twitter
    For Quick Alerts
    ALLOW NOTIFICATIONS  
    For Daily Alerts

    ಆತ್ಮಹತ್ಯೆ ಮಾಡಿಕೊಳ್ಳಲು ಸಾಧು ಕೋಕಿಲ ನಿರ್ಧರಿಸಿದ್ದು ಯಾಕೆ?

    By Harshitha
    |

    23 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ, ನಿರ್ಮಾಪಕನಾಗಿ, ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ, ನಿರ್ದೇಶಕನಾಗಿ ಸೇವೆ ಸಲ್ಲಿಸಿರುವ ಅಪರೂಪದ ಪ್ರತಿಭೆ ಸಾಧು ಕೋಕಿಲ ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ರಂತೆ.

    ಕೆಲಸ ಕೊಟ್ಟ ಯಜಮಾನರಿಂದ ಬೈಗುಳ ಕೇಳಿ ಮನನೊಂದ ಸಾಧು ಕೋಕಿಲ ಹಲಸೂರು ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ರಂತೆ! [ವೀಕೆಂಡ್ ನಲ್ಲಿ ಬಹಿರಂಗವಾದ ಸಾಧು ಕೋಕಿಲ ನಿಜ ಬದುಕಿನ ಕಷ್ಟ-ನಷ್ಟ]

    ತಮ್ಮ ಬದುಕ್ಕಲ್ಲಿ ನಡೆದ ಒಂದು ಕಹಿ ಘಟನೆಯನ್ನ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಬಹಿರಂಗ ಪಡಿಸಿದರು. ಅದನ್ನೆಲ್ಲಾ ಸಾಧು ಕೋಕಿಲ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

    ಊಟಕ್ಕೆ ದುಡ್ಡು ಇಲ್ಲದೇ ಇದ್ದಾಗ...

    ಊಟಕ್ಕೆ ದುಡ್ಡು ಇಲ್ಲದೇ ಇದ್ದಾಗ...

    ''ಕೆಂಪಾಂಬುದಿ ಕೆರೆ ಅಕ್ಕಪಕ್ಕನೇ ನಾವು ಬೆಳೆದದ್ದು. ಅಲ್ಲಿನ ಛತ್ರದಲ್ಲಿ ನಾವು ತುಂಬಾ ಆಕ್ಟೀವ್ ಆಗಿ ಇರ್ತಿದ್ವಿ. ಮದುವೆ ಇದ್ದಾಗ ಆರ್ಕೇಸ್ಟ್ರಾ ಮಾಡ್ತಿದ್ವಿ. ಮದುವೆ ಮನೆಗೆ ಹೋಗಿ ಗಂಭೀರವಾಗಿ ಕೂತ್ಕೊಂಡು ತಿನ್ಕೊಂಡು ಬಂದುಬಿಡ್ತಿದ್ವಿ. ಆಷಾಡದಲ್ಲಿ ಏನೂ ಇಲ್ಲ. ಕೈಯಲ್ಲಿ ಕಾಸು ಇಲ್ಲದೇ ಇದ್ದಾಗ, ಕಷ್ಟ ಆಗೋದು'' - ಲಯೇಂದ್ರ, ಸಾಧು ಕೋಕಿಲ ಸಹೋದರ [ನಗುವಿನ ಅರಸನ ನೋವಿನ ಕಥೆ ಈ ವೀಕೆಂಡ್ ನಲ್ಲಿ ಅನಾವರಣ]

    ಅಸಹ್ಯ ಪಟ್ಟುಕೊಳ್ಳುತ್ತೀರಾ....

    ಅಸಹ್ಯ ಪಟ್ಟುಕೊಳ್ಳುತ್ತೀರಾ....

    ''ನಾವು ಊಟ ಇಲ್ಲದೇ ಇದ್ದಾಗ ಏನೇನೋ ತಿಂದು ಬಿಟ್ಟಿದ್ದೀವಿ. ಏನೇನು ಅಂತ ಹೇಳಿದ್ರೆ ನೀವೇ ಅಸಹ್ಯ ಪಟ್ಟುಕೊಳ್ಳುತ್ತೀರಾ.'' - ಸಾಧು ಕೋಕಿಲ

    ರೋಡ್ ನಲ್ಲಿ ಬಿದ್ದಿರೋದು, ಬಿಸಾಕಿರೋದು...

    ರೋಡ್ ನಲ್ಲಿ ಬಿದ್ದಿರೋದು, ಬಿಸಾಕಿರೋದು...

    ''ರೋಡ್ ನಲ್ಲಿ ಬಿದ್ದಿರೋದು, ಮದುವೆ ಮನೆಯಿಂದ ಬಿಸಾಕಿರುವ ಊಟ ಎಲ್ಲಾ ತಿಂದು ಬಿಟ್ಟಿದ್ದೀವಿ. ಯಾರ್ಯಾರೋ ತಿಂದು ಬಿಟ್ಟಿರೋದೆಲ್ಲಾ ನಾವು ತಿಂದಿದ್ದೀವಿ'' - ಸಾಧು ಕೋಕಿಲ

    ಇಳಯರಾಜ ತರಹ ಆಗ್ಬೇಕು ಅನ್ನೋ ಆಸೆ

    ಇಳಯರಾಜ ತರಹ ಆಗ್ಬೇಕು ಅನ್ನೋ ಆಸೆ

    ''ಇಳಯರಾಜ ಸಂಗೀತ ಕೇಳಿ ನಾನು ಹಾಗೆ ನುಡಿಸಬೇಕು ಅಂತ ತುಂಬಾ ಅಂದುಕೊಳ್ಳುತ್ತಿದ್ದೆ. ಅವರ ನೋಟ್ಸ್ ಎಲ್ಲಾ ನಾನು ಬರೆದು ಇಟ್ಟುಕೊಳ್ತಿದ್ದೆ. ಅವರ ಹಾಡುಗಳೆಂದ್ರೆ ನನಗೆ ತುಂಬಾ ಇಷ್ಟ'' - ಸಾಧು ಕೋಕಿಲ

    ನನಗೆ ಸಿಕ್ಕ ಕೆಲಸ

    ನನಗೆ ಸಿಕ್ಕ ಕೆಲಸ

    ''ಮೋಹನ್ ಅವರ ಹತ್ತಿರ ನಾನು Instruments ಫಿಟ್ ಮಾಡುವ ಕೆಲಸದಲ್ಲಿ ಇದ್ದೆ. ಒಂದು ಪ್ರೋಗ್ರಾಂನಲ್ಲಿ ಎಲ್ಲಾ ವಾದ್ಯಗಳನ್ನ ಫಿಟ್ ಮಾಡಿ, ನಂತರ ಅದನ್ನ ವಾಪಸ್ ತಂದು ಇಡುವುದಕ್ಕೆ ಹತ್ತು ರೂಪಾಯಿ ಕೊಡೋರು. ರಾತ್ರಿ 1.45ನಲ್ಲಿ ನಮಗೆ ಊಟ. ಅದು ಉಳಿದರೆ. ಇಲ್ಲಾಂದ್ರೆ, ಅದೇ 10 ರೂಪಾಯಿಯಲ್ಲಿ ಬೆಳಗ್ಗೆ ಕಾಕಾ ಅಂಗಡಿಯಲ್ಲಿ ಬನ್ ತಗೊಂಡು ತಿನ್ನೋದು. ಅದೇ ಊಟ'' - ಸಾಧು ಕೋಕಿಲ

    ಆತ್ಮಹತ್ಯೆಗೆ ನಿರ್ಧಾರ ಮಾಡಿದ ದಿನ...

    ಆತ್ಮಹತ್ಯೆಗೆ ನಿರ್ಧಾರ ಮಾಡಿದ ದಿನ...

    ''ಮೋಹನ್ ಅವರು ತುಂಬಾ ಸ್ಟ್ರಿಕ್ಟ್ ಪರ್ಸನ್. ಒಂದು ದಿನ ನಾನು ತಾಳ ಏನೋ ತೆಗೆದು ಹೊರಗೆ ಇಟ್ಟಿರ್ಲಿಲ್ಲ. ಅವರಿಗೆ ತುಂಬಾ ಸಿಟ್ಟು ಬಂತು. ಅವತ್ತು ತುಂಬಾ ಕೆಟ್ಟ ಶಬ್ಧದಲ್ಲಿ ನನ್ನ ಬೈದು ಬಿಟ್ಟಿದ್ರು. 'ಕಲಾವಿದನ ತರಹ ಮಾತನಾಡಬೇಡ. ನೀನು ನಮ್ಮ ಆರ್ಕೇಸ್ಟ್ರಾದಲ್ಲಿ ಕ್ಲೀನರ್ ಅಷ್ಟೆ' ಅಂತ ಬೈದಿದ್ರು. ನನಗೆ ಅದು ತುಂಬಾ ಹರ್ಟ್ ಆಗೋಯ್ತು'' - ಸಾಧು ಕೋಕಿಲ

    ಬರೀ ಮೈಯಲ್ಲಿ....

    ಬರೀ ಮೈಯಲ್ಲಿ....

    ''ಆಗಿನ್ನೂ ಚಿಕ್ಕ ಹುಡುಗ. ಬರೋ 10 ರೂಪಾಯಿ ಪೇಮೆಂಟ್ ನಲ್ಲಿ 200 ರೂಪಾಯಿ ಹಿಡ್ಕೊಂಡು ಒಂದು ಶರ್ಟ್ ಕೊಟ್ಟಿದ್ದರು. ಬೆಳಗ್ಗೆ ಅಷ್ಟೇ 200 ರೂಪಾಯಿ ಹಿಡ್ಕೊಂಡಿದ್ದರು. ಅದರಲ್ಲಿ ಬೈದಿದ್ದು ಬೇರೆ. ನಾನು ನಮ್ಮ ಅಣ್ಣನ ಹತ್ರ ಹೋಗಿ, 'ನಾನಿಲ್ಲಿ ಇರಲ್ಲ. ನಾನು ಹೋಗ್ತಾಯಿದ್ದೀನಿ. ಎಲ್ಲಿಗೆ ಹೋಗ್ತೀನಿ, ಏನ್ ಮಾಡ್ತೀನಿ ಗೊತ್ತಿಲ್ಲ' ಅಂತ ಅವರು ಕೊಟ್ಟಿದ್ದ ಶರ್ಟ್ ನ ಬಿಸಾಕಿ ಬರೀ ಮೈಯಲ್ಲಿ ನಾನು ಮೋಹನ್ ಅವರ ಮನೆ ಶಾಂತಿನಗರದವರೆಗೂ ನಡೆದುಕೊಂಡು ಹೋದೆ. ಅವರ ಹೆಂಡತಿ ತುಂಬಾ ಒಳ್ಳೆಯವರು. ಅವರ ಬಳಿ ಎಲ್ಲಾ ಹೇಳಿದ್ಮೇಲೆ 20 ರೂಪಾಯಿ ಕೊಟ್ಟರು'' - ಸಾಧು ಕೋಕಿಲ

    ಹಲಸೂರು ಕೆರೆ ಕಡೆ

    ಹಲಸೂರು ಕೆರೆ ಕಡೆ

    ''ಅಲ್ಲಿಂದ ನಾನು ಸೈಕಲ್ ತೆಗೆದುಕೊಂಡು. ಸೀದಾ ಹಲಸೂರು ಕೆರೆ ಕಡೆಗೆ ಹೋದೆ. ಆಗ ನಾನಗಿನ್ನೂ 14 ವರ್ಷ ಇರಬೇಕು. ಸಾಯೋಣ. ಈ ಬದುಕು ಸಾಕು ಅಂತ ಹಲಸೂರು ಕೆರೆ ಕಡೆಗೆ ಹೋಗ್ತಿದ್ದಾಗ, ಎಂ.ಜಿ ರೋಡ್ ನಲ್ಲಿ ಬ್ಲೂ ಮೂನ್ ಥಿಯೇಟರ್ ಇತ್ತು. ಅಲ್ಲಿ 'ಸ್ಟಿಚ್ ಇನ್ ಟೈಮ್' ಅಂತ ಸಿನಿಮಾ ಹಾಕಿದ್ರು. ಹೇಗಿದ್ದರೂ 20 ರೂಪಾಯಿ ಇದೆ. ಸಾಯೋಕೂ ಮುಂಚೆ ಪಿಕ್ಚರ್ ನೋಡಿ ಆಮೇಲೆ ಸಾಯೋಣ ಅಂತ ಸಿನಿಮಾ ನೋಡೋಕೆ ಹೋದೆ'' - ಸಾಧು ಕೋಕಿಲ

    ಬದುಕು ಬದಲಿಸಿದ ಸಿನಿಮಾ!

    ಬದುಕು ಬದಲಿಸಿದ ಸಿನಿಮಾ!

    ''ಆ ಸಿನಿಮಾದಲ್ಲಿ ಶುರುವಿನಿಂದ ಎಂಡಿಂಗ್ ವರೆಗೂ ನಗು, ನಗು, ನಗು. ಸಖತ್ ಕಾಮಿಡಿ ಮೂವಿ. ಸಿನಿಮಾ ನೋಡ್ತಾ ನೋಡ್ತಾ, ನನಗೆ ಅಲ್ಲಿವರೆಗೂ ಮನಸ್ಸಲ್ಲಿ ಇದ್ದ ನೋವೆಲ್ಲಾ ಮರೆತು ಹೋಯ್ತು. ಆ ಸಿನಿಮಾ ಇಂದ ನನ್ನ ಲೈಫ್ ಚೇಂಜ್ ಆಗಿದ್ದು. ನಾನು ದೊಡ್ಡ ಮ್ಯೂಸಿಶಿಯನ್ ಆಗ್ತೀನಿ ಅಂತ ಡಿಸೈಡ್ ಮಾಡಿದ್ದೇ ಅವತ್ತು'' - ಸಾಧು ಕೋಕಿಲ

    ಬದುಕು ಬದಲಾಗಿದ್ದು!

    ಬದುಕು ಬದಲಾಗಿದ್ದು!

    ''ನಂತರ ಜೇಮ್ಸ್ ಮಾಸ್ಟರ್ ಹತ್ರ ಹೋಗಿ ಸೇರಿಕೊಂಡೆ. ಅವರು ನನಗೆ ಮೊದಲು ಹಾಕಿಕೊಳ್ಳುವುದಕ್ಕೆ ಶರ್ಟ್ ಕೊಟ್ಟರು. ನಾನು ಎಲ್ಲಾ ವಾದ್ಯಗಳನ್ನ ಕಲಿಯುವ ಹಾಗೆ ನನಗೆ ಸಪೋರ್ಟ್ ಮಾಡಿದರು. ಅವರ ಕೀ ಬೋರ್ಡ್ ನಲ್ಲಿ ರಾತ್ರಿ ಎಲ್ಲಾ ನಾನು ಪ್ರ್ಯಾಕ್ಟೀಸ್ ಮಾಡ್ತಿದ್ದೆ. ಇಳಯರಾಜ ಸಾಂಗ್ಸ್ ಇಟ್ಕೊಂಡು, ಅವರ ನೋಟ್ಸ್ ಎಲ್ಲಾ ಪ್ರ್ಯಾಕ್ಟೀಸ್ ಮಾಡ್ತಿದ್ದೆ. ನನಗೆ ನೊಟೇಷನ್ ಹೇಳಿಕೊಟ್ಟವರು ಕೂಡ ಜೇಮ್ಸ್ ಮಾಸ್ಟರ್. ಅಲ್ಲಿಂದ ನನ್ನ ಲೈಫ್ ಚೇಂಜ್ ಆಯ್ತು'' - ಸಾಧು ಕೋಕಿಲ

    English summary
    Kannada Actor, Music Director, Director, Singer Sadhu Kokila revealed his tough life in Zee Kannada Channel's popular show Weekend With Ramesh.
    Tuesday, February 9, 2016, 13:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X