twitter
    For Quick Alerts
    ALLOW NOTIFICATIONS  
    For Daily Alerts

    ಲೀಲಾವತಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಕೊಟ್ಟವರು ಯಾರು?

    By Harshitha
    |

    ಬರೋಬ್ಬರಿ 550 ಚಿತ್ರಗಳಲ್ಲಿ ಅಭಿನಯಿಸಿರುವ ಲೀಲಾವತಿ ವೃತ್ತಿ ಬದುಕಿನಲ್ಲಿ, ವೈಯುಕ್ತಿಕ ಬದುಕಿನಲ್ಲಿ ಅನುಭವಿಸಿರುವ ಕಷ್ಟ ಅಷ್ಟಿಷ್ಟಲ್ಲ.

    ಮಡಿಲಲ್ಲಿ ಮಗು ಅಳುತ್ತಿದ್ದರೂ, ತುತ್ತು ಅನ್ನಕ್ಕಾಗಿ ಡ್ರಾಮಾ ಮಾಡುತ್ತಿದ್ದ ನಟಿ ಲೀಲಾವತಿ ಕಾಸಿಗೆ ಕಾಸು ಕೂಡಿಟ್ಟು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಜಮೀನನ್ನ ಖರೀದಿಸಿ, ಇಂದಿಗೂ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್. [ಲೀಲಾವತಿ ಬಗ್ಗೆ ಶಿವರಾಜ್ ಕುಮಾರ್ ಮಾಡಿದ ಕಾಮೆಂಟ್]

    ಹೀಗಿದ್ದರೂ, ಅದು ಲೀಲಾವತಿ ಸಂಪಾದಿಸಿದ್ದು ಅಲ್ಲ. ಅವರಿಗೆ 'ಯಾರೋ' ಕೊಟ್ಟಿರುವ ಜಮೀನು ಅದು ಅಂತ ಬಾಯಿಗೆ ಬಂದ ಹಾಗೆ ಮಾತನಾಡುವವರು ಸಾಕಷ್ಟು ಮಂದಿ ಇದ್ದಾರೆ. (ಹಾಗೆ ಲೀಲಾವತಿ ಅವರಿಗೆ ಲಕ್ಷಾಂತರ ರೂಪಾಯಿ ಜಮೀನು ಕೊಡುವವರು ಯಾರಿದ್ದಾರೆ? ಗೊತ್ತಿಲ್ಲ. ಆದ್ರೆ, ಮಾತನಾಡುವವರಿಗೇನು?)

    ಈ ಬಗ್ಗೆ ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಲೀಲಾವತಿ ಬೇಸರ ವ್ಯಕ್ತಪಡಿಸಿದರು. ಲೀಲಾವತಿ ಅವರ ಕಷ್ಟದ ದಿನಗಳನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

    ಕಡು ಬಡತನದಲ್ಲಿ ಹುಟ್ಟಿದ ಲೀಲಾವತಿ!

    ಕಡು ಬಡತನದಲ್ಲಿ ಹುಟ್ಟಿದ ಲೀಲಾವತಿ!

    ''ಕಡು ಬಡತನದಲ್ಲಿ ಹುಟ್ಟಿದವಳು ನಾನು. 'ಈ ಹೆಣ್ಣು ಯಾಕೆ ಹುಟ್ಟಿತು. ದರಿದ್ರ. ಪೀಡೆ' ಅಂತ ನನ್ನ ಎಸಿದಿದ್ರಂತೆ. 40 ದಿನ ನಾನು ಕಣ್ಣು ಮುಚ್ಚಿಕೊಂಡು ಇದ್ದೆ. ಕಣ್ಣು ಬಿಟ್ಟಿರಲಿಲ್ಲ ಅನ್ನೋದು ನನಗೆ ಆಮೇಲೆ ಗೊತ್ತಾಯ್ತು. ಎಷ್ಟೋ ಬಾರಿ ಈ ಮಾತು ನೆನಪಿಸಿಕೊಂಡಾಗ, ಅಂತಹ ಕಣ್ಣು ಮುಚ್ಚಿಕೊಂಡು ಬಿದ್ದಿದ್ದ ಕೆಲಸಕ್ಕೆ ಬಾರದ ಹೆಣ್ಣನ್ನ ಭಗವಂತ ಇಷ್ಟರಮಟ್ಟಿಗೆ ಇರಿಸಿದ್ದಾನಲ್ಲ ಅಂತ ಸಂತಸ ಪಡುತ್ತೇನೆ'' - ಲೀಲಾವತಿ [ಮಗ ವಿನೋದ್ ರಾಜ್ ರನ್ನು ಸಾಯಿಸಲು ಮುಂದಾಗಿದ್ದ ನಟಿ ಲೀಲಾವತಿ!]

    ಎರಡನೇ ಕ್ಲಾಸ್ ಲಾಸ್ಟ್!

    ಎರಡನೇ ಕ್ಲಾಸ್ ಲಾಸ್ಟ್!

    ''ಎರಡನೇ ಕ್ಲಾಸ್ ವರೆಗೂ ಮಾತ್ರ ಓದಿದ್ದು. ಬಿಸಿ ಎಣ್ಣೆ ಬಾಂಡ್ಲಿ ಒಳಗೆ ಕಾಲು ಹಾಕ್ಬಿಟ್ಟಿದ್ದೆ. ಮೂರ್ನಾಲ್ಕು ತಿಂಗಳು ಸ್ಕೂಲ್ ಗೆ ಹೋಗೋಕೆ ಆಗ್ಲಿಲ್ಲ. ಅಲ್ಲಿಗೆ ಸ್ಕೂಲ್ ನಿಲ್ತು. ಆಮೇಲೆ ಬೇರೆಯವರ ಮನೆಯಲ್ಲಿ ಮುಸುರೆ ಉಜ್ಜೋದು, ಬೇರೆಯವರ ಮನೆಯಲ್ಲಿ ಕೆಲಸ ಮಾಡೋದೇ ಆಯ್ತು. ಅಷ್ಟೊಂದು ನೋವು ಅನುಭವಿಸಿದ್ದೀನಿ ನಾನು'' - ಲೀಲಾವತಿ [ವಿನೋದ್ ರಾಜ್ ಜೇಬಲ್ಲಿ ಸದಾ ಕಾಲ ರಿವಾಲ್ವರ್ ಇರುತ್ತೆ! ಯಾಕೆ?]

    ಒಂಟಿ ಜೀವನ!

    ಒಂಟಿ ಜೀವನ!

    ''ನನ್ನ ಬಾಲ್ಯ ಜೀವನ ಒಂಟಿಯಾಗೇ ಕಳೆದೆ. ನನ್ನ ಜೊತೆ ಸೇವೆಗೆ ಅಂತ ಇದ್ದವರೇ ನನ್ನವರು ಅಂತ ಅಂದುಕೊಂಡು ಬಾಳಿದ್ದೀನಿ'' - ಲೀಲಾವತಿ

    ಹೇನು ನೋಡಿದ್ರೆ, ಕಾಸು!

    ಹೇನು ನೋಡಿದ್ರೆ, ಕಾಸು!

    ''ನನ್ನ ಹತ್ತಿರ ದುಡ್ಡು ಇರಲಿಲ್ಲ. ಮನೆ ಯಜಮಾನಿ ನನ್ನ ಆಗಾಗ ಕರೆದು ತಲೆಯಲ್ಲಿ ಹೇನು ನೋಡು ಅಂತ ಹೇಳ್ತಿದ್ದರು. ಹೇನು ನೋಡಿದ್ರೆ, ನನಗೆ ನಾಲ್ಕಾಣೆ ಕಾಸು ಕೊಡ್ತಿದ್ರು'' - ಲೀಲಾವತಿ

    ಆಗಲೇ ಸಿನಿಮಾ ಹುಚ್ಚು!

    ಆಗಲೇ ಸಿನಿಮಾ ಹುಚ್ಚು!

    ''ಸಿನಿಮಾ ನೋಡಲು ನಾಲ್ಕು ವರೆ ಆಣೆ ಬೇಕು. ನಾಲ್ಕಾಣೆ ಕೊಟ್ಟಿದ್ದಕ್ಕೆ ಟಿಕೆಟ್ ಕೊಡಲ್ಲ ಹೋಗಮ್ಮ ಅಂತ ಹೇಳಿದ್ರು. ನಾನು ಸಿನಿಮಾ ನೋಡಲೇಬೇಕು ಅಂತ ಅಳೋಕೆ ಶುರು ಮಾಡಿದೆ. ಆಮೇಲೆ ಸಿನಿಮಾ ನೋಡೋಕೆ ಕಳುಹಿಸಿದರು. ಹಾಗಾಗಿ 'ಚಂದ್ರಲೇಖ' ಸಿನಿಮಾ ನೋಡಿದೆ'' - ಲೀಲಾವತಿ

    ಸಿನಿಮಾ ಮಾಡಿದ್ರೆ ದುಡ್ಡು!

    ಸಿನಿಮಾ ಮಾಡಿದ್ರೆ ದುಡ್ಡು!

    ''ನಮ್ಮಲ್ಲಿ ಇದ್ದ ಕಡುಬಡತನ ನನಗೆ ಸಿನಿಮಾ ಮಾಡಲು ಹಂಬಿಲಿಸ್ತಾಯಿತ್ತು. ಸಿನಿಮಾ ಮಾಡಿದ್ರೇ ಲಕ್ಷಗಟ್ಟಲೆ ದುಡ್ಡು ಅಂತ ಹೇಳೋರು. ಹೀಗಾಗಿ ನಾನೇ ತೀರ್ಮಾನ ಮಾಡಿಕೊಂಡು ಮೈಸೂರಿಗೆ ಬಂದೆ'' - ಲೀಲಾವತಿ

    ಡ್ರಾಮಾ ಕಂಪನಿಗೆ ಸೇರಿದೆ!

    ಡ್ರಾಮಾ ಕಂಪನಿಗೆ ಸೇರಿದೆ!

    ''ವಿಠಲಾಚಾರ್ಯರವರನ್ನ ಹೋಗಿ ಕೇಳಿದಾಗ, 'ಡ್ರಾಮಾ ಕಂಪನಿ ಅನುಭವ ಬೇಕು' ಅಂತ ಹೇಳಿದರು. ಅವರೇ ನನ್ನ ಸುಬ್ಬಯ್ಯನಾಯ್ಡು ಕಂಪನಿಗೆ ಸೇರಿಸಿದರು'' - ಲೀಲಾವತಿ

    ಒಂದೇ ಟೇಕ್ ನಲ್ಲಿ ಓಕೆ!

    ಒಂದೇ ಟೇಕ್ ನಲ್ಲಿ ಓಕೆ!

    ''ಏನೇ ಬಂದರೂ ಈಗಿನ ಕಿರುಕುಳ ಆಗ ಇರ್ಲಿಲ್ಲ. ಒಂದೇ ಟೇಕ್ ನಲ್ಲೇ ಮಾಡಿ ಮುಗಿಸುತ್ತಿದ್ದೆ. ಚೆನ್ನಾಗಿ ಮಾಡದೇ ಇದ್ದರೆ ಊಟ ಇಲ್ಲ ಅಂತ ಹೇಳೋರು. ಹೀಗಾಗಿ ಮಲ್ಕೊಂಡು ಇರೋವಾಗಲೇ ಡೈಲಾಗ್ ನೆನಪಿಗೆ ಬರ್ತಿತ್ತು'' - ಲೀಲಾವತಿ

    ಬರಲ್ಲ ಅಂದ್ರೆ ಸಿನಿಮಾ ಕ್ಯಾನ್ಸಲ್!

    ಬರಲ್ಲ ಅಂದ್ರೆ ಸಿನಿಮಾ ಕ್ಯಾನ್ಸಲ್!

    ''ಕುದುರೆ ಓಡಿಸೋಕೆ ಬರಲ್ಲ. ಅದನ್ನ ಹೇಳಿದ್ರೆ, ಸಿನಿಮಾ ಕ್ಯಾನ್ಸಲ್ ಮಾಡ್ತಾರೆ ಅಂತ ಭಯ. 'ವೀರ ಕೇಸರಿ' ಸಿನಿಮಾ. ಕುದುರೆ ಮೇಲೆ ಕೂರಿಸಿದಾಗ ಕುದುರೆಯನ್ನ ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟಿದ್ದೆ. ಅಷ್ಟೆಲ್ಲಾ ಕಷ್ಟಪಟ್ಟು ಸಿನಿಮಾ ಮಾಡಿದ್ದೀನಿ'' - ಲೀಲಾವತಿ

    ಅವಕಾಶಗಳ ಬಾಗಿಲು ಮುಚ್ಚಿತು!

    ಅವಕಾಶಗಳ ಬಾಗಿಲು ಮುಚ್ಚಿತು!

    ''ಇವನು ಹುಟ್ಟುತ್ತಾನೆ ಅಂತ ಗೊತ್ತಾದ ಕೂಡಲೆ ಎಲ್ಲಾ ಫಿಲ್ಮ್ ಕ್ಯಾನ್ಸಲ್ ಆಯ್ತು ನನಗೆ. ತಿನ್ನೋಕೆ ಏನೂ ಇರ್ಲಿಲ್ಲ'' - ಲೀಲಾವತಿ

    ಕಣ್ಣಲ್ಲಿ ರಕ್ತ ಸುರಿದಿದೆ!

    ಕಣ್ಣಲ್ಲಿ ರಕ್ತ ಸುರಿದಿದೆ!

    ''ನನ್ನ ಕಣ್ಣಲ್ಲಿ ರಕ್ತ ಸುರಿದಿದೆ. ನನ್ನದು ಕಣ್ಣೀರಾಗಿರಲಿಲ್ಲ. ರಕ್ತ ಆಗಿತ್ತು. ಅಂತಹ ಕಷ್ಟ ನಾನು ಪಟ್ಟಿದ್ದೀನಿ ಮಗು ಇಟ್ಕೊಂಡು. ಮೂರು ತಿಂಗಳು ಮಗು, ಆಗಲೇ ಜೋಳಿಗೆಯಲ್ಲಿ ಮಗು ಹಾಕಿ ಡ್ರಾಮಾ ಮಾಡ್ತಿದ್ದೆ. ಡ್ರಾಮಾ ಕಂಪನಿಯಲ್ಲಿ ಗಂಟೆ ಹೊಡೆಯುವಾಗ ಮಗು ಬೆಚ್ಚಿ ಬೀಳ್ತಾಯಿತ್ತು. ಡ್ರಾಮಾದಲ್ಲಿ ಐನೂರು ರೂಪಾಯಿ ಬರ್ತಿತ್ತು'' - ಲೀಲಾವತಿ

    ಆಸ್ತಿ ಮಾಡಿದ್ದು ಹೇಗೆ?

    ಆಸ್ತಿ ಮಾಡಿದ್ದು ಹೇಗೆ?

    ''ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೂ ಡ್ರಾಮಾ. ಮುಗಿದ್ಮೇಲೆ ಮಗುನ ಆಡಿಸೋದೇ ಆಗೋದು. ಯಾವಾಗ ಮಲ್ಕೊಳ್ಳಲಿ ನಾನು? ಮಧ್ಯದಲ್ಲಿ ಅಭಿಮಾನಿಗಳು ಬೇರೆ. ಇಷ್ಟೆಲ್ಲಾ ಕಷ್ಟದಲ್ಲಿ 180 ಡ್ರಾಮಾ ಮುಗಿಸಿಕೊಟ್ಟಿದ್ದೇನೆ. ಅದರಲ್ಲಿ ಬಂದ ದುಡ್ಡಿನಲ್ಲಿ ನಾನು ಆಸ್ತಿ ಮಾಡಿದ್ದು'' - ಲೀಲಾವತಿ

    ಯಾರೋ ಕೊಡಿಸಿದ್ದು?

    ಯಾರೋ ಕೊಡಿಸಿದ್ದು?

    ''ಯಾರ್ಯಾರೋ ಹೇಳ್ತಾರೆ, ಆ ಆಸ್ತಿ ಯಾರೋ ಕೊಟ್ಟಿದ್ದು ನನಗೆ ಅಂತ. ಅವರ ನಾಲಿಗೆಗೆ ದೇವರು ಏನು ಮಾಡ್ತಾರೆ ಹೇಳಿ? ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಖರೀದಿಸಿದ್ದು ಅದು'' - ಲೀಲಾವತಿ

    ನೋವು ಕೇಳುವವರು ಯಾರೂ ಇಲ್ಲ!

    ನೋವು ಕೇಳುವವರು ಯಾರೂ ಇಲ್ಲ!

    ''ಲೀಲಾವತಿ ಅಂತರಂಗದಲ್ಲಿ ಏನಿದೆ? ಲೀಲಾವತಿ ಅವರಿಗೆ ಆಗಿರುವ ನೋವು ಏನು? ಅಂತ ಯಾರೊಬ್ಬರೂ ಕೇಳಲಿಲ್ಲ. ನಾನು ನನ್ನ ಮಗ, ಎಲ್ಲೋ ಒಂದು ಕಾಡಿನಲ್ಲಿ ಹೇಗೋ ಜೀವನ ಮಾಡುತ್ತಿದ್ದೇವೆ. ದೇವರು ಆಯಸ್ಸು ಕೊಡುವವರೆಗೂ ಬದುಕುತ್ತೇವೆ'' - ಲೀಲಾವತಿ

    English summary
    Kannada Veteran Actress Leelavathi's life story was revealed in Zee Kannada Channel's popular show Weekend With Ramesh season 2.
    Thursday, March 31, 2016, 11:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X