Weekend with Ramesh: ಜೂಲಿ ಲಕ್ಷ್ಮಿ ಅವರನ್ನು ಕಂಡರೆ ಭಯ ಆಗುತ್ತಿತ್ತು

By ಶೃತಿ ಹರೀಶ್ ಗೌಡ

ಹಿರಿಯ ನಟ ಜೈ ಜಗದೀಶ್ ತಮ್ಮ ಸಿನಿ ಜರ್ನಿಯನ್ನ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹಂಚಿಕೊಂಡಿದ್ದಾರೆ. 'ಫಲಿತಾಂಶ' ಚಿತ್ರದ ಮೂಲಕ ಜೈ ಜಗದೀಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಾಣೆ ಮಾಡಿದರು.‌ ಪೈಲಟ್ ಆಗಬೇಕಿದ್ದವರು ಪುಟ್ಟಣ್ಣ ಕಣಗಾಲ್ ರವರು ಕರೆ ಮಾಡಿದ ಹಿನ್ನೆಲೆಯಲ್ಲಿ ತರಬೇತಿ ಅರ್ಧಕ್ಕೆ ಬಿಟ್ಟು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಮುಂದೆ ನೂರಾರು ಸಿನಿಮಾಗಳಲ್ಲಿ ನಟಿಸಿ ಗೆದ್ದರು.

ಜೈ ಜಗದೀಶ್ ಶಾಲಾ ದಿನಗಳಲ್ಲಿ ಬಹಳ ಚೇಷ್ಟೆ ಮಾಡುತ್ತಿದ್ದರಂತೆ. ಪಟಾಕಿ ಹಚ್ಚಿ ಪ್ರಿನ್ಸಿಪಾಲರನ್ನೇ ಮಧ್ಯರಾತ್ರಿ ಕೆಳಗೆ ಬೀಳುವಂತೆ ಮಾಡಿದ್ದರು. ಇನ್ನು ಗೆಳೆಯರ ಜೊತೆಗೆ ಸೇರಿ ಸಾಕಷ್ಟು ಕಿತಾಪತಿಗಳನ್ನು ಮಾಡಿದ್ದರಂತೆ. ನಂತರ ಪೈಲೆಟ್ ತರಬೇತಿಗೆ ಸೇರಿಕೊಂಡರು. ಆದರೆ ಅದನ್ನು ಬಿಟ್ಟು ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಬೆಳೆದು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

Weekend with Ramesh: Jai Jagadish shares his childhood and film shooting memories

ಬರೀ ಜಗದೀಶ್ ಆಗಿದ್ದವರನ್ನು ಪುಟ್ಟಣ್ಣ ಕಣಗಾಲ್‌ ತಿದ್ದಿ ತೀಡಿ ಜೈ ಜಗದೀಶ್‌ ಆಗಿ ಮಾಡಿದರು. ಪುಟ್ಟಣ್ಣನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಜೈ ಜಗದೀಶ್ ಎರಡು ವರ್ಷಗಳ ಕಾಲ ಯಾವುದೇ ಸಿನಿಮಾ ಇಲ್ಲದೆ ಸುಮ್ಮನೆ ಇದ್ದ ದಿನಗಳು ಇವೆ. ನಂತರ ಹೀರೊ ಆಗಿಯೂ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಇಷ್ಟೇ ಅಲ್ಲದೇ ನೆಗೆಟಿವ್ ಪಾತ್ರಗಳಲ್ಲಿ, ಆ ನಂತರ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು.

'ಬಂಧನ' ಸಿನಿಮಾದಲ್ಲಿ ಜೈ ಜಗದೀಶ್ ಮಾಡಿದ್ದ ಬಾಲು ಪಾತ್ರಕ್ಕೆ ಬಹಳ ಮಹತ್ವ ಇತ್ತು. ಈ ಸಿನಿಮಾ ನಂತರ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬಂದವು. ರಾಜೇಂದ್ರ ಸಿಂಗ್ ಬಾಬು ಆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಸರಿಸಮಾನಾಗಿ ನಿಲ್ಲವಂತ ನಟನ ಹುಡುಕಾಟದಲ್ಲಿದ್ದರು. ದಾದಾ ವಿರುದ್ಧವಾಗಿ ನಟನೆ ಮಾಡಲು ಇಂತಹ ವ್ಯಕ್ತಿತ್ವವನ್ನ ನಾನು ಹುಡುಕುತ್ತಿದ್ದೆ ನಂತರ ನನ್ನ ಕಣ್ಣಿಗೆ ಬಿದ್ದವರೇ ಜೈ ಜಗದೀಶ್ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

ಲಕ್ಷ್ಮೀ ಅವರನ್ನು ನೋಡಿದರೆ ಭಯವಿತ್ತು

ಜೈ ಜಗದೀಶ್ ಹಲವಾರು ಪಾತ್ರಗಳನ್ನ ಮಾಡಿ ಸೈ ಎನಿಸಿಕೊಂಡಿದ್ದರು ನಟಿ ಲಕ್ಷ್ಮಿ ಅವರನ್ನು ನೋಡಿದರೆ ಭಯವಾಗುತ್ತಿತ್ತಂತೆ. ಅವರ ಜೊತೆ 'ಗಾಳಿಮಾತು' ಸಿನಿಮಾದಲ್ಲಿ ನಟನೆ ಮಾಡುವ ವೇಳೆ ಸ್ವಲ್ಪ ಭಯವಾಗುತ್ತಿತ್ತು ಎಂದು ಹೇಳಿದ್ದಾರೆ. ವಿಜಯಲಕ್ಷ್ಮಿ ಹಾಗೂ ಅಂಬರೀಶ್ ಇಬ್ಬರು ಸಹ ಧೈರ್ಯ ತುಂಬಿ ನಾನು ನಟನೆ ಮಾಡುವಂತೆ ಮಾಡಿದರು. ಹಾಗಾಗಿ ನಾನು ಲಕ್ಷ್ಮಿ ಅವರ ಜೊತೆ 'ಗಾಳಿಮಾತು' ಸಿನಿಮಾದಲ್ಲಿ ನಟಿಸುವಂತಾಯಿತು ಎಂದು ಜೈ ಜಗದೀಶ್ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Weekend with Ramesh: Jai Jagadish shares his childhood and film shooting memories

ಎಷ್ಟೇ ಕಷ್ಟ ಬಂದರೂ ಜಗ್ಗುನ ಬಿಡಲ್ಲ

ವಿಜಯಲಕ್ಷ್ಮಿ ಸಿಂಗ್ ಅವರು ತಮ್ಮ ಪತ್ನಿ ಜೈ ಜಗದೀಶ್ ಬಗ್ಗೆ ಬಹಳ ಪ್ರೀತಿಯ ಮಾತುಗಳನ್ನ ಆಡಿದ್ದಾರೆ. ಜೈಗದೀಶ್ ಅವರನ್ನು ಮದುವೆಯಾದ ಸಂದರ್ಭದಲ್ಲಿ ವಿಜಯಲಕ್ಷ್ಮಿ ನನಗೆ ಎಷ್ಟೇ ಕಷ್ಟ ಬಂದರೂ ಸಹ ನಾನು ಜಗ್ಗನ ಬಿಡಲ್ಲ ಎಂದು ತಾಯಿಗೆ ಹೇಳಿ ಬಂದಿದ್ದರಂತೆ. ಅದೇ ರೀತಿ ಅವರಿಬ್ಬರೂ ಸಹ 32 ವರ್ಷಗಳ ಸುದೀರ್ಘ ಸಂಸಾರದ ಪಯಣವನ್ನ ನಡೆಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಇಂದಿಗೂ ಸಹ ನಾವಿಬ್ಬರು ಯಾವುದೇ ರೀತಿಯಲ್ಲಿ ಜಗಳವಾಡಿಲ್ಲ ಎಂದು ತಮ್ಮ ಸಂಸಾರದ ಗುಟ್ಟನ್ನ ಜೈ ಜಗದೀಶ್ ತಿಳಿಸಿದ್ದಾರೆ.

ಜೈ ಜಗದೀಶ್ ಬಗ್ಗೆ ಶಿವಣ್ಣ ಮೆಚ್ಚುಗೆ

ಜೈ ಜಗದೀಶ್ ಹಾಗೂ ತಮ್ಮ ಕುಟುಂಬದ ಬಾಂಧವ್ಯ ಯಾವ ರೀತಿ ಇತ್ತು ಎನ್ನುವುದನ್ನು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ನಮ್ಮ ಜೊತೆ ಹಾಗೂ ಅಪ್ಪು ಜೊತೆಗೆ ಜೈ ಜಗದೀಶ್ ಸಿನಿಮಾ ಸೆಟ್ನಲ್ಲಿ ಶೂಟಿಂಗ್ ಸಮಯದಲ್ಲಿ ಹರಟೆ ಹೊಡೆಯುತ್ತಿದ್ದರು. ಅದೆಲ್ಲವೂ ಸಹ ನನಗೆ ನೆನಪಾಗುತ್ತಿದೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜೈ ಜಗದೀಶ್ ದೊಡ್ಮನೆ ಅವರು ಯಾವತ್ತಿಗೂ ಸಹ ಎಲ್ಲರನ್ನೂ ಒಂದೇ ಸಮನಾಗಿ ನೋಡುತ್ತಿದ್ದರು. ಈಗಲೂ ಸಹ ದೊಡ್ಡ ಮನೆಯವರ ಜೊತೆ ನನ್ನ ಸಂಬಂಧ ಆಗಿಯೇ ಇದೆ. ಅವರು ಎಲ್ಲರನ್ನೂ ಸಹ ಒಟ್ಟಿಗೆ ಬೆಳೆಸಿದ್ದಾರೆ ಎಂದು ನೆನಪು ಮೆಲುಕು ಹಾಕಿದರು.

More from Filmibeat

English summary
Weekend with Ramesh: Jai Jagadish shares his childhood and film shooting memories. He also talk about Julie Lakshmi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X