twitter
    For Quick Alerts
    ALLOW NOTIFICATIONS  
    For Daily Alerts

    ಸಾವಿನಲ್ಲೂ ಸಾರ್ಥಕತೆ ಮೆರೆದ ದಿ.ಲೋಕೇಶ್ ಕುರಿತು ಕೆಲ ಸತ್ಯ ಸಂಗತಿಗಳು

    By Harshitha
    |

    ಕನ್ನಡ ಚಲನ ಚಿತ್ರರಂಗದ ಪ್ರಪ್ರಥಮ ನಾಯಕ ನಟ ದಿ.ಸುಬ್ಬಯ್ಯ ನಾಯ್ಡು ರವರ ಹೆಮ್ಮೆಯ ಪುತ್ರ ನಟ ದಿ.ಲೋಕೇಶ್.

    'ಪರಸಂಗದ ಗೆಂಡೆತಿಮ್ಮ', 'ಭೂತಯ್ಯನ ಮಗ ಅಯ್ಯು', 'ಬ್ಯಾಂಕರ್ ಮಾರ್ಗಯ್ಯ' ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಅತ್ಯುತ್ತಮ ನಟನೆಗೆ ಮೂರು ಬಾರಿ ರಾಜ್ಯ ಪ್ರಶಸ್ತಿ ಪಡೆದ ನಟ ಲೋಕೇಶ್ ಅನಾರೋಗ್ಯದಿಂದ ಕೊನೆಯುಸಿರೆಳೆದರು.

    2004 ಅಕ್ಟೋಬರ್ 14 ರಂದು ಬಾರದ ಲೋಕಕ್ಕೆ ಪಯಣಿಸಿದ ನಟ ಲೋಕೇಶ್, ವೈದ್ಯಕೀಯ ಸಂಶೋಧನೆಗಳಿಗೆ ಅನುಕೂಲವಾಗುವಂತೆ ತಮ್ಮ ದೇಹವನ್ನು ಎಂ.ಎಸ್.ರಾಮಯ್ಯ ಕಾಲೇಜಿಗೆ ದಾನ ಮಾಡಿ, ಸಾವಿನಲ್ಲೂ ಸಾರ್ಥಕತೆ ಮೆರೆದರು. [ಸೃಜನ್ ಲೋಕೇಶ್ ನಗುವಿನ ಹಿಂದೆ ಇರುವ ಕಣ್ಣೀರ ಕಹಾನಿ ಬಯಲು]

    ನಟ ಲೋಕೇಶ್ ರವರ ಕೊನೆಯ ದಿನಗಳ ಬಗ್ಗೆ ಪುತ್ರ ನಟ ಸೃಜನ್ ಲೋಕೇಶ್, ಪುತ್ರಿ ನಟಿ ಪೂಜಾ ಲೋಕೇಶ್, ಪತ್ನಿ ಗಿರಿಜಾ ಲೋಕೇಶ್ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದರು. ಮುಂದೆ ಓದಿ....

    ಜೀವನದಲ್ಲಿ ಫೋಕಸ್ ಬಂದಿದ್ದೇ ಆಗ

    ಜೀವನದಲ್ಲಿ ಫೋಕಸ್ ಬಂದಿದ್ದೇ ಆಗ

    ''ಅಪ್ಪನ ಆರೋಗ್ಯ ಹದಗೆಟ್ಟ ಟೈಮ್ ನಲ್ಲಿ, ನನ್ನ ಜೀವನದಲ್ಲಿ ಫೋಕಸ್ ಬರುವುದಕ್ಕೆ ಶುರುವಾಗಿದ್ದು. ಯಾಕಂದ್ರೆ, ಅವಾಗ ಆರ್ಥಿಕವಾಗಿ ನಾವು ತುಂಬಾ ಕಷ್ಟದಲ್ಲಿದ್ವಿ'' - ಸೃಜನ್ ಲೋಕೇಶ್

    ಅಪ್ಪನ ಆಸ್ತಿ ಎಲ್ಲಾ ಮಾರಿದೆ!

    ಅಪ್ಪನ ಆಸ್ತಿ ಎಲ್ಲಾ ಮಾರಿದೆ!

    ''ಅಮ್ಮನಿಗೆ ಇವತ್ತಿಗೂ ಬೇಜಾರು ಇದೆ. ನಮ್ಮಪ್ಪ ಮಾಡಿದ ಆಸ್ತಿಯನ್ನ ನಾನು ಮಾರಿದೆ ಅಂತ. ಆಸ್ಪತ್ರೆಯಲ್ಲಿ ನಾಳೆ ಆಪರೇಷನ್ ಅಂದ್ರೆ, 3 ಲಕ್ಷ ಕಟ್ಟಿ ಅಂತಿದ್ರು. ರಾತ್ರೋ ರಾತ್ರಿ ಅಷ್ಟೊಂದು ದುಡ್ಡು ಎಲ್ಲಿಂದ ತರುವುದು? ತಿಣುಕಾಡಿದರೂ, 10 ಸಾವಿರ ರೂಪಾಯಿ ಇರ್ತಿರ್ಲಿಲ್ಲ ನಮ್ಮ ಹತ್ರ'' - ಸೃಜನ್ ಲೋಕೇಶ್

    ಕಡೆ ಬಾರಿ ಏನೂ ಹೇಳ್ಲಿಲ್ಲ!

    ಕಡೆ ಬಾರಿ ಏನೂ ಹೇಳ್ಲಿಲ್ಲ!

    ''ಮೂರು ನಾಲ್ಕು ಬಾರಿ ಅವರನ್ನ ನಾವು ಐ.ಸಿ.ಯು ಗೆ ಅಡ್ಮಿಟ್ ಮಾಡಿದ್ವಿ. ಪ್ರತಿ ಬಾರಿ ಅವರು ಆಸ್ಪತ್ರೆಗೆ ಹೋದಾಗ, ತಲೆ ಕೆಡಿಸಿಕೊಳ್ಳಬೇಡಿ. ಏನೂ ಆಗಲ್ಲ ಅಂತಿದ್ರು. ಆದ್ರೆ, ಕಡೆ ಬಾರಿ ಅವರನ್ನ ಅಡ್ಮಿಟ್ ಮಾಡಿದಾಗ, ಸುಮ್ಮನೆ ಮಲ್ಕೊಂಡು ಬಿಟ್ಟರು. ಅದನ್ನ ಮರೆಯೋಕೆ ಸಾಧ್ಯನೇ ಇಲ್ಲ'' - ಸೃಜನ್ ಲೋಕೇಶ್

    ಸೃಜನ್ ಹೆಗಲಿಗೆ ಜವಾಬ್ದಾರಿ

    ಸೃಜನ್ ಹೆಗಲಿಗೆ ಜವಾಬ್ದಾರಿ

    ''ತಂದೆ ತೀರಿಕೊಂಡಾಗ ಅವನು ಜವಾಬ್ದಾರಿ ಹೊತ್ತುಕೊಂಡ ರೀತಿ ತುಂಬಾ ಶಾಕಿಂಗ್ ಆಗಿತ್ತು ನನಗೆ. ಅವನು ಬೆಳೆದಿದ್ದಾನೆ ಅಂತ ಅನ್ಸಿದ್ದು ಅವಾಗ್ಲೇ'' - ಪೂಜಾ ಲೋಕೇಶ್, ಅಕ್ಕ

    ಅಪ್ಪನಿಗೆ ಇದ್ದ ಏಕೈಕ ಆಸೆ

    ಅಪ್ಪನಿಗೆ ಇದ್ದ ಏಕೈಕ ಆಸೆ

    ''ಅವರಿಗಿದ್ದ ಏಕೈಕ ಆಸೆ ಅಂದ್ರೆ, ಅವರ ದೇಹವನ್ನ ದಾನ ಮಾಡಬೇಕು ಅಂತ. ಅಪ್ಪ ಹೇಳಿದ್ದನ್ನ, ಅಕ್ಕ ಬರೆದಿದ್ಳು. ಅದಕ್ಕೆ ಅಪ್ಪ ಸೈನ್ ಮಾಡಿದ್ರು. ಆ ಲೆಟರ್ ಇನ್ನೂ ಇದೆ ಮನೆಯಲ್ಲಿ'' - ಸೃಜನ್ ಲೋಕೇಶ್

    ಉಸಿರಾಡುವಾಗಲೇ ದೇಹ ದಾನ!

    ಉಸಿರಾಡುವಾಗಲೇ ದೇಹ ದಾನ!

    ''ನಾನು ಹೋಗಿ ಡಾಕ್ಟರ್ ನ ಕೇಳಿದ್ದೆ, ಬಾಡಿ ಡೊನೇಷನ್ ಫಾರ್ಮ್ ಬೇಕು ಅಂತ. ಅವರು ಯಾಕೆ, ಯಾಕೆ ಅಂತ ಕೇಳಿದ್ರು. ನಮ್ಮ ತಂದೆಗೆ ಇದ್ದ ಏಕೈಕ ಆಸೆ ಇದು. ನಮ್ಮ ತಂದೆ ಇನ್ನೂ ಉಸಿರಾಡುತ್ತಿರುವಾಗಲೇ, ಬಾಡಿ ಡೊನೇಷನ್ ಫಾರ್ಮ್ ಗೆ ಫಿಲ್ ಮಾಡಿ ಕೊಟ್ಟುಬಿಟ್ಟಿದ್ವಿ. ನಮ್ಮ ತಾಯಿ ತುಂಬಾ ಧೈರ್ಯವಾಗಿದ್ದರು. ಅಕ್ಕ ತುಂಬಾ ಅಳ್ತಿದ್ಳು'' - ಸೃಜನ್ ಲೋಕೇಶ್

    ಇಡೀ ಕುಟುಂಬ ದೇಹ ದಾನ

    ಇಡೀ ಕುಟುಂಬ ದೇಹ ದಾನ

    ''ತಂದೆ ದೇಹವನ್ನ ದಾನ ಮಾಡಬೇಕು ಅಂತ ಹೋದ ದಿನವೇ ನಮ್ಮ ಇಡೀ ಫ್ಯಾಮಿಲಿ ದೇಹ ದಾನ ಮಾಡುವ ನಿರ್ಧಾರ ಮಾಡಿ ಬಂದ್ವಿ'' - ಸೃಜನ್ ಲೋಕೇಶ್

    ನಗುತ್ತಾ ಕಳುಹಿಸಿಕೊಡಬೇಕು!

    ನಗುತ್ತಾ ಕಳುಹಿಸಿಕೊಡಬೇಕು!

    ''ಅಪ್ಪನ ಆಸೆ ಏನಿತ್ತು ಅಂದ್ರೆ, ಅವರು ಸತ್ತಾಗ ನಾನು ಅಳಬಾರದು. ನಗುನಗುತ್ತಾ ಕಳುಹಿಸಿಕೊಡಿ ಅಂತ ನನಗೆ ಹೇಳಿದ್ರು. 'ನೀನು ನನ್ನ ಮಗ ಆಗಿದ್ರೆ, ನನ್ನ ಮಾತನ್ನ ಉಳಿಸು' ಅಂತ ಹೇಳಿದ್ರು. ನಾನು ಅವತ್ತು ಕಣ್ಣೀರು ಹಾಕ್ಲಿಲ್ಲ'' - ಸೃಜನ್ ಲೋಕೇಶ್

    ಕಣ್ಣೀರು ಯಾರು ನೋಡ್ಲಿಲ್ಲ!

    ಕಣ್ಣೀರು ಯಾರು ನೋಡ್ಲಿಲ್ಲ!

    ''ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದೇಹ ಕೊಟ್ಟು ಬಂದ ಮೇಲೆ, ನನ್ನ ಕರ್ತವ್ಯ ಮುಗಿಸಿದ್ದೀನಿ ಅಂತ ಅಪ್ಪನಿಗೆ ಗುಡ್ ಬೈ ಹೇಳಿ, ಆಸ್ಪತ್ರೆ ಕಾಪೌಂಡ್ ನಿಂದ ಹೊರಬಂದು ಒಬ್ಬನೇ ನಿಂತುಕೊಂಡು ಅತ್ತೆ. ನನ್ನ ಕಣ್ಣೀರು ಯಾರಿಗೂ ತೋರಿಸಬಾರದು ಅಂತ'' - ಸೃಜನ್ ಲೋಕೇಶ್

    ಅಕ್ಕನಿಗೆ ಬೈದಿದ್ದೆ

    ಅಕ್ಕನಿಗೆ ಬೈದಿದ್ದೆ

    ''ನಮ್ಮ ಅಪ್ಪ ಸತ್ತಾಗ, ಇವಳು ಹೀಗೆ ಅತ್ತು ಬಿಟ್ಟಿದ್ಳು. ನಾನು ಬೈದಿದ್ದೆ. ನೀನು ಹೀಗೆ ಅತ್ತರೆ, ನಿನ್ನ ಸಾಯಿಸಿಬಿಡ್ತೀನಿ. ಹೋಗು ಆಚೆ ಹೋಗು ಅಂತ ಬೈದುಬಿಟ್ಟಿದೆ'' - ಸೃಜನ್ ಲೋಕೇಶ್

    ತಂದೆ ಬರೆಸಿದ ಲೆಟರ್

    ತಂದೆ ಬರೆಸಿದ ಲೆಟರ್

    ''ನನ್ನ ಕೈಯಲ್ಲಿ ಆ ಲೆಟರ್ ಬರೆಸಿದಾಗ, ಅವರು ಡಿಕ್ಟೇಟ್ ಮಾಡ್ತಿದ್ದಾಗ, ನನಗೆ ಬರೆಯೋಕೆ ಆಗದೆ ಕೈ ನಡುಗುತ್ತಿತ್ತು. ನಾನು ಬರೆಯಲೇ ಇಲ್ಲ. 'ನೀನು ನನ್ನ ಪ್ರೀತಿ ಮಾಡ್ತೀಯಾ ಅಂದ್ರೆ ಈ ಲೆಟರ್ ಬರೀ' ಅಂತ ಹೇಳಿದ್ರು. ಆ ಲೆಟರ್ ಬರೆದು ಸೈನ್ ಮಾಡಿ ಕೊಟ್ಟರೂ ನನಗೆ ಅರ್ಥ ಆಗ್ತಿರ್ಲಿಲ್ಲ. ತುಂಬಾ ಶಾಕಿಂಗ್ ಅದು'' - ಪೂಜಾ ಲೋಕೇಶ್, ಅಕ್ಕ

    ಲೋಕೇಶ್ ಕುಟುಂಬ ಸ್ಫೂರ್ತಿ

    ಲೋಕೇಶ್ ಕುಟುಂಬ ಸ್ಫೂರ್ತಿ

    ''ವೈದ್ಯಕೀಯ ಸಂಶೋಧನೆಗಳಿಗೆ ದೇಹ ದಾನ ತುಂಬಾ ಸಹಾಯ. ಬೆಲ್ಲ ಕಟ್ಟಲಾಗದ ದಾನವನ್ನ ಲೋಕೇಶ್ ಫ್ಯಾಮಿಲಿ ಮಾಡಿದೆ. ಲೋಕೇಶ್ ಅವರ ಫ್ಯಾಮಿಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದೇಹ ದಾನ ಮಾಡಿದೆ ಅಂತ ಗೊತ್ತಾದ್ಮೇಲೆ ಅದೇ ಆಸ್ಪತ್ರೆಯಲ್ಲಿ 4 ಸಾವಿರ ಫ್ಯಾಮಿಲಿ ದೇಹ ದಾನ ಮಾಡಿದೆ. ಎಲ್ಲರಿಗೂ ನೀವೇ ಸ್ಫೂರ್ತಿ'' - ರಮೇಶ್ ಅರವಿಂದ್

    ಅಪ್ಪ ಬಂದಿದ್ರೆ ಸರ್ ಪ್ರೈಸ್

    ಅಪ್ಪ ಬಂದಿದ್ರೆ ಸರ್ ಪ್ರೈಸ್

    ''ನಿಮ್ಮ ಶೋ ನಲ್ಲಿ ಎಲ್ಲರಿಗೂ ಸರ್ ಪ್ರೈಸ್ ಕೊಡ್ತಾ ಇರ್ತೀರಾ. ನನಗೆ ಹೇಗೆ ಅನಿಸ್ತಾ ಇದೆ ಅಂದ್ರೆ, ಈ ಡೋರ್ ಓಪನ್ ಆದಾಗ, ಅಪ್ಪ ಬಂದಿದ್ರೆ ಹೇಗಿರ್ತಿತ್ತು ಅಂತ ಅನಿಸ್ತಾಯಿದೆ'' - ಸೃಜನ್ ಲೋಕೇಶ್

    ಸಾಯೋಕು ಮುನ್ನ....

    ಸಾಯೋಕು ಮುನ್ನ....

    ''ಇವತ್ತಿಗೂ ಲೋಕೇಶ್ ನಮ್ಮೊಂದಿಲ್ಲ ಅಂತ ನನಗೆ ಅನ್ಸೇ ಇಲ್ಲ. ಅವರು ಯಾವಾಗಲೂ ಹೇಳ್ತಿದ್ರು, ಆ ಮಾತನ್ನ ಹೇಳೋಕೆ ಕಷ್ಟ ಆಗುತ್ತೆ. 'ನಾ ಇಲ್ಲದೆ ನೀ ಬದುಕ್ತೀಯಾ. ನೀ ಇಲ್ಲದೆ ನಾ ಬದುಕೋಕೆ ಆಗಲ್ಲ' ಅಂತ ಹೇಳಿದ್ರು. ಪ್ರತಿ ಕ್ಷಣ ನಾನು ಅವರನ್ನ ನಗಿಸ್ತಾಯಿದೆ. ಸಾಯೋಕೂ ಮುನ್ನ ಕೂಡ ಅವರು ಕೇಕೇ ಹಾಕಿ ನಕ್ಕಿದ್ರು. ಅದಕ್ಕೋ ಏನೋ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಗೊತ್ತಾಗಲಿಲ್ಲ. ಆ ಮಾತು ಮಾತ್ರ ತುಂಬಾ ಕಾಡುತ್ತೆ ನನಗೆ'' - ಗಿರಿಜಾ ಲೋಕೇಶ್, ತಾಯಿ

    ಅಮ್ಮನೇ ಸ್ಫೂರ್ತಿ

    ಅಮ್ಮನೇ ಸ್ಫೂರ್ತಿ

    ''ಅಮ್ಮನಿಗೆ ಯಾವಗಲೂ ಒಂದು ಕಂಪ್ಲೇಂಟ್ ಇತ್ತು ಅಪ್ಪನ ಮೇಲೆ. ಅವರು 'ಐ ಲವ್ ಯು' ಅಂತ ಅಮ್ಮನಿಗೆ ಹೇಳೇ ಇಲ್ಲ. ಆದ್ರೆ, ಅದಕ್ಕಿಂತ ಉತ್ತಮವಾದ ಮಾತನ್ನ ಅಪ್ಪ ಹೇಳಿದ್ದಾರೆ. ಅಮ್ಮ ಮನೆಯಲ್ಲಿ ಇಲ್ಲದೆ ಹೋದರೆ, ಇಡೀ ಮನೆ ಬಿಕೋ ಅಂತಿರುತ್ತೆ. ನಮ್ಮೆಲ್ಲರಿಗೂ ಸ್ಫೂರ್ತಿ ಅವರೇ. ನಮಗೆಲ್ಲಾ ಧೈರ್ಯ ಕೊಟ್ಟಿದ್ದು ಅವರೇ'' - ಪೂಜಾ ಲೋಕೇಶ್, ಅಕ್ಕ

    English summary
    Kannada Actor Srujan Lokesh spoke about the last days of his father Kannada Actor Late Lokesh in Zee Kannada Channel's popular show Weekend With Ramesh.
    Monday, February 15, 2016, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X