'ವೀಕೆಂಡ್ ವಿತ್ ರಮೇಶ್' ನಲ್ಲಿ 'ರಂಗಾಯಣ' ರಘು ಜೀವನ ಚರಿತ್ರೆ

By Harshitha

''ತಲೆ ಬಾಚ್ಕೊಳಿ...ಪೌಡ್ರು ಹಾಕೊಳಿ...ದುನಿಯಾ ತುಂಬಾ ಕಾಸ್ಟ್ಲಿ'' ಅಂತ ಡೈಲಾಗ್ ಹೊಡೆದು ಕನ್ನಡ ಚಿತ್ರರಂಗದಲ್ಲಿ ಏಕ್ದಂ ಸ್ಟಾರ್ ಪಟ್ಟಕ್ಕೆ ಏರಿದ ಪೋಷಕ ನಟ ರಂಗಾಯಣ ರಘು.

10 ನೇ ಕ್ಲಾಸ್ ನಲ್ಲಿ ಡುಮ್ಕಿ ಹೊಡೆದು, ಊರಲ್ಲಿ ಕುರಿ ಮೇಯಿಸಿ, 'ರಂಗಾಯಣ'ದ ಮೂಲಕ ರಂಗಭೂಮಿ ಪ್ರವೇಶ ಮಾಡಿ ಇಂದು ಕನ್ನಡ ಚಿತ್ರರಂಗದ 'ದುಬಾರಿ ಪೋಷಕ ನಟ' ಪಟ್ಟ ಪಡೆದಿರುವ ರಂಗಾಯಣ ರಘು ರವರ ಬದುಕೇ ಒಂದು ರೋಚಕ ಕಥೆ. [ಡೈನಾಮಿಕ್ ಹೀರೋ ದೇವರಾಜ್ ರವರ ನಿಜ ಬದುಕಿನ ಕಷ್ಟದ ಕಥೆ]

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಂಗಾಯಣ ರಘು ರವರ ಜೀವನಚರಿತ್ರೆ ಅನಾವರಣವಾಯ್ತು. ರಂಗಾಯಣ ರಘು ರವರ ಮನದಾಳವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

ರಂಗಾಯಣ ರಘು ಕುರಿತು....

ರಂಗಾಯಣ ರಘು ಕುರಿತು....

ಜನ್ಮ ದಿನಾಂಕ - 1965, ಏಪ್ರಿಲ್ 17
ನಿಜ ನಾಮ - ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಅಲಿಯಾಸ್ ಕೆ.ಸಿ.ರಘುನಾಥ್ ಉರುಫ್ ರಂಗಾಯಣ ರಘು
ಊರು - ತುಮಕೂರು ಜಿಲ್ಲೆ ಪಾವಗಡ ತಾಲೂಕು ಕೊತ್ತೂರು
ತಂದೆ - ಚಿಕ್ಕರಂಗಯ್ಯ ತಾಯಿ - ವೀರಮ್ಮ
ಪತ್ನಿ - ಮಂಗಳ
ಮಗಳು - ಚುಕ್ಕಿ

ತಾಯಿ ಇಲ್ಲದ ತಬ್ಬಲಿ

ತಾಯಿ ಇಲ್ಲದ ತಬ್ಬಲಿ

''ನಾನು ಒಂದುವರೆ ವರ್ಷದ ಮಗು, ನನ್ನ ತಾಯಿ ತೀರಿಕೊಂಡಾಗ. ನಾನು ಒಂಬತ್ತನೇ ಮಗ. ಹತ್ತನೇ ಮಗು ಬಾಣಂತನದಲ್ಲಿ ತಾಯಿ ತೀರಿಕೊಂಡರು. ಅದಕ್ಕೆ ಅಮ್ಮನ ಹೆಸರನ್ನ ನನಗೆ ಅವರ ಸ್ನೇಹಿತೆ ಹಚ್ಚೆ ಹಾಕಿಸಿದರು'' - ರಂಗಾಯಣ ರಘು

ತಾಯಿ ಪ್ರೀತಿ ಮಿಸ್ ಮಾಡ್ಲಿಲ್ಲ

ತಾಯಿ ಪ್ರೀತಿ ಮಿಸ್ ಮಾಡ್ಲಿಲ್ಲ

''ನಮ್ಮದು ತುಂಬು ಕುಟುಂಬ. ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹೀಗಾಗಿ ನಮ್ಮ ತಾಯಿ ಪ್ರೀತಿಯನ್ನ ನಾನು ಮಿಸ್ ಮಾಡಿಕೊಳ್ಳಲೇ ಇಲ್ಲ'' - ರಂಗಾಯಣ ರಘು

ಊರೇ ಸ್ವರ್ಗ

ಊರೇ ಸ್ವರ್ಗ

''ನಾಲ್ಕನೇ ಕ್ಲಾಸ್ ವರೆಗೂ ಊರಲ್ಲೇ ಓದಿದ್ದು. ನನ್ನ ನೆಚ್ಚಿನ ಸ್ಥಳ ಅಂದ್ರೆ ಅದು ನನ್ನ ಊರು. ನಮ್ಮ ತಾತನ ಸಮಾಧಿ ಹತ್ರ ಹೋಗಿ ಬಂದ್ರೆ ಮನಸ್ಸಿಗೆ ಒಂಥರಾ ಸಮಾಧಾನ. ಊರು ಬಿಟ್ಟು ಬರಬೇಕಾದ್ರೆ ಅಳ್ತಿದ್ವಿ. ಅಷ್ಟು ಬೇಜಾರಾಗೋದು ನಮಗೆ'' - ರಂಗಾಯಣ ರಘು

ಇಂಗ್ಲೀಷ್ ಬರೋದೇ ಇಲ್ಲ!

ಇಂಗ್ಲೀಷ್ ಬರೋದೇ ಇಲ್ಲ!

''ನನಗೆ ಇಂಗ್ಲೀಷ್ ಬರೋದೇ ಇಲ್ಲ. ಬೆಂಗಳೂರಿಗೆ ಬಂದ್ಮೇಲೆ ಇಂಗ್ಲೀಷ್ ಮೀಡಿಯಂ. ಊರಲ್ಲಿ ಓದಿದ್ದು ಕನ್ನಡ ಮೀಡಿಯಂ. ಚೆನ್ನಾಗಿ ಬೈಸ್ಕೊಂಡಿದ್ದೀನಿ. ನಮ್ಮದೆಲ್ಲಾ ತರ್ಲೆ ಗ್ಯಾಂಗ್. ಇವತ್ತು ವಾಟ್ಸ್ ಆಪ್ ಗ್ರೂಪ್ ಮಾಡಿದ್ದಾರೆ '8th E ಪಂಟರ್' ಅಂತ'' - ರಂಗಾಯಣ ರಘು

ಜಯಪ್ರದ ಅಂದ್ರೆ ತುಂಬಾ ಇಷ್ಟ

ಜಯಪ್ರದ ಅಂದ್ರೆ ತುಂಬಾ ಇಷ್ಟ

''ನನಗೆ ನಟಿ ಜಯಪ್ರದ ಅಂದ್ರೆ ತುಂಬಾ ಇಷ್ಟ. ಹೀಗಾಗಿ ಅವರ ಎಲ್ಲಾ ಫೋಟೋಗಳನ್ನ ಕಲೆಕ್ಟ್ ಮಾಡ್ತಿದ್ದೆ'' - ರಂಗಾಯಣ ರಘು

10th ಫೇಲ್

10th ಫೇಲ್

''ನನಗೆ 8ನೇ ಕ್ಲಾಸ್ ನಿಂದಲೇ ನಾಟಕದ ಬಗ್ಗೆ ಆಸಕ್ತಿ. ಹೀಗಾಗಿ ನಾನು 10ನೇ ಕ್ಲಾಸ್ ಪಾಸ್ ಆಗಲೇ ಇಲ್ಲ. ಫೇಲ್ ಆದ್ಮೇಲೆ ಊರಿಗೆ ಹೋಗ್ಬಿಟ್ಟೆ. ಅಲ್ಲಿ ಜಮೀನು ಜಾಸ್ತಿ ಇತ್ತು. ಕುರಿ ಮೇಯಿಸಿಕೊಂಡು ಇದ್ದೆ. ನಂತರ ನ್ಯಾಷನಲ್ ಕಾಲೇಜ್ ಗೆ ಸೇರ್ಕೊಂಡೆ. ಅಲ್ಲಿ ಮತ್ತೆ Cultural Activities ಶುರುವಾಯ್ತು'' - ರಂಗಾಯಣ ರಘು

ರಾಜು ಕಂಬಾರರಿಗೆ ಥ್ಯಾಂಕ್ಸ್

ರಾಜು ಕಂಬಾರರಿಗೆ ಥ್ಯಾಂಕ್ಸ್

''ರಂಗಾಯಣ'ಗೆ ಎಂಟ್ರಿ ಆಗಲು ಒಂದು ಇಂಟರ್ವ್ಯೂ ಆಯ್ತು. ಅದರಲ್ಲಿ ನಾನು ಸೆಲೆಕ್ಟ್ ಆದೆ. ಅದಕ್ಕೆ ಕಾರಣ ಚಂದ್ರಶೇಖರ್ ಕಂಬಾರ ಅವರ ಪುತ್ರ ರಾಜು ಕಂಬಾರ'' - ರಂಗಾಯಣ ರಘು

ಅಪ್ಪನಿಗೆ ಲಾಯರ್ ಆಗ್ಬೇಕೆನ್ನುವ ಆಸೆ

ಅಪ್ಪನಿಗೆ ಲಾಯರ್ ಆಗ್ಬೇಕೆನ್ನುವ ಆಸೆ

''ನಮ್ಮ ಅಪ್ಪನಿಗೆ ನಾನು ಲಾಯರ್ ಆಗ್ಬೇಕು ಅಂತ ಆಸೆ. ನಮ್ಮ ಅಣ್ಣ ಲಾಯರ್ ಆದ. ಆದ್ರೆ ನನ್ನ ಕೈಯಲ್ಲಿ ಆಗ್ಲಿಲ್ಲ. 'ರಂಗಾಯಣ'ಗೆ ಹೋಗುವ ಮುನ್ನ ಅವರು ತೀರಿಕೊಂಡರು'' - ರಂಗಾಯಣ ರಘು

 'ರಂಗಾಯಣ'ದ ದಿನಗಳು

'ರಂಗಾಯಣ'ದ ದಿನಗಳು

''ರಂಗಾಯಣ'ಗೆ ಹೋದರೆ ಓದುವುದು ಇರಲ್ಲ. ಎಕ್ಸಾಂ ಇರಲ್ಲ ಅಂದುಕೊಂಡು ಹೋಗಿದ್ದೆ. ಆದ್ರೆ ಅಲ್ಲಿ ಹೋದ ಮೇಲೆ ಗೊತ್ತಾಗಿದ್ದು, ಜಾಸ್ತಿ ಓದುವುದಕ್ಕೆ ಇರುವುದು ಇಲ್ಲೇ ಅಂತ. ಕಥೆ, ಕಾದಂಬರಿ ಹೆಚ್ಚು ಓದ್ಬೇಕಿತ್ತು. ಅಲ್ಲಿ ಯೋಗ, ಮಾರ್ಷಲ್ ಆರ್ಟ್ಸ್ ಎಲ್ಲಾ ಕಲಿತೆ'' - ರಂಗಾಯಣ ರಘು

ಲವ್ ಸ್ಟೋರಿ...

ಲವ್ ಸ್ಟೋರಿ...

''1998ರಲ್ಲಿ ಮದುವೆ ಆಗಿದ್ದು. ನನ್ನ ಕಾಲಿಗೆ ಏಟಾದಾಗ ನನ್ನ ಜೊತೆ ಹೆಚ್ಚಾಗಿ ಇರ್ತಿದ್ದದ್ದು ಮಂಗಳ. ಒಂದು ದಿನ ನಾನೇ ಪ್ರಪೋಸ್ ಮಾಡ್ದೆ. ಆಮೇಲೆ ಮನೆಯಲ್ಲಿ ಒಪ್ಪಿಸುವ ಬಗ್ಗೆ ಮಾತುಕತೆ ಆಯ್ತು. ಎಲ್ಲರೂ ಒಪ್ಪಿದರು. ಮದುವೆ ಆಯ್ತು'' - ರಂಗಾಯಣ ರಘು

ಮೇಷ್ಟ್ರಿಗೆ ವಿಷ್ಯ ಗೊತ್ತಿತ್ತು

ಮೇಷ್ಟ್ರಿಗೆ ವಿಷ್ಯ ಗೊತ್ತಿತ್ತು

''ಬಿ.ವಿ.ಕಾರಂತರು ಒಮ್ಮೆ ಕೇಳಿದ್ರು, 'ನೀನು ರಘು ಕಣ್ಣು ನೋಡಿದ್ಯಾ' ಅಂತ. ನಾನು 'ನೋಡಿದ್ದೀನಿ' ಅಂದೆ. ಅವಾಗ ನನಗೆ ಗೊತ್ತಾಗಿದ್ದು ಮೇಷ್ಟ್ರಿಗೆ ಗೊತ್ತಾಗಿದೆ ಅಂತ. ಅವಾಗ ಸ್ವಲ್ಪ ಧೈರ್ಯ ಬಂತು'' - ಮಂಗಳ (ರಂಗಾಯಣ ರಘು ಪತ್ನಿ)

ಎಂ.ಎಸ್.ರಮೇಶ್ ಗೆ ಥ್ಯಾಂಕ್ಸ್!

ಎಂ.ಎಸ್.ರಮೇಶ್ ಗೆ ಥ್ಯಾಂಕ್ಸ್!

ಹಂಸಲೇಖ 'ಸುಗ್ಗಿ' ಅಂತ ಒಂದು ಸಿನಿಮಾ ಮಾಡಿದ್ರು. ಆ ಸಿನಿಮಾ ರಿಲೀಸ್ ಆಗ್ಲಿಲ್ಲ. ಆಮೇಲೆ 'ಧಮ್' ಸಿನಿಮಾಗೆ ಚಾನ್ಸ್ ಸಿಕ್ತು. ಅಲ್ಲಿಂದ ನನಗೆ ಬ್ರೇಕ್ ಸಿಕ್ತು. ಅದಕ್ಕೆ ನಾನು ಎಂ.ಎಸ್.ರಮೇಶ್ ಗೆ ಥ್ಯಾಂಕ್ಸ್ ಹೇಳ್ಬೇಕು. ಅಲ್ಲಿಂದ ಇವತ್ತು ಈ ಮಟ್ಟಕ್ಕೆ ಬೆಳೆದ್ದಿದ್ದೇನೆ.

More from Filmibeat

English summary
Kannada Actor Rangayana Raghu's life story was revealed in Zee Kannada Channel's popular show Weekend With Ramesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X