ಪ್ರಭಾವ ಬೀರಿದ ಸಂಸ್ಕೃತ ಶ್ಲೋಕಗಳು: ನಾನ್ ವೆಜ್ ತಿನ್ನಲ್ಲ ಡಿಕೆಶಿ: ಬಂಡೆಗೆ ಇಂಜೆಕ್ಷನ್ ಭಯ

By ಶೃತಿ ಹರೀಶ್ ಗೌಡ

ಟ್ರಬಲ್ ಶೂಟರ್ ಹಾಗೂ ಕನಕಪುರ ಬಂಡೆ, ಕಾಂಗ್ರೆಸ್‌ನ ಡೈನಾಮಿಕ್ ನಾಯಕ ಎಂದೆಲ್ಲ ಹೆಸರು ಪಡೆದಿರುವ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ರವರು ತಮ್ಮ ಜೀವನದಲ್ಲಿ ಸಂಸ್ಕೃತ ಶ್ಲೋಕಗಳಿಗೆ ಮಾರು ಹೋಗಿ ತಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ ಎಂದರೆ ನಂಬಲೇಬೇಕು. ಇದನ್ನು ಸ್ವತಃ ಡಿ. ಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹೇಳಿದ್ದಾರೆ.

ನನಗೆ ಸಂಸ್ಕೃತ ಶ್ಲೋಕಗಳೆಂದರೆ ತುಂಬಾ ಇಷ್ಟ ಎಂದು ವಿವರಿಸಿದ್ದಾರೆ. ಇಷ್ಟೇ ಅಲ್ಲದೇ ವೇದಿಕೆಯ ಮೇಲೆ ಎರಡು ಶ್ಲೋಕಗಳನ್ನ ಹೇಳುವ ಮೂಲಕ ನೆರೆದಿದ್ದ ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಡಿ. ಕೆ ಶಿವಕುಮಾರ್ ಅವರ ಮೇಲೆ ಸಂಸ್ಕೃತ ಶ್ಲೋಕಗಳ ಪ್ರಭಾವ ಮಾತ್ರ ಅಷ್ಟಿಷ್ಟಲ್ಲ. ಬಾಲಗಂಗಾಧರನಾಥ ಸ್ವಾಮೀಜಿ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ಡಿಕೆಶಿ ಹೋಗಿದ್ದ ವೇಳೆ ಅಲ್ಲಿಗೆ ಪುಟ್ಟಬರ್ತಿ ಸಾಯಿಬಾಬಾ ಅವರು ಬಂದಿದ್ದರು. 40 ನಿಮಿಷಗಳ ಕಾಲ ಎಂಟು ಶ್ಲೋಕಗಳ ಜೊತೆಗೆ ಅದರ ಅರ್ಥವನ್ನು ನೆರದಿದ್ದವರಿಗೆ ತಿಳಿಸಿದರು.

Weekend with Ramesh: DCM D K Shivakumars unknown facts revealed in Talk Show

ಸಾಯಿಬಾಬಾರವರು 8 ಶ್ಲೋಕಗಳನ್ನು ಹೇಳಿ ಅದರ ಅರ್ಥ ತಿಳಿಸಿದ ನಂತರ ಡಿಕೆ ಶಿವಕುಮಾರ್ ಅವರಿಗೆ ಸಂಸ್ಕೃತ ಶ್ಲೋಕಗಳ ಬಗ್ಗೆ ಆಸಕ್ತಿ ಹುಟ್ಟಿದೆ. ಅಲ್ಲಿಂದ ಬಂದವರೇ ತಮ್ಮ ಆಪ್ತರಿಗೆ ಹೇಳಿ ನಾನು ಸಂಸ್ಕೃತವನ್ನು ಕಲಿಯಬೇಕು ಎಂದು ಹೇಳಿದ್ದಾರೆ. ಇದಕ್ಕೆ ತರಗತಿಯನ್ನು ಸಹ ತೆಗೆದುಕೊಂಡು ದಿನಕ್ಕೆ ಒಂದು ಗಂಟೆಯಂತೆ ಸಂಸ್ಕೃತವನ್ನು ಕಲಿತುಕೊಂಡಿದ್ದಾರೆ. ಸಂಸ್ಕೃತದ ಜೊತೆ ಜೊತೆಗೆ ರಾಮಾಯಣ, ಮಹಾಭಾರತ, ಚಾಣಕ್ಯನ ತಂತ್ರಗಾರಿಕೆ, ವಿಧುರನ ರಾಜಕೀಯ ನೈಪುಣ್ಯತೆಯ ಬಗ್ಗೆಯೂ ತಿಳಿದುಕೊಂಡಿದ್ದಾರೆ.

ಮಾಂಸಾಹಾರ ತ್ಯಜಿಸಿದ ಬಂಡೆ

ಡಿಸಿಎಂ ಡಿ. ಕೆ ಶಿವಕುಮಾರ್ ಅವರಿಗೆ ಕಡಲೆಕಾಯಿ ತಿನ್ನುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕಾಗಿ ಅವರ ಪತ್ನಿ ಉಷಾ ಅವರು ಪತಿಗಾಗಿ ಕಡಲೆಕಾಯಿ ತಂದಿದ್ದರು. ಡಿಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದ ನಂತರ ಮಾಂಸಹಾರವನ್ನ ಸಂಪೂರ್ಣವಾಗಿ ತ್ಯಜಿಸಿ ಸಸ್ಯಹಾರಿಯಾಗಿದ್ದಾರೆ. ಮಶ್ರೂಮ್ ಎಂದರೆ ತುಂಬಾ ಇಷ್ಟವಾಗಿದ್ದು ಕಡಲೆಕಾಯಿ ಹಾಗೂ ಮಶ್ರೂಮ್ ಅನ್ನು ತಿನ್ನುತ್ತಾರೆ. ಇದರ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಅವರೇ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ನಾನು ಜೈಲಿನಿಂದ ಹೊರಗೆ ಬಂದ ಮೇಲೆ ಸಂಪೂರ್ಣವಾಗಿ ಸಸ್ಯಹಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಡಿಕೆಶಿಗೆ ಇಂಜೆಕ್ಷನ್ ಭಯ

ಯಾರಿಗೂ ಸಹ ಭಯಪಡದ ಕನಕಪುರ ಬಂಡೆ ಡಿ. ಕೆ. ಶಿವಕುಮಾರ್ ಅವರು ಇಂಜೆಕ್ಷನ್‌ಗೆ ಭಯ ಬೀಳುತ್ತಾರಂತೆ. ಇದರ ವಿಚಾರವನ್ನು ಅವ ಪತ್ನಿ ಉಷಾ ಅವರು ವೀಕೆಂಡ್ ವೇದಿಕೆಯ ಮೇಲೆ ರಿವೀಲ್ ಮಾಡಿದ್ದಾರೆ. ಡಿ. ಕೆ ಶಿವಕುಮಾರ್ ಅವರಿಗೆ ಇಂಜೆಕ್ಷನ್ ಮಾಡಿಸುವಾಗ ಮಾತನಾಡಿಸಿಕೊಂಡು ಮಾಡಿಸಬೇಕು, ಇಲ್ಲದಿದ್ದರೆ ಇಂಜೆಕ್ಷನ್‌ಗೆ ಭಯಪಡುತ್ತಾರೆ ಎಂದು ಹೇಳಿದ್ದಾರೆ.

Weekend with Ramesh: DCM D K Shivakumars unknown facts revealed in Talk Show

ಪತಿಯ ಬಗ್ಗೆ ಉಷಾ ಹೆಮ್ಮೆ

ಹೊರಗಡೆ ಡಿಕೆ ಶಿವಕುಮಾರ್ ರವರು ಎಷ್ಟೇ ರಫ್ ಅಂಡ್ ಟಫ್ ಆಗಿದ್ದರು, ಮನೆಗೆ ಬಂದು ಚಿಕ್ಕ ಮಕ್ಕಳ ರೀತಿ ಅಲ್ಲಿ ನಡೆದ ಘಟನೆಯನ್ನು ನೆನೆಸಿಕೊಂಡು ಅಳುತ್ತಾರಂತೆ. ಆ ಘಟನೆಯ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ ಎಂದು ಉಷಾ ತಿಳಿಸಿದ್ದಾರೆ. ನಮಗೆ ಹಾಗೂ ಕುಟುಂಬಕ್ಕೆ ಸಮಯವನ್ನು ಕೊಡದೇ ಇದ್ದರೂ ಸಹ ನನಗೆ ಅವರ ಹೆಂಡತಿಯಾದ ತೃಪ್ತಿ ಇದೆ. ಅವರು ಜನರ ಸೇವೆ ಮಾಡುವುದು ನನಗೂ ಸಹ ತೃಪ್ತಿ ಕೊಟ್ಟಿದೆ ಎಂದು ಉಷಾ ಅವರು ಡಿಕೆ ಶಿವಕುಮಾರ್ ಅವರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಶಿವಕುಮಾರ್‌ ಅವರ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಗಳು ರಿವೀಲ್ ಆಗಿದೆ.

More from Filmibeat

English summary
Weekend with Ramesh: DCM D K Shivakumar's unknown facts revealed in Talk Show. he is scared of injections, wont eat non veg, inspired to sanskrit slokas. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X