ಮಗ ವಿನೋದ್ ರಾಜ್ ರನ್ನು ಸಾಯಿಸಲು ಮುಂದಾಗಿದ್ದ ನಟಿ ಲೀಲಾವತಿ!

By Harshitha

ಹಿರಿಯ ನಟಿ ಲೀಲಾವತಿ ರವರ ಕಷ್ಟದ ದಿನಗಳನ್ನ ಕೇಳಿದ್ರೆ, ಎಂಥವರ ಕಣ್ಣಾಲಿಗಳು ಒದ್ದೆ ಆಗದೇ ಇರಲ್ಲ.

ಕಷ್ಟದ ಬೇಗುದಿಯಲ್ಲೇ ಬೆಂದು ಬೆಳೆದ ನಟಿ ಲೀಲಾವತಿಗೆ ಮಗು ಆದಾಗ ಚಿತ್ರರಂಗದಲ್ಲಿ ಅವಕಾಶಗಳು ಸಿಗ್ಲಿಲ್ಲ. ಕೈಯಲ್ಲಿ ಬಿಡಿಗಾಸು ಇರ್ಲಿಲ್ಲ. [ಲೀಲಾವತಿ ಬಗ್ಗೆ ಶಿವರಾಜ್ ಕುಮಾರ್ ಮಾಡಿದ ಕಾಮೆಂಟ್]

'ಸಿನಿಮಾ ಇಲ್ಲ ಅಂದ್ರೆ ಏನಂತೆ, ನಾಟಕ ಮಾಡೋಣ' ಅಂತ ಡ್ರಾಮಾ ಕಂಪನಿ ಕಡೆ ಮುಖ ಮಾಡಿದ ನಟಿ ಲೀಲಾವತಿ ಒಂದೊಮ್ಮೆ ಕಂದಮ್ಮ ವಿನೋದ್ ರಾಜ್ ನನ್ನ ಸಾಯಿಸಿ, ತಾವೂ ಸಾಯಲು ಮುಂದಾಗಿದ್ದರಂತೆ. [ವಿನೋದ್ ರಾಜ್ ಜೇಬಲ್ಲಿ ಸದಾ ಕಾಲ ರಿವಾಲ್ವರ್ ಇರುತ್ತೆ! ಯಾಕೆ?]

ಅಂತಹ ಕಣ್ಣೀರ ದಿನಗಳನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ಲೀಲಾವತಿ ಮೆಲುಕು ಹಾಕಿ ಕಣ್ಣೀರಿಟ್ಟರು. ಮುಂದೆ ಓದಿ....

ಅವಕಾಶಗಳ ಬಾಗಿಲು ಮುಚ್ಚಿತು!

ಅವಕಾಶಗಳ ಬಾಗಿಲು ಮುಚ್ಚಿತು!

''ಇವನು ಹುಟ್ಟುತ್ತಾನೆ ಅಂತ ಗೊತ್ತಾದ ಕೂಡಲೆ ಎಲ್ಲಾ ಫಿಲ್ಮ್ ಕ್ಯಾನ್ಸಲ್ ಆಯ್ತು ನನಗೆ. ತಿನ್ನೋಕೆ ಏನೂ ಇರ್ಲಿಲ್ಲ'' - ಲೀಲಾವತಿ [ಹಿರಿಯ ನಟಿ ಲೀಲಾವತಿ ಕಣ್ಣೀರೊರೆಸುವವರು ಯಾರೂ ಇಲ್ವೇ?]

ಬಾತುಕೋಳಿ ಮೊಟ್ಟೆ ತಿಂದಿದ್ದೀನಿ

ಬಾತುಕೋಳಿ ಮೊಟ್ಟೆ ತಿಂದಿದ್ದೀನಿ

''ಗರ್ಭಿಣಿ ಇದ್ದಾಗ ಏನೇನೋ ತಿನ್ನಬೇಕು ಅಂತ ಆಸೆ. ನಾಟಿ ಕೋಳಿ ಮೊಟ್ಟೆ ತಿನ್ನಬೇಕು ಅಂತ ಆಸೆ. ಅದಕ್ಕೆ ದುಡ್ಡು ಜಾಸ್ತಿ ಆಗುತ್ತೆ ಅಂತ. ಬಾತುಕೋಳಿ ಮೊಟ್ಟೆ 10 ಪೈಸೆಗೆ ಸಿಗುತ್ತೆ ಅಂತ ಅದನ್ನ ಕೊಂಡು ತಿಂದು ನನ್ನ ಆಸೆ ತೀರಿಸಿಕೊಂಡಿದ್ದೀನಿ'' - ಲೀಲಾವತಿ [ನಟಿ ಲೀಲಾವತಿ ತೋಟಕ್ಕೆ ದುಷ್ಕರ್ಮಿಗಳಿಂದ ಬೆಂಕಿ]

ಅಮಾವಾಸ್ಯೆ ರಾತ್ರಿ ಆಗಿದ್ದೇನು?

ಅಮಾವಾಸ್ಯೆ ರಾತ್ರಿ ಆಗಿದ್ದೇನು?

''ಅಮಾವಾಸ್ಯೆ ರಾತ್ರಿ ಕೂತ್ಕೊಂಡು ಯೋಚನೆ ಮಾಡ್ತಿದ್ದೆ, ಮಗು ಹುಟ್ಟಿದ್ರೆ ನಾನು ಹೇಗೆ ಸಾಕಲಿ ಅಂತ. ನನ್ನ ಮುಖದ ಮೇಲೆ ಒಂದು ಕೈ ಬಂತು. ಭಯದಿಂದ ನೋಡಿದಾಗ ಅದು ತೆಂಗಿನ ಗರಿ. ಅದನ್ನ ಗಟ್ಟಿಯಾಗಿ ಹಿಡಿದುಕೊಂಡಾಗ ಕೃಷಿ ಮಾಡುವ ಮನಸ್ಸಾಯ್ತು. ಈಗ ಅದೇ ತೋಟ, ಅದೇ ತೆಂಗಿನಮರ ನನ್ನನ್ನ ಕಾಪಾಡುತ್ತಿರುವುದು. ಅವೇ ನನಗೆ ದುಡ್ಡು ಕೊಟ್ಟು ನನ್ನ ಮಗ ಬೀದಿಗೆ ಬಾರದೆ ಇರುವ ಹಾಗೆ ಸಾಕಿದ್ದು'' - ಲೀಲಾವತಿ [ಲೀಲಾವತಿ ಚಿತ್ರರಂಗದಿಂದ ದೂರವಾದದ್ದು ಯಾಕೆ?]

ಮಗು ಉಸಿರು ಕಟ್ಟಿತ್ತು!

ಮಗು ಉಸಿರು ಕಟ್ಟಿತ್ತು!

''ಏನೂ ಇಲ್ಲ. ಮನೆ ಖರ್ಚಿಗೆ ದುಡ್ಡು ಇಲ್ಲ. ನಾನು-ಮಗು ಇಬ್ಬರೇ ಮನೆಯಲ್ಲಿ. ಮನೆ ಕೆಲಸದವರು ಎಲ್ಲಾ ಬಿಟ್ಟು ಹೊರಟು ಹೋದರು. ಮಗುಗೆ ಸ್ನಾನ ಮಾಡಿಸುವಾಗ ಉಸಿರು ಕಟ್ಟಿತ್ತು. ಹೇಗೋ ಒದ್ದಾಡಿ ತೊಟ್ಟಿಲಿನಲ್ಲಿ ಮಲಗಿಸಿದೆ. ಜೋರಾಗಿ ಅಳೋಕೆ ಶುರುಮಾಡಿದ'' - ಲೀಲಾವತಿ

ಮಗುವನ್ನ ಸಾಯಿಸಿ, ನಾನೂ ಸತ್ತು ಹೋದರೆ?!

ಮಗುವನ್ನ ಸಾಯಿಸಿ, ನಾನೂ ಸತ್ತು ಹೋದರೆ?!

''ನನಗೆ ಬೇರೆ ದಾರಿ ತೋಚುತ್ತಿಲ್ಲ. ನನಗೆ ಉಳಿದಿರುವುದು ಒಂದೇ ದಾರಿ. ಮಗುವನ್ನ ಸಾಯಿಸಿ, ನಾನೂ ಸತ್ತುಹೋದರೆ ಸರಿ ಹೋಗುತ್ತೆ ಅಂದುಕೊಂಡು ಮಗು ತೊಟ್ಟಿಲನ್ನ ಜೋರಾಗಿ ಆಡಿಸುವುದಕ್ಕೆ ಶುರು ಮಾಡಿದೆ'' - ಲೀಲಾವತಿ

ಅವತ್ತು ಆದ ಸಂಕಟ....

ಅವತ್ತು ಆದ ಸಂಕಟ....

''ಆಗ ಮಗು ಅಳು ನಿಲ್ಲಿಸಿ, ನನ್ನ ಮುಖ ನೋಡಿದ. ಅವತ್ತು ನನಗೆ ಆದ ಸಂಕಟ ನಾನು ಏನೂ ಅಂತ ಹೇಳಲಿ. ಅವತ್ತು ನಾನು ನಿರ್ಧರಿಸಿದ್ದು ''ನಾನು ಬದುಕಿ ನಿನ್ನ ಬಾಳಿಸುತ್ತೇನೆ'' ಅಂತ. 'ನಾನು ಸಾಯೋಲ್ಲ' ಅಂತ ತೀರ್ಮಾನ ಮಾಡಿದೆ'' - ಲೀಲಾವತಿ

ಅಮ್ಮ ಹಾಡುವ ಹಾಡನ್ನ ಮರೆಯೋಕೆ ಸಾಧ್ಯ ಇಲ್ಲ!

ಅಮ್ಮ ಹಾಡುವ ಹಾಡನ್ನ ಮರೆಯೋಕೆ ಸಾಧ್ಯ ಇಲ್ಲ!

''ಅಮ್ಮ ನನಗೆ ಹಾಡುವ ಹಾಡನ್ನ ನಾನು ಜೀವಮಾನದಲ್ಲಿ ಮರೆಯೋಕೆ ಸಾಧ್ಯವೇ ಇಲ್ಲ'' - ವಿನೋದ್ ರಾಜ್, ಲೀಲಾವತಿ ಪುತ್ರ

ಸೋಪ್ ನುಂಗಿಬಿಟ್ಟಿದ್ದೆ!

ಸೋಪ್ ನುಂಗಿಬಿಟ್ಟಿದ್ದೆ!

''ಒಂದು ಬಾರಿ ನಾನು ಸೋಪ್ ನುಂಗಿಬಿಟ್ಟಿದ್ದೆ. ಗಂಟಲಿನಲ್ಲಿ ಸಿಕ್ಕಾಕೊಂಡಿತ್ತು. ಅದಕ್ಕೆ ENT ಹತ್ರ ಹೋಗಿ ತೋರಿಸಿದ್ವಿ. ಹುಲ್ಲು ನುಂಗಿದ್ದೆ, ಕರೆಂಟ್ ಹಿಡಿದುಕೊಂಡುಬಿಟ್ಟಿದ್ದೆ'' - ವಿನೋದ್ ರಾಜ್, ಲೀಲಾವತಿ ಪುತ್ರ

48 ವರ್ಷ...

48 ವರ್ಷ...

''48 ವರ್ಷ ನಾನು ನಿನ್ನ ಜೊತೆ ಕಳೆದಿರುವುದು, ಪ್ರತಿದಿನ ಹೊಸದಾಗಿದೆ. ನಮ್ಮಿಬ್ಬರ ಕಥೆ ಬಿಟ್ಟು ಬೇರೆ ಏನಿದೆ ಈ ಪ್ರಪಂಚದಲ್ಲಿ. ಹೆಜ್ಜೆ ಹೆಜ್ಜೆಗೂ ಎಲ್ಲದರಲ್ಲೂ ನನಗೆ ಕೆಲಸ ಇದ್ದ ಕಾಲದಿಂದ, ಕೆಲಸ ಇಲ್ಲದೇ ಇದ್ದ ಕಾಲದಿಂದ, ಎಲ್ಲಾದರಲ್ಲೂ ಜೊತೆಯಾಗಿ ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದೀಯಾ'' - ವಿನೋದ್ ರಾಜ್, ಲೀಲಾವತಿ ಪುತ್ರ

ಲೀಲಾವತಿಗೆ ಹೃದಯಾಘಾತ ಆದಾಗ...

ಲೀಲಾವತಿಗೆ ಹೃದಯಾಘಾತ ಆದಾಗ...

''ನಿನಗೆ ಹೃದಯಾಘಾತ ಆಗಿತ್ತು. ಅದನ್ನ ದುಃಖದಿಂದ ತೆಗೆದುಕೊಳ್ಳದೇ, ನಿದ್ದೆ ಬರುವ ಮಾತ್ರೆ ಕೇಳಿ, ''ನಾನು ಹೋದ್ರೆ ನಿನ್ನ ಕಥೆ ಏನು'' ಅಂತ ಕೇಳಿದ್ದೆ'' - ವಿನೋದ್ ರಾಜ್, ಲೀಲಾವತಿ ಪುತ್ರ

ಅಮ್ಮನನ್ನ ಉಳಿಸಿಕೊಳ್ಳಲು ಒದ್ದಾಟ

ಅಮ್ಮನನ್ನ ಉಳಿಸಿಕೊಳ್ಳಲು ಒದ್ದಾಟ

''ನಾವಿಬ್ಬರೇ ಇರೋದ್ರಿಂದ ''ಖಂಡಿತ ನೀನು ಉಳಿತೀಯಾ ಅಮ್ಮ. ನನಗಾಗಿ ನೀನು ಉಳಿಯಲೇಬೇಕು'' ಅಂತ ನಾನು ಹೇಳಿದ್ದೆ. ನಿನ್ನ ಉಳಿಸಿಕೊಳ್ಳಬೇಕು ಅಂತ ಎಷ್ಟು ಕಷ್ಟಪಟ್ಟಿದ್ದೀನಿ, ಎಷ್ಟು ಒದ್ದಾಡಿದ್ದೀನಿ ಅಂತ ನನಗೆ ಗೊತ್ತು'' - ವಿನೋದ್ ರಾಜ್, ಲೀಲಾವತಿ ಪುತ್ರ

ನಾನು ಪುಣ್ಯ ಮಾಡಿದ್ದೀನಿ

ನಾನು ಪುಣ್ಯ ಮಾಡಿದ್ದೀನಿ

''ನಿನ್ನಂತಹ ಅಮ್ಮ ಪಡೆಯುವುದಕ್ಕೆ ನಾನು ಮಹಾ ಪುಣ್ಯವಂತನಾಗಿದ್ದೀನಿ. ಎಲ್ಲವನ್ನೂ ಸಹಿಸಿಕೊಂಡು ನನಗೆ ಜೀವನ, ಸಮಾಧಾನ ಹೇಳಿಕೊಟ್ಟಿದ್ದೀಯಾ. ನಿನ್ನ ಮನಸ್ಸಿಗೆ ನಾನು ಏನಾದರೂ ನೋವು ಆಗುವ ಹಾಗೆ ಮಾತನಾಡಿದ್ದರೆ, ದಯವಿಟ್ಟು ಕ್ಷಮಿಸಮ್ಮ'' - ವಿನೋದ್ ರಾಜ್, ಲೀಲಾವತಿ ಪುತ್ರ

ಮಗನಿಗಾಗಿ ಹಾಡು ಸೃಷ್ಟಿಸಿದ್ದೆ!

ಮಗನಿಗಾಗಿ ಹಾಡು ಸೃಷ್ಟಿಸಿದ್ದೆ!

''ಚಿತ್ರದಲ್ಲಿ ಪಾರ್ಟ್ ಮಾಡುವಾಗಲೂ ನನಗೆ ಮಕ್ಕಳು ಸನ್ನಿವೇಶ ಬಂದಿರಲಿಲ್ಲ. ಜೋಗುಳ ಹಾಡುವುದು ನನಗೆ ಗೊತ್ತೇಯಿಲ್ಲ. ಆದ್ರೆ, ನಾವು ಇವನಿಗೆ ಜೋಗುಳ ಹಾಡಿ ಮಲಗಿಸಬೇಕು. ಹೀಗಾಗಿ ನಾನೇ ಅವನಿಗೆ ಒಂದು ಹಾಡನ್ನ ಸೃಷ್ಟಿ ಮಾಡಿದೆ. ''ಬಾ..ಬಾ..ಚಂದಮಾಮ ವಿನು ಜೊತೆ ಆಡಲು ಬಾ ಚಂದಮಾಮ..'' ಅಂತ. ಅದನ್ನ ಇವತ್ತಿಗೂ ನೆನಪಿಟ್ಟುಕೊಂಡಿದ್ದಾನೆ'' - ಲೀಲಾವತಿ

More from Filmibeat

English summary
Kannada Veteran Actress Leelavathi's struggling life story was revealed in Zee Kannada Channel's popular show Weekend With Ramesh season 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X