ರಘು ದೀಕ್ಷಿತ್ ವೃತ್ತಿ ಬದುಕಿನ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು!

By Harshitha

'ಸೈಕೋ', 'ಜಸ್ಟ್ ಮಾತ್ ಮಾತಲ್ಲಿ' ಸೇರಿದಂತೆ ಕನ್ನಡ, ತಮಿಳು, ತೆಲುಗು ಹಾಗು ಹಿಂದಿಯ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ರಘು ದೀಕ್ಷಿತ್, ಯಾರ ಮುಂದೆಯೂ ಹೋಗಿ 'ನನಗೆ ಚಾನ್ಸ್ ಕೊಡಿ' ಅಂತ ಕೇಳಿದವರಲ್ಲ.

1st Rank ಸ್ಟೂಡೆಂಟ್ ಆಗಿದ್ದ ರಘು ದೀಕ್ಷಿತ್ ಕೈಯಲ್ಲಿ ಕೆಲಸ ಇರಲಿಲ್ಲ ಅಂತೇನಿಲ್ಲ. ಪ್ರತಿಷ್ಟಿತ CFTRI ನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿದ್ದ ರಘು ದೀಕ್ಷಿತ್, ತಮ್ಮ ಕೆಲಸವನ್ನು ಬಿಟ್ಟು ಮ್ಯೂಸಿಕ್ ಕಡೆ ಮುಖ ಮಾಡಿದವರು. [ಗಾಯಕ ರಘು ದೀಕ್ಷಿತ್ ಅಂತಹ ಸಾಧನೆ ಏನು ಮಾಡಿದ್ದಾರೆ?]

ಒಂದು ವಿಡಿಯೋ ಆಲ್ಬಂ ಮಾಡಬೇಕು ಅಂತ ಮುಂಬೈಗೆ ಹೋದಾಗ ರಘು ದೀಕ್ಷಿತ್ ಗೆ ಆದ ಅವಮಾನ ಅಷ್ಟಿಷ್ಟಲ್ಲ.

''35 ಲಕ್ಷ ರೂಪಾಯಿ ಹಣ ಇದ್ಯಾ ವಿಡಿಯೋ ರೆಕಾರ್ಡ್ ಮಾಡಿ ಆಲ್ಬಂ ಮಾಡೋಕೆ? ನಿನ್ನ ಮೂತಿ ನೋಡಿಕೊಂಡಿದ್ಯಾ? ನಿನ್ನ ಮುಖ ಹಾಕಿದ ತಕ್ಷಣ ಜನ ಎಲ್ಲಾ ಸಿ.ಡಿ ತೆಗೆದುಕೊಳ್ತಾರೆ ಅಂತ ಅಂದುಕೊಂಡಿದ್ಯಾ'' ಅಂತ ಒಬ್ಬರು ರಘು ದೀಕ್ಷಿತ್ ರನ್ನ ಹೀಯಾಳಿಸಿದ್ರಂತೆ. ['ಗಂಡಸ್ತನ ಇದ್ರೆ ಗಿಟಾರ್ ನುಡಿಸು' - ರಘು ದೀಕ್ಷಿತ್ ಬದುಕು ಬದಲಿಸಿದ ಚಾಲೆಂಜ್]

ಇದರಿಂದ ಸಂಗೀತ ಸಹವಾಸ ಸಾಕು ಅಂತ ಬೀದಿಯಲ್ಲಿ ನಿಂತು ಕಣ್ಣೀರು ಹಾಕಿದ್ದ ರಘು ದೀಕ್ಷಿತ್ ಗೆ ಅದೃಷ್ಟ ಖುಲಾಯಿಸಿದ್ದು ಅದೇ ದಿನ. ಅದೆಲ್ಲವನ್ನೂ ಡೀಟೇಲ್ ಆಗಿ ರಘು ದೀಕ್ಷಿತ್ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

ಬಯಾಲಜಿ ಅಚ್ಚುಮೆಚ್ಚು!

ಬಯಾಲಜಿ ಅಚ್ಚುಮೆಚ್ಚು!

''ಬಯಾಲಜಿ ಕಡೆ ಒಲವು ಜಾಸ್ತಿ. ಸ್ಕೂಲ್ ನಲ್ಲಿ ಪ್ರ್ಯಾಕ್ಟಿಕಲ್ ರೆಕಾರ್ಡ್ ನಲ್ಲಿ ಚಿತ್ರ ಬರೆಯುವುದಕ್ಕೆ ತುಂಬಾ ಇಷ್ಟ. ತುಂಬಾ ಇಂಟ್ರೆಸ್ಟ್ ತಗೊಂಡು ಬರೆಯುತ್ತಿದ್ದೆ. ಹೀಗಾಗಿ, ಯುವರಾಜ ಕಾಲೇಜ್ ನಲ್ಲಿ ಮೈಕ್ರೋ ಬಯಾಲಜಿಗೆ ಅಪ್ಲೈ ಮಾಡಿದೆ'' - ರಘು ದೀಕ್ಷಿತ್ [ಗಿಟಾರ್ ಹಿಡಿದು ಬೆತ್ತಲಾಗಿದ್ರಾ ಗಾಯಕ ರಘು ದೀಕ್ಷಿತ್?]

ಪ್ರತಿಷ್ಟಿತ ಕೆಲಸ

ಪ್ರತಿಷ್ಟಿತ ಕೆಲಸ

''ಮೊದಲು CFTRI ನಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಸೇರಿಕೊಂಡೆ. ಅಷ್ಟೊತ್ತಿಗೆ ಗಿಟಾರ್ ಹುಚ್ಚು ಜಾಸ್ತಿ ಆಗಿತ್ತು. ಬೆಂಗಳೂರಿಗೆ ಹೋದರೆ ಅವಕಾಶ ಸಿಗ್ಬಹುದು ಅಂತ AL Ameen ಕಾಲೇಜ್ ನಲ್ಲಿ ಲೆಕ್ಚಚರ್ ಆಗಿ ಸೇರಿಕೊಂಡೆ. ತಿಂಗಳಿಗೆ 600 ರೂಪಾಯಿ ಸಂಬಳ ಆಗ'' - ರಘು ದೀಕ್ಷಿತ್

ಬ್ಯಾಂಡ್ ಶುರು ಆಯ್ತು

ಬ್ಯಾಂಡ್ ಶುರು ಆಯ್ತು

''ಅಂತರಾಗ್ನಿ' ಅಂತ ನಮ್ಮದೇ ಬ್ಯಾಂಡ್ ಮಾಡಿಕೊಂಡ್ವಿ. ಜೂನ್ 6 1999 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪರ್ಫಾಮ್ ಮಾಡುವ ಅವಕಾಶ ಸಿಕ್ತು. ಅಂದು ಅಲ್ಲಿ ಹರಿಹರನ್ ಅಂತ ಒಬ್ಬರು ಭೇಟಿ ಮಾಡಿ, ರೆಕಾರ್ಡ್ ಮಾಡಲು 30 ಸಾವಿರ ರೂಪಾಯಿ ಚೆಕ್ ಕೊಟ್ಟರು'' - ರಘು ದೀಕ್ಷಿತ್

ಬಾಂಬೆಗೆ ಹೋಗಿದ್ದಾಗ....

ಬಾಂಬೆಗೆ ಹೋಗಿದ್ದಾಗ....

''ಬಾಂಬೆಗೆ ಹೋಗಿದ್ದಾಗ '35 ಲಕ್ಷ ರೂಪಾಯಿ ಹಣ ಇದ್ಯಾ? ವಿಡಿಯೋ ರೆಕಾರ್ಡ್ ಮಾಡಿ ಆಲ್ಬಂ ಮಾಡೋಕೆ? ನಿನ್ನ ಮೂತಿ ನೋಡಿಕೊಂಡಿದ್ಯಾ? ನಿನ್ನ ಮುಖ ಹಾಕಿದ ತಕ್ಷಣ ಜನ ಎಲ್ಲಾ ಸಿ.ಡಿ ತೆಗೆದುಕೊಳ್ತಾರೆ ಅಂತ ಅಂದುಕೊಂಡಿದ್ಯಾ' ಅಂದ್ರು. ತುಂಬಾ ಬೇಸರ ಆಯ್ತು'' - ರಘು ದೀಕ್ಷಿತ್

ಕಪಾಳಕ್ಕೆ ಹೊಡೆದ ಹಾಗೆ ಆಯ್ತು!

ಕಪಾಳಕ್ಕೆ ಹೊಡೆದ ಹಾಗೆ ಆಯ್ತು!

''ದುಡ್ಡಿಲ್ಲದೇ ವಾಪಸ್ ಬರಬೇಡ' ಅಂತ ಹೇಳಿದ್ರು. ನನಗೆ ಕಪಾಳಕ್ಕೆ ಹೊಡೆದ ಹಾಗೆ ಆಯ್ತು. ಹೊರಗಡೆ ಬಂದು ಅತ್ತುಬಿಟ್ಟೆ. ಮೈಸೂರಿಗೆ ಹೋಗಿ ಟೀಚರ್ ಆಗಿ ಸೇರಿಕೊಂಡು ಬಿಡೋಣ ಅಂತ ಡಿಸೈಡ್ ಮಾಡಿದ್ದೆ. ಅಷ್ಟರೊಳಗೆ ಶಶಾಂಕ್ ಘೋಷ್ ಅಂತ ಡೈರೆಕ್ಟರ್ ಫೋನ್ ಮಾಡಿದ್ರು'' - ರಘು ದೀಕ್ಷಿತ್

ಬಾರ್ ನಲ್ಲಿ ಹಾಡಬೇಕಿತ್ತು

ಬಾರ್ ನಲ್ಲಿ ಹಾಡಬೇಕಿತ್ತು

''ಒಂದು ಬಾರ್ ನಲ್ಲಿ ಸೋಲೋ ಪರ್ಫಾಮೆನ್ಸ್ ಕೊಡಬೇಕು ಅಂತ ಶಶಾಂಕ್ ಘೋಷ್ ಹೇಳಿದರು. ಇದು ನನ್ನ ಲಾಸ್ಟ್ ಪರ್ಫಾಮೆನ್ಸ್ ಅಂತ ಅಂದುಕೊಂಡು ಹೋದೆ. ಅಲ್ಲಿ ಇದ್ದದ್ದು ನಾಲ್ಕೇ ಜನ. ಅವರೆಲ್ಲಾ ನನ್ನ ಫ್ರೆಂಡ್ ಗಳೇ. ಹಾಡಿದ್ದೆಲ್ಲಾ ಮುಗಿದ್ಮೇಲೆ ವಿಶಾಲ್ ದದ್ಲಾನಿ ನನ್ನ ಜೊತೆ ಮಾತನಾಡಿದರು'' - ರಘು ದೀಕ್ಷಿತ್

ವಿಶಾಲ್-ಶೇಖರ್ ಪರಿಚಯ ಆದರು

ವಿಶಾಲ್-ಶೇಖರ್ ಪರಿಚಯ ಆದರು

''ತುಂಬಾ ಚೆನ್ನಾಗಿದೆ. ಈ ತರ ವಾಯ್ಸ್ ನಾನು ಕೇಳಿಲ್ಲ'' ಅಂತ ವಿಶಾಲ್ ದದ್ಲಾನಿ ಹೇಳಿ ಅವರ ಸ್ಟುಡಿಯೋಗೆ ಕರೆದರು. ಮಾರನೇ ದಿನ ನಾನು ಹೋದೆ. ಅವತ್ತು ನನಗೆ ಶೇಖರ್ ನ ಪರಿಚಯ ಮಾಡಿಕೊಟ್ಟರು'' - ರಘು ದೀಕ್ಷಿತ್

ಜೀವನ ಬದಲಾದ ಕ್ಷಣ

ಜೀವನ ಬದಲಾದ ಕ್ಷಣ

''ನನ್ನ ವಾಯ್ಸ್ ಕೇಳಿ ಇಬ್ಬರು ಮಾತನಾಡಿಕೊಂಡು, 'ಒಂದು ಹೊಸ ರೆಕಾರ್ಡ್ ಲೇಬಲ್ ಶುರು ಮಾಡ್ತೀವಿ. ಯಾಕೆ ನೀನು ನಮ್ಮ ಲೇಬಲ್ ನ ಮೊದಲ ಆರ್ಟಿಸ್ಟ್ ಆಗ್ಬಾರ್ದು' ಅಂತ ಕೇಳಿದರು. ಆ ಕ್ಷಣ ನನ್ನ ಜೀವನ ಬದಲಾಗಿದ್ದು'' - ರಘು ದೀಕ್ಷಿತ್

ನನ್ನ ಹೆಸರಲ್ಲೇ ಆಲ್ಬಂ

ನನ್ನ ಹೆಸರಲ್ಲೇ ಆಲ್ಬಂ

''ಅವರದ್ದೇ ದುಡ್ಡು ಹಾಕಿ, ಬಹಳ ಭರ್ಜರಿಯಾಗಿ ಸಂಜಯ್ ದತ್ ಅವರ ಕೈಲಿ ಆಲ್ಬಂ ಲಾಂಚ್ ಮಾಡಿದರು. ಆ ಮೂಲಕ ನಾನೂ ಲಾಂಚ್ ಆದೆ. ಆ ಆಲ್ಬಂಗೆ ನನ್ನ ಹೆಸರನ್ನೇ ಇಟ್ಟರು. ಭಾರತದಲ್ಲಿ ಅತಿ ಹೆಚ್ಚು ಸೇಲ್ ಆಗಿರುವ ಇಂಡಿಪೆಂಡೆಂಟ್ ಮ್ಯೂಸಿಕ್ ಆಲ್ಬಂ ಅದು'' - ರಘು ದೀಕ್ಷಿತ್

ಚಿತ್ರರಂಗದಲ್ಲಿ ತಿರಸ್ಕರಿಸಿದವರೇ ಹೆಚ್ಚು!

ಚಿತ್ರರಂಗದಲ್ಲಿ ತಿರಸ್ಕರಿಸಿದವರೇ ಹೆಚ್ಚು!

''ಚಿತ್ರರಂಗದ ಅನೇಕರ ಜೊತೆ ಮಾತನಾಡಿದ್ದೆ. ಎಲ್ಲರೂ ನನ್ನ ತಿರಸ್ಕರಿಸಿದ್ದರು. ಕಾರಣ ಆಗಿನ ಕಾಲಕ್ಕೆ ನಾನು ಮಾಡಿದ ಮ್ಯೂಸಿಕ್ ಮ್ಯಾಚ್ ಆಗ್ತಿರ್ಲಿಲ್ಲ'' - ರಘು ದೀಕ್ಷಿತ್

ಎಲ್ಲವೂ ಆಕಸ್ಮಿಕ

ಎಲ್ಲವೂ ಆಕಸ್ಮಿಕ

''ನಾನು ಯಾರನ್ನೂ ಅಪ್ರೋಚ್ ಮಾಡಲಿಲ್ಲ ಸಂಗೀತ ನಿರ್ದೇಶಕನಾಗುವುದಕ್ಕೆ. ಎಲ್ಲವೂ ಆಗಿದ್ದೂ ಆಕ್ಸಿಡೆಂಟಲ್ ಆಗಿ'' - ರಘು ದೀಕ್ಷಿತ್

More from Filmibeat

English summary
Bharatanatyam Dancer turned Music Director, Singer Raghu Dixit's singing career was revealed in Zee Kannada Channel's popular show Weekend With Ramesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X