WWR 5: ಡಿಕೆ ಶಿವಕುಮಾರ್ ನಡೆದುಬಂದ ಹಾದಿ ಹೇಗಿತ್ತು? ಡಿಕೆಶಿ ಬಳಿ ತಾಯಿ ಹೇಳಿಕೊಂಡ ಆಸೆ ಎನು?

By Poorva

ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವ ಕುಮಾರ್ ಕನಕ ಪುರದ ಬಂಡೆ ಎಂದೇ ಹೆಸರುವಾಸಿ ಆಗಿದ್ದಾರೆ. ಡಿಕೆ ಶಿವಕುಮಾರ್ ಮೇ 15 ರಂದು ಕನಕ ಪುರದಲ್ಲಿ ಜನಿಸಿದರು. ಹೆಸರು ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್. ತಂದೆ ಕೆಂಪೇಗೌಡ, ತಾಯಿ ಗೌರಮ್ಮ. ಡಿಕೆ ಶಿವಕುಮಾರ್ ಹಿರಿಯ ಮಗ.

ಗೌರಮ್ಮ ಅವರಿಗೆ ಮೂರು ವರುಷ ಮಕ್ಕಳು ಆಗಿರಲಿಲ್ಲ. ಮಕ್ಕಳು ಆಗಲಿಲ್ಲ ಎಂದು ಎಲ್ಲರೂ ಆಡಿಕೊಳ್ಳುತ್ತಾರೆ ಇದ್ದರಂತೆ. ಕೊನೆಗೆ ಶಿವನಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಬಳಿಕ ಆ ದೇವರ ಆಶೀರ್ವಾದದಿಂದ ಡಿಕೆ ಶಿವ ಕುಮಾರ್ ಜನಿಸಿದರಂತೆ.

 Weekend With Ramesh 5: DK Shivakumar life story and milestones

ಡಿಕೆ ಶಿವ ಕುಮಾರ್ ಬಹಳ ಸ್ಥಿತಿವಂತರು ಆಗಿದ್ದರು. ಅವರ ಊರಿನಲ್ಲಿ ಬಹಳ ಆಸ್ತಿ ಹೊಂದಿದವರು ಆಗಿದ್ದರು. ಶಿವ ಕುಮಾರ್ ಅವರ ತಂದೆ ತಾಯಿ ಯಾವತ್ತೂ ಮಕ್ಕಳ ಮೇಲೆ ಕೈ ಮಾಡಿದವರಲ್ಲ. ತಪ್ಪು ಮಾಡಿದಾಗ ಅದನ್ನು ತಿದ್ದಿ ನಡೆಸುತ್ತಿದ್ದರು. ಹಾಗೆಯೇ ತಾನು ಬೆಳೆಯುತ್ತಾ ತನ್ನ ತಂಗಿ ತಮ್ಮನನ್ನು ಒಂದು ಹಂತದವರೆಗೆ ದಡ ಮುಟ್ಟಿಸಿದ್ದಾರೆ ಎಂದರೆ ತಪ್ಪಾಗದು.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಮಗನ ಬಳಿ ಒಂದು ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ "ನನ್ನ ಆಶೀರ್ವಾದ ಯಾವಾಗಲೂ ನಿನ್ನ ಮೇಲೆ ಇರುತ್ತೆ. ಈಗ ಹೇಗೆ ನನ್ನನ್ನ ನೋಡಿಕೊಂಡು ಇದ್ಯೋ.. ಅದೇ ರೀತಿ ಮುಂದೆಯೂ ನನ್ನನ್ನ ನೋಡಿಕೋ'' ಎಂದು ತಾಯಿ ಗೌರಮ್ಮ ಹೇಳಿದ್ದಾರೆ. ಡಿಕೆ ಶಿವ ಕುಮಾರ್ ತಂದೆ ತಾಯಿಗೆ ಮಗನನ್ನು ಓದಿಸಬೇಕು ಎಂದು ಆಸೆ ಇತ್ತು .

ಡಿಕೆ ಶಿವ ಕುಮಾರ್ ಆರನೇ ಕ್ಲಾಸಿನಲ್ಲಿ ಇರಬೇಕಾದರೆ ರಾಜಕೀಯದ ಆಸೆ ಬೆಳೆದು ಹೋಗಿತ್ತು. ರಾಜಕೀಯದಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವ ದೃಷ್ಟಿಯಿಂದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ ಎ ಪದವಿ ಪಡೆದುಕೊಳ್ಳುತ್ತಾರೆ. ಡಿಕೆ ಶಿವ ಕುಮಾರ್ ಅವರು ಆರನೇ ವರುಷಕ್ಕೆ ಬೆಂಗಳೂರಿಗೆ ಕಾಲಿಟ್ಟಿದ್ದರು. ತನ್ನ ವಿಧ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿದ್ದರು.

ಕಾಲೇಜು ದಿನಗಳಲ್ಲೇ ಬಹಳ ಉತ್ತಮವಾಗಿ ಎಲ್ಲರ ಜೊತೆ ಬೆರೆಯುತ್ತಿದ್ದರು. 1982ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದರು. 1989ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿ 27ನೇ ವಯಸ್ಸಿನಲ್ಲಿ ಅತೀ ಕಿರಿಯ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡುತ್ತಾರೆ.

ಆ ಬಳಿಕ ಡಿ ಕೆ ಶಿವಕುಮಾರ್ ಹಿಂದೆ ತಿರುಗಿ ನೋಡಲೇ ಇಲ್ಲ . ಡಿಕೆ ಶಿವಕುಮಾರ್ ಅವರು 8 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. 4 ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸದ್ಯ 2023ರಲ್ಲಿಯೂ ಪ್ರಚಂಡ ಗೆಲುವು ಸಾಧಿಸುತ್ತಾರೆ. ಸದ್ಯ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಆಗಿರುವ ಡಿ ಕೆ ಶಿವಕುಮಾರ್ ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿದ್ದಾರೆ.

More from Filmibeat

English summary
milestone of d k Shiva Kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X