ಶೂನ್ಯದಿಂದ ಬಾನೆತ್ತರದ ಸಾಧನೆ ಮಾಡಿದ ಡಾ.ಬಿ.ಸರೋಜಾದೇವಿ.!

By Harshitha

ಚೆನ್ನಾಗಿ ಓದಿ ಶಿಕ್ಷಕಿ ಆಗಬೇಕು ಅಂತ ಕನಸು ಕಂಡಿದ್ದ ಬಿ.ಸರೋಜಾದೇವಿ, 'ಅಭಿನಯ ಸರಸ್ವತಿ' ಆಗ್ತೀನಿ ಅಂತ ಎಂದೂ ಅಂದುಕೊಂಡಿರಲಿಲ್ಲ.

'ಇದೊಂದೇ ಸಿನಿಮಾ, ಆಮೇಲೆ ನಟಿಸುವುದು ಬೇಡ...ಓದೋಣ' ಅಂತ ಒಂದೊಂದೇ ಸಿನಿಮಾ ಮಾಡುತ್ತಾ ಬಂದ ಬಿ.ಸರೋಜಾದೇವಿ ನೋಡ ನೋಡುತ್ತಲೇ ಲೇಡಿ ಸೂಪರ್ ಸ್ಟಾರ್ ಪಟ್ಟ ಪಡೆದರು.

ಕನ್ನಡದಲ್ಲಿ ಡಾ.ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ತೆಲುಗಿನಲ್ಲಿ ಎನ್.ಟಿ.ಆರ್, ತಮಿಳುನಾಡಿನಲ್ಲಿ ಎಂ.ಜಿ.ಆರ್...ಎಲ್ಲರಿಗೂ ನಾಯಕಿ ಆಗಿ ಚಿತ್ರರಂಗದಲ್ಲಿ ಮೆರೆದು ಸಾಲು ಸಾಲು ಪ್ರಶಸ್ತಿಗಳನ್ನ ಪಡೆದಿರುವ ಖ್ಯಾತಿ ಡಾ.ಬಿ.ಸರೋಜಾದೇವಿರದ್ದು.

ಡಾ.ಬಿ.ಸರೋಜಾದೇವಿ ಮಾಡಿರುವ ಸಾಧನೆ ಬಗ್ಗೆ ಒಂದು ಇಣುಕು ನೋಟ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

ಡಾ.ಬಿ.ಸರೋಜಾದೇವಿ ಕುರಿತು

ಡಾ.ಬಿ.ಸರೋಜಾದೇವಿ ಕುರಿತು

ನಿಜ ನಾಮ - ಬಿ.ಸರೋಜಾದೇವಿ
ಜನ್ಮದಿನ - ಜನವರಿ 7
ತಂದೆ - ದಿವಂಗತ ಭೈರಪ್ಪ, ತಾಯಿ - ದಿವಂಗತ ರುದ್ರಮ್ಮ
ಸಹೋದರಿಯರು - ಪಾರ್ವತಿ, ಕಮಲಾದೇವಿ, ಸಿದ್ಧಲಿಂಗಾಂಬಿಕ
ಪತಿ - ದಿವಂಗತ ಶ್ರೀ ಹರ್ಷ
ಮಕ್ಕಳು - ಭುವನೇಶ್ವರಿ, ಇಂದಿರಾ, ಗೌತಮ್ ರಾಮಚಂದ್ರ

161 ಚಿತ್ರಗಳಲ್ಲಿ ನಾಯಕಿ!

161 ಚಿತ್ರಗಳಲ್ಲಿ ನಾಯಕಿ!

ವರ್ಷದಲ್ಲಿ 10-13 ಚಿತ್ರಗಳಂತೆ, ಒಟ್ಟು 161 ಚಿತ್ರಗಳಲ್ಲಿ 'ನಾಯಕಿ' ಆಗಿ ಅಭಿನಯಿಸಿದ್ದಾರೆ ನಟಿ ಡಾ.ಬಿ.ಸರೋಜಾದೇವಿ.

ಚಿತ್ರರಂಗವನ್ನು ಆಳಿದ ನಟಿ

ಚಿತ್ರರಂಗವನ್ನು ಆಳಿದ ನಟಿ

30-40 ವರ್ಷಗಳ ಕಾಲ 'ಚತುರ್ಭಾಷಾ ನಟಿ' ಆಗಿ ಚಿತ್ರರಂಗವನ್ನು ಆಳಿದ್ದಾರೆ ನಟಿ ಡಾ.ಬಿ.ಸರೋಜಾದೇವಿ

ಕನ್ನಡ ಚಿತ್ರದಿಂದ ಪದಾರ್ಪಣೆ

ಕನ್ನಡ ಚಿತ್ರದಿಂದ ಪದಾರ್ಪಣೆ

1955 ರಲ್ಲಿ ತೆರೆಕಂಡ 'ಮಹಾಕವಿ ಕಾಳಿದಾಸ' ಚಿತ್ರದಿಂದ ನಾಯಕಿ ಆಗಿ ಬಿ.ಸರೋಜಾದೇವಿ ಸಿನಿ ಜೀವನಕ್ಕೆ ಪದಾರ್ಪಣೆ ಮಾಡಿದರು.

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ

ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ 200ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡದ ಹುಡುಗಿ ಅಂತ ತಮಿಳುನಾಡಿನಲ್ಲಿ ಖ್ಯಾತಿ!

ಕನ್ನಡದ ಹುಡುಗಿ ಅಂತ ತಮಿಳುನಾಡಿನಲ್ಲಿ ಖ್ಯಾತಿ!

ಕರ್ನಾಟಕದಲ್ಲಿ 'ಅಭಿನಯ ಸರಸ್ವತಿ', ತಮಿಳುನಾಡಿನಲ್ಲಿ 'ಕನ್ನಡತು ಪೈಂಗಿಳಿ' (ಕನ್ನಡದ ಅರಗಿಣಿ) ಅಂತಲೇ ಬಿ.ಸರೋಜಾದೇವಿ ಜನಪ್ರಿಯ.

ಪ್ರಶಸ್ತಿಗಳ ಪಟ್ಟಿ

ಪ್ರಶಸ್ತಿಗಳ ಪಟ್ಟಿ

ಜೀವಮಾನ ಸಾಧನೆಗೆ ಕರ್ನಾಟಕದಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.

ಬೇರೆ ರಾಜ್ಯಗಳಲ್ಲೂ ಅತ್ಯುನ್ನತ ಗೌರವ

ಬೇರೆ ರಾಜ್ಯಗಳಲ್ಲೂ ಅತ್ಯುನ್ನತ ಗೌರವ

ಆಂಧ್ರ ಪ್ರದೇಶದ ಪ್ರತಿಷ್ಟಿತ ಎನ್.ಟಿ.ಆರ್ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಎಂ.ಜಿ.ಆರ್ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಡಾಕ್ಟರೇಟ್ ಪದವಿ

ಡಾಕ್ಟರೇಟ್ ಪದವಿ

2006 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ ಡಾ.ಬಿ.ಸರೋಜಾದೇವಿ.

ಭಾರತದ ಅತ್ಯುನ್ನತ ಗೌರವ

ಭಾರತದ ಅತ್ಯುನ್ನತ ಗೌರವ

1969 ರಲ್ಲಿ ಪದ್ಮಶ್ರೀ ಪುರಸ್ಕಾರ, 1992 ಪದ್ಮಭೂಷಣ ಪುರಸ್ಕಾರ ಹಾಗೂ 2008 ರಲ್ಲಿ ಭಾರತ ಸರ್ಕಾರದಿಂದ ಜೀವಮಾನ ಶ್ರೇಷ್ಟ ಸಾಧನೆ ಪ್ರಶಸ್ತಿ ಪಡೆದಿದ್ದಾರೆ.

More from Filmibeat

English summary
Kannada Veteran Actress Dr.B.Saroja Devi's glorifying acting career was revealed in Zee Kannada Channel's popular show Weekend With Ramesh season 2. This article gives you an insight on Dr.B.Saroja Devi's Achievements.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X