ರಮೇಶ್ ಮುಂದೆ 'ಜೋಗಿ' ಪ್ರೇಮ್ ಬಿಚ್ಚಿಟ್ಟ ಕಣ್ಣೀರ ಕಥೆ

By Harshitha

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಜೋಗಿ' ಸಿನಿಮಾ ನೀವು ನೋಡಿರಬಹುದು. ಅದರಲ್ಲಿ ತಂದೆ ಮರಣದ ನಂತರ ತಾಯಿ ಅರುಂಧತಿ ನಾಗ್ ಬಳೆ ಒಡೆಯುವ ಸನ್ನಿವೇಶ ಹಾಗೂ ಅಮ್ಮನಿಗೆ ಚಿನ್ನದ ಬಳೆ ತರಲು ಪೇಟೆಗೆ ಬರುವ ಮುಗ್ಧ ಮಾದೇಶನ ಕಥೆ ನೋಡಿ ನೀವು ಕಣ್ಣೀರು ಹಾಕಿರ್ತೀರಾ.

ಅಸಲಿಗೆ, ಇದು ರೀಲ್ ಕಥೆ ಅಲ್ಲ. ನಿರ್ದೇಶಕ ಪ್ರೇಮ್ ನಿಜಬದುಕಿನಲ್ಲಿ ನಡೆದ ಘಟನೆ ಅನ್ನೋದು ನಿಮಗೆ ಗೊತ್ತಾ?

ಹೌದು, ನಿರ್ದೇಶಕ ಪ್ರೇಮ್ ತಂದೆ ತೀರಿಕೊಂಡಾಗ, ತಮ್ಮ ತಾಯಿಯ ಬಳೆ ಒಡೆಯುತ್ತಿರುವುದನ್ನ ನೋಡಲಾಗದೆ ಗಲಾಟೆ ಮಾಡಿದ್ರಂತೆ.

ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಿರ್ದೇಶಕ, ನಟ, ಗೀತ ಸಾಹಿತಿ ಮತ್ತು ಗಾಯಕರಾಗಿರುವ ಪ್ರೇಮ್, ತಮ್ಮ ಜೀವನದ ಮುಳ್ಳಿನ ಹಾದಿಯನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. [ವೀಕೆಂಡ್ ವಿಥ್ ರಮೇಶ್ ಶೋ ಮೊದಲ ಗೆಸ್ಟ್ ಪ್ರೇಮ್!]

ಜೀ ಕನ್ನಡದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪ್ರೇಮ್ ಮನದಾಳವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ನಿರ್ದೇಶಕ ಪ್ರೇಮ್ ಬಗ್ಗೆ.....

ನಿರ್ದೇಶಕ ಪ್ರೇಮ್ ಬಗ್ಗೆ.....

ಹುಟ್ಟಿದ ದಿನಾಂಕ - ಅಕ್ಟೋಬರ್ 22, 1976
ಹುಟ್ಟೂರು - ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಬೆಸಗರಹಳ್ಳಿ (ಚುಂಚೇಗೌಡರ ದೊಡ್ಡಿ)
ತಂದೆ - ತಾಯಿ - ಹೊಸಹಳ್ಳಿ ರಾಜಪ್ಪ ಮತ್ತು ಬೆಸಗರಹಳ್ಳಿ ಭಾಗ್ಯಮ್ಮ ರವರ ಮೊದಲನೇ ಪುತ್ರ
ನಿಜ ನಾಮ - ಕಿರಣ್ ಕುಮಾರ್
ಸಹೋದರ - ಅರುಣ್ ಕುಮಾರ್, ಸಹೋದರಿ - ಮಮತಾ
ಪತ್ನಿ - ರಕ್ಷಿತಾ
ಪುತ್ರ - ಸೂರ್ಯ

ಸಾಕಿ ಸಲುಹಿದ್ದು ದೊಡ್ಡಮ್ಮ

ಸಾಕಿ ಸಲುಹಿದ್ದು ದೊಡ್ಡಮ್ಮ

''ದೊಡ್ಡಮ್ಮ ನನ್ನ ಸಾಕಿದ್ದು. ತಂದೆ (ಸಬ್ ಇನ್ಸ್ ಪೆಕ್ಟರ್ - ಸಸ್ಪೆಂಡ್ ಆಗಿದ್ರು) ಕುಡ್ಕೊಂಡು ಬಂದು ತಾಯಿ ಮೇಲೆ ದೌರ್ಜನ್ಯ ಮಾಡ್ತಿದ್ರು. ನಾನು ಆ ಹಾದಿಯಲ್ಲಿ ಹೋಗ್ಬಾರ್ದು ಅಂತ ದೊಡ್ಡಮ್ಮ ಕರ್ಕೊಂಡು ಬಂದು ಸಾಕಿದರು'' - ಪ್ರೇಮ್

ಅಪ್ಪ ತೀರಿಕೊಂಡಾಗ ಹೋಗಲೇ ಇಲ್ಲ!

ಅಪ್ಪ ತೀರಿಕೊಂಡಾಗ ಹೋಗಲೇ ಇಲ್ಲ!

''ನಮ್ಮಪ್ಪ ಬಂದಿದ್ದಾಗ, 'ಅವರನ್ನ ಕಳ್ಸಿ ಆಚೆ' ಅಂದಿದ್ದೆ. ಆ ಮಟ್ಟಕ್ಕೆ ನನ್ನ ಮನಸ್ಸಲ್ಲಿ ಅವರ ಬಗ್ಗೆ ಬೇಜಾರಿತ್ತು. ನಮ್ಮಪ್ಪನ ಬಗ್ಗೆ ನಾನು ಅಷ್ಟು ಜಿದ್ದು ಸಾಧಿಸಿದ್ದೆ. ನಮ್ಮಮ್ಮನಿಗೆ ಹಿಂಸೆ ಕೊಡುವಾಗ ನಾನು ಆಗಲೇ ಹೇಳಿದ್ದೆ ನಮ್ಮಪ್ಪನಿಗೆ - ''ನಿನ್ನ ಚಿತೆಗೆ ನಾನು ಬೆಂಕಿ ಇಡಲ್ಲ'' ಅಂತ. ಅವರು ಸತ್ತಾಗ ನಾನು ಹೋಗ್ಲಿಲ್ಲ. ಬೆಂಕಿ ಹಾಕಲೇ ಇಲ್ಲ. ಕ್ಷಮಿಸಿ. ನನ್ನ ಕರ್ತವ್ಯ ನನ್ನ ತಮ್ಮ ಮಾಡಿದ'' - ಪ್ರೇಮ್

ಚಿನ್ನದ ಬಳೆ ಕಥೆ

ಚಿನ್ನದ ಬಳೆ ಕಥೆ

''ತಂದೆ ಸತ್ತಾಗ ತಾಯಿ ಅಳ್ತಾ ಕೂತಿದ್ರು. ಬಳೆ ಒಡೆಯುವಾಗ ಕೈಯಲ್ಲಿ ರಕ್ತ ಬರ್ತಿತ್ತು. ನಾನು ಹೋಗಿ ಒಡೆಯಬಾರದು, ಬೇಕಾದರೆ ಬಿಚ್ಚಿ ಅಂತ ಗಲಾಟೆ ಮಾಡಿದ್ದೆ. ಅವತ್ತು ಹೇಳಿದ್ದೆ ಅಮ್ಮನಿಗೆ ಚಿನ್ನದ ಬಳೆ ಕೊಡಿಸ್ತೀನಿ ಅಂತ. ಹೇಳಿದ ಹಾಗೆ ಕೊಡಿಸ್ದೆ'' - ಪ್ರೇಮ್

ಅಂಬರೀಶ್ ದೊಡ್ಡ ಅಭಿಮಾನಿ

ಅಂಬರೀಶ್ ದೊಡ್ಡ ಅಭಿಮಾನಿ

''ನಾನು ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿ, ಬೆಂಚ್ ಮೇಲೆ ರೆಬೆಲ್ ಸ್ಟಾರ್ ಅಂತ ಬರ್ಕೊಂಡಿದ್ದೆ. ಅಂಬರೀಶ್ ಕಿರಣ್ ಕುಮಾರ್ ಅಂತ ಎಲ್ಲಾ ಕಡೆ ಬರೀತಿದ್ದೆ. ಅವರ ಖದರ್, ಖಡಕ್ ಅಂದ್ರೆ ನನಗೆ ತುಂಬಾ ಇಷ್ಟ. ನಮಗೆ ಕನ್ನಡಿ ಅವರೇ'' - ಪ್ರೇಮ್

ಅಂಬರೀಶ್ ಭೇಟಿ ಆದ ಕ್ಷಣ

ಅಂಬರೀಶ್ ಭೇಟಿ ಆದ ಕ್ಷಣ

''ಎಸ್.ಎಸ್.ಎಲ್.ಸಿ ಎಕ್ಸಾಂ ಮುಗಿದ್ಮೇಲೆ ಬೆಂಗಳೂರಿಗೆ ಬಂದು ಅಂಬರೀಶ್ ಮನೆಗೆ ಅವರನ್ನ ಮೀಟ್ ಮಾಡ್ಬೇಕು ಅಂತ ಹೋಗಿದ್ದೆ. ಅಸಿಸ್ಟೆಂಟ್ ಡೈರೆಕ್ಟರ್ ಆಗ್ಬೇಕು ಅಂತ ಅವರನ್ನ ಕೇಳಿದೆ. ಮಂಡ್ಯದಲ್ಲಿ ಗದ್ದೆ ಇದೆ. ಹೋಗು ಅಲ್ಲೇ ಇರು ಅಂತ ಬೈದಿದ್ರು'' - ಪ್ರೇಮ್

ಭಯ ಪಟ್ಟು ಓಡಿ ಹೋಗಿದ್ದೆ

ಭಯ ಪಟ್ಟು ಓಡಿ ಹೋಗಿದ್ದೆ

''ನಿಷ್ಕರ್ಷ' ಸಿನಿಮಾ ಶೂಟಿಂಗ್ ಆಗ್ತಿತ್ತು. ಮೊದಲು ಕ್ಲಾಪ್ ಮಾಡೋಕೆ ಚಾನ್ಸ್ ಕೊಟ್ಟರು. ನನಗೆ ಭಯ ಆಗಿ ಕ್ಲಾಪ್ ಮಾಡ್ಲಿಲ್ಲ. ಡೈರೆಕ್ಟರ್ ಬೈದರು. ಭಯದಿಂದ ಮಂಡ್ಯಗೆ ಹೋಗ್ಬಿಟ್ಟೆ. ಅಲ್ಲಿ ಹುಡುಗರು ಕಿಂಡಲ್ ಮಾಡಿದರು. ಹುಡುಗ್ರು ಆಡಿಕೊಂಡರಲ್ಲ ಅಂತ ಪಿಯುಸಿ ನಂತರ ಡೈರೆಕ್ಟರ್ ಆಗಿ ಬರ್ತೀನಿ ಅಂತ ಹೊರಟು ಬಂದೆ'' - ಪ್ರೇಮ್

'ಪ್ರೇಮ್' ಆಗಿದ್ದು ಹೇಗೆ?

'ಪ್ರೇಮ್' ಆಗಿದ್ದು ಹೇಗೆ?

''ನನ್ನ ತಂದೆಯ ತಂಗಿ ಹೆಸರು ಪ್ರೇಮ. ಅವರಿಗೆ ನನ್ನ ಕಂಡ್ರೆ ತುಂಬಾ ಇಷ್ಟ. ನನ್ನ ತರಹ ಹೆಸರು ಇರ್ಬೇಕಿತ್ತು, ಕಿರಣ್ ಚೆನ್ನಾಗಿಲ್ಲ ಅಂತ ಹೇಳ್ತಿದ್ರು. ಅದಕ್ಕೆ ಪ್ರೇಮ್ ಅಂತ ಇಟ್ಕೊಂಡೆ'' - ಪ್ರೇಮ್

ಕಣ್ಣೀರಿಟ್ಟ ಕ್ಷಣ

ಕಣ್ಣೀರಿಟ್ಟ ಕ್ಷಣ

''ಕರಿಯಾ' ಸಿನಿಮಾ ಮಾಡುವ ಮೊದಲು ನಾಲ್ಕು ವರ್ಷ ಊರಿಗೆ ಹೋಗಿರ್ಲಿಲ್ಲ. 'ಕರಿಯಾ' ರಿಯರ್ ರೌಡಿಗಳನ್ನ ಹಾಕೊಂಡು ಸಿನಿಮಾ ಮಾಡಿದ್ದೆ. ಹಿಂದಿನ ದಿನ ಟಿಕೆಟ್ ಸೇಲ್ ಆಗಿತ್ತು. ನನ್ನ ಸಿನಿಮಾಗೆ ಇಂತಹ ಪ್ರತಿಕ್ರಿಯೆ ಸಿಕ್ತಿದ್ಯಾ ಅಂತ ಅಂದು ಇಡೀ ರಾತ್ರಿ ಅತ್ತಿದ್ದೆ'' - ಪ್ರೇಮ್

ಅಪ್ಪಾಜಿ ಕಣ್ಣೀರು ಹಾಕಿದರು

ಅಪ್ಪಾಜಿ ಕಣ್ಣೀರು ಹಾಕಿದರು

''ಜೋಗಿ' ನೋಡಿ ರಜನಿಕಾಂತ್, ಅಪ್ಪಾಜಿ ಕಣ್ಣೀರು ಹಾಕಿ 'ಜನರ ನಾಡಿ ಮಿಡಿತ ಗೊತ್ತಿದೆ ನಿನಗೆ' ಅಂತ ಹೇಳಿದರು'' - ಪ್ರೇಮ್

ಯಾವುದೇ ಕಾರಣಕ್ಕೂ ರೀಮೇಕ್ ಮಾಡಲ್ಲ!

ಯಾವುದೇ ಕಾರಣಕ್ಕೂ ರೀಮೇಕ್ ಮಾಡಲ್ಲ!

''ಜೋಗಿ' ಸಿನಿಮಾ ನೋಡಿದ ರಜನಿಕಾಂತ್ ನಾನು ಮಾಡ್ತೀನಿ ಅಂತ ಅಂದರು. ನನಗೆ ಜೀವ ಢಗ್ ಅಂತು. 'ಸೂಪರ್ ಸ್ಟಾರ್ ಅತ್ತರೆ ಜನ ನೋಡಲ್ಲ. ರೀಮೇಕ್ ಮಾಡೋಕೆ ಆಗಲ್ಲ ನನ್ನ ಕೈಲಿ. ನಿಮಗೆ ಹೇಳುವ ಯೋಗ್ಯತೆ ನನಗಿಲ್ಲ' ಅಂದಿದ್ದೆ. ಧನುಷ್ ಗೆ ಮಾಡು ಅಂದ್ರು. ಅದನ್ನ ಮತ್ತೆ ರೀಮೇಕ್ ಮಾಡಲ್ಲ ಅಂದುಬಿಟ್ಟೆ'' - ಪ್ರೇಮ್

More from Filmibeat

English summary
Kannada Director Prem's life story was revealed in Zee Kannada Channel's popular show Weekend With Ramesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X