twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?

    By Harshitha
    |

    ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿರುವ ಸಾಧಕರ ಜೀವನವನ್ನ ಅವರ ಮುಂದೆಯೇ ಅನಾವರಣಗೊಳಿಸುವ ವಿಶಿಷ್ಟ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'.

    ಈಗಾಗಲೇ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದಿಂದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ಅಂಬರೀಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಅವರೆಲ್ಲರ ಸಾಧನೆ ಮತ್ತು ಅದರ ಹಿಂದಿನ ಕಷ್ಟದ ಕಥೆಯನ್ನ ನೀವೆಲ್ಲಾ ನೋಡಿದ್ದೂ ಆಗಿದೆ. ['ಗಂಡಸ್ತನ ಇದ್ರೆ ಗಿಟಾರ್ ನುಡಿಸು' - ರಘು ದೀಕ್ಷಿತ್ ಬದುಕು ಬದಲಿಸಿದ ಚಾಲೆಂಜ್]

    ಅವರದ್ದೇ ಲಿಸ್ಟ್ ನಲ್ಲಿ ಈಗ ಲೇಟೆಸ್ಟ್ ಎಂಟ್ರಿ ಪಡೆದುಕೊಂಡವರು ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್. ಕನ್ನಡದಲ್ಲಿ ಆರು ಚಿತ್ರಗಳಿಗೆ ಸಂಗೀತ ನೀಡಿರುವ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ ಅಂತ ನೀವು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಅವರ ಸಾಧನೆಯ ಪಟ್ಟಿ.

    'ಕನ್ನಡದ ಇಂಟರ್ ನ್ಯಾಷನಲ್ ರಾಕ್ ಸ್ಟಾರ್' ಆಗುವ ಮೂಲಕ ವಿಶ್ವದಾದ್ಯಂತ ಕನ್ನಡ ಕೀರ್ತಿ ಪತಾಕೆ ಹಾರಿಸಿರುವ ರಘು ದೀಕ್ಷಿತ್ ಅವರ ಸಾಧನೆ ಕೇಳಿದರೆ ನೀವೂ ನಿಮ್ಮ ಬಾಯಿ ಮೇಲೆ ಬೆರಳಿಡುತ್ತೀರಾ.! ಮುಂದೆ ಓದಿ....

    ರಘು ದೀಕ್ಷಿತ್ ಕುರಿತು....

    ರಘು ದೀಕ್ಷಿತ್ ಕುರಿತು....

    ಪೂರ್ಣ ಹೆಸರು - ರಘುಪತಿ ದ್ವಾರಕನಾಥ್ ದೀಕ್ಷಿತ್
    ಜನ್ಮ ದಿನಾಂಕ - ನವೆಂಬರ್ 11, 1974
    ಜನ್ಮ ಸ್ಥಳ - ನಾಸಿಕ್, ಮಹಾರಾಷ್ಟ್ರ
    ತಂದೆ - ದಿವಂಗತ ಕೆ.ವಿ.ದ್ವಾರಕನಾಥ್, ತಾಯಿ - ಮಾಲಿನಿ
    ಸಹೋದರ - ವಾಸು ದೀಕ್ಷಿತ್
    ಪತ್ನಿ - ಮಯೂರಿ ಉಪಾಧ್ಯ

    ಸಂಗೀತ ಕ್ಷೇತ್ರದಲ್ಲಿ....

    ಸಂಗೀತ ಕ್ಷೇತ್ರದಲ್ಲಿ....

    ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ, ಹಾಡು ಬರಹಗಾರರಾಗಿ ಸಂಗೀತ ಕ್ಷೇತ್ರದಲ್ಲಿ ರಘು ದೀಕ್ಷಿತ್ ಜನಪ್ರಿಯ. [ರಘು ದೀಕ್ಷಿತ್ ಬಗ್ಗೆ ಶಾರುಖ್, ಪ್ರಿಯಾಂಕ ಛೋಪ್ರಾ ಹೇಳಿದ್ದೇನು ಗೊತ್ತೇ?]

    ಭರತನಾಟ್ಯ ಕಲಾವಿದ

    ಭರತನಾಟ್ಯ ಕಲಾವಿದ

    ಎಷ್ಟೋ ಜನರಿಗೆ ಗೊತ್ತಿಲ್ಲದ ವಿಷಯ ಅಂದ್ರೆ, ಗಾಯಕರಾಗುವ ಮುನ್ನ ರಘು ದೀಕ್ಷಿತ್ ಡ್ಯಾನ್ಸರ್ ಆಗಿದ್ದರು. ಭರತನಾಟ್ಯದಲ್ಲಿ ವಿದ್ವತ್ ಪಡೆದಿರುವ ಪ್ರತಿಭಾವಂತ ಕಲಾವಿದ ರಘು ದೀಕ್ಷಿತ್.

    ಗೋಲ್ಡ್ ಮೆಡಲಿಸ್ಟ್

    ಗೋಲ್ಡ್ ಮೆಡಲಿಸ್ಟ್

    ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಪದವಿ ಪಡೆದಿರುವ ರಘು ದೀಕ್ಷಿತ್ 'ಮೈಕ್ರೋ ಬೈಯಾಲಜಿ' ವಿಷಯದಲ್ಲಿ ಗೋಲ್ಡ್ ಮೆಡಲಿಸ್ಟ್.

    ಫಸ್ಟ್ Rank ಸ್ಟೂಡೆಂಟ್

    ಫಸ್ಟ್ Rank ಸ್ಟೂಡೆಂಟ್

    ಮೊದಲನೇ ಕ್ಲಾಸ್ ನಿಂದ ಎಂ.ಎಸ್ಸಿ ವರೆಗೂ ರಘು ದೀಕ್ಷಿತ್ ಫಸ್ಟ್ Rank ಸ್ಟೂಡೆಂಟ್ ಅಂದ್ರೆ ನೀವು ನಂಬಲೇಬೇಕು.

    ಸಂಗೀತ ನಿರ್ದೇಶನ

    ಸಂಗೀತ ನಿರ್ದೇಶನ

    ಆರು ಕನ್ನಡ ಸಿನಿಮಾಗಳಿಗೆ, ಐದು ಹಿಂದಿ ಸಿನಿಮಾಗಳಿಗೆ, ಎರಡು ತಮಿಳು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ ರಘು ದೀಕ್ಷಿತ್.

    ವಿಶ್ವದಾದ್ಯಂತ ಖ್ಯಾತಿ

    ವಿಶ್ವದಾದ್ಯಂತ ಖ್ಯಾತಿ

    Contemporary Folk Form ಮೂಲಕ ಜಗತ್ತಿನಾದ್ಯಂತ ಖ್ಯಾತಿಗಳಿಸಿದ್ದಾರೆ ರಘು ದೀಕ್ಷಿತ್.

    1500 ಕ್ಕೂ Concerts

    1500 ಕ್ಕೂ Concerts

    1998 ರಿಂದ ಇಂದಿನವರೆಗೂ USA, UK, ಕೊರಿಯಾ, ಜಪಾನ್, ಹಾಂಗ್ ಕಾಂಗ್ ಸೇರಿದಂತೆ ವಿಶ್ವದಾದ್ಯಂತ 25 ಕ್ಕೂ ಹೆಚ್ಚು ದೇಶಗಳಲ್ಲಿ ಸತತವಾಗಿ 1500 ಕ್ಕೂ ಹೆಚ್ಚು ಕಾನ್ಸರ್ಟ್ ನೀಡಿರುವ ಖ್ಯಾತಿ ರಘು ದೀಕ್ಷಿತ್ ರವರದ್ದು.

    UK ಕೊಟ್ಟ ಗೌರವ

    UK ಕೊಟ್ಟ ಗೌರವ

    United Kingdom ನ Song Line Music Awards ನಲ್ಲಿ Best New comer ಪ್ರಶಸ್ತಿ, UK Asian Awards ನಲ್ಲಿ Best Alternative Act ಪ್ರಶಸ್ತಿ ಹಾಗೂ Best Live Performer, Best Folk Album ಪ್ರಶಸ್ತಿ ಪಡೆದಿದ್ದಾರೆ ರಘು ದೀಕ್ಷಿತ್.

    Glastonbury Festival ನಲ್ಲಿ ಭಾಗಿ

    Glastonbury Festival ನಲ್ಲಿ ಭಾಗಿ

    ಜಗತ್ತಿನ ಪ್ರತಿಷ್ಠಿತ ಮ್ಯೂಸಿಕಲ್ ಫೆಸ್ಟಿವಲ್ ಆದ Glastonbury Festival ನಲ್ಲಿ ರಘು ದೀಕ್ಷಿತ್ ಪರ್ಫಾಮ್ ಮಾಡಿದ್ದಾರೆ.

    ಇಂಗ್ಲೆಂಡ್ ರಾಣಿ ಮುಂದೆ ರಘು ದೀಕ್ಷಿತ್ ಗಾಯನ

    ಇಂಗ್ಲೆಂಡ್ ರಾಣಿ ಮುಂದೆ ರಘು ದೀಕ್ಷಿತ್ ಗಾಯನ

    ಇಂಗ್ಲೆಂಡ್ ರಾಣಿ ಎಲಿಜಿಬೆತ್ 2 ಮುಂದೆ ಪರ್ಫಾಮ್ ಮಾಡಿರುವ ಕೆಲವೇ ಕಲಾವಿದರಲ್ಲಿ ರಘು ದೀಕ್ಷಿತ್ ಕೂಡ ಒಬ್ಬರು.

    ಕನ್ನಡ ಡಿಂಡಿಮ

    ಕನ್ನಡ ಡಿಂಡಿಮ

    ರಾಷ್ಟ್ರೀಯ ವಾಹಿನಿಗಳ ಪ್ರತಿಷ್ಠಿತ ಶೋಗಳಲ್ಲಿ ಕನ್ನಡ ಹಾಡುಗಳನ್ನ ಪರ್ಫಾಮ್ ಮಾಡಿರುವ ಹೆಮ್ಮೆಯ ಕನ್ನಡಿಗ ರಘು ದೀಕ್ಷಿತ್

    ನಂಬರ್ 1

    ನಂಬರ್ 1

    ಪ್ರಸ್ತುತ ಭಾರತದ Independent Music ನಲ್ಲಿ one of the leading performers ಅಂದ್ರೆ ರಘು ದೀಕ್ಷಿತ್. ಇವರ ಹಾಡುಗಳು 7 ಬಾರಿ itunes world chart ನಲ್ಲಿ ನಂಬರ್ 1 ಸ್ಥಾನ ಪಡೆದಿದೆ.

    English summary
    Bharatanatyam Dancer turned Music Director, Singer Raghu Dixit has received many awards in his Singing Career. This article gives you an insight on Raghu Dixit's Achievements
    Monday, March 21, 2016, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X