ರಾಜೀವ್ ಗಾಂಧಿ ಭೇಟಿ: ಚಿನ್ನ ಅಡವಿಟ್ಟು ದೆಹಲಿ ಫ್ಲೈಟ್ ಏರಿದ್ದ ಡಿ. ಕೆ ಶಿವಕುಮಾರ್
ಡಿ. ಕೆ ಶಿವಕುಮಾರ್ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಅಂದಿನ ಸಿಎಂ ಬಂಗಾರಪ್ಪನವರು ಸಹ ಮುಂದೆ "ನೀನು ನನ್ನಂತೆ ಸಿಎಂ ಆಗಬೇಕು" ಎಂದು ಹಾರೈಸಿದ್ದರು. ಆದರೆ ಡಿ. ಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಕೆಲವರು ಕನಸು ಕಂಡಿದ್ದರು. ಈಗ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಯನ್ನು ಪಟ್ಟುಕೊಂಡಿದ್ದಾರೆ. ಮುಂದೆ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ.
ಬೆಂಗಳೂರು ಉಸ್ತುವಾರಿಯನ್ನು ವಹಿಸಿಕೊಂಡಿರುವ ಡಿ. ಕೆ ಶಿವಕುಮಾರ್ ನವ ಬೆಂಗಳೂರು ನಿರ್ಮಾಣಕ್ಕೆ ಪಣತೊಡುತ್ತೇನೆಂದು ಹೇಳಿದ್ದಾರೆ. ಅವರ ಬಗ್ಗೆ ತಿಳಿಯದ ಅದೆಷ್ಟೋ ಸಂಗತಿಗಳು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಅನಾವರಣವಾಗಿದೆ. 1982ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇಪ್ಪತ್ತನೇ ವಯಸ್ಸಿಗೆ ಡಿ. ಕೆ ಶಿವಕುಮಾರ್ ಅಧಿಕಾರ ವಹಿಸಿಕೊಂಡರು. ನಂತರ ಹಂತವಾಗಿ ಮೇಲೆ ಬಂದು ಈಗ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಶಿವಕುಮಾರ್ ಸಾಧನೆಯ ಹಿಂದೆ ಕುಟುಂಬದವರ ಪರಿಶ್ರಮವಿದೆ.

ಡಿ. ಕೆ ಶಿವಕುಮಾರ್ ವಾರ್ಡ್ ಯುನಿಯನ್ ಯೂಥ್ ಫೆಸ್ಟಿವಲ್‌ಗೆ ಆಯ್ಕೆಯಾದಾಗ ಇವರನ್ನು ವಿರೋಧ ಮಾಡಿದವರು ಹೆಚ್ಚಾಗಿದ್ದರು. ಆದರೆ ಆ ಅವಕಾಶ ಯಾವ ರೀತಿ ಒದಗಿ ಬಂತು ಎಂಬುದನ್ನು ಡಿಕೆ ಶಿವಕುಮಾರ್ ಅವರು ಮೆಲುಕು ಹಾಕಿದ್ದಾರೆ. ಇನ್ನು ಡಿಕೆಶಿ ಅಂದು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರನ್ನೇ ಇಂಪ್ರೆಸ್ ಮಾಡಿದ್ದರು. ರಾಜೀವ್ ಗಾಂಧಿ ಅವರು ಡಿ. ಕೆ ಶಿವಕುಮಾರ್ ಅವರನ್ನು ನೋಡಿ ಇವರನ್ನೇ ನಾನು ಸೆಲೆಕ್ಟ್ ಮಾಡಬೇಕು ಎಂದು ಯೂತ್ ಫೆಸ್ಟಿವಲ್‌ಗೆ ಮುಂದಾಳತ್ವ ವಹಿಸಲು ನಿರ್ಧಾರ ಮಾಡಿದರು.
ಪಾಸ್‌ಪೋರ್ಟ್‌ಗಾಗಿ ಚಿನ್ನದ ಸರ ಅಡಮಾನ
ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರು ಬೆಂಗಳೂರಿಗೆ ಬಂದಿದ್ದಾಗ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ರೂರಲ್ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಆಗಿದ್ದರು. ಈ ವೇಳೆ ಬಹಳಷ್ಟು ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಅಸೆಂಬ್ಲಿಯಲ್ಲಿ ಸೋತಿದ್ದ ಡಿಕೆಶಿ ಜಿಲ್ಲಾ ಪಂಚಾಯತಿ ಮೆಂಬರ್ ಆಗಿದ್ದರು. ಇನ್ನೂ ರಾಜೀವ್ ಗಾಂಧಿಯವರಿಗೆ ಏರ್ಪೋರ್ಟ್‌ನಲ್ಲಿ ಬೀಳ್ಕೊಡಲು ನಿಂತಾಗ ಡಿಕೆಶಿ ಅವರನ್ನು ನೋಡಿದ ರಾಜೀವ್ ಗಾಂಧಿ, ಗೌಡ ಎಂದು ಮಾತನಾಡಿಸಿದ್ದರು.
ಕಬ್ಬನ್ ಪಾರ್ಕ್ ರೆಸ್ಟೋರೆಂಟ್‌ನಲ್ಲಿ ಡಿಕೆಶಿ ಹಾಗೂ ಅವರ ಸ್ನೇಹಿತರು ಕುಳಿತಿದ್ದಾಗ ಕಮೀಷನರ್ ಕಚೇರಿಯಿಂದ ಕರೆಯುತ್ತಿದ್ದಾರೆ ಎಂದು ಹೇಳಿ ಅವರನ್ನು ಕರೆದುಕೊಂಡು ಹೋಗಿ ಡೆಲ್ಲಿಗೆ ಹೊರಡಬೇಕಂತೆ ವೀಸಾ ಪಾಸ್‌ಪೋರ್ಟ್ ಮಾಡಿಸಬೇಕು ಎಂದು ಹೇಳಿದ್ದಾರೆ. ಈ ವೇಳೆ ಕತ್ತಿನಲ್ಲಿ ಇದ್ದ ಚಿನ್ನದ ಚೈನ್ ಅಡವಿಟ್ಟು ಮೂರು ಸಾವಿರ ಹಣ ಕಟ್ಟಿದ್ದಾರೆ. ನಂತರ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ.

ಡಿಕೆಗೆ ಸಪ್ರೈಸ್ ಕೊಟ್ಟ ರಾಜೀವ್ ಗಾಂಧಿ
ಡಿ.ಕೆ. ಶಿವಕುಮಾರ್ ಅವರಿಗೆ ಟೆಲಿಗ್ರಾಮ್ ಕೊಡುವ ಮೂಲಕ ರಾಜೀವ್ ಗಾಂಧಿ ಸಪ್ರೈಸ್ ಗಿಫ್ಟ್ ನೀಡಿದ್ದರು. ಸೋಮವಾರ ನಂಗೆ ರಾಜೀವ್ ಗಾಂಧಿ ಟೆಲಿಗ್ರಾಮ್ ಕೊಟ್ರು, ನನ್ನನ್ನು ವರ್ಲ್ಡ್ ಯೂತ್ ಅಂಡ್ ಸ್ಟೂಡೆಂಟ್ ಪ್ರೆಸ್ಟಿವಲ್‌ನ ಮುಖ್ಯಸ್ಥನಾಗಿ ಸೆಲೆಕ್ಟ್ ಮಾಡಿದ್ದರು. ನಾನೇನು ರಾಜೀವ್ ಗಾಂಧಿ ಅವರ ಬಳಿ ಅವಕಾಶ ಕೊಡಿ ಎಂದು ಕೇಳಿಕೊಂಡಿರಲಿಲ್ಲ. ನಾನು ಮಾಡಿದ ಸಂಘಟನೆಯ ಮಾಹಿತಿಯನ್ನು ತಿಳಿದು ಈ ರೀತಿ ರಾಜೀವ್ ಗಾಂಧಿ ಈ ನಿರ್ಧಾರ ಕೈಗೊಂಡರು ಎಂದು ಡಿಕೆಶಿ ತಿಳಿಸಿದ್ದಾರೆ.
ಶಿವಕುಮಾರ್‌ಗೆ ಭಯ ಕಾಡಿತ್ತಂತೆ
ಡಿಕೆಶಿ ವರ್ಲ್ಡ್ ಯೂನಿಯನ್ ಯೂತ್ ಫೆಸ್ಟಿವಲ್‌ಗೆ ಸೆಲೆಕ್ಟ್ ಆದಾಗ ಐದು ಮಂದಿ ಸಂಸದರು ಚಾಕು, ಚೂರಿ ತಕೊಂಡು ಓಡಾಡೊರನ್ನು ಹೋಗಿ ಪ್ರೆಸಿಡೆಂಟ್ ಮಾಡಿದ್ದಾರೆ ಎಂದು ರಾಜೀವ್ ಗಾಂಧಿ ಅವರ ಬಳಿ ಚಾಡಿ ಹೇಳಿದ್ದಾರೆ. ನಂತರ ರಾಜೀವ್ ಗಾಂಧಿ ತಮ್ಮ ಪಿಎಗೆ ಫೋನ್ ಮಾಡಿದ್ದಾರೆ. ಈ ವೇಳೆ ಗವರ್ನರ್ ಬಳಿ ಕೇಳುವಂತೆ ರಾಜೀವ್ ಗಾಂಧಿ ಹೇಳಿದ್ದಾರೆ. ಅವರಿಂದ ಉತ್ತಮವಾಗಿ ಪ್ರತಿಕ್ರಿಯೆ ಬಂದಿದೆ. ಆದರೆ ಡಿಕೆಶಿಗೆ ಬಂದ ಅವಕಾಶ ಕಳೆದು ಹೋದರೆ ಎಂಬ ಭಯ ಶುರುವಾಗಿತ್ತಂತೆ.
ಸೀಸನ್- 5 ಮುಕ್ತಾಯ
ಡಿ.ಕೆ.ಶಿವಕುಮಾರ್ ಸಂಘಟನಾ ಚತುರ ಎಂದು ಅಂದೇ ರೂಪಿಸಿಕೊಂಡರು. ಇವರ ಬಗ್ಗೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಸೇರಿದಂತೆ ಹಲವರು ಮಾತನಾಡಿದ್ದಾರೆ. ಈ ಎಪಿಸೋಡ್ ಮೂಲಕ ವೀಕೆಂಡ್ ವಿರ್ ರಮೇಶ್ ಸೀಸನ್- 5 ಮುಕ್ತಾಯವಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ಸೀಸನ್ ಶುರುವಾಗುವ ಸಾಧ್ಯತೆಯಿದೆ.


Click it and Unblock the Notifications











