Weekend with Ramesh 5: "ನಾನು ಕೂರುವ ಖುರ್ಚಿಯಲ್ಲಿ ನೀನು ಕೂರಬೇಕು": ಹಂಸಲೇಖ ಹೀಗಂದಿದ್ದೇಕೆ?
'ವೀಕೆಂಡ್ ರಮೇಶ್' ಕಾರ್ಯಕ್ರಮದಲ್ಲಿ ಸಾಧಕರನ್ನು ಕರೆಸಿ, ಅವರ ಸಾಧನೆಗೆ ಸ್ಪೂರ್ತಿ ಏನು..? ಪಟ್ಟ ಕಷ್ಟಗಳೇನು..? ಸಾಧನೆ ಮಾಡಲು ಸಿಕ್ಕ ದಾರಿ ಸುಲಭವಾ..? ಕಷ್ಟವಾ ಎಂಬುದೆಲ್ಲವನ್ನು ಅನಾವರಣವಾಗುತ್ತದೆ. ಈ ಕಾರ್ಯಕ್ರಮ ನೋಡುಗರಿಗೂ ಸ್ಪೂರ್ತಿ ಎಂದರೆ ತಪ್ಪಾಗುವುದಿಲ್ಲ.
ಯಾಕಂದ್ರೆ ಸಾಧನೆ ಎಂಬ ಪದ ಹೇಳಲು, ಕೇಳಲು ಮೂರೇ ಅಕ್ಷರ. ಆದರೆ ಅದನ್ನು ಟಚ್ ಮಾಡುವುದಕ್ಕೆ ಬೇಕಿರುವುದು ದೊಡ್ಡ ಮಟ್ಟದ ತಾಳ್ಮೆ, ಶ್ರದ್ಧೆ, ಶ್ರಮ. ಇದೆಲ್ಲವೂ ಸಾಧನೆ ಮಾಡಿದವರ ಬಾಯಲ್ಲಿ ಕೇಳಿದಾಗ ಮತ್ತೊಂದಷ್ಟು ಜನ ಆ ಸಾಧನೆಯ ಹಾದಿಯಲ್ಲಿ ಸಾಗುವುದಕ್ಕೆ ಸುಲಭವಾಗುತ್ತದೆ. ಇದು ವಿಕೆಂಡ್ ವಿತ್ ರಮೇಶ್ ಕಾರ್ಯಕ್ರಮದಿಂದ ಇಂತಂದೊಂದು ಮಹತ್ಕಾರ್ಯ ನಡೆಯುತ್ತಿದೆ. ಶನಿವಾರದ ಅತಿಥಿಯಾಗಿ ನಾಗೇಂದ್ರ ಪ್ರಸಾದ್ ಬಂದಿದ್ದು, ಸಾಹಿತ್ಯ ಲೋಕದ ಎಂಟ್ರಿ ಕೊಟ್ಟ ಬಗ್ಗೆ ರಿವೀಲ್ ಮಾಡಿದ್ದಾರೆ.

'ಶ್ರೀ ಮಂಜುನಾಥ'ನಿಂದ ಸಿನಿ ಬದುಕು ಆರಂಭ
ಆಸೆಪಟ್ಟ ಕ್ಷೇತ್ರಕ್ಕೆ ಹೋಗುವುದು ಎಂದರೆ ಸುಲಭದ ಮಾತಲ್ಲ. ಅದಕ್ಕೆ ಅಂತ ಕಷ್ಟ ಪಡಬೇಕಾಗುತ್ತದೆ. ಇಷ್ಟಪಟ್ಟ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದರೂ ಗೆಲುವಿಗೆ ಇರುವ ಟರ್ನಿಂಗ್ ಪಾಯಿಂಟ್ ಸಿಗುವುದಕ್ಕೆ ಕಾಯಬೇಕಾಗುತ್ತದೆ. ಆ ರೀತಿ ಕಾದಾಗಲೇ ವಿ ನಾಗೇಂದ್ರ ಪ್ರಸಾದ್ ಅವರಿಗೆ ಸಿಕ್ಕಿದ್ದು 'ಶ್ರೀ ಮಂಜುನಾಥ'ನ ದರ್ಶನ ಭಾಗ್ಯ. ಸಿನಿಮಾದಲ್ಲಿಯೇ ರೂಢಿಸಿಕೊಳ್ಳಬೇಕು ಎಂದುಕೊಂಡಿದ್ದ ನಾಗೇಂದ್ರ ಪ್ರಸಾದ್‌ಗೆ 'ಶ್ರೀ ಮಂಜುನಾಥ' ಸಿನಿಮಾದಿಂದ ಮೊದಲ ಬಾರಿಗೆ ಜಯ ಸಿಕ್ಕಿತ್ತು.
ಕೆವಿ ಜಯರಾಮ್ ಅವರ ಪಾತ್ರವೇನು..?
"ನಾನು ಮೊದಲು ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಕೆವಿ ಜಯರಾಮ್ ಅವರ ಸಣ್ಣ ಪರಿಚಯವಿತ್ತು. ನಾನು ಯಾವಾಗಲೂ ಓದುತ್ತಾ ಕುಳಿತಿದ್ದನ್ನು ಕಂಡು ಏನು ಯಾವಾಗಲೂ ಓದುತ್ತೀಯಾ ಅಂತ ಕೇಳಿದ್ದರು. ಆಗ ನಾನು ಕನ್ನಡ ಎಂಎ ಕಟ್ಟಿದ್ದೀನಿ ಸರ್ ಎಂದಾಗ ಸಾಹಿತ್ಯದ ಬಗ್ಗೆ ಎಲ್ಲಾ ಆಸಕ್ತಿ ಇದ್ಯಾ ಅಂದ್ರು. ಹೌದು ಎಂದಾಗ ಬರೆಯೋದಕ್ಕೆ ಹೇಳಿದ್ರು. ಅವರ ಜೊತೆ ನಾಲ್ಕು ವರ್ಷ ಕೆಲಸ ಮಾಡಿದ್ದೀನಿ. ಬಳಿಕ ಸಿನಿಮಾ ಮಾಡುವುದಕ್ಕೆ ಹೊರಟು ಬಿಟ್ಟೆ"
ಶ್ರೀ ಮಂಜುನಾಥ ಸಿನಿಮಾ ಸಿಕ್ಕಿದ್ದೇಗೆ..?
"ಸಿನಿಮಾಗೆ ಹೋಗುವ ನಿರ್ಧಾರ ಮಾಡಿದೆ. ನನ್ನ ರಾಜೀನಾಮೆಯನ್ನು ರಿಸೀವ್ ಮಾಡಿಕೊಳ್ಳಲಿಲ್ಲ. ಸಿನಿಮಾ ಸಿಗಲಿಲ್ಲ ಅಂದ್ರೆ ವಾಪಸ್ ಬಾ ಅಂದ್ರು. ನಾನು ಫಸ್ಟ್ ಅಂಡ್ ಲಾಸ್ಟ್ ಭೈರವಿ ಅವರ ಹತ್ತಿರ ಕೆಲಸ ಕೇಳಿದ್ದು. ಗಾಜಿನ ಮನೆ ಹಾಡುಗಳನ್ನು ಕೇಳಿಸಿದಾಗ ಚೆನ್ನಾಗಿದೆ ಅಂದ್ರು. ನೀವೂ 'ಶ್ರೀ ಮಂಜುನಾಥ' ಅನ್ನೋ ಸಿನಿಮಾ ಮಾಡ್ತಾ ಇದ್ದೀರಾ ಅಂತ ಕೇಳ್ಪಟ್ಟೆ ನಂಗೊಂದು ಅವಕಾಶ ಕೊಡಿ ಅಂದೆ. ಥಟ್ ಅಂತ ಒಪ್ಪಿಕೊಂಡ್ರು. ಹಣ ಎಷ್ಟು ಬೇಕು ಅಂದ್ರು. ಹಣ ಮುಖ್ಯ ಅಲ್ಲ ಎಂದೇ. ಜೀವನದಲ್ಲಿ ಒಂದು ಗಟ್ಟಿ ನಿರ್ಧಾರ ಮಾಡಬೇಕು ಸರ್. ಆಗ, ಇಲ್ಲ ಸೋಲುತ್ತೀವಿ.. ಇಲ್ಲ ಗೆಲ್ತೀವಿ.. ಬದುಕು ಸಿಗುತ್ತೆ" ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

ಹಂಸಲೇಖ ಅವರ ಕನಸೇನು ಗೊತ್ತಾ..?
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ ಅವರು ಕರೆ ಮಾಡಿದರು. ಶ್ರೀ ಮಂಜುನಾಥ ಸಿನಿಮಾದ ಅನುಭವ ಹಂಚಿಕೊಂಡರು. "ಆಗ ಕನ್ನಡ ಇಂಡಸ್ಟ್ರಿಗೆ ಒಬ್ಬನೇ ಒಬ್ಬನೇ ಹಂಸಲೇಖ ಎನ್ನುವಂತಹ ಕಾಲವಿತ್ತು. ಆದರೆ, ಶ್ರೀ ಮಂಜುನಾಥ ಸಿನಿಮಾಗೆ ನಾಗೆಂದ್ರ ಪ್ರಸಾದ್ ಹಾಡು ಬರೆದ ಬಳಿಕ ಇವನ್ನೊಬ್ಬನೇ ಇವನ್ನೊಬ್ಬನೆ ನಾಗೇಂದ್ರ ಪ್ರಸಾದ್ ಇವನ್ನೊಬ್ಬನೇ ಎನ್ನುವಂತೆ ಆಯಿತು" ಎಂದು ಹಂಸಲೇಖ ಹೊಗಳಿದ್ದಾರೆ.
ವೇದಿಕೆ ಮೇಲೆಯೇ ಆಹ್ವಾನ ಕೊಟ್ಟರು ರಮೇಶ್
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಈಗಾಗಲೇ ಹಂಸಲೇಖ ಅವರನ್ನು ನಾಲ್ಕು ಸೀಸನ್ ನಲ್ಲೂ ಆಹ್ವಾನ ಮಾಡಿದ್ದಾರೆ. ನಟ ರಮೇಶ್ ಅವರೇ ರಿವಿಲ್ ಮಾಡಿದ್ದಾರೆ. ಆದರೆ ಹಂಸಲೇಖ ಅವರ ಆಸೆ, "ನಾನು ಕೂರುವ ಖುರ್ಚಿಯಲ್ಲಿ ನೀನು ಕೂರಬೇಕು. ಜೊತೆಗೆ ನಾಗೇಂದ್ರ ಪ್ರಸಾದ್ ಇನ್ನೊಂದಷ್ಟು ಜನರನ್ನು ಬೆಳೆಸಿ ಆ ಖುರ್ಚಿಯಲ್ಲಿ ಕೂರುವಂತೆ ಮಾಡಬೇಕು" ಎಂದು ನಾಗೇಂದ್ರ ಪ್ರಸಾದ್ ಅವರಿಗೆ ಕಿವಿ ಮಾತು ಹೇಳಿದ್ದಾರೆ.


Click it and Unblock the Notifications











