ಚುನಾವಣೆಯಲ್ಲಿ ಪೂಜಾ ಗಾಂಧಿ ಕೆಟ್ಟದಾಗಿ ಸೋತಾಗ ರಮ್ಯಾ ಏನಂದಿದ್ರು? ಕನ್ನಡದಲ್ಲೇ ಪತ್ರ ಬರೆದ ಮಳೆ ಹುಡುಗಿ

ಕನ್ನಡಿಗರೇ ಆಗಿದ್ದರೂ ಕನ್ನಡ ಮಾತನಾಡಲು ಕೆಲವರು ಹಿಂದು ಮುಂದು ನೋಡುತ್ತಾರೆ. ಆದರೆ ಪಂಜಾಬಿ ಚೆಲುವೆ ಪೂಜಾ ಗಾಂಧಿ ಕನ್ನಡ ಕಲಿಯುತ್ತಿದ್ದಾರೆ. ಮಳೆ ಹುಡುಗಿ ಕನ್ನಡ ಪ್ರೀತಿಗೆ ಕನ್ನಡಿಗರು ಬಹುಪರಾಕ್ ಹೇಳುತ್ತಿದ್ದಾರೆ. ಕನ್ನಡ ಮಾತನಾಡುವುದು, ಹಾಡು ಹಾಡುವುದು ಮಾತ್ರವಲ್ಲ, ಕನ್ನಡ ಬರೆಯುವುದನ್ನು ಕೂಡ ಕಲಿತ್ತಿದ್ದಾರೆ. ಇದೀಗ ನಟ ರಮೇಶ್‌ ಅರವಿಂದ್ ಹಾಗೂ ನಟಿ ರಮ್ಯಾಗೆ ಕನ್ನಡದಲ್ಲೇ ಪತ್ರ ಬರೆದಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್-5 ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಭಾಗವಹಿಸುತ್ತಿದ್ದಾರೆ. ಈಗಾಗಲೇ ಎಪಿಸೋಡ್ ಶೂಟ್ ಆಗಿದ್ದು ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಪ್ರೋಮೊ ನೋಟಿ ನಟಿ ಪೂಜಾ ಗಾಂಧಿ ಪತ್ರ ಬರೆದಿದ್ದಾರೆ. ಶೋ ಬಗ್ಗೆ ರಮ್ಯಾ ಅವರ ಗುಣ, ರಮೇಶ್ ಅರವಿಂದ್ ನಿರೂಪಣೆ ಮೆಚ್ಚಿಕೊಂಡಿದ್ದಾರೆ. ಸದ್ಯ ಪೂಜಾ ಗಾಂಧಿ ತಮ್ಮ ಕೈಯಾರೆ ಬರೆದಿರುವ ಆ ಪತ್ರ ಸಖತ್ ವೈರಲ್ ಆಗ್ತಿದೆ.

Weekend With Ramesh: Pooja Gandhis Kannada Hand written Letter to Ramesh Aravind And Ramya

ವೀಕೆಂಡ್ ವಿಥ್ ರಮೇಶ್

"ರಮೇಶ್ ಸರ್, ನಿಮ್ಮ ಮತ್ತು ರಮ್ಯಾ ಮಧ್ಯೆ ನಡೆಯುವ ಮಾತಿನ ಜುಗಲ್‌ಬಂದಿ ನೋಡೋಕ್ಕೆ ಲಕ್ಷಾಂತರ ಕನ್ನಡಿಗರ ರೀತಿ ನಾನು ಕೂಡ ಕಾತುರದಿಂದ ಕಾಯ್ತಿದ್ದೀನಿ.

ರಮ್ಯಾ ಅದ್ಭುತ ವ್ಯಕ್ತಿ. ಆಕೆ ಸಖತ್ ಬೋಲ್ಡ್. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ನುಣುಚಿಕೊಳ್ಳುವ ಸ್ವಭಾವ ಅವರದಲ್ಲ. ನಂಗೆ ವೈಯಕ್ತಿಯವಾಗಿ ಆಕೆ ಯಾಕೆ ಇಷ್ಟ ಆಗ್ತಾರೆ ಅಂದರೆ ಚಿತ್ರರಂಗದ ಇತರ ನಟಿಯರ ಬಗ್ಗೆಯೂ ಅವರು ನಿಲುವು ತೆಗೆದುಕೊಳ್ಳುವ ಗುಣ ಅವರಲ್ಲಿದೆ. ಆಕೆಯಲ್ಲಿನ ಆ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ.

ನಂಗೆ ಈಗ್ಲೂ ತುಂಬಾ ಚೆನ್ನಾಗಿ ನೆನಪಿದೆ. ನಾನು ರಾಯಚೂರಿನ ಚುನಾವಣೆಯಲ್ಲಿ ಕೆಟ್ಟದ್ದಾಗ ಸೋತಾಗ, ಆಕೆ "ಪೂಜಾ ಗಾಂಧಿ ಒಳ್ಳೆ ಪ್ರಯತ್ನ" ಎಂದು ಹೇಳಿದ್ದರು. ರಮ್ಯಾ ನಿಮ್ಮ ಪ್ರೊಡ್ಷಕನ್ ಕಂಪೆನಿಗೆ ಶುಭವಾಗಲಿ. ನಿಮ್ಮ ಸಂಸ್ಥೆಯಿಂದ ರಾಷ್ಟ್ರಮಟ್ಟದ ಕನ್ನಡ ಸಿನಿಮಾಗಳು ಮೂಡಿಬರಲಿ." ಎಂದು ಪೂಜಾ ಗಾಂಧಿ ಬರೆದಿದ್ದಾರೆ.

Weekend With Ramesh: Pooja Gandhis Kannada Hand written Letter to Ramesh Aravind And Ramya

ಉತ್ತರ ಪ್ರದೇಶದಲ್ಲಿ ಹುಟ್ಟಿ ದೆಹಲಿಯಲ್ಲಿ ಬೆಳೆದ ಪೂಜಾ ಗಾಂಧಿ 'ಮುಂಗಾರು ಮಳೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ದೊಡ್ಡಮಟ್ಟದ ಸಕ್ಸಸ್ ಮಾತ್ರ ಸಿಗಲಿಲ್ಲ. ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಪೂಜಾ ಇಂದಿಗೂ 'ಮುಂಗಾರು ಮಳೆ' ನಂದಿನಿಯಾಗಿಯೇ ಉಳಿದುಬಿಟ್ಟಿದ್ದಾರೆ. ಚಿತ್ರರಂಗ ಮಾತ್ರವಲ್ಲದೇ ರಾಜಕೀಯ ರಂಗದಲ್ಲೂ ಆಕೆ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. 2012ರಲ್ಲಿ ಮಳೆ ಹುಡುಗಿ ಜೆಡಿಎಸ್ ಪಕ್ಷ ಸೇರಿದ್ದರು.

ಜೆಡಿಎಸ್‌ನಿಂದ ಬಿಟ್ಟು ಪೂಜಾ ಗಾಂಧಿ ಕೆಜೆಪಿ ಪಕ್ಷದಲ್ಲೂ ಗುರ್ತಿಸಿಕೊಂಡಿದ್ದರು. ಕೊನೆಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ 2013ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಮಳೆ ಹುಡುಗಿ ಹೀನಾಯವಾಗಿ ಸೋತಿದ್ದರು. ಇದೇ ವಿಚಾರವನ್ನು ಈಗ ಪತ್ರ ಬರೆದು ನೆನಪಿಸಿಕೊಂಡಿದ್ದಾರೆ. ಅಂದು ಸೋರತಾರ ರಮ್ಯಾ ಧೈರ್ಯ ತುಂಬಿದ್ದನ್ನು ನೆನೆಪಿಸಿಕೊಂಡಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ವೀಕ್ಷಿಸಲು ಕಾತುರರಾಗಿದ್ದಾರೆ.

Weekend With Ramesh: Pooja Gandhis Kannada Hand written Letter to Ramesh Aravind And Ramya

ಸದ್ಯ ವೀಕೆಂಡ್ ವಿಥ್ ರಮೇಶ್ ಸೀಸನ್-5ರ ಮೊದಲ ಎಪಿಸೋಡ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಶೋನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ನಟಿ ರಮ್ಯಾ ಮಾತನಾಡಿದ್ದಾರೆ. ಸಿನಿಮಾ- ರಾಜಕೀಯ ಜರ್ನಿಯನ್ನು ಮೆಲುಕು ಹಾಕಿದ್ದಾರೆ. ಅವರ ಆಪ್ತರು ಸರ್‌ಪ್ರೈಸ್ ಎಂಟ್ರಿ ಕೊಟ್ಟು ಶೋಗೆ ಮತ್ತಷ್ಟು ಮೆರಗು ತಂದಿದ್ದಾರೆ. ರಮ್ಯಾ ಅವರ ಕುರಿತು ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ರಮೇಶ್ ಅರವಿಂದ್ ಹೊರ ತೆಗೆಯುತ್ತಿದ್ದಾರೆ. ರಮ್ಯಾ ಅವರ ಬಾಲ್ಯ, ರಕ್ಷಿತಾ ಜೊತೆಗಿನ ಕಾಂಪಿಟೇಷನ್, ರಮ್ಯಾ- ರಕ್ಷಿತಾ ನಡುವಿನ ಕಿರಿಕ್‌ಗೆ ಕಾರಣ ಯಾರು? ಹೀಗೆ ಹತ್ತು ಹಲವು ಸಂಗತಿಗಳು ಅನಾವರಣವಾಗಲಿದೆ.

More from Filmibeat

English summary
Weekend With Ramesh: Pooja Gandhi's Kannada Hand written Letter to Ramesh Aravind And Ramya. Pooja Gandhi Says she is eagerly waiting for the Weekend With Ramesh- 5 Ramya's Episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X