ಮೂರು ಬಾರಿ ಯಮಲೋಕದ ಕದ ತಟ್ಟಿದ್ದ ನಟ ಸಾಯಿಕುಮಾರ್!

By Harshitha

ತೆರೆ ಮೇಲೆ ಖಾಕಿ ತೊಟ್ಟು ಅಬ್ಬರಿಸುವ ನಟ ಸಾಯಿಕುಮಾರ್, ನಿಜ ಜೀವನದಲ್ಲಿ ಮೂರು ಬಾರಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್ ಆಗಿದ್ರು ಅಂದ್ರೆ ನೀವು ನಂಬಲೇಬೇಕು.

ಚಿಕ್ಕವಯಸ್ಸಿನಲ್ಲೇ ಬಿಸಿ ನೀರನ್ನ ಮೈ ಮೇಲೆ ಸುರಿದು ಕೊಂಡಿದ್ದ ಸಾಯಿ ಕುಮಾರ್, ಬದುಕುಳಿದಿದ್ದೇ ಹೆಚ್ಚು. ಇನ್ನೂ 'ಟಿಕೆಟ್' ಸಿನಿಮಾ ಶೂಟಿಂಗ್ ವೇಳೆ ಆದ ಅವಘಡ ಸಾಯಿ ಕುಮಾರ್ ಬದುಕಿನ ಕರಾಳ ಅಧ್ಯಾಯ. [ಅಮಿತಾಬ್, ರಜನಿ, ಸಿಲ್ವೆಸ್ಟರ್..ಎಲ್ಲರಿಗೂ 'ಇವರೇ' ಬೇಕು! ಯಾರದು?]

ಅಂತಹ 'ಆಕ್ಸಿಡೆಂಟ್' ಸ್ಟೋರಿಯನ್ನ ನಟ ಸಾಯಿ ಕುಮಾರ್ ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ....

ಬಿಸಿ ನೀರು ಬಿದ್ದು.....

ಬಿಸಿ ನೀರು ಬಿದ್ದು.....

''12ನೇ ವಯಸ್ಸಿನಲ್ಲಿ ಭುಜದ ಮೇಲೆ ಬಿಸಿ ನೀರು ಬಿದ್ಬಿಡ್ತು. ಬದುಕಿದ್ದೇ ಹೆಚ್ಚು. ಆರು ತಿಂಗಳು ಶರ್ಟ್ ಹಾಕೋಕೆ ಆಗಲಿಲ್ಲ'' - ಸಾಯಿ ಕುಮಾರ್

ಸ್ನಾನ ಮಾಡಲು ಹೋಗಿ....

ಸ್ನಾನ ಮಾಡಲು ಹೋಗಿ....

''ಎಣ್ಣೆ ಸ್ನಾನ ಮಾಡೋಕೆ ಅಮ್ಮ ಬಿಸಿ ನೀರು ಕಾಯಿಸಿದ್ದರು. ನಾನು ಹೋಗುವುದಕ್ಕೂ, ಅವರು ಬಿಸಿ ನೀರಿನ ಪಾತ್ರೆ ತಿರುಗಿಸುವುದಕ್ಕೂ ಒಂದೇ ಆಯ್ತು. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ, ಅವತ್ತೇ ಸತ್ತು ಹೋಗ್ತಿದ್ದೆ, ಆದ್ರೆ, ಸದ್ಯ..ಭುಜದ ಮೇಲೆ ಮಾತ್ರ ನೀರು ಬಿತ್ತು'' - ಸಾಯಿ ಕುಮಾರ್

ಬೊಬ್ಬೆ ಇತ್ತು....

ಬೊಬ್ಬೆ ಇತ್ತು....

''ಬೊಬ್ಬೆ ಆಗಿತ್ತು. ಅದರಿಂದ ಕೈ ತಿರುಗಿಸುವುದಕ್ಕೂ ಸಾಧ್ಯವಾಗ್ತಿರ್ಲಿಲ್ಲ. ನಂತರ ಬೌಲಿಂಗ್ ತರಹ ಮಾಡೋಕೆ ಡಾಕ್ಟರ್ ಹೇಳಿದರು. ಆದಾದ್ಮೇಲೆ ಬೊಬ್ಬೆ ಹೊಡೆದದ್ದು'' - ಸಾಯಿ ಕುಮಾರ್

ಮೇಕಪ್ ಅಲ್ಲ!

ಮೇಕಪ್ ಅಲ್ಲ!

''ಸಿನಿಮಾದಲ್ಲಿ ಇದನ್ನೇ ಇಟ್ಕೊಂಡು 'ಚಿಕ್ಕವಯಸ್ಸಲ್ಲಿ ಆಸಿಡ್ ಬಿದ್ದದ್ದು' ಅಂತ ಡೈಲಾಗ್ ಹೊಡೆದಿದ್ದೇನೆ. ಎಲ್ಲರೂ ಅಂದುಕೊಂಡಿದ್ದಾರೆ ಇದು ಮೇಕಪ್ ಅಂತ. ಆದ್ರೆ, ಮೇಕಪ್ ಅಲ್ಲ. ನಿಜವಾಗಲೂ ಬಿಸಿ ನೀರು ಬಿದ್ದದ್ದು'' - ಸಾಯಿ ಕುಮಾರ್

ಇವತ್ತಿಗೂ ಗಾಡಿ ಓಡಿಸುವುದಿಲ್ಲ!

ಇವತ್ತಿಗೂ ಗಾಡಿ ಓಡಿಸುವುದಿಲ್ಲ!

''ಅಪ್ಪ ಮೊದಲ ಬಾರಿಗೆ ಸ್ಕೂಟರ್ ಕೊಂಡು ಕೊಂಡಿದ್ದರು. ಮನೆಗೆ ತಂದ ಮೇಲೆ, ಸ್ಕೂಟರ್ ತಗೊಂಡು ಓಡಿಸಿಕೊಂಡು ಹೋಗ್ಬಿಟ್ಟೆ. ಸೈಕಲ್ ಓಡಿಸುವುದಕ್ಕೆ ಮಾತ್ರ ಬರ್ತಿತ್ತು ನನಗೆ. ಅದೇ ತರಹ ಅಂದುಕೊಂಡಿದ್ದೆ. ಹೋಗಿ ಸೀದಾ ಬಸ್ ಗೆ ಗುದ್ದುಬಿಟ್ಟೆ. ಹೇಗೆ ಬದುಕಿದ್ನೋ? ಇವತ್ತಿಗೂ ನಾನು ಗಾಡಿ ಓಡಿಸುವುದಿಲ್ಲ. ಅಷ್ಟು ಭಯ ಆಗಿದೆ ಆ ಘಟನೆಯಿಂದ'' - ಸಾಯಿ ಕುಮಾರ್

'ಟಿಕೆಟ್' ಸಿನಿಮಾದಲ್ಲಿ....

'ಟಿಕೆಟ್' ಸಿನಿಮಾದಲ್ಲಿ....

''ಟಿಕೆಟ್' ಅಂತ ಸಿನಿಮಾ. ಸಾಂಗ್ ಶೂಟಿಂಗ್ ಮಾಡ್ತಿದ್ವಿ. ನಾನು - ಸಾಯಿ ಕುಮಾರ್ ಅಕ್ಕ-ಪಕ್ಕ ಕೂತಿದ್ವಿ. ನಮ್ಮ ಹಿಂದೆ ಸಾಧು ಕೋಕಿಲ ರವರ ವ್ಯಾನ್ ನಿಂತಿತ್ತು'' - ಥ್ರಿಲ್ಲರ್ ಮಂಜು

ಬಾಂಬ್ ಬ್ಲಾಸ್ಟ್ ಆಯ್ತು!

ಬಾಂಬ್ ಬ್ಲಾಸ್ಟ್ ಆಯ್ತು!

''ಅದರ ಹಿಂದೆ ಬಾಂಬ್ ಬ್ಲಾಸ್ ಮಾಡುವುದಕ್ಕೆ ಪೌಡರ್ ಹಾಕಿ ರೆಡಿ ಮಾಡುತ್ತಿದ್ದರು. ಮಧ್ಯದಲ್ಲಿ ಏನಾಯ್ತು ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ಬ್ಲಾಸ್ಟ್ ಆಯ್ತು. ಮೂರು ಜನ ಸ್ಥಳದಲ್ಲೇ ಸಾವನ್ನಪಿದರು'' - ಥ್ರಿಲ್ಲರ್ ಮಂಜು

ತಲೆಗೆ ಹೊಲಿಗೆ!

ತಲೆಗೆ ಹೊಲಿಗೆ!

''ನಾನು - ಸಾಯಿ ಗಾಬರಿಯಿಂದ ಓಡಿದ್ವಿ. ತಲೆ ಮುಟ್ಕೊಂಡು ನೋಡಿದ್ರೆ, ರಕ್ತ ಬರ್ತಿದೆ. ನನ್ನ ತಲೆಗೆ ಹೊಲಿಗೆ ಹಾಕಿದರು'' - ಥ್ರಿಲ್ಲರ್ ಮಂಜು

ಸಾಯಿ ಬೆನ್ನಿಗೆ ಪೆಟ್ಟು!

ಸಾಯಿ ಬೆನ್ನಿಗೆ ಪೆಟ್ಟು!

''ಸಾಯಿ ಬೆನ್ನಿಗೆ ಏಟಾಯ್ತು. ಅವರ ಅಸಿಸ್ಟೆಂಟ್ ಗೆ 12 ಹೊಲಿಗೆ ಹಾಕಿದರು'' - ಥ್ರಿಲ್ಲರ್ ಮಂಜು

ಸಾಧು ವ್ಯಾನ್ ಇರ್ಲಿಲ್ಲ ಅಂದಿದ್ರೆ....

ಸಾಧು ವ್ಯಾನ್ ಇರ್ಲಿಲ್ಲ ಅಂದಿದ್ರೆ....

''ಅವತ್ತು ಸಾಧು ಕೋಕಿಲ ಅವರ ವ್ಯಾನ್ ಇರ್ಲಿಲ್ಲ ಅಂದಿದ್ರೆ, ನಾವು ಏನಾಗಿರ್ತಿದ್ವೋ, ಏನೋ?'' - ಸಾಯಿ ಕುಮಾರ್

More from Filmibeat

English summary
Kannada Actor cum Dubbing Artist Saikumar revealed his miraculous escape from deadly accidents which he faced during his childhood in Zee Kannada Channel's popular show Weekend With Ramesh season 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X