ಮತ್ತೆ 'ವೀಕೆಂಡ್' ಜೊತೆ ನಿಮ್ಮನೆಗೆ ಬರ್ತಿದ್ದಾರೆ ರಮೇಶ್

By Bharath Kumar

ನಟ, ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುವ ಟಾಕ್ ಶೋ 'ವೀಕೆಂಡ್ ವಿಥ್ ರಮೇಶ್' ಈಗ ಮತ್ತೊಮ್ಮೆ ನಿಮ್ಮ ಮನತುಂಬಲು ಬರುತ್ತಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಮನರಂಜನೆ ನೀಡಿದ್ದ ಕಾರ್ಯಕ್ರಮ ಈ ಬಾರಿ ಮತ್ತಷ್ಟು ಸಾಧಕರ ಜೊತೆ ಮರಳಿ ಬರುತ್ತಿದೆ.

ನಮ್ಮ ನಿಮ್ಮ ನಡುವೆ ಇರುವ ಸಾಧಕರನ್ನು ಪರಿಚಯಿಸಿ, ನಮಗೆ ಗೊತ್ತಿಲ್ಲದ ಸಂಗತಿಗಳನ್ನು ವೈಶಿಷ್ಟ್ಯಪೂರ್ಣವಾಗಿ, ಆತ್ಮೀಯವಾಗಿ ತಿಳಿಸಿಕೊಡುವ ಅರ್ಥಪೂರ್ಣ ಕಾರ್ಯಕ್ರಮ 'ವೀಕೆಂಡ್ ವಿಥ್ ರಮೇಶ್'.

ಇಂತಹ ಕಾರ್ಯಕ್ರದಲ್ಲಿ ಈಗಾಗಲೇ, ಸಿನಿಮಾ ನಟರಾದ ಅಂಬರೀಶ್, ಪುನೀತ್, ಸುದೀಪ್, ಗಾಯಕ ವಿಜಯ ಪ್ರಕಾಶ್, ಎಸ್.ಪಿ. ಬಾಲಸುಬ್ರಮಣ್ಯಂ, ಸಾಧುಕೋಕಿಲಾ, ಯೋಗರಾಜ್ ಭಟ್, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಈ ಬಾರಿಯೂ ಸಿನಿಮಾ ಕಲಾವಿದರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು ಸೇರಿದಂತೆ ಬೇರೆ ಕ್ಷೇತ್ರದ ಗಣ್ಯರು 'ವೀಕೆಂಡ್ ವಿಥ್ ರಮೇಶ್' ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದೆ ಓದಿ....

ಮಾರ್ಚ್ 25 ರಿಂದ ಆರಂಭ

ಮಾರ್ಚ್ 25 ರಿಂದ ಆರಂಭ

ಕಳೆದ ಎರಡು ಆವೃತ್ತಿಗಳಿಂದ ಪ್ರೇಕ್ಷಕರ ಮನಗೆದ್ದ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಮೂರನೇ ಸೀಸನ್ ಆರಂಭವಾಗುತ್ತಿದೆ. ಇದೇ ಮಾರ್ಚ್ 25 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ 'ವೀಕೆಂಡ್ ವಿತ್ ರಮೇಶ್' ಪ್ರಸಾರವಾಗಲಿದೆ.

'ಸೀಸನ್-3' ಹಾಟ್ ಸೀಟ್ ರೆಡಿ

'ಸೀಸನ್-3' ಹಾಟ್ ಸೀಟ್ ರೆಡಿ

'ವೀಕೆಂಡ್ ವಿತ್ ರಮೇಶ್' ಸೀಸನ್-3 ಯಲ್ಲಿ ಸಾಧಕರು ಕುಳಿತುಕೊಳ್ಳುವ ಹಾಟ್ ಸೀಟ್ ರೆಡಿಯಾಗಿದ್ದು, ಅದರ ಝಲಕ್ ಇಲ್ಲಿದೆ ನೋಡಿ.

'ಸೀಸನ್-3' ಪ್ರೋಮೋ ನೋಡಿ

'ಸೀಸನ್-3' ಪ್ರೋಮೋ ನೋಡಿ

'ವೀಕೆಂಡ್ ವಿತ್ ರಮೇಶ್ ಸೀಸನ್-3' ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆಯಾಗಿದೆ. ಕಳೆದ ಎರಡು ಸೀಸನ್ ಗಳಲ್ಲಿ ಯಾರೆಲ್ಲಾ ಭಾಗವಹಿಸಿದ್ದರು ಎಂಬುದರ ಒಂದು ಸಣ್ಣ ಪ್ರೋಮೋ ಇಲ್ಲಿದೆ ನೋಡಿ.....

'ಸೀಸನ್-3'ಯ ಮತ್ತೊಂದು ಸ್ಟೈಲಿಶ್ ಪ್ರೋಮೋ!

'ಸೀಸನ್-3'ಯ ಮತ್ತೊಂದು ಸ್ಟೈಲಿಶ್ ಪ್ರೋಮೋ!

'ವೀಕೆಂಡ್ ವಿತ್ ರಮೇಶ್ ಸೀಸನ್-3' ಯಾವಾಗ ಸ್ಟಾರ್ಟ್ ಆಗುತ್ತೆ, ಯಾವಾಗ ಶುರು ಎಂಬ ಪ್ರಶ್ನೆಗಳಿಗೆ ಸ್ವತಃ ರಮೇಶ್ ಅರವಿಂದ್ ಅವರೇ ಉತ್ತರ ಕೊಟ್ಟಿರುವ ಸ್ಟೈಲಿಶ್ ಪ್ರೋಮೋ ಇಲ್ಲಿದೆ ನೋಡಿ....

ಯಾರೆಲ್ಲ ಭಾಗವಹಿಸಬಹುದು?

ಯಾರೆಲ್ಲ ಭಾಗವಹಿಸಬಹುದು?

ನಿರೀಕ್ಷೆಯಂತೆ ಸಿನಿಮಾ ಕಲಾವಿದರು, ಪತ್ರಕರ್ತರು, ರಾಜಕೀಯ ವ್ಯಕ್ತಿಗಳು, ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರು 'ವೀಕೆಂಡ್ ವಿಥ್ ರಮೇಶ್' ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ರೆ, ಯಾವೆಲ್ಲ ಕಲಾವಿದರು ಎಂದು ಬಹಿರಂಗವಾಗಿಲ್ಲ.

More from Filmibeat

English summary
Ramesh Aravind is all set to host Weekend with Ramesh for the third season. The show, which was aired on Zee Kannada From 25th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X