Weekend with Ramesh: ವೈವಾಹಿಕ ಜೀವನದಲ್ಲಿ ನೊಂದಿದ್ದ ಜೈಜಗದೀಶ್‌ ಬಾಳಿಗೆ ವಿಜಯಲಕ್ಷ್ಮಿ ಬಂದಿದ್ಹೇಗೆ?

By ಶೃತಿ ಹರೀಶ್ ಗೌಡ

'ವೀಕೆಂಡ್ ವಿತ್ ರಮೇಶ್' ಈ ವಾರದ ಅತಿಥಿಯಾಗಿ ಹಿರಿಯ ನಟ ಜೈಜಗದೀಶ್ ಆಗಮಿಸಿದ್ದರು. ನೂರಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಅವರು ಮನೆ ಮಾತಾಗಿದ್ದಾರೆ. ಖ್ಯಾತ ಸಿನಿಕರ್ಮಿ ಡಿ. ಶಂಕರ್ ಸಿಂಗ್ ಪುತ್ರಿ ವಿಜಯಲಕ್ಷ್ಮಿ ಸಿಂಗ್ ಕೈ ಹಿಡಿದರು. ತಮ್ಮ ಮದುವೆ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ವಿಜಯಲಕ್ಷ್ಮಿಗೂ ಮುನ್ನ ರೂಪ ಎಂಬುವವರ ಜೊತೆ ಮದುವೆ ಆಗಿತ್ತು.

ಮೊದಲು ವಿಜಯಲಕ್ಷ್ಮಿ ಸಿಂಗ್‌ ಅವರನ್ನು ಇಷ್ಟಪಟ್ಟಿದ್ದರೂ ಸಹ ಬೆಂಗಳೂರಿಗೆ ಬಂದ ನಂತರ ಅವರು ರೂಪಾ ಎಂಬುವವರ ಜೊತೆಗೆ ಮದುವೆ ಆಗಿದ್ದರು. ಈ ವಿಷಯ ವಿಜಯಲಕ್ಷ್ಮಿಗೆ ತಿಳಿದಿದ್ದರೂ ಸಹ ಅವರು ಮದುವೆಯಾದರು. ಜೈಜಗದೀಶ್ ಅವರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡು ರೂಪ ಅವರಿಂದ ಜೈ ಜಗದೀಶ್ ದೂರವಾಗಿದ್ದರು. ನಂತರ ವಿಜಯಲಕ್ಷ್ಮಿ ಸಿಂಗ್ ಅವರೊಂದಿಗೆ ಮದುವೆ ಆದರು.

ಇಷ್ಟೇ ಅಲ್ಲದೇ ರೂಪ ಅವರ ಮೊದಲ ಮಗಳಾದ ಅರ್ಪಿತಾ ಅವರನ್ನು ತುಂಬಾ ಚೆನ್ನಾಗಿ ಜೈ ಜಗದೀಶ್ ನೋಡಿಕೊಳ್ಳುತ್ತಿದ್ದಾರೆ. ಎಂದಿಗೂ ಸಹ ಅವರ ನಾಲ್ವರು ಮಕ್ಕಳು ಬಹಳ ಖುಷಿಯಿಂದ ಇದ್ದಾರೆ. ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಮೂವರು ಹೆಣ್ಣು ಮಕ್ಕಳಾದರೆ ಅರ್ಪಿತಾ, ರೂಪ ಅವರ ಮಗಳಾಗಿದ್ದು ಯಾವುದೇ ತಾರತಮ್ಯವಿಲ್ಲದೆ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.

Weekend with Ramesh: Jai Jagadish reveals Ambarishs role in his love marriage

ವಿಜಯಲಕ್ಷ್ಮಿ ಹಾಗೂ ಜೈ ಜಗದೀಶ್ ಮದುವೆಯಾಗಲು ಮುಖ್ಯ ಕಾರಣರಾದವರೆಂದರೆ ರಾಜೇಂದ್ರ ಸಿಂಗ್ ಬಾಬು ಹಾಗೂ ಅಂಬರೀಶ್. ಇವರ ಜೊತೆಗೆ ವಿಷ್ಣುವರ್ಧನ್ ಕೂಡ ಸೇರಿ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ಮದುವೆಯಾಗುವಂತೆ ಮಾಡಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ಅವರು ಸಹ ಗಂಡನ ಜೊತೆ ಜೊತೆಯಲ್ಲಿ ಸಂಸಾರದ ನೊಗವನ್ನು ಹೊತ್ತು ಮಕ್ಕಳನ್ನು ಸಾಕಿದ್ದಾರೆ.

Weekend with Ramesh: Jai Jagadish reveals Ambarishs role in his love marriage

ಅಂಬರೀಷ್ - ಜೈ ಜಗದೀಶ್ ರಿವೇಂಜ್

ಅಂಬರೀಶ್ ಹಾಗೂ ಜೈ ಜಗದೀಶ್ ಉತ್ತಮ ಸ್ನೇಹಿತರಾಗಿದ್ದರು. ಅಂಬರೀಶ್ ಕಾರನ್ನು ಓಡಿಸೋದು ನೋಡಿ ಕಾರಿನಿಂದ ಇಳಿದು ಬಸ್‌ನಲ್ಲಿ ಪ್ರಯಾಣ ಮಾಡಿದ್ದರಂತೆ. ಅಂಬಿಗೆ ಸ್ಪೀಡ್‌ನ ಭಯ ತೋರಿಸಬೇಕು ಎಂದುಕೊಂಡು ಪೈಲೆಟ್ ಆಗಬೇಕು ಎಂದ ಹೊರಟಿದ್ದರು. ಜೈ ಜಗದೀಶ್‌ ಫ್ಲೈಟ್‌ನಲ್ಲಿ ಅಂಬರೀಶ್ ಅವರನ್ನು ಕರೆದುಕೊಂಡು ಜೋರಾಗಿ ಫ್ಲೈಟ್ ಹಾರಿಸಿದಾಗ ಅಂಬರೀಶ್ ಜೋರಾಗಿ‌ ಕಿರುಚಿಕೊಂಡಿದ್ದರಂತೆ.

'ಬಂಧನ' ಚಿತ್ರದಲ್ಲಿ ವಿಷ್ಣುವರ್ಧನ್ ಎದುರು ತೂಕವಿರುವ ಪಾತ್ರ ಪಾತ್ರದಲ್ಲಿ ನಟಿಸಲು ಒಬ್ಬ ಒಳ್ಳೆ ನಟನನ್ನು ರಾಜೇಂದ್ರ ಸಿಂಗ್ ಬಾಬು ಹುಡುಕಿದರು. ಜೈ ಜಗದೀಶ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಸಿನಿಮಾ ಸಹ ಹಿಟ್ ಆಯಿತು. ವಿಷ್ಣುವರ್ಧನ್ ಜೊತೆಗೆ ಸಿನಿಮಾ ಮಾಡುವಾಗ ನಾನು ವಿಷ್ಣುವರ್ಧನ್ ಅವರಿಗೆ ಬೈದರೆ ಜನರು ನನ್ನನ್ನು ಒಪ್ಪುತ್ತಾರಾ? ಎಂಬ ಭಯದಲ್ಲೇ ಜೈ ಜಗದೀಶ್ 'ಬಂಧನ' ಸಿನಿಮಾ ಮಾಡಿ ಮುಗಿಸಿದ್ದರು. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆಯು ಸಹ ವ್ಯಕ್ತವಾಗಿತ್ತು.

ಜೈ ಜಗದೀಶ್‌ಗೆ ಬೈದಿದ್ದ ಅಜ್ಜಿ

ಜೈ ಜಗದೀಶ್‌ರವರು ಶ್ರೀರಂಗಪಟ್ಟಣದ ಒಂದು ಹಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಆದ ಒಂದು ಘಟನೆಯನ್ನು ವೀಕೆಂಡ್ ಶೋನಲ್ಲಿ ಮೆಲುಕು ಹಾಕಿದ್ದಾರೆ. ಶೂಟಿಂಗ್ ಸಮಯದಲ್ಲಿ ನಾನು ಇನ್ನೇನು ಮನೆಯ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದಂತಹ ಅಜ್ಜಿ ನೀನು ನಿಂತುಕೋ ಎಂದು ಹೇಳಿ ನಮಗೆ ಚೆನ್ನಾಗಿ ಬೈದಿದ್ದರು. ಏನಪ್ಪಾ ನೀನು ಸುಧಾರಾಣಿ ಕೆನ್ನೆಗೆ ಅಷ್ಟು ಜೋರಾಗಿ ದೋಸೆಯಿಂದ ಹೊಡೆದೆ ಎಂದು ಬೈದರು, ಅಷ್ಟರಲ್ಲಿ ಅವರ ಮಗ ಬಂದು ಅಮ್ಮ ಅದು ಶೂಟಿಂಗ್ ಅಷ್ಟೇ ಎಂದು ಸಮಾಧಾನ ಮಾಡಿದ್ದರಂತೆ ಎಂದು ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ.


ರೂಪ ಅವರೊಂದಿಗೆ ಉತ್ತಮ ಸಂಬಂಧ

ಮೊದಲ ಪತ್ನಿ ರೂಪ ಅವರು ಸಹ ಜೈ ಜಗದೀಶ್ ಮದುವೆಯಾದ ನಂತರ ಬೇರೊಬ್ಬರೊಂದಿಗೆ ಮದುವೆಯಾದರು. ಅವರ ಪತಿಯ ನಿಧನರಾದ ಮೇಲೆ ಅವರು ವಾಪಾಸ್ ಬೆಂಗಳೂರಿಗೆ ಬಂದಾಗ ವಿಜಯಲಕ್ಷ್ಮಿ ಸಿಂಗ್ ಅವರನ್ನು ಬಹಳ ಪ್ರೀತಿಯಿಂದ ಮಾತನಾಡಿಸಿ ಕುಟುಂಬದವರಂತೆ ಕಾಣುತ್ತಿದ್ದಾರೆ. ಇಬ್ಬರ ಕುಟುಂಬದವರು ಸಹ ಪ್ರೀತಿಯಿಂದ ಇದ್ದೇವೆ ಎಂದು ವಿಜಯಲಕ್ಷ್ಮಿ ಸಿಂಗ್ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಿದರು.

ಇನ್ನು ಜೈ ಜಗದೀಶ್‌ರವರ ಮೂವರು ಮಕ್ಕಳು ಅರ್ಪಿತಾ ಅವರೊಂದಿಗೆ ಇರುವ ಸಂಬಂಧವನ್ನು ವೇದಿಕೆ ಮೇಲೆ ತಿಳಿಸಿದ್ದಾರೆ. ಅವರು ನಮ್ಮ ಮನೆಗೆ ಬರುತ್ತಾರೆ ನಾವು ಅವರ ಮನೆಗೆ ಹೋಗುತ್ತೇವೆ, ನಾವು ಎಲ್ಲರೂ ಸಹ ಚೆನ್ನಾಗಿದ್ದೇವೆ ಎಂದು ಜೈಜಗದೀಶ್ ಮಕ್ಕಳು ಹೇಳಿದ್ದಾರೆ. ವಿಜಯಲಕ್ಷ್ಮಿ ಕೂಡ ನಾನು ರೂಪ ಅವರ ಜೊತೆಗೆ ಊಟಕ್ಕೆ ಹಾಗೂ ಹೊರಗೆ ಹೋಗುತ್ತೇನೆ. ನಾವೆಲ್ಲರೂ ಸಹ ಬಹಳ ಅನ್ಯೋನ್ಯವಾಗಿ 32 ವರ್ಷಗಳಿಂದ ಚೆನ್ನಾಗಿ ಇದ್ದೇವೆ ಎಂದು ತಿಳಿಸಿದರು.

More from Filmibeat

English summary
Weekend with Ramesh: Jai Jagadish reveals Ambarish's role in his love marriage. he divorced his first wife Roopa and Later married to Vijayalakshmi Singh. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X