"ಈಗಿನ ಮಕ್ಕಳು ಯಶ್, ದರ್ಶನ್ ಆಗ್ಬೇಕು ಅಂತಾರೆ.. ಆದ್ರೆ.." : ಮಂಡ್ಯ ರಮೇಶ್ ಬೇಸರ!

By ಎಸ್ ಸುಮಂತ್

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈ ವಾರ ಮಂಡ್ಯ ರಮೇಶ್ ಅವರನ್ನು ಅತಿಥಿಯಾಗಿ ಕರೆಸಲಾಗಿದೆ. ಚಿತ್ರರಂಗಕ್ಕೆ ರಂಗಭೂಮಿ ದೊಡ್ಡ ಕೊಡುಗೆಯನ್ನೇ ಕೊಟ್ಟಿದೆ. ಆಗೆಲ್ಲಾ ಸಿನಿಮಾ ಕ್ಷೇತ್ರಕ್ಕೆ ಬರಬೇಕು, ನಟನಾ ಕ್ಷೇತ್ರಕ್ಕೆ ಬರಬೇಕು ಅಂದ್ರೆ ರಂಗಭೂಮಿಯಲ್ಲಿ ದುಡಿದಿರುವವರಿಗೆ ಪ್ರಾಶಸ್ತ್ಯ ಸಿಗುತ್ತಿತ್ತು. ಅಷ್ಟೇ ಅಲ್ಲ ರಂಗಭೂಮಿಯಿಂದಾನೇ ಎಂಟ್ರಿಯಾಗ್ತಾ ಇದ್ರು. ಈಗ ಕಾಲ ಬದಲಾಗಿದೆ. ಸಾಕಷ್ಟು ತರಬೇತಿಗಳ ಟ್ರೈನಿಂಗ್ ಸೆಂಟರ್‌ಗಳು ತೆರೆದುಕೊಂಡಿವೆ. ಹೀಗಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.

ಹಿರಿಯ ಕಲಾವಿದರಿಗೆ ರಂಗಭೂಮಿಯ ನಂಟು ಇರುವ ಕಾರಣ, ಈಗಲೂ ನಾಟಕಗಳು ಎಂದಾಗ ಅವರ ಮನಸ್ಸಲ್ಲಿ ಸಂತಸವಾಗುತ್ತೆ. ನಮ್ಮ ಕುಟುಂಬ ಅಂತಾನೇ ಹೇಳ್ತಾರೆ. ಈಗಲೂ ಬಿಡುವಿದ್ದಾಗ ನಾಟಕ ಮಾಡುತ್ತಾರೆ. ಆದರೆ, ಈಗಿನ ಹುಡುಗರ ತಯಾರಿ ನೋಡುದ್ರೆ ಹಿರಿಯ ಕಲಾವಿದರಿಗೆ ಆತಂಕವೂ ಆಗುತ್ತೆ, ಬೇಸರವೂ ಕಾಡುತ್ತೆ. ಅದನ್ನೇ ಇವತ್ತು ಮಂಡ್ಯ ರಮೇಶ್ ಕೂಡ ಹೊರಗೆ ಹಾಕಿದ್ದಾರೆ.

ಮಂಡ್ಯ ರಮೇಶ್ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಏನು ಹೇಳಿದ್ರು?

ಮಂಡ್ಯ ರಮೇಶ್ ಅವರು ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಕಾರ್ಯಕ್ರಮದ ಸಾಧಕರ ಖುರ್ಚಿಯಲ್ಲು ಕುಳಿತವರಿಗೆ ಒಂದಿಷ್ಟು ಸಪ್ರೈಸ್‌ಗಳು ಇದ್ದೆ ಇರುತ್ತೆ. ಈ ಬಾರಿ ಮಂಡ್ಯ ರಮೇಶ್ ಅವರಿಗೆ ದಿ.ಮಾಸ್ಟರ್ ಹಿರಣ್ಣಯ್ಯ ಅವರ ಆಶೀರ್ವಾದವೇ ಸಪ್ರೈಸ್ ಆಗಿತ್ತು.

weekend with Ramesh 5 Mandya Ramesh Says todays Generation Want to Become Yash, Darshan

ಅಭಿಮಾನಿ ಅನ್ನದಾತರಿಗೆ ಧನ್ಯವಾದಗಳು ಎಂದ ಕೂಡಲೇ ಮಂಡ್ಯ ರಮೇಶ್ ಅವರ ಮುಖ ಆಶ್ಚರ್ಯದಿಂದ ಕೂಡಿತ್ತು. "ರಂಗಭೂಮಿ ವಿಚಾರದಲ್ಲಿ ಕಷ್ಟಪಡುವವರು ಯಾರು..? ಅದನ್ನು ಸದಾ ಜಾಗೃತವಾಗಿಡುವವರು ಯಾರು..? ಅದೊಂದು ಗುಂಪಾದ್ರೆ. ಇದರ ಫಲವನ್ನು ಉಣ್ಣೋರು ಯಾರು..? ನಾಟಕಕಾರರ ಹಣೆಬರಹ ಏನು ಅಂದ್ರೆ ಇದನ್ನು ವೃತ್ತಿಯಾಗಿ ಸ್ವೀಕಾರ ಮಾಡಿ ಬಿಟ್ಟಿದ್ದೀವಿ. ಅಂದ್ರೆ, ಇದ್ರಿಂದ ನಾವೂ ಜೀವನೋಪಾಯ ಮಾಡಬೇಕು" ಎಂದಿದ್ದಾರೆ.

ಮಂಡ್ಯ ರಮೇಶ್ ಕರೆತರಲು ತಯಾರಿ ಹೇಗಿತ್ತು?

ದಿ. ಮಾಸ್ಟರ್ ಹಿರಣ್ಣಯ್ಯ ಅವರು "ಹೊಸ ಹೊಸ ಪ್ರಯೋಗ ಮಾಡುತ್ತಾರೆ. ಪ್ರಯೋಗಗಳಿಂದ ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಾರೆ. ಇಂಥ ಒಂದು ಗುಂಪಿಗೆ ಸೇರಿರುವವರಲ್ಲಿ ಅಗ್ರ ಪಂಕ್ತಿಯಲ್ಲಿರುವವರಬೇಕಾದವರು ನಮ್ಮ‌ಮಂಡ್ಯ ರಮೇಶ್" ಎಂದು ಹೇಳಿದ್ದಾರೆ. ಹಿರಣ್ಣಯ್ಯ ಅವರು 2019ರಲ್ಲಿಯೇ ನಿಧನರಾಗಿದ್ದಾರೆ. ಆದರೆ ಮಂಡ್ಯ ರಮೇಶ್ ಬಗ್ಗೆ ಈಗ ಅವರ ಮಾತು ಪ್ರಸಾರವಾಗಿದೆ. ಅಂದ್ರೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ತಯಾರಿ ಕಡಿಮೆಯದ್ದೇನಲ್ಲ ಎಂಬುದು ಇದರಿಂದಾನೇ ತಿಳಿಯುತ್ತೆ.

ರಂಗಭೂಮಿಗಾಗಿ ಮುಡಿಪು ಮಂಡ್ಯ ರಮೇಶ್

ದಿ. ಹಿರಣ್ಣಯ್ಯ ಹೇಳುವ ಪ್ರಕಾರ "ಬೇರೆ ಬೇರೆ ಮೂಲದಿಂದ ಬಂದಿರುವ ಹಣ, ತನ್ನ ಸಂಪಾದನೆಯಿಂದ ಬಂದಿರುವ ಹಣವನ್ನೆಲ್ಲಾ ಸುರಿದು ರಂಗಭೂಮಿಯನ್ನು ಬೆಳೆಸುತ್ತಾ ಇದ್ದಾರೆ. ಮೈಸೂರಿನಲ್ಲಿ ಒಂದು ರಂಗಮಂದಿರ ಮಾಡಿದ್ದಾನೆ. ಅದರ ಆರಂಭಕ್ಕೆ ಹೋದಾಗ‌ ಮುಂದೆ ನಿಮ್ಮ ಸಹಾಯ ಬೇಕಾಗುತ್ತೆ ಎಂದಿದ್ದ. ಅಯ್ಯ ನೀನು ವೈಯಕ್ತಿಕವಾಗಿ ಬೇಡಿದರು, ರಂಗಭೂಮಿಗಾಗಿ ಬೇಡಿದರು ನಾನು ನಿಮ್ಮವನೆ. ಯಾವಾಗ ಬೇಕಾದರೂ ಬಳಸಿಕೊ ಎಂದಿದ್ದೆ. ಮಂಡ್ಯ ರಮೇಶ್ ಛಲವಾದಿ. ಹಿಡಿದ ಹಠವನ್ನು ಬಿಡುವುದಿಲ್ಲ. ಮಂಡ್ಯ ರಮೇಶ್‌ನಂತವರು ಇನ್ನು ಹೆಚ್ಚೆಚ್ಚು ಹುಟ್ಟಿ ಬರಬೇಕು" ಎಂದು ಆಶೀರ್ವಾದ ಮಾಡಿದ್ದಾರೆ. ವೀಕೆಂಡ್ ವಿತ್ ಶೋನಲ್ಲೂ ಕೂಡ ಯಾರಾದರೂ ಸಹಾಯ ಮಾಡಿದರೆ ಆ ಹಣವನ್ನು ರಂಗಭೂಮಿಗೆ ಹಾಕಲು ಯೋಚಿಸುವ ಬಗ್ಗೆ ಮಾತನಾಡಿದ್ದಾರೆ.

weekend with Ramesh 5 Mandya Ramesh Says todays Generation Want to Become Yash, Darshan

ಈಗಿನ ಕಲಾವಿದರಿಗೆ ಮಂಡ್ಯ ರಮೇಶ್ ಕಿವಿ ಮಾತು

ಆಗಿನ ಕಾಲದಲ್ಲಿ ಕಲಾವಿದರಾಗುವುದು ಸುಲಭವಾಗಿರಲಿಲ್ಲ. ಆದರೆ ಈಗ ಹಾಗಿಲ್ಲ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಂಡ್ಯ ರಮೇಶ್, "ಹಳ್ಳಿ ಹುಡುಗರಿಗೆ ಅವಕಾಶ ಇರಲ್ಲ. ಹೊಸ ಆವಿಷ್ಕಾರ ಮಾಡುತ್ತಾ ಅವಕಾಶ ನೀಡಬೇಕು. ಯಾರನ್ನಾದರು ಕೇಳಿದ್ರೆ ಏನು ಮಾಡ್ತೀಯಪ್ಪ ಅಂತ. ಸರ್ ಹೀರೋ ಆಗ್ಬೇಕು ಅಂತಾರೆ. ಏನ್ ಆಗ್ತೀಯಪ್ಪ ಸರ್ ಯಶ್ ಆಗ್ತೀನಿ, ದರ್ಶನ್ ಆಗ್ತೀನಿ. ಆಯ್ತು ಅದಕ್ಕೆ ಏನು ಮಾಡ್ತಾ ಇದ್ದೀಯಾ.ಏನು ಮಾಡದೆ ಇದ್ದರೆ ಹೇಗೋ ಆಗೋದು" ಎಂದು ಪ್ರಶ್ನಿಸಿದ್ದಾರೆ.

More from Filmibeat

English summary
Weekend with Ramesh 5 Mandya Ramesh Says today's Generation Want to Become Yash, Darshan. And preparation is zero he says, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X