ವಿಷ್ಣುವರ್ಧನ್, ಅಂಬರೀಶ್ ಬಗ್ಗೆ 'ಜ್ಯೂಲಿ' ಲಕ್ಷ್ಮಿ ಮಾಡಿದ ಕಾಮೆಂಟ್ ಏನು?

By Harshitha

ದಕ್ಷಿಣ ಭಾರತದ ಅತ್ಯಂತ ಯಶಸ್ವಿ ನಟಿ ಅಂದ್ರೆ 'ಜ್ಯೂಲಿ' ಲಕ್ಷ್ಮಿ. 48 ವರ್ಷಗಳ ಸಿನಿ ಕೆರಿಯರ್ ನಲ್ಲಿ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಲಕ್ಷ್ಮಿ ಅಭಿನಯಿಸಿದ್ದಾರೆ.

ಕನ್ನಡದಲ್ಲೇ ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿರುವ ಲಕ್ಷ್ಮಿ, ರೆಬೆಲ್ ಸ್ಟಾರ್ ಅಂಬರೀಶ್, ಸಾಹಸಸಿಂಹ ಡಾ.ವಿಷ್ಣುವರ್ಧನ್, ಅನಂತ್ ನಾಗ್, ಡಾ.ರಾಜ್ ಕುಮಾರ್ ಹಾಗೂ ಪ್ರಣಯ ರಾಜ ಶ್ರೀನಾಥ್ ಗೆ ಅತ್ಯುತ್ತಮ ಜೋಡಿ. [ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ]

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಲ್ಲಾ ನಟರ ಬಗ್ಗೆ ನಟಿ ಲಕ್ಷ್ಮಿ ಕಾಮೆಂಟ್ ಮಾಡಿದರು. ಅದನ್ನೆಲ್ಲಾ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ವಿಷ್ಣುವರ್ಧನ್ ಬಗ್ಗೆ....

ವಿಷ್ಣುವರ್ಧನ್ ಬಗ್ಗೆ....

''We miss you Vishnu, Please come back. ಅವರ Sense of Humor ತುಂಬಾ ಚೆನ್ನಾಗಿದೆ. ಆದರೂ ಲಿಮಿಟ್ ನಲ್ಲಿರುತ್ತೆ. ಯಾವುದೇ Vulgarity ಇರಲ್ಲ. ಕೆಟ್ಟ ಮಾತುಗಳು ಅವರ ಬಾಯಿಂದ ಬರಲ್ಲ. Excellent Human Being'' - ಲಕ್ಷ್ಮಿ [ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!]

ಅಂಬರೀಶ್ ಬಗ್ಗೆ....

ಅಂಬರೀಶ್ ಬಗ್ಗೆ....

''ಅಬ್ಬಾ....ಅಂಬರೀಶ್ ಅಂದ್ರೇನೇ...ಡಮಾರ್, ಡಢಾರ್, ಬಢಾರ್. ಅಂಬರೀಶ್ ಎಳೇ ಮಗು ತರಹ. ಅಂಬರೀಶ್ ಗೆ ಜವಾಬ್ದಾರಿ ಇರುತ್ತಾ ಅನ್ನೋದೇ ನನಗೆ ಯಾವಾಗಲೂ ಅನುಮಾನ. ಈಗ ಅವರು ಮಿನಿಸ್ಟರ್ ಆಗಿದ್ದಾರೆ. ಆದರೂ ನನಗೆ ಯಾವಾಗಲೂ ಅವರು ಚೈಲ್ಡಿಶ್ ಅನ್ಸುತ್ತೆ. ಆದರೆ ತುಂಬಾ ಫ್ರೆಂಡ್ಲಿ'' - ಲಕ್ಷ್ಮಿ

ಅನಂತ್ ನಾಗ್ ಬಗ್ಗೆ....

ಅನಂತ್ ನಾಗ್ ಬಗ್ಗೆ....

''ತುಂಬಾ ಇಂಟೆಲಿಜೆಂಟ್. ಯಾರ ಹತ್ರನೂ ತುಂಬಾ ಇಟ್ಟುಕೊಳ್ಳುವುದಿಲ್ಲ. ಯಾರ ಹತ್ರನೂ ಜಗಳ ಕಾಯುವುದಿಲ್ಲ. ನಮ್ಮಿಬ್ಬರ ಮಧ್ಯ ಮೊದಲ ಸಿನಿಮಾದಲ್ಲೇ ಚೆನ್ನಾಗಿ ಕೆಮಿಸ್ಟ್ರಿ ವರ್ಕೌಟ್ ಆಯ್ತು'' - ಲಕ್ಷ್ಮಿ

ಶ್ರೀನಾಥ್ ಬಗ್ಗೆ....

ಶ್ರೀನಾಥ್ ಬಗ್ಗೆ....

''He is a wonderful human being. ಈಗಲೂ ನಾನು ಅವರ ಜೊತೆ ಟಚ್ ನಲ್ಲಿದ್ದೀನಿ. ಯಾರ ಹತ್ರನೂ ಕೋಪ ಮಾಡಿಕೊಳ್ಳೋದಿಲ್ಲ'' - ಲಕ್ಷ್ಮಿ

ಪ್ರಣಯರಾಜ ಅಂತ ಪಟ್ಟ ಕೊಟ್ಟಿದ್ದು ಯಾಕೆ?

ಪ್ರಣಯರಾಜ ಅಂತ ಪಟ್ಟ ಕೊಟ್ಟಿದ್ದು ಯಾಕೆ?

''ಪತ್ನಿ ಗೀತಾ ಬಿಟ್ಟರೆ, ಯಾರ ಹತ್ರನೂ ಅವರು ಪ್ರಣಯ ಮಾಡಿಲ್ಲ. ಯಾಕೆ ಅವರಿಗೆ ಅಂತಹ ಪಟ್ಟ ಕೊಟ್ಟಿದ್ದು'' - ಲಕ್ಷ್ಮಿ

ಲಕ್ಷ್ಮಿ ಬಗ್ಗೆ ಶ್ರೀನಾಥ್ ಕಾಮೆಂಟ್

ಲಕ್ಷ್ಮಿ ಬಗ್ಗೆ ಶ್ರೀನಾಥ್ ಕಾಮೆಂಟ್

''I must thank her. ನನ್ನ ಜೊತೆ ಕೋ-ಆರ್ಟಿಸ್ಟ್ ಆಗಿ ಆಕ್ಟ್ ಮಾಡಿದ್ದಾರೆ. 'ಜ್ಯೂಲಿ' ಸಿನಿಮಾ ನೋಡಿದ್ಮೇಲೆ, 'ನಾನು ಯಾವಾಗ ಅವರ ಜೊತೆ ಆಕ್ಟ್ ಮಾಡುವುದು ಅಂತ ಅಂದುಕೊಳ್ಳುತ್ತಿದ್ದೆ'. ಆ ಚಾನ್ಸ್ ನನಗೆ ಸಿಕ್ತು. ಆಕ್ಟಿಂಗ್ ಮಾಡುವಾಗ ನಮಗೆ ಅವರು ಸ್ಫೂರ್ತಿ ಕೊಡುತ್ತಾರೆ'' - ಶ್ರೀನಾಥ್, ನಟ

ಲಕ್ಷ್ಮಿ ಬಗ್ಗೆ ಹೇಮಾ ಚೌಧರಿ ಮಾತು

ಲಕ್ಷ್ಮಿ ಬಗ್ಗೆ ಹೇಮಾ ಚೌಧರಿ ಮಾತು

''ನಾನು ಯಾವಾಗಲೂ ನಿಮ್ಮನ್ನ 'ಅಕ್ಕ' ಅಂತಲೇ ಕರೆಯುವುದು. 'ಗಾಳಿ ಮಾತು' ಸಿನಿಮಾದ ಮೂಲಕ ನಮ್ಮ ಬಾಂಡ್ ಶುರುವಾಗಿದ್ದು. ನಾನು ಫಿಲ್ಮ್ ಇನ್ಸ್ ಟಿಟ್ಯೂಟ್ ನಲ್ಲಿದ್ದಾಗ, ಸ್ಟುಡಿಯೋ ವಿಸಿಟ್ ಗೆ ಅಂತ ಹೋಗ್ಬೇಕು ನಾವು. ದೊಡ್ಡ ಕಲಾವಿದರು ಹಾಗೆ ಆಕ್ಟ್ ಮಾಡ್ತಾರೆ ಅಂತ ತಿಳ್ಕೊಂಡು ಕ್ಲಾಸ್ ನಲ್ಲಿ ನಾವು ಆಕ್ಟ್ ಮಾಡಿ ತೋರಿಸಬೇಕು'' - ಹೇಮಾ ಚೌಧರಿ, ನಟಿ

ಹೈದರಾಬಾದ್ ನಲ್ಲಿ....

ಹೈದರಾಬಾದ್ ನಲ್ಲಿ....

''ನಾನು ಹೈದರಾಬಾದ್ ಗೆ ಹೋಗಿದ್ದೆ. ಅಲ್ಲಿ ಇವರ ಆಕ್ಟಿಂಗ್ ನೋಡಿದೆ. ನಟನೆ ಜೊತೆ ಎಲ್ಲಾ ಕಡೆ ಚುರುಕಿನಿಂದ ಓಡಾಡುತ್ತಿದ್ದರು. ನನ್ನ ಮೊದಲ ಚಿತ್ರದಲ್ಲಿ ಕಲ್ಪನಾ ಜೊತೆ ಆಕ್ಟ್ ಮಾಡುವ ಅವಕಾಶ ಸಿಕ್ತು. ನಂತರ ಜಯಂತಿ ಜೊತೆ. ಆಮೇಲೆ ಲಕ್ಷ್ಮಿ ಅವರ ಜೊತೆ ಸಿಕ್ತು'' - ಹೇಮಾ ಚೌಧರಿ, ನಟಿ

ಲಕ್ಷ್ಮಿ ಸಹಾಯ ಮಾಡಿದ್ರು!

ಲಕ್ಷ್ಮಿ ಸಹಾಯ ಮಾಡಿದ್ರು!

''ನಾನು ನನ್ನ ತಾಯಿ ತೀರಿಕೊಂಡ ಮೇಲೆ ತುಂಬಾ ಕಷ್ಟದಲ್ಲಿದ್ದೆ. ಆಗ ನನಗೆ ಫೋನ್ ಮಾಡಿ ನಿನಗೆ ಏನಾದರೂ ಹಣ ಬೇಕಾದರೆ ನನಗೆ ಕೇಳು ಅಂತ ಹೇಳಿದವರು ಲಕ್ಷ್ಮಿ ಮಾತ್ರ'' - ಹೇಮಾ ಚೌಧರಿ, ನಟಿ

ಝೀನತ್ ಅಮನ್ ಅಂತೆ ವಿಜಯಲಕ್ಷ್ಮಿ ಸಿಂಗ್!

ಝೀನತ್ ಅಮನ್ ಅಂತೆ ವಿಜಯಲಕ್ಷ್ಮಿ ಸಿಂಗ್!

''ವಿಜಯಲಕ್ಷ್ಮಿ ಸಿಂಗ್ ನಮ್ಮ ಟೈಮ್ ನಲ್ಲಿ ಝೀನತ್ ಅಮನ್. ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳೋರು ಅವಾಗ'' - ಲಕ್ಷ್ಮಿ

ಲಕ್ಷ್ಮಿ ಕೃಪಾ ಕಟಾಕ್ಷ!

ಲಕ್ಷ್ಮಿ ಕೃಪಾ ಕಟಾಕ್ಷ!

''ಹೂವು ಹಣ್ಣು' ಚಿತ್ರಕ್ಕೆ ನಾನು ಪ್ರೊಡ್ಯೂಸರ್. ಆಗ ನಾನು ಪ್ರೆಗ್ನೆಂಟ್. ನಮ್ಮ ಮನೆಗೆ ಬಂದು ಅವರು ಒಂದು ಗಿಫ್ಟ್ ಕೊಟ್ಟರು. ಬಾಕ್ಸ್ ತೆಗೆದು ನೋಡಿದರೆ, ''Girls are the best'' ಅಂತ ಮೂರು ಫೋಟೋ ಫ್ರೇಮ್ ಇತ್ತು. ಯಾವ ಘಳಿಗೆಯಲ್ಲಿ ನನಗೆ ಅವರು ಕೊಟ್ಟರೋ, ನನಗೆ ಮೂರೂ ಹೆಣ್ಣು ಮಕ್ಕಳೇ'' - ವಿಜಯಲಕ್ಷ್ಮಿ ಸಿಂಗ್

More from Filmibeat

English summary
Actress Lakshmi spoke about Kannada Actor Vishnuvardhan, Ambareesh, Ananth Nag, Srinath in Zee Kannada Channel's popular show Weekend With Ramesh season 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X