಿ

  ಹೌದು, ಪ್ಯಾರೀಸ್ ಗೆ ಹೋಗಿದ್ದ ಸಂದರ್ಭದಲ್ಲಿ ತಪ್ಪಿಲ್ಲದ ವಿಷ್ಯಕ್ಕೆ ನಾರಾಯಣಮೂರ್ತಿ ಅವರನ್ನ ಬಂಧಿಸಿಟ್ಟು ಮಾನಸಿಕ ಹಿಂಸೆ ನೀಡಿದ್ದರಂತೆ. ಕುಡಿಯಲು ನೀರು, ಅನ್ನ ನೀಡದೆ ಕಿರುಕುಳ ನೀಡಿದ್ದರಂತೆ. ಅಷ್ಟಕ್ಕೂ ನಾರಾಯಣ ಮೂರ್ತಿ ಮಾಡಿದ್ದೇನು? ಏತಕ್ಕಾಗಿ ಅವರನ್ನ ಪ್ಯಾರೀಸ್ ಸಿಬ್ಬಂದಿ ಬಂಧಿಸಿಟ್ಟರು? ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

  ಪ್ಯಾರೀಸ್ ನಿಂದ ಜರ್ನಿ ಮಾಡುವ ವೇಳೆ

  ಪ್ಯಾರೀಸ್ ನಿಂದ ಜರ್ನಿ ಮಾಡುವ ವೇಳೆ

  ''ಅಂದು ಶನಿವಾರ. ಪ್ಯಾರೀಸ್ ನಿಂದ ಜರ್ನಿ ಮಾಡಿ ರಾತ್ರಿ 9.30ರ ಸಮಯಕ್ಕೆ ನಿಶ್ ಎಂಬ ಪಟ್ಟಣಕ್ಕೆ ಬಂದೆ. ಊಟ ಮಾಡಬೇಕು ಎಂಬ ಕಾರಣಕ್ಕೆ ರೈಲ್ವೆ ಸ್ಟೇಷನ್ ನಲ್ಲಿ ಹೋಟೆಲ್ ಗೆ ಹೋದೆ. ನನ್ನ ಬಳಿ ಇಟಾಲಿಯನ್ ದುಡ್ಡು ಇತ್ತು. ಊಟ ಕೊಡಿ ಎಂದು ಕೇಳಿದ್ದಕ್ಕೆ ಇಲ್ಲ, ನಿಮ್ಮ ಹತ್ರ ಇಗಾಸ್ಲೋಮಿಯನ್ ದಿನಾರ್ ಇದ್ರೆ ಮಾತ್ರ ಕೊಡ್ತಿವಿ ಅಂದ್ರು. ಸರಿ ಅಂತ ಊಟ ಮಾಡದೇನೆ ಮಲಗಿದೆ'' ಎಂದರು.

  ಊಟ ಇಲ್ಲದೆ ಮಲಗಿದೆ

  ಊಟ ಇಲ್ಲದೆ ಮಲಗಿದೆ

  ''ಬೆಳಿಗ್ಗೆ ಪಟ್ಟಣಕ್ಕೆ ಹೋಗಿ ಎಲ್ಲಾದರೂ ಹಣ ಬದಲಾಯಿಸೋಣ ಅಂತ ನೋಡಿದೆ. ಭಾನುವಾರ ಬೇರೆ ಎಲ್ಲೂ ಬ್ಯಾಂಕ್ ಕೂಡ ಇರಲಿಲ್ಲ. ಹಾಗಾಗಿ ಮತ್ತೆ ವಾಪಸ್ ಬಂದು ಮಲಗಿದೆ. ರಾತ್ರಿ 8.30ಕ್ಕೆ ಸೋಫಿಯಾಗೆ ಹೋಗಬೇಕಿತ್ತು. ಸೋ ಟ್ರೈನ್ ಹತ್ತಿದೆ. ಅಲ್ಲಿ ಒಬ್ಬ ಹುಡುಗಿ ಕೂತಿದ್ದಳು''

  ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.!ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.!

  ಹುಡುಗಿ ಜೊತೆ ಮಾತನಾಡಿದ್ದೇ ತಪ್ಪಾಯ್ತು.!

  ಹುಡುಗಿ ಜೊತೆ ಮಾತನಾಡಿದ್ದೇ ತಪ್ಪಾಯ್ತು.!

  ''ಆ ಹುಡುಗಿ ಜೊತೆಯಲ್ಲಿ ಒಬ್ಬ ಹುಡುಗನು ಇದ್ದ. ನಾನು ಇಂಗ್ಲಿಷ್ ನಲ್ಲಿ ಮಾತಾನಾಡಿಸುವ ಪ್ರಯತ್ನ ಮಾಡಿದೆ. ಅದು ಅವರಿಗೆ ಅರ್ಥವಾಗಿಲ್ಲ. ನನಗೆ ರಷ್ಯಾ ಭಾಷೆ ಸ್ವಲ್ಪ ಗೊತ್ತಿತ್ತು. ಆದರೆ ಅವರಿಗೆ ಅದು ಇಷ್ಟ ಆಗಲಿಲ್ಲ. ಕೊನೆಗೆ ಫ್ರೆಂಚ್ ಭಾಷೆಯಲ್ಲಿ ಮಾತನಾಡಿದೆ. ಅದು ಆ ಹುಡುಗಿಗೆ ಅರ್ಥವಾಯಿತು. ಆ ಹುಡುಗನಿಗೆ ಅರ್ಥವಾಗಿಲ್ಲ. ಆ ಹುಡುಗಿ ಜೊತೆ ನಾನು ಮಾತಾಡಿದೆ ಎಂಬ ಕಾರಣಕ್ಕೆ ಆ ಹುಡುಗ ಹೋಗಿ ಪೊಲೀಸರನ್ನ ಕರೆದುಕೊಂಡು ಬಂದ''

  ಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿಸುಧಾ ಮೂರ್ತಿ ಅವರಿಗೆ ರಿಕ್ಷಾದಲ್ಲಿ ಪ್ರಪೋಸ್ ಮಾಡಿದ್ರಂತೆ ನಾರಾಯಣ ಮೂರ್ತಿ

  ಸಣ್ಣ ಕೋಣೆಯಲ್ಲಿ ಬಂಧಿಸಿಟ್ಟರು

  ಸಣ್ಣ ಕೋಣೆಯಲ್ಲಿ ಬಂಧಿಸಿಟ್ಟರು

  ''ನನ್ನನ್ನು ಆ ಪೋಲಿಸಿನವರು ಕರೆದುಕೊಂಡು ಹೋಗಿ ಪಾಸ್ ಪೋರ್ಟ್ ಕಿತ್ಕೊಂಡು, ಬ್ಯಾಗ್ ತಗೊಂಡು ರೈಲ್ವೆ ಸ್ಟೇಷನ್ ನಲ್ಲಿ ಸಣ್ಣದೊಂದು ರೂಂನಲ್ಲಿ ಕೂಡಿ ಹಾಕಿದ್ರು. ಅದು 8ಕ್ಕೆ 8 ಅಡಿ ಇರಬಹುದು. ಅಲ್ಲೇ ಟಾಯ್ಲೆಟ್ ಕೂಡ ಇತ್ತು. ಅಲ್ಲಿ ನೀರು ಇರಲಿಲ್ಲ''

  ನಾರಾಯಣ ಮೂರ್ತಿ 'ಭಾರತದ ರಾಷ್ಟ್ರಪತಿ ಆಗ್ಬೇಕು' ಎನ್ನುವುದು ಇವರ ಆಸೆನಾರಾಯಣ ಮೂರ್ತಿ 'ಭಾರತದ ರಾಷ್ಟ್ರಪತಿ ಆಗ್ಬೇಕು' ಎನ್ನುವುದು ಇವರ ಆಸೆ

  ಮೂರು ದಿನ ಅಲ್ಲೆ ಬಿಟ್ಟರು

  ಮೂರು ದಿನ ಅಲ್ಲೆ ಬಿಟ್ಟರು

  ''ಭಾನುವಾರ ರಾತ್ರಿ 10 ಗಂಟೆಗೆ ಆ ರೂಂನಲ್ಲಿ ನನ್ನನ್ನು ಬಂಧಿಸಿದ ಅವರು ಬುಧವಾರ ರಾತ್ರಿ 1 ಗಂಟೆವರೆಗೂ ಕೂಡಿ ಹಾಕಿದ್ದರು. ನಂತರ ನನ್ನ ಎಳೆದುಕೊಂಡು ಹೋಗಿ ಒಂದು ಗಾರ್ಡ್ಸ್ ಕಂಫರ್ಟ್ ಮೆಂಟ್ ನಲ್ಲಿ ಬಿಟ್ಟರು. ''ನೀವು ನಮ್ಮ ಫ್ರೆಂಡ್ಲಿ ದೇಶದ ಪ್ರಜೆ ಹಾಗಾಗಿ ನಿಮ್ಮನ್ನು ಬಿಡುತ್ತಿದ್ದೇವೆ'' ಎಂದರು. ಅಲ್ಲಿಂದ ಇಸ್ತಾಂಬ್ದುಲ್ ಗೆ 21 ಗಂಟೆ ಜರ್ನಿ. ಮೊದಲೇ ಊಟ ಇಲ್ಲದೇ ಹಸಿದಿದ್ದೆ. ಈ ಘಟನೆ ಗಳಿಕ ಕಮ್ಯುನಿಸ್ಟ್ ನಂಬಿಕೆ ಬಿಟ್ಟೆ'' ಎಂದು ನಾರಾಯಣ ಮೂರ್ತಿ ಹೇಳಿಕೊಂಡರು.

  English summary
  Infosys chairperson Narayana Murthy shared paris incident in weekend with ramesh 4. he straggled in paris country without food and water for three four days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X