Weekend With Ramesh 5: ಸಾಧಕರ ಸೀಟಿನಲ್ಲಿ ಡಾ. ಮಂಜುನಾಥ್ ಕಂಡು ಹೆಮ್ಮೆ ಪಟ್ಟ ಕರ್ನಾಟಕ!

By ಎಸ್ ಸುಮಂತ್

'ವೀಕೆಂಡ್ ವಿತ್ ರಮೇಶ್' ಸೀಸನ್ 5 ಶೋ ಶುರುವಾಗಿದೆ. ಈಗಾಗಲೇ ರಮ್ಯಾ, ಪ್ರಭುದೇವ ಅವರ ಎಪಿಸೋಡ್ ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ. ಅದರಂತೆ ಈ ವಾರ ಮತ್ತಿಬ್ಬರು ವಿಶೇಷ ವ್ಯಕ್ತಿಯನ್ನು ವಾಹಿನಿ ಕರೆಸಿದೆ. ಈ ವಾರ ಡಾ. ಮಂಜುನಾಥ್ ಹಾಗೂ ದತ್ತಣ್ಣ ಶೋನಲ್ಲಿ ಇರಲಿದ್ದಾರೆ. ಶನಿವಾರದ ಎಪಿಸೋಡಿನಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಸಾಧಕರ ಖುರ್ಚಿಯಲ್ಲಿ ಕೂತಿದ್ದಾರೆ.

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಶುರುವಾದಾಗೆಲ್ಲಾ ನೋಡುಗರದ್ದು ಒಂದಷ್ಟು ನಿರೀಕ್ಷೆ ಇತ್ತು. ಈ ಎಪಿಸೋಡ್‌ನಲ್ಲಿ ಇವರನ್ನ ಕರೆಸಿ ಎಂಬ ಡಿಮ್ಯಾಂಡ್ ಇರುತ್ತಾ ಇತ್ತು. ಅದರಲ್ಲಿ ಡಾ.ಮಂಜುನಾಥ್ ಅವರ ಹೆಸರು ಕೂಡ ಮುಂಚೂಣಿಯಲ್ಲಿತ್ತು. ಆ ಆಸೆ, ಬಯಕೆ ಈ ಬಾರಿ ಈಡೇರಿದೆ. ಕಡೆಗೂ ಮಂಜುನಾಥ್ ಅವರ ಸಾಧನೆ ಅನಾವರಣವಾಗಿದೆ.

Weekend With Ramesh 5 Jayadeva Hospital Director Dr. Manjunath Episode Written Update

ಡಾ.ಮಂಜುನಾಥ್ ಬಗ್ಗೆ ಫುಲ್ ಕ್ರೇಜ್

ವೈದ್ಯೋ ನಾರಾಯಣೇ ಹರಿ ಅಂತಾರೆ. ವೈದ್ಯರಲ್ಲಿಯೇ ದೇವರನ್ನು ಕಾಣುತ್ತೇವೆ. ಆದರೆ ಎಲ್ಲರಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ. ಕೆಲವರಲ್ಲಿ ಮಾತ್ರ ಆ ಗುಣವಿರುತ್ತೆ. ಆ ಗುಣ, ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ಅವರಿಗಿದೆ. ಯಾವ ರೋಗಿಯೂ ಜಯದೇವಕ್ಕೆ ಹೋದವರು ಅದರ ಬಗ್ಗೆ ನೆಗೆಟಿವ್ ಮಾತನಾಡಿಕೊಂಡು ಹೋಗಿಲ್ಲ. ಅದಕ್ಕೆ ಕಾರಣ ಡಾ.ಮಂಜುನಾಥ್. ಇದೇ ಕಾರಣಕ್ಕೇನೆ ಮಂಜುನಾಥ್ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದಾಗಲೇ ಎಲ್ಲರಲ್ಲೂ ಫುಲ್ ಖುಷಿಯಾಗಿದೆ.

2006ರಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಕೆಲಸ ಆರಂಭಿಸುತ್ತಾರೆ. ಸಂಸ್ಥೆಯಿಂದ 50 ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ಮಾಡಲಾಗಿದೆ. ಆರು ಲಕ್ಷಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಯ ರುವಾರಿ ಅವರಾಗಿದ್ದಾರೆ. 54 ಸಾವಿರ ಹೃದಯ ಚಿಕಿತ್ಸೆ ಮಾಡಿದ್ದಾರೆ. ಕೇವಲ 5 ದಿನದಲ್ಲಿ 200 ಆ್ಯಂಜಿಯೋಪ್ಲಾಸ್ಟಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ 17 ವರ್ಷಗಳಿಂದ ಸೇವೆ ಮಾಡಿದ್ದಾರೆ. ಅಪೂರ್ವ ಸಾಧನೆಗೆ ಪದ್ಮಶ್ರೀ ಪುರಸ್ಕಾರವೂ ಸಿಕ್ಕಿದೆ.

ಸಹೋದ್ಯೋಗಿಗಳಿಂದಲೂ ಮೆಚ್ಚುಗೆ

ಕೆಲಸ ಮಾಡುವ ವಾತಾವರಣ ಹೇಗಿರುತ್ತೋ ಮನುಷ್ಯ ಕೂಡ ಅದೇ ರೀತಿ ಬದಲಾಗುತ್ತಾನೆ. ಡಾ.ಮಂಜುನಾಥ್‌ಗೆ ಇರುವ ಮನುಷ್ಯತ್ವದ ಗುಣವೇ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳ ಜೊತೆ ಆತ್ಮೀಯವಾಗಿಯೇ ನಡೆದುಕೊಳ್ಳುವಂತೆ ಮಾಡಿರುವುದು. "ಒಳ್ಳೆಯ ಆಡಳಿತಗಾರ, ಒಳ್ಳೆಯ ವೈದ್ಯ. ಈ ರೀತಿಯಾದ ಅಪರೂಪದ ಗುಣ ಅವರಲ್ಲಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಒಂದೇ ಸೂರಿನಡಿ ಚಿಕಿತ್ಸೆ ಸಿಗುವಂತೆ ಅವರು ಮಾಡಿದ್ದಾರೆ. ಇದೊಂದು ರೀತಿಯಲ್ಲಿ ನಮಗೆ ಸಂಜೀವಿನಿಯಾಗಿದೆ" ಎಂದು ಸ್ನೇಹಿತರು, ಅಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ.

Weekend With Ramesh 5 Jayadeva Hospital Director Dr. Manjunath Episode Written Update

ಡಾ. ಮಂಜುನಾಥ್ ಬಗ್ಗೆ ಅದೆಷ್ಟು ಕ್ರೇಜ್ ಇದೆ ಅಂದ್ರೆ, ಜೀ ಕನ್ನಡ ಒಂದು ಫೋಟೋ ಹಾಕಿತ್ತು. ಅದು ಬ್ಲರ್ ಮಾಡಿ. ಅದಾಗಲೇ ಎಲ್ಲರಿಗೂ ಖುಷಿಯಾಗಿತ್ತು. ಇನ್ನು ಮಂಜುನಾಥ್ ಅವರ ಜರ್ನಿಯ ಸಣ್ಣ ಝಲಕ್ ಬಿಟ್ಟಾಗ, ಅಬ್ಬಬ್ಬಾ ಅದೆಷ್ಟು ಕಮೆಂಟ್ಸ್ ಗಳು, ಅದೆಷ್ಟು ಖುಷಿ. ಜೀ ಕನ್ನಡ ಆ ಕಮೆಂಟ್ಸ್ ಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು, ಒಂದು ವಿಡಿಯೋ ಮಾಡಿ ರಿಲೀಸ್ ಮಾಡಿತ್ತು. ಶನಿವಾರ ಎಪಿಸೋಡ್ ಎಲ್ಲರ ಮುಂದೆ ಪ್ರಸಾರವಾಗಿದ್ದು, ನೋಡುಗರಿಗೆ ಮತ್ತಷ್ಟು ಖುಷಿ ಕೊಟ್ಟಿದೆ.

More from Filmibeat

English summary
Zee kannada Reality Weekend With Ramesh 5 Jayadeva Hospital Director Dr. Manjunath Episode Written Update . Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X