twitter
    For Quick Alerts
    ALLOW NOTIFICATIONS  
    For Daily Alerts

    ಸೃಜನ್ ಲೋಕೇಶ್ ನಗುವಿನ ಹಿಂದೆ ಇರುವ ಕಣ್ಣೀರ ಕಹಾನಿ ಬಯಲು

    By Harshitha
    |

    ಸೃಜನ್ ಲೋಕೇಶ್ ನಿರೂಪಣೆ ಮಾಡುವ ಕಾರ್ಯಕ್ರಮಗಳು ಅಂದ್ರೆ ಹೊಟ್ಟೆ ತುಂಬಾ ನಗಬಹುದು. ಅವರ ಒನ್ ಲೈನ್ ಪಂಚ್ ಗಳು ನಿಮಗೆಲ್ಲಾ ಸಖತ್ ಮನರಂಜನೆ ನೀಡಿರಬಹುದು.

    ಇಂದು ನಿಮ್ಮನ್ನೆಲ್ಲಾ ನಕ್ಕು ನಲಿಸುವ ಸೃಜನ್ ಲೋಕೇಶ್ ನೀವಂದುಕೊಂಡ ಹಾಗೆ ತುಂಟ ವ್ಯಕ್ತಿ ಅಲ್ಲ. ತುಂಬಾ ಭಾವನಾತ್ಮಕ ವ್ಯಕ್ತಿ. ತಮ್ಮ ಮನದಾಳವನ್ನ ಯಾರೊಂದಿಗೂ ಹಂಚಿಕೊಳ್ಳದ ಸೃಜನ್ ಲೋಕೇಶ್ ಗೆ ಒಂಟಿತನ ಹೆಚ್ಚು ಖುಷಿ ಕೊಡುತ್ತೆ. [ಸಮಸ್ತ ಕುಟುಂಬಕ್ಕೆ ಸಮೃದ್ಧ ನಗು 'ಮಜಾ ಟಾಕೀಸ್' ]

    ಈ ವಿಚಾರ ಬಹಿರಂಗ ಆಗಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ಸೃಜನ್ ಲೋಕೇಶ್ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

    ಸೃಜನ್ ಲೋಕೇಶ್ ಕುರಿತು

    ಸೃಜನ್ ಲೋಕೇಶ್ ಕುರಿತು

    ನಿಜ ನಾಮ - ಎಂ.ಎಲ್.ಸೃಜನ್ (ಮಾದಲಾಪುರ ಲೋಕೇಶ್ ಸೃಜನ್)
    ಜನ್ಮ ದಿನಾಂಕ - 28 ಜೂನ್ 1980
    ಹುಟ್ಟಿದ್ದು - ಬಸವನಗುಡಿ, ಬೆಂಗಳೂರು
    ತಾತ - ಕನ್ನಡ ಚಲನ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಸುಬ್ಬಯ್ಯ ನಾಯ್ಡು
    ತಂದೆ - ಲೋಕೇಶ್, ತಾಯಿ - ಗಿರಿಜಾ ಲೋಕೇಶ್
    ಅಕ್ಕ - ಪೂಜಾ ಲೋಕೇಶ್
    ಪತ್ನಿ - ಗ್ರೀಷ್ಮ
    ಪುತ್ರ - ಸುಕೃತ್

    ಸೃಜನ್ ಲೋಕೇಶ್ ಬಗ್ಗೆ....

    ಸೃಜನ್ ಲೋಕೇಶ್ ಬಗ್ಗೆ....

    ಕಲಾವಿದರ ಕುಟುಂಬದಲ್ಲಿ ಜನಿಸಿದ ಸೃಜನ್ ಲೋಕೇಶ್, ಬಾಲ ನಟರಾಗಿ ಒಟ್ಟು 4 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟರಾಗಿ ಒಟ್ಟು 15 ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ಕನ್ನಡ ಧಾರಾವಾಹಿ ಹಾಗೂ 2 ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ 'ಮಜಾ ವಿತ್ ಸೃಜ' ಮತ್ತು 'ಮಜಾ ಟಾಕೀಸ್' ಕಾರ್ಯಕ್ರಮಗಳಿಂದ ಜನಪ್ರಿಯ.

    10 ಯಶಸ್ವಿ ಶೋಗಳು...

    10 ಯಶಸ್ವಿ ಶೋಗಳು...

    ಒಟ್ಟು 10 ಯಶಸ್ವಿ ಟಿವಿ ಶೋಗಳಲ್ಲಿ ಆಂಕರಿಂಗ್ ಮಾಡಿ, ಕರ್ನಾಟಕದ ಮನೆ ಮನಗಳಲ್ಲಿ ಸ್ಪೆಷಲ್ ವೆಲ್ ಕಮ್ ಗಿಟ್ಟಿಸಿಕೊಂಡಿರುವ ಸೃಜನ್ 2012-2013 ರಲ್ಲಿ 'ಮಾಧ್ಯಮ ಅವಾರ್ಡ್' ಹಾಗೂ 2012 ರಿಂದ ಇಲ್ಲಿಯವರೆಗೆ ಸತತವಾಗಿ ಎಲ್ಲಾ ವಾಹಿನಿಗಳಿಂದ 'ಬೆಸ್ಟ್ ಆಂಕರ್ ಅವಾರ್ಡ್' ಪಡೆದಿದ್ದಾರೆ.

    ಚಪ್ಪಾಳೆ ಇಲ್ಲದಿದ್ದರೆ ಸತ್ತ ಹಾಗೆ!

    ಚಪ್ಪಾಳೆ ಇಲ್ಲದಿದ್ದರೆ ಸತ್ತ ಹಾಗೆ!

    ''ಚಪ್ಪಾಳೆ ಹೃದಯ ಬಡಿತ ಇದ್ದ ಹಾಗೆ. ಯಾವುದೇ ಆಕ್ಟರ್ ಗೆ ಆಗಲಿ ಚಪ್ಪಾಳೆ ಬಿದ್ದಿಲ್ಲ ಅಂದ್ರೆ ಆರ್ಟಿಸ್ಟ್ ಸತ್ತ ಹಾಗೆ. ನನಗೆ ಗೊತ್ತಿರುವುದು ಒಂದೇ ಜನರಿಗೆ ಎಂಟರ್ನೇನ್ಮಂಟ್ ಕೊಡುವುದು. ಬೇರೇನು ಬರಲ್ಲ'' - ಸೃಜನ್ ಲೋಕೇಶ್

    ಸೃಜನ್ ಲೋಕೇಶ್ ಹುಟ್ಟಿದಾಗ...

    ಸೃಜನ್ ಲೋಕೇಶ್ ಹುಟ್ಟಿದಾಗ...

    ''ನನ್ನ ಮಗ ಹುಟ್ಟಿದ ದಿನ ನೆನಸಿಕೊಂಡರೆ ಇನ್ನೂ ನನಗೆ ಭಯ ಆಗುತ್ತೆ. ಯಾಕಂದ್ರೆ, 9 ತಿಂಗಳು 3 ವಾರ ಆಗಿತ್ತು, ಆದರೂ ಹುಟ್ಟಿರಲಿಲ್ಲ. ಡಾಕ್ಟರ್ ಹೇಳಿದರೂ, ಆಪರೇಷನ್ ಮಾಡೋಣ ಅಂತ. ಆಗಲೇ ನನಗೆ ಹೊಟ್ಟೆ ನೋವು ಶುರು ಆಗೋಯ್ತು'' - ಗಿರಿಜಾ ಲೋಕೇಶ್, ತಾಯಿ

    ಮಗು ನೋಡಿ ಭಯ

    ಮಗು ನೋಡಿ ಭಯ

    ''ಮಗು ಹುಟ್ತು. ಮಗು ಮುಖ ನೋಡಿದ ತಕ್ಷಣ ನಾನು ಕಿರುಚಿಕೊಂಡು ಬಿಟ್ಟೆ. ಯಾಕಂದ್ರೆ ಯಾವುದೋ ಬೇರೆ ಗ್ರಹದಿಂದ ಬಂದಿರುವ ಹಾಗೆ ಇದ್ದ. ಏನಪ್ಪಾ ಇಂತಹ ಮಗು ಹುಟ್ಟಿದೆ ಅಂದುಕೊಂಡೆ. ಆಮೇಲೆ ಹೋಗ್ತಾ ಹೋಗ್ತಾ ಸರಿ ಹೋದ'' - ಗಿರಿಜಾ ಲೋಕೇಶ್, ತಾಯಿ

    ಸುರಸುಂದರ...

    ಸುರಸುಂದರ...

    ''ನನ್ನ ಮಗ ಸುರಸುಂದರ ಆಗ. ಮಗುಗೆ ಕೂದಲು ತೆಗಿಸುವಾಗ ಕೃಷ್ಣನ ಕೊಂಡೆ ಹಾಕಿದ್ವಿ. ಅಂತಹ ಕೃಷ್ಣನನ್ನ ನಾನು ಜನ್ಮದಲ್ಲಿ ನೋಡೇ ಇಲ್ಲ. ಅಷ್ಟು ಸುಂದರ. ಎಷ್ಟು ಸಣ್ಣ ಇದ್ದ ಅಂದ್ರೆ, ಉಫ್ ಅಂದ್ರೆ ಹಾರಿ ಹೋಗ್ತಿದ್ದ. ಎಲ್ಲೂ ಊದಿನ ಕಡ್ಡಿ ಅಂತ ಕರೆಯುತ್ತಿದ್ದರು'' - ಗಿರಿಜಾ ಲೋಕೇಶ್, ತಾಯಿ

    ಸಾಧಕರ ಸೀಟಿನಲ್ಲಿ ಕೂರಲು 'ಅಮ್ಮ' ಅರ್ಹರು

    ಸಾಧಕರ ಸೀಟಿನಲ್ಲಿ ಕೂರಲು 'ಅಮ್ಮ' ಅರ್ಹರು

    ''ನನಗಿಂತ ನಮ್ಮ ಅಮ್ಮ, ಈ ಸೀಟ್ ನಲ್ಲಿ ಕೂರಲು ಅರ್ಹರು. 250ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ'' - ಸೃಜನ್ ಲೋಕೇಶ್

    ಓದಿನಲ್ಲಿ ಶಿಸ್ತು

    ಓದಿನಲ್ಲಿ ಶಿಸ್ತು

    ''ನಾನು ಸ್ಕೂಲ್ ನಲ್ಲಿದ್ದಾಗ ಮಿನಿಮಂ 10 ಗಂಟೆ ಓದುತ್ತಿದ್ದೆ'' - ಸೃಜನ್ ಲೋಕೇಶ್

    ಎಲ್ಲರು ಅಂದುಕೊಳ್ಳುವ ಹಾಗೆ ಇವನಿಲ್ಲ!

    ಎಲ್ಲರು ಅಂದುಕೊಳ್ಳುವ ಹಾಗೆ ಇವನಿಲ್ಲ!

    ''ಎಲ್ಲರೂ ಅಂದುಕೊಳ್ಳುತ್ತಾರೆ ಸೃಜನ್ ಎಲ್ಲರನ್ನೂ ನಗಿಸುತ್ತಾನೆ. ಅವನು ಸದಾ ನಗುತ್ತಿರುತ್ತಾನೆ ಅಂತ. ಆದ್ರೆ, ಅದಕ್ಕೆ ತದ್ವಿರುದ್ಧವಾಗಿ ಅವನು ಇರುವುದು. ಯಾವಾಗಲೂ ಏನಾದ್ರೂ ಯೋಚನೆ ಮಾಡುತ್ತಾ ಇರ್ತಾನೆ'' - ಪೂಜಾ ಲೋಕೇಶ್, ಅಕ್ಕ

    ಏಕಾಂಗಿ!

    ಏಕಾಂಗಿ!

    ''ನನಗೆ ಒಬ್ಬನೇ ಇರುವುದಕ್ಕೆ ತುಂಬಾ ಇಷ್ಟ. ಎಷ್ಟರಮಟ್ಟಿಗೆ ಅಂದ್ರೆ, ಎರಡ್ಮೂರು ದಿನ ನಾನು ರೂಮ್ ನಲ್ಲಿ ನಾನು ಒಬ್ಬನೇ ಇರ್ತೀನಿ'' - ಸೃಜನ್ ಲೋಕೇಶ್

    ತುಂಬಾ ಸೈಲೆಂಟ್

    ತುಂಬಾ ಸೈಲೆಂಟ್

    ''ಸ್ಟೇಜ್ ಮೇಲೆ ಬಂದಾಗ ಮಾತ್ರ ನಾನು ನಗಿಸ್ತೀನಿ. ಇಲ್ಲಾಂದ್ರೆ ನಾನು ತುಂಬಾ ಸೈಲೆಂಟ್. ತರ್ಲೆ ಮಾಡ್ತೀನಿ ಇಲ್ಲ ಅಂತಲ್ಲ. ಆದ್ರೆ, ತುಂಬಾ ಸೈಲೆಂಟ್. ತುಂಬಾ ಎಮೋಷನಲ್. ನನ್ನ ಎಮೋಷನ್ಸ್ ನ ಯಾರೊಂದಿಗೂ ಶೇರ್ ಮಾಡಲ್ಲ'' - ಸೃಜನ್ ಲೋಕೇಶ್

    ಬಾಲನಟನಾಗಿದ್ದು

    ಬಾಲನಟನಾಗಿದ್ದು

    ''ನನಗೆ ಆಕ್ಟಿಂಗ್ ಬಗ್ಗೆ ಐಡಿಯಾನೇ ಇಲ್ಲ. ಬಾಲನಟ ಆಗಿ ನಟಿಸುವುದಕ್ಕೆ ಅಪ್ಪ ಕರ್ಕೊಂಡು ಹೋಗಿದ್ದು. ನನಗೆ ಹಾವು ಅಂದ್ರೆ ತುಂಬಾ ಇಷ್ಟ. ಭಯ ಇರ್ಲಿಲ್ಲ. ಅದಕ್ಕೆ ಆ ಕ್ಯಾರೆಕ್ಟರ್ ಗೆ ನನ್ನ ನಟಿಸುವ ಹಾಗೆ ಮಾಡಿದ್ರು'' - ಸೃಜನ್ ಲೋಕೇಶ್

    ಧಾರಾವಾಹಿಗೆ ಕಾಲಿಟ್ಟಿದ್ದು...

    ಧಾರಾವಾಹಿಗೆ ಕಾಲಿಟ್ಟಿದ್ದು...

    ''ನಾನು 'ಕಾಕನಕೋಟೆ' ನಾಟಕ ಮಾಡುವಾಗ ಅದರಲ್ಲಿ ನನ್ನ ರಾಜನ ಪಾತ್ರ ನೋಡಿ ಸೀರಿಯಲ್ ನಲ್ಲಿ ನಟಿಸುವ ಅವಕಾಶ ಸಿಕ್ತು. ಧಾರಾವಾಹಿಯಲ್ಲಿ ನಟಿಸುವುದಕ್ಕೆ ಶುರು ಮಾಡಿದೆ'' - ಸೃಜನ್ ಲೋಕೇಶ್

    ಸಿನಿಮಾಗೆ ಕಾಲಿಟ್ಟಿದ್ದು...

    ಸಿನಿಮಾಗೆ ಕಾಲಿಟ್ಟಿದ್ದು...

    ''ಸಿರಿ ಸಂಪಿಗೆ' ಅಂತ ನಾಟಕ ಮಾಡಬೇಕಾದ್ರೆ, ನನಗೆ ಸಿನಿಮಾ ಆಫರ್ ಬಂತು'' - ಸೃಜನ್ ಲೋಕೇಶ್

    ಸಿನಿಮಾ ಬಗ್ಗೆ ಗೊತ್ತಿರ್ಲಿಲ್ಲ!

    ಸಿನಿಮಾ ಬಗ್ಗೆ ಗೊತ್ತಿರ್ಲಿಲ್ಲ!

    ''ನೀಲ ಮೇಘ ಶ್ಯಾಮ' ನನ್ನ ಮೊದಲ ಸಿನಿಮಾ. ಅನೇಕ ಕಾರಣಗಳಿಂದ ಸಿನಿಮಾ ಫ್ಲಾಪ್ ಆಯ್ತು. ಸಿನಿಮಾ ಅಷ್ಟು ದೊಡ್ಡದು ಅಂತ ನನಗೆ ಗೊತ್ತೇ ಇರ್ಲಿಲ್ಲ. ಆ ಚಿತ್ರ ಮಾಡುವಾಗ ನನಗೆ ಹುಡುಗಾಟಿಕೆ. ಆದ್ರೆ, ಸಿನಿಮಾ ಹಿಂದೆ ಇರುವ ಶ್ರಮ, ಜನರು ಹೇಗೆಲ್ಲಾ ರಿಸೀವ್ ಮಾಡ್ತಾರೆ ಅಂತೆಲ್ಲಾ ಗೊತ್ತಿರ್ಲಿಲ್ಲ'' - ಸೃಜನ್ ಲೋಕೇಶ್

    ಆರೇಳು ವರ್ಷ ಕೆಲಸ ಇರ್ಲಿಲ್ಲ!

    ಆರೇಳು ವರ್ಷ ಕೆಲಸ ಇರ್ಲಿಲ್ಲ!

    ''ನೀಲ ಮೇಘ ಶ್ಯಾಮ' ಸಿನಿಮಾ ಫ್ಲಾಪ್ ಆಗಿ, ನನಗೆ ಹೊಡೆತ ಬಿದ್ದ ಮೇಲೆ ಎಲ್ಲದರ ಪ್ರಾಮುಖ್ಯತೆ ನನಗೆ ಗೊತ್ತಾಗಿದ್ದು. ಚಿತ್ರ ಫ್ಲಾಪ್ ಆದ್ಮೇಲೆ 6-7 ವರ್ಷ ನನಗೆ ಕೆಲಸ ಇರ್ಲಿಲ್ಲ. ಯಾವುದೇ ಐಡೆಂಟಿಟಿ ಇರ್ಲಿಲ್ಲ'' - ಸೃಜನ್ ಲೋಕೇಶ್

    ಡ್ರಗ್ ಅಡಿಕ್ಟ್?

    ಡ್ರಗ್ ಅಡಿಕ್ಟ್?

    ''ಮೊದಲ ಸಿನಿಮಾ ಫ್ಲಾಪ್ ಆಯ್ತು ಅಂತ ನಾನು ಡ್ರಗ್ ಅಡಿಕ್ಟ್ ಆಗಿದ್ದೀನಿ ಅಂತೆಲ್ಲಾ ಸುದ್ದಿ ಹಬ್ಬಿಸಿ ಬಿಟ್ಟಿದ್ದರು. ನನಗೆ ತುಂಬಾ ಜನ ಕೇಳಿದ್ದರು. ನನಗೆ ಮುಜುಗರ ಆಗ್ತಿತ್ತು'' - ಸೃಜನ್ ಲೋಕೇಶ್

    ಎರಡು ವರ್ಷ ಸಖತ್ ಕಷ್ಟ

    ಎರಡು ವರ್ಷ ಸಖತ್ ಕಷ್ಟ

    ''I lost lot of confidence. ಎರಡು ವರ್ಷ ತುಂಬಾ ಕಷ್ಟ ಪಟ್ಟೆ'' - ಸೃಜನ್ ಲೋಕೇಶ್

    ಒಂದೇ ಬೇಜಾರು

    ಒಂದೇ ಬೇಜಾರು

    ''ತಂದೆ ನನ್ನ ಯಶಸ್ಸನ್ನ ನೋಡೇ ಇಲ್ಲ. ನನ್ನ ಫೇಲ್ಯೂರ್ ಮಾತ್ರ ಅವರು ನೋಡಿದ್ದಾರೆ. ಅದೊಂದೇ ನನಗೆ ಬೇಜಾರು. ಬದುಕು ಕಲ್ಪಿಸಿಕೊಟ್ಟಿದ್ದು ಅಪ್ಪ, ಬದುಕುವುದನ್ನ ಕಲಿಸಿಕೊಟ್ಟಿದ್ದು ಅಮ್ಮ'' - ಸೃಜನ್ ಲೋಕೇಶ್

    English summary
    Kannada Actor Srujan Lokesh's life story was revealed in Zee Kannada Channel's popular show Weekend With Ramesh.
    Monday, February 15, 2016, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X